ರೈತರು ಸಿರಿಧಾನ್ಯಗಳತ್ತ ಚಿತ್ತ ಹರಿಸಲಿ: ಡಾ| ದೇಶಮುಖ
Team Udayavani, Sep 23, 2017, 10:21 AM IST
ಹುಮನಾಬಾದ: ನಗರ ಪ್ರದೇಶಗಳ ಜನರು ರಾಸಾಯನಿಕ ರಹಿತ ಹಾಗೂ ಪೌಷ್ಠಿಕ ಆಹಾರಗಳತ್ತ ಮುಖ ಮಾಡುತ್ತಿದ್ದಾರೆ. ಕಾರಣ ರೈತರು ಸಿರಿಧಾನ್ಯಗಳತ್ತ ಚಿತ್ತ ಹರಿಸಬೇಕು ಎಂದು ಕೃಷಿ ವಿಜ್ಞಾನ ಕೇಂದ್ರದ ಡಾ| ರವಿ ದೇಶಮುಖ ಹೇಳಿದರು.
ಹಳ್ಳಿಖೇಡ (ಬಿ) ಪಟ್ಟಣದ ಹೊರವಲಯದ ಗುಂಡಯ್ಯ ತೀರ್ಥಾ ಅವರ ಹೊಲದಲ್ಲಿ ನಡೆದ ನವಣೆ ಬೆಳೆ ಕ್ಷೇತ್ರೋತ್ಸವದಲ್ಲಿ ಅವರು ಮಾತನಾಡಿದು.
ನವಣೆ ಮನುಷ್ಯನ ಆರೋಗ್ಯಕ್ಕೆ ಉತ್ತಮ ಆಹಾರವಾಗಿದ್ದು, ಹಿಂದಿನ ಕಾಲದಲ್ಲಿ ನವಣೆಗೆ ಹೆಚ್ಚು ಪ್ರಾಮುಖ್ಯತೆ ನೀಡಲಾಗುತ್ತಿತ್ತು. ಸಿರಿಧಾನ್ಯಗಳಲ್ಲಿ ಮನುಷ್ಯನಿಗೆ ಬೇಕಾದ ಎಲ್ಲಾ ರೀತಿಯ ಪೋಷಕಾಂಶ ಹಾಗೂ ಔಷಧೀಯ ಗುಣಗಳು ಇವೆ. ಬದಲಾಗುತ್ತಿರುವ ವಾತಾವರಣದಿಂದ ವಿವಿಧ ಬೆಳೆಗಳು ಹಾಳಾಗುತ್ತಿವೆ. ಆದರೆ ಸಿರಿಧಾನ್ಯ ಬೆಳೆ ಬೆಳೆಸಲು ಬೀದರ ಜಿಲ್ಲೆಯ ವಾತಾವರಣ ಸೂಕ್ತವಾಗಿದೆ. ಕೆಲ ವರ್ಷಗಳಿಂದ ವಾತಾವರಣ ಬದಲಾಗಿ ಅತೀ ಹೆಚ್ಚು ಅಥವಾ ತಿರಾ ಕಡಿಮೆ ಮಳೆಯಾಗುತ್ತಿದ್ದು, ಲಾಭಕ್ಕಾಗಿ ಬೆಳೆಸುವ ಅನೇಕ ಬೆಳೆಗಳು ರೈತರಿಗೆ ಕೈ ಕೊಡುತ್ತಿವೆ. ನವಣೆ ಬೆಳೆಗೆ ಎಷ್ಟೇ ಮಳೆಬಂದರು ಹಾಗೂ ಮಳೆ ಕೊರತೆ ಇದ್ದರೂ ಕೂಡ ಉತ್ತಮ ಬೆಳೆ ಬೆಳೆಯಬಹುದಾಗಿದೆ. ಅಲ್ಲದೇ ಇಂದಿನ ದಿನಗಳಲ್ಲಿ ಸಿರಿಧಾನ್ಯಕ್ಕೆ ಹೆಚ್ಚು ಬೇಡಿಕೆ ಇದೆ ಎಂದರು.
ಸಹಾಯಕ ಕೃಷಿ ನಿರ್ದೇಶಕ ಡಾ| ಎ.ಎಂ.ಮಲ್ಲಿಕಾರ್ಜುನ ಮಾತನಾಡಿ, ಇತಿಹಾಸ ಮರುಕಳಿಸುತ್ತಿದೆ. ಹಳೆ ಊಟದ ಪದ್ಧತಿ ಇಂದು ಮತ್ತೆ ಆರಂಭಗೊಳುತ್ತಿದೆ. ಇಂದು ಅನೇಕರು ವಿವಿಧ ರೋಗಗಳಿಂದ ನರಳುತ್ತಿದ್ದಾರೆ. ಕಾರಣ ಪೌಷ್ಠಿಕ ಆಹಾರದ ಕೊರತೆ ಹಾಗೂ ರಾಸಾಯನಿಕ ಮಿಶ್ರಿತ ಆಹಾರವೇ ಇದಕ್ಕೆ ಕಾರಣವಾಗಿದೆ. ಸಿರಿಧಾನ್ಯಗಳಿಂದ ಮನುಷ್ಯನಿಗೆ ಬೇಕಾದ ಎಲ್ಲಾ ಪೋಷಕಾಂಶಗಳು ದೊರೆಯುತ್ತವೆ. ಕಾರಣ ಪ್ರತಿಯೊಬ್ಬ ರೈತರು ತಮ್ಮ ಹೊಲದಲ್ಲಿ ಕನಿಷ್ಠ 100 ಗ್ರಾಂ ನವಣೆ ಬೆಳೆಸಲು ಮುಂದಾಗಬೇಕು. ಅದು ಮಾರಾಟಕ್ಕೆ ಎಂದು ತಿಳಿಯದೇ ನಮ್ಮ ಆರೋಗ್ಯಕ್ಕೆ ಎಂದು ಭಾವಿಸಬೇಕು ಎಂದು ಸಲಹೆ ನೀಡಿದರು.
ಡಾ| ಕೆ.ಭವಾನಿ ಮಾತನಾಡಿ, ಸಿರಿಧಾನ್ಯದಲ್ಲಿ ನಾರಿನಾಂಶ ಹಾಗೂ ಲವಣಾಂಶ ಹೆಚ್ಚಾಗಿದ್ದು, ನಿಧಾನವಾಗಿ ಜೀರ್ಣವಾಗುವುದರಿಂದ ಮಧುಮೇಹ, ರಕ್ತದೊತ್ತಡ, ಹೃದಯಾಘಾತ ಹಾಗೂ ಬೊಜ್ಜು ದೇಹದ ರೋಗಗಳ
ನಿವಾರಣೆಗೆ ಸಹಕಾರಿಯಾಗಿವೆ. ಪೋಷಕಾಂಶ ಮತ್ತು ಆರೋಗ್ಯದ ದೃಷ್ಟಿಯಿಂದ ಗೋಧಿ , ಅಕ್ಕಿ ಮತ್ತು ಜೋಳಕ್ಕಿಂತ ಹೆಚ್ಚು ಉಪಯುಕ್ತವಾಗಿವೆ. ಪ್ರತಿನಿತ್ಯ ಒಂದು ಊಟದಲ್ಲಿ ಸಿರಿಧಾನ್ಯಗಳ ಬಳಕೆ ಮಾಡುವುದನ್ನು ಕಡ್ಡಾಯಗೊಳಿಸಬೇಕು. ವಿವಿಧ ಬಗೆಯ ತಿನಿಸುಗಳನ್ನು ಮಾಡಿ ಮಕ್ಕಳಿಗೆ ಕೊಡಬೇಕು ಎಂದು ಸಿರಿಧಾನ್ಯಗಳ ಪ್ರಾಮುಖ್ಯತೆ ಹಾಗೂ ಆರೋಗ್ಯ ಕುರಿತು ವಿವರಿಸಿದರು.
ಭಾಲ್ಕಿ ಸಹಾಯಕ ಕೃಷಿ ನಿರ್ದೇಶಕ ಇಂಧುದರ ಹಿರೇಮಠ, ದಿಲೀಪಕುಮಾರ ತಾಳಮಪಳ್ಳಿ, ಕೇಶವರಾಜ ತಳಘಟಕರ್, ಭೀಮಶೆಟ್ಟಿ, ಡಾ| ವಿ.ಆರ್. ಪಾಟೀಲ, ಡಾ| ಬಸವರಾಜ ಕಲಮಠ, ಮಹಾತಂಯ್ಯ ತೀರ್ಥಾ ಹಾಗೂ ಸುತ್ತಲ್ಲಿನ ಗ್ರಾಮಗಳ ರೈತರು ಮತ್ತು ಭೀಮರಾಯನಗುಡಿ ಕೃಷಿ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kollywood: ಬಹಿರಂಗ ಪತ್ರ ಬರೆದು ಧನುಷ್ ಮೇಲೆ ರೇಗಾಡಿದ ನಟಿ ನಯನತಾರಾ; ಆಗಿರುವುದೇನು?
Nara Ramamurthy: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸಹೋದರ ನಾರಾ ರಾಮಮೂರ್ತಿ ನಾಯ್ಡು ನಿಧನ
Actor Darshan ವಿರುದ್ದ ಸುಪ್ರೀಂನಲ್ಲಿ ಮೇಲ್ಮನವಿ: ಬೆಂಗ್ಳೂರು ಕಮೀಷನರ್
Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.