ಅವ್ಯವಸ್ಥೆ ಆಗರ ನಾಲತವಾಡ ನಿಲ್ದಾಣ


Team Udayavani, Sep 23, 2017, 12:09 PM IST

vij-3.jpg

ನಾಲತವಾಡ: ಸಾರಿಗೆ ವ್ಯವಸ್ಥೆ ಸುಧಾರಿಸಲು ಸರ್ಕಾರ ಅನೇಕ ಯೋಜನೆಗಳನ್ನು ಅನುಷ್ಟಾನಗೊಳಿಸಿದ್ದರೂ ಸಮರ್ಪಕವಾಗಿ ಬಳಕೆಯಾಗದೇ ಬಸ್‌ ನಿಲ್ದಾಣಗಳ ಸ್ಥಿತಿ ಅಯೋಮಯವಾಗಿದೆ ಎಂಬುದಕ್ಕೆ ನಾಲತವಾಡ ಬಸ್‌ ನಿಲ್ದಾಣವೇ ನಿದರ್ಶನವಾಗಿದೆ.

40 ಹಳ್ಳಿಗಳ ಹೃದಯ ಭಾಗವೆಂದೇ ಕರೆಸಿಕೊಳ್ಳುವ ಪಟ್ಟಣದ ಬಸ್‌ ನಿಲ್ದಾಣ ಅವ್ಯವಸ್ಥೆ ಆಗರವಾಗಿದೆ. ನಿತ್ಯ ಪ್ರಯಾಣಿಕರು ಹಾಗೂ ವಿದ್ಯಾರ್ಥಿಗಳು ಬಸ್‌ ನಿಲ್ದಾಣ ನೀರಿನಲ್ಲಿಯೆ ನಡೆದು ಬಸ್‌ನಲ್ಲಿ ಪ್ರಯಾಣಿಸುವಂತಾಗಿದೆ.

ಮುದ್ದೇಬಿಹಾಳ ತಾಲೂಕಿನಲ್ಲಿಯೇ ಅತಿ ಹೆಚ್ಚು ಗ್ರಾಮಗಳನ್ನೊಳಗೊಂಡ ನಾಲತವಾಡ ಪಟ್ಟಣ ಬಸ್‌ ನಿಲ್ದಾಣದ ಸ್ಥಿತಿ ವೀಕ್ಷಿಸಿದರೆ ಇದು ನಿಲ್ದಾಣವೋ ಅಥವಾ ಕೆರೆವೋ ಎಂಬಂತೆ ಭಾಸವಾಗುತ್ತಿದೆ.

ನಿಲ್ದಾಣ ಸುತ್ತಮುತ್ತ ಮೂತ್ರ ವಿಸರ್ಜನೆ: ನಿಲ್ದಾಣದಲ್ಲಿ ಪುರುಷರಿಗೆ ಮೂತ್ರಾಲಯವಿದ್ದು, ಇಲ್ಲದಂತಾಗಿದೆ. ಪುರುಷರು ಹಾಗೂ ಪಟ್ಟಣದ ನಿವಾಸಿಗಳು ನಿಲ್ದಾಣ ಸುತ್ತ ಗೋಡೆಗಳ ಪಕ್ಕ ಮೂತ್ರ ವಿಸರ್ಜನೆ ಮಾಡುತಿದ್ದಾರೆ. ಮೂತ್ರದ ನೀರಿನಲ್ಲಿಯೆ ಸಂಚರಿಸಿ ಪ್ರಯಾಣಿಕರು ಬಸ್‌ನೊಳಗೆ ಪ್ರವೇಶ ಮಾಡುವಂತಾಗಿದೆ. ಗೋಡೆ ಸುತ್ತಮತ್ತ ಇಲ್ಲಿ ಮೂತ್ರ ವಿಸರ್ಜನೆ ಮಾಡಬಾರದು ಎಂದು ಬೋರ್ಡ್‌ ಹಾಕಿದ್ದರೂ ಅದನ್ನು ಪಾಲಿಸುತ್ತಿಲ್ಲ.

ಕುಡಿಯಲು ನೀರಿಲ್ಲ: ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಸಮರ್ಪಕವಾಗಿ ಕುಡಿಯಲು ನೀರು ಸಿಗದೆ ಪರದಾಡುವಂತಾಗಿದೆ. ಕುಡಿಯುವ ನೀರಿನ ನಳಗಳು ಅಸ್ವತ್ಛತೆಯಿಂದ ಕೂಡಿದ್ದು, ಇಲ್ಲಿ ಪ್ರಯಾಣಿಕರು ನೀರು ಕುಡಿಯುವುದೇ ಇಲ್ಲ. ಬಸ್‌ ನಿಲ್ದಾಣದ ಸುತ್ತಮುತ್ತಲಿನ ನಿವಾಸಿಗಳು ಈ ನೀರನ್ನು ಬಯಲು ಬಹಿರ್ದೆಸೆಗೆ ಉಪಯೋಗಿಸುತಿದ್ದಾರೆ.

ನಿಲ್ದಾಣ ತೆಗ್ಗು ದಿನ್ನಿ: ಮುಖ್ಯ ರಸ್ತೆಗಿಂತ ನಿಲ್ದಾಣ ತೆಗ್ಗಿನಲ್ಲಿದ್ದ ಕಾರಣ ನೀರೆಲ್ಲ ನಿಲ್ದಾಣದಲ್ಲೆ ಸಂಗ್ರಹವಾಗುತ್ತಿದೆ. ನಿಲ್ದಾಣ ಬಸ್‌ ಓಡಾಟದಿಂದ ತೆಗ್ಗು ಬಿದ್ದು ನಿಲ್ದಾಣ ಜಲಾವೃತವಾಗಿ ಮಾರ್ಪಟ್ಟಿದೆ. ಪ್ರಯಾಣಿಕರು ಸಾಕಷ್ಟು ಬಾರಿ ನೀರಿನಲ್ಲಿ ಜಾರಿ ಬಿದ್ದು ಪ್ರಯಾಣಿಸಿದ್ದಾರೆ.

ಇನ್ನು ಆರಂಭವಾಗದೆ ಹೈಟೆಕ್‌ ನಿಲ್ದಾಣ: ಕಳೆದ 2 ವರ್ಷಗಳ ಹಿಂದೆಯೇ ಹೊಸ ಬಸ್‌ ನಿಲ್ದಾಣ ಮಂಜೂಾಗಿದೆ. ಅದನ್ನು ಟೆಂಡರ್‌ ಸಹ ಕರೆಯಲಾಗಿದೆ. ಆದರೆ, ಕಾಮಗಾರಿ ಮಾತ್ರ ಇನ್ನು ಆರಂಭವಾಗುತಿಲ್ಲ. ಹೊಸ ನಿಲ್ದಾಣ ನಿರ್ಮಿಸಲು ಮರಳು ಸಂಗ್ರಹಿಸಿದ್ದರೂ ಕಾಮಗಾರಿ ಆರಂಭಿಸಿಲ್ಲ. 

ವಿಪರೀತ ಸೊಳ್ಳೆ ಕಾಟ: ನಿಲ್ದಾಣದಲ್ಲಿ ನೀರು ನಿಂತ ಪರಿಣಾಮ ಸಂಜೆಯಾದರೆ ವಿಪರೀತ ಸೊಳ್ಳೆಯ ಕಾಟ. ಸೊಳ್ಳೆಗಳ ಕಡಿತದಿಂದ ಪ್ರಯಾಣಿಕರು ರೋಗಗಳಿಂದ ಬಳಲುವಂತಾಗಿದೆ.

ಗಬ್ಬೆದ್ದ ಮೂತ್ರಾಲಯ: ಕಳೆದ ಸುಮಾರು ವರ್ಷಗಳಿಂದ ಸ್ವತ್ಛತೆ ಕಾಣದೆ ನಿಲ್ದಾಣದ ಮೂತ್ರಾಲಯ ಗಬ್ಬೆದ್ದು ನಾರುತ್ತಿದೆ. ಪ್ರಯಾಣಿಕರು ಮೂತ್ರಾಲಯಕ್ಕೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ. ಎಲ್ಲೆಂದರಲ್ಲಿ ಮೂತ್ರ ವಿಸರ್ಜನೆ ಮಾಡುವ ಅನಿವಾರ್ಯತೆ ಎದುರಾಗಿದೆ.

ಟಾಪ್ ನ್ಯೂಸ್

1-sugama

Music; ಸುಗಮ ಸಂಗೀತಕ್ಕೆ ನವೋದಯ ಸಾಹಿತ್ಯ ಬುನಾದಿ

Ullala-ABVP

Mangalore: ಪರೀಕ್ಷಾ ಶುಲ್ಕ ಹೆಚ್ಚಳ ಖಂಡಿಸಿ ವಿವಿಯಲ್ಲಿ ಎಬಿವಿಪಿ ಪ್ರತಿಭಟನೆ

highcort dharwad

Minister K.J. George ಪುತ್ರನ ಅರ್ಜಿ: ಸರಕಾರಕ್ಕೆ ಹೈಕೋರ್ಟ್‌ ನೋಟಿಸ್‌

1-c-ss

IAS Transfer: ಅಧಿಕಾರಿ ಸಿ. ಶಿಖಾ ಕೇಂದ್ರ ಸೇವೆಗೆ ನಿಯುಕ್ತಿ

Darshan (2)

Darshan ವಿರುದ್ಧ ಸುಪ್ರೀಂನಲ್ಲಿ ಮೇಲ್ಮನವಿ: ಬಿ. ದಯಾನಂದ್‌

1-qaaa

T20; ಸಂಜು, ತಿಲಕ್‌ ಶತಕ ವೈಭವ: ದಕ್ಷಿಣ ಆಫ್ರಿಕಾದಲ್ಲಿ ಭಾರತ ಸರಣಿ ವಿಕ್ರಮ

Malai

Mangaluru: ಮಳಲಿ ಮಸೀದಿ ವಿವಾದ: ವಿಶ್ವ ಹಿಂದೂ ಪರಿಷತ್‌ ಅರ್ಜಿ ತಿರಸ್ಕೃತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-eweweq

Muddebihal; ಬೊಲೇರೊ-ಬೈಕ್ ಮುಖಾಮುಖಿ ಡಿಕ್ಕಿ: ಸವಾರ ಮೃ*ತ್ಯು

18-muddebihal

Muddebihal: ಕಬ್ಬು ತುಂಬಿದ್ದ ಟ್ರ್ಯಾಕ್ಟರ್ – ಟ್ರ್ಯಾಲಿ ಉರುಳಿ ಬೈಕ್ ಸವಾರ ಮೃತ್ಯು

6-muddebihala

Muddebihal: ಆಟೋ ಪಲ್ಟಿ: ಕೂಲಿ ಕಾರ್ಮಿಕ ಮಹಿಳೆ ಮೃತ್ಯು

2-muddebihala

Muddebihal: ಟ್ರ್ಯಾಕ್ಟರ್-ಟ್ರೇಲರ್‌ ಗೆ ಬೈಕ್ ಡಿಕ್ಕಿ ಹೊಡೆದು ಯುವಕ ಸ್ಥಳದಲ್ಲೇ ಮೃತ್ಯು

MB-Patil-Minister

Waqf Notice: ಒಂದಿಂಚು ಜಮೀನು ವಕ್ಫ್‌ಗೆ ಹೋಗಲು ಬಿಡಲ್ಲ: ಸಚಿವ ಎಂ.ಬಿ.ಪಾಟೀಲ್‌

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

1-sugama

Music; ಸುಗಮ ಸಂಗೀತಕ್ಕೆ ನವೋದಯ ಸಾಹಿತ್ಯ ಬುನಾದಿ

Ullala-ABVP

Mangalore: ಪರೀಕ್ಷಾ ಶುಲ್ಕ ಹೆಚ್ಚಳ ಖಂಡಿಸಿ ವಿವಿಯಲ್ಲಿ ಎಬಿವಿಪಿ ಪ್ರತಿಭಟನೆ

highcort dharwad

Minister K.J. George ಪುತ್ರನ ಅರ್ಜಿ: ಸರಕಾರಕ್ಕೆ ಹೈಕೋರ್ಟ್‌ ನೋಟಿಸ್‌

1-saaaa

ಮಧ್ಯವರ್ತಿಗಳಿಂದ ಮಾತ್ರ ‘ಸಕಾಲ’ಕ್ಕೆ ಸೇವೆ!

Farmer

Bagar Hukum ಅರ್ಜಿ ವಿಲೇವಾರಿ ಬಡ ರೈತರಲ್ಲಿ ಆಶಾವಾದ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.