ದೇವದಾಸರ ವರ್ಣವಿಲಾಸ


Team Udayavani, Sep 23, 2017, 12:55 PM IST

23-Kalavihara11.jpg

ಮುಂಬಯಿಯ ಕಲಾವಿದ ದೇವದಾಸ್‌ ಶೆಟ್ಟಿಯವರು ತನ್ನ 71ನೇ ವಯಸ್ಸಿನಲ್ಲಿ 45ನೇ ವಿವಾಹ ವಾರ್ಷಿಕೋತ್ಸವದ ಪ್ರಯುಕ್ತ 70ನೇ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನವನ್ನು ಮಂಗಳೂರಿನಲ್ಲಿ ಪ್ರಸಾದ್‌ ಆರ್ಟ್‌ ಗ್ಯಾಲರಿಯಲ್ಲಿ ನಡೆಸಿದ್ದಾರೆ. ಘಟನೆಗಳಿಂದ ಆಗುವ ವಿಭಜನೆಗಳನ್ನು, ಸಂವೇದನೆಗಳಿಂದ ಆಗುತ್ತಿರುವ ಜಟಿಲ ಸಂಕೀರ್ಣತೆಗಳನ್ನು, ಭಾವನಾತ್ಮಕ ಸ್ಪಂದನೆಯಲ್ಲಿಯೂ ಆಗಲಿರುವ ಕಠಿನ, ದೊರಗು ಸನ್ನಿವೇಶಗಳನ್ನು ವಿಷಯಕ್ಕನುಗುಣವಾಗಿ ಮಾರ್ಮಿಕವಾಗಿ ಬಣ್ಣಗಳಲ್ಲಿ ಪ್ರತಿಬಿಂಬಿಸಿದ್ದಾರೆ. ಹಣತೆ ದೀಪವು ಕತ್ತಲೆಯ ಮನೆಗೆ ಬೆಳಕಾಗಲೂಬಹುದು, ಅದೇ ದೀಪವು ವಿಕಟವಾಗಿ ಬೆಳಕಾದ ಮನೆಯನ್ನು ಹೊತ್ತಿ ಉರಿಸುವ ಶಕ್ತಿಯೂ ಆಗಬಹುದು. ವಸ್ತು ಒಂದೇ, ಕ್ರಿಯೆಗಳು ವಿಭಿನ್ನ.
 
ಮಾನವ ಶಕ್ತಿಯ ಅಗಾಧತೆಯೂ ಇದೇ ರೀತಿ; ಪಾತಾಳ ಸೇರುವುದೋ, ಗಿರಿಯ ಗುರಿ ಮುಟ್ಟುವುದೋ ಎಂಬಂತಿದ್ದು ಸಂಘಟಿತವಾಗುವ ಮನಸ್ಸುಗಳ ಪರಿಕಲ್ಪನೆಗಳಿಗೆ ಸೀಮಿತವಾಗಿರುತ್ತದೆ. ಆಡನ್ನು ಹಿಡಿಯಲಾಗದವರು ಆನೆಯನ್ನು ಹಿಡಿದು ಪಳಗಿಸುವುದೆಂದರೆ ಇದು ಕ್ರಿಯಾತ್ಮಕ ಶಕ್ತಿಗಿಂತ ಮಾನಸಿಕ ಸ್ಥೈರ್ಯಕ್ಕೆ ನಿದರ್ಶನವಾಗುತ್ತದೆ. ದೇವದಾಸ ಶೆಟ್ಟರು ಇವೇ ತಣ್ತೀಗಳನ್ನು ಸಮಾಜದ ಅಗೋಚರ ವ್ಯವಸ್ಥೆಯಿಂದ ಹುಡುಕಿ ಕೃತಿರೂಪಕ್ಕಿಳಿಸಿ, ವೀಕ್ಷಕರು ತನ್ನ ಸುತ್ತಮುತ್ತಲಿನ ನಿಲುವು, ಧೋರಣೆಗಳನ್ನು ಪರದೆಯಾಚೆ ಗ್ರಹಿಸುವಂತೆ ರೂಪಿಸಿರುವರು. ವ್ಯಾಮೋಹಗಳೇ ಅತಿಯಾಗಿ ಬದುಕಿನ ಭದ್ರತೆಯನ್ನೇ ಕೆಡಿಸುವಂತಾಗಿ ತನ್ನತನವನ್ನು ಕಳೆದುಕೊಳ್ಳುವ ಚಿತ್ರಣಗಳು, ನಾರಿಯ ಭಾವುಕತೆಯನ್ನು ಸಂಗೀತದ ನಿನಾದಗಳಲ್ಲಿ ಹರಡಿಸುವ ತಲ್ಲಣಗಳು, ಮಮತೆ, ವಾತ್ಸಲ್ಯದ ಸಂಬಂಧಗಳು ಅರ್ಥ ಪೂರ್ಣವಾಗಿ ಅರ್ಥರಹಿತವಾಗುವ ದುರಂತಗಳನ್ನು ಇವರು ತನ್ನದೇ ಶೈಲಿಯ ರೇಖೆಗಳೊಂದಿಗೆ ಬಣ್ಣ ಹರಡಿ ಕೃತಿಕರ್ತನಾಗಿರುವುದರಿಂದ ಪ್ರದರ್ಶನದ ಕಲಾಕೃತಿಗಳು ಸಮಾಜಕ್ಕೆ ಪ್ರತಿಬಿಂಬವಾಗಿದ್ದು ವೀಕ್ಷಕ ಸಹಜವಾಗಿಯೇ ಸಮಾಜಮುಖೀಯಾಗುವಂತೆ ಪ್ರೇರೇಪಿಸುತ್ತವೆ. ಮನುಷ್ಯನ ಆಸೆಯ ಇತಿಮಿತಿಗಳಿಗೆ ಬಿಂದಿಗೆ, ಕೊಡೆ, ಚಕ್ರ, ದೀಪ, ಕೊಳಲು ಮುಂತಾದವುಗಳನ್ನು ಸಾಂಕೇತಿಕ ರೂಪವಾಗಿ ಬಳಸಿಕೊಂಡು ಕತ್ತಲೆಯಾಚೆಯ ಬೆಳಕನ್ನೂ ಶೂನ್ಯದಾಚೆಯ ಅನಂತರೂಪವನ್ನೂ ಬೀಜದಾಚೆೆಯ ಹೆಮ್ಮರವನ್ನೂ ಪ್ರತಿಕ್ರಿಯಿಸಿದ್ದಾರೆ. ಕರಾವಳಿಯ ದಸರಾಹುಲಿ, ಆನೆಯನ್ನು ಸೆರೆಹಿಡಿಯುವ ಖೆಡ್ಡಾ, ನೃತ್ಯಗಾರ, ಗೊಲ್ಲನ ಕೊಳಲಿಗೆ ಧ್ವನಿಯಾಗುವ ದನ‌ಗಳು, ಅಶ್ವಶಕ್ತಿಯ ಅಗಾಧತೆ ಇವೆಲ್ಲವೂ ದೇವದಾಸರ ವರ್ಣವಿಲಾಸಗಳಾಗಿದ್ದವು. 

ಇವರ ಕಲಾಕೃತಿಗಳು ವ್ಯಕ್ತಿಗತ ಹಾಗೂ ವಸ್ತುಹಿತಗಳಾಗಿ ಬಹುವರ್ಣದಲ್ಲಿ ರೇಖೆಗಳ ಸಂಚಯದಲ್ಲಿ ವೈಶಿಷ್ಟ್ಯತೆಯ ಮೆಟ್ಟಿಲೇರು ತ್ತವೆ. ಇವರ ಕಲಾಕೃತಿಗಳು ಏಕವಿಷಯಕ್ಕೆ ಸೀಮಿತವಾಗಿರದೆ ಹಲವು ವಿಚಾರಧಾರೆಗಳ ಸಂಗಮವಾಗಿರುತ್ತವೆ. ದೇವದಾಸರು ರೇಖಾ ಚಿತ್ರಗಳಲ್ಲೂ ವಿಶೇಷ ಪ್ರಬುದ್ಧರಾಗಿದ್ದು ಸಾಹಿತ್ಯ-ಸಂಗೀತಗಳನ್ನೂ ಆರಾಧಿಸುವ ಕಲಾವಿದರು. ಬಾಂಬೆ ಆರ್ಟ್‌ ಸೊಸೈಟಿ, ಶಾಂತಿನಿಕೇತನ ಪ್ರಶಸ್ತಿ, ವಿಶ್ವೇಶ್ವರಯ್ಯ ಪ್ರಶಸ್ತಿ, ಕನ್ನಡ ಕಲಾಭೂಷಣ, ಕರ್ನಾಟಕ ಕಲಾರತ್ನ, ಆಳ್ವಾಸ್‌ ವರ್ಣ ವಿರಾಸತ್‌ ಪ್ರಶಸ್ತಿಗಳು ಇವರ ಕಲಾ ಪ್ರತಿಭೆಗೆ ಸಂದಿರುವ ಗೌರವಗಳು. ರಾಷ್ಟ್ರದಾದ್ಯಂತ 70 ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನಗಳನ್ನು ಮಾಡಿರುವ ಹೆಗ್ಗಳಿಕೆ ಇವರದ್ದು. ಪ್ರಸಾದ್‌ ಆರ್ಟ್‌ ಗ್ಯಾಲರಿಯಲ್ಲಿ ಇದು ಇವರ 5ನೇ ಏಕವ್ಯಕ್ತಿ ಕಲಾಪ್ರದರ್ಶನ.  
 
ದಿನೇಶ್‌ ಹೊಳ್ಳ

ಟಾಪ್ ನ್ಯೂಸ್

Hiriydaka: ಬೈಕ್‌ ಮರಕ್ಕೆ ಢಿಕ್ಕಿ: ಯುವಕ ಸಾವು

Hiriydaka: ಬೈಕ್‌ ಮರಕ್ಕೆ ಢಿಕ್ಕಿ: ಯುವಕ ಸಾವು

Firefighters rescue horse that fell into canal

Shimoga; ಕಾಲುವೆಗೆ ಬಿದ್ದ ಕುದುರೆಯನ್ನು ರಕ್ಷಣೆ ಮಾಡಿದ ಅಗ್ನಿಶಾಮಕ ಸಿಬ್ಬಂದಿ

SUNIL-KUMAR

Congress government ಗಾಂಧಿವಾದದಿಂದ‌ ಮಾವೋವಾದಕ್ಕೆ ಹೊರಳಿದೆ: ಸುನಿಲ್ ಕುಮಾರ್ ಕಿಡಿ

arrested

Delhi Police; ಬೆಂಗಳೂರಿನಲ್ಲಿ ಇಬ್ಬರು ಶಾರ್ಪ್‌ಶೂಟರ್‌ಗಳ ಬಂಧನ

KSRTC: ಚಾರ್ಮಾಡಿ ಘಾಟಿಯಲ್ಲಿ ಕೆಟ್ಟು ನಿಂತ ಸರ್ಕಾರಿ ಬಸ್, ಪ್ರಯಾಣಿಕರಲ್ಲಿ ಆತಂಕ…!

KSRTC: ಚಾರ್ಮಾಡಿ ಘಾಟಿಯಲ್ಲಿ ಕೆಟ್ಟು ನಿಂತ ಸರ್ಕಾರಿ ಬಸ್, ಪ್ರಯಾಣಿಕರಲ್ಲಿ ಆತಂಕ…!

1-frrr

L&T; ನೌಕರರು ರವಿವಾರವೂ ಕೆಲಸ ಮಾಡಬೇಕು, ವಾರಕ್ಕೆ 90 ಗಂಟೆ ಕೆಲಸ!!

1-naxal

NIA ವಿಶೇಷ ನ್ಯಾಯಾಲಯ; ಶರಣಾದ ಆರು ನಕ್ಸಲರಿಗೆ ಜ.31ರವರೆಗೆ ನ್ಯಾಯಾಂಗ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3-1

ಪಾಡ್ದನದೆಡೆಗೆ ನಿರಾಸಕ್ತಿ- ಜಾನಪದ ಆಕಾಡೆಮಿ ರಾಜ್ಯಪ್ರಶಸ್ತಿ ಪುರಸ್ಕೃತೆ ಅಪ್ಪಿ ಪಾಣಾರ ಕಳವಳ

19

ಸಂಪ್ರದಾಯಬದ್ಧವಾಗಿ ರಂಗಶಿಸ್ತಿನೊಂದಿಗೆ ಹೊಸತನ ಅಳವಡಿಸಿಕೊಂಡರೆ ತಪ್ಪಿಲ್ಲ

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

1-trrr

Yakshagana: ತೆಂಕುತಿಟ್ಟಿನ “ರಂಗಸ್ಥಳದ ರಾಜ’ʼ ಅರುವ ಕೊರಗಪ್ಪ ಶೆಟ್ಟಿ

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

Hiriydaka: ಬೈಕ್‌ ಮರಕ್ಕೆ ಢಿಕ್ಕಿ: ಯುವಕ ಸಾವು

Hiriydaka: ಬೈಕ್‌ ಮರಕ್ಕೆ ಢಿಕ್ಕಿ: ಯುವಕ ಸಾವು

Firefighters rescue horse that fell into canal

Shimoga; ಕಾಲುವೆಗೆ ಬಿದ್ದ ಕುದುರೆಯನ್ನು ರಕ್ಷಣೆ ಮಾಡಿದ ಅಗ್ನಿಶಾಮಕ ಸಿಬ್ಬಂದಿ

SUNIL-KUMAR

Congress government ಗಾಂಧಿವಾದದಿಂದ‌ ಮಾವೋವಾದಕ್ಕೆ ಹೊರಳಿದೆ: ಸುನಿಲ್ ಕುಮಾರ್ ಕಿಡಿ

Katapady: ಕಾರ್ಮಿಕ ಕುಸಿದು ಬಿದ್ದು ಸಾವು

Katapady: ಕಾರ್ಮಿಕ ಕುಸಿದು ಬಿದ್ದು ಸಾವು

arrested

Delhi Police; ಬೆಂಗಳೂರಿನಲ್ಲಿ ಇಬ್ಬರು ಶಾರ್ಪ್‌ಶೂಟರ್‌ಗಳ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.