ಸಾಣೇಹಳ್ಳಿಯ ಮಕ್ಕಳ ಯಕ್ಷಗಾನ ಕಲಿಕೆ-ಪ್ರಸ್ತುತಿ


Team Udayavani, Sep 23, 2017, 1:18 PM IST

23-Kalavihara13.jpg

ಕಲೆ ಪ್ರಾದೇಶಿಕವಾಗಿ ಪ್ರಭಾವಿಯಾಗಿರುತ್ತದೆ. ಯಾಕೆಂದರೆ ಅದು ಆ ಪ್ರದೇಶದ ಜನಜೀವನದಲ್ಲಿ ಹಾಸು ಹೊಕ್ಕಾಗಿರುತ್ತದೆ. ಅದರ ಪ್ರಭಾವ ಎಷ್ಟೆಂದರೆ ಜನರ ಆಡುಭಾಷೆಯಲ್ಲಿಯೂ ಅದರ ಪಲುಕುಗಳು ಸಿಂಪಡನೆಗೊಂಡಿರುವುದನ್ನು ನಾವು ನೋಡುತ್ತೇವೆ. ನಮ್ಮ ಅನುಭವದ ವ್ಯಾಪ್ತಿಯೊಳಗೆ ಚಲಿಸಿ ಒಂದು ಆಯ್ದ ಉದಾಹರಣೆ ನೀಡುವುದಾದರೆ ಅದು ನಮ್ಮ ಕರಾವಳಿ ಕರ್ನಾಟಕದ ಯಕ್ಷಗಾನ. ಈ ಪ್ರದೇಶದ ಅನಕ್ಷರಸ್ಥರು ಕೂಡ ತಮ್ಮ ವ್ಯಾವಹಾರಿಕ ಜೀವನದಲ್ಲೂ ಯಕ್ಷಗಾನದ ಸಂದರ್ಭಗಳನ್ನು ಉಲ್ಲೇಖೀಸುವುದು ಸರ್ವೇ ಸಾಮಾನ್ಯ. ಇದು ಈ ಭಾಗದ ಜನರ ನಿಜ ಜೀವನದಲ್ಲಿ ಯಕ್ಷಗಾನದ ಪ್ರಭಾವ ಗಾಢವಾಗಿರುವುದನ್ನು ಸೂಚಿಸುತ್ತದೆ. 
ಇಂಥ ಪರಿಸರದಲ್ಲಿ ಬೆಳೆದವರಿಗೆ ಯಕ್ಷಗಾನದ ಕಲಿಕೆ ಅಷ್ಟು ಕಷ್ಟವಾಗಲಾರದು. ಹಾಗೆ ಕಲಿಸುವವರಿಗೂ ಶ್ರಮ ಭರಿತ ಕಾಯಕವಾಗದು. ಆದರೆ ಭಿನ್ನ ಪರಿಸರದಿಂದ ಬಂದವರಿಗೆ ಯಕ್ಷಗಾನದ ಕಲಿಕೆ ಸುಲಭವೂ, ಸುಲಿತವೂ ಆಗಲಾರದು. ನಿಜವಾಗಿಯೂ ಯಕ್ಷಗಾನ ಸರಳ ಮಾಧ್ಯಮವಲ್ಲ. ತಾಳ, ಲಯ, ಸಂಗೀತ, ನೃತ್ಯ, ಅಭಿನಯ, ವಾಚಿಕ ಹಾಗೂ ವಿಶಿಷ್ಟ ವೇಷ ಭೂಷಣಗಳ ಸಂಯೋಗ. ಹಾಗಾಗಿ ಯಕ್ಷಗಾನ ಸುಲಭ ಗ್ರಾಹ್ಯವಲ್ಲದ ಹಾಗೂ ದೀರ್ಘ‌ಕಾಲದ ತರಬೇತಿ ಅಪೇಕ್ಷಿಸುವಂತ ಕಲೆ ಎಂದೇ ಹೇಳಬಹುದು. ಹಾಗಾದರೆ ಕಿರು ಅವಧಿಯಲ್ಲಿ ಯಕ್ಷಗಾನ ಕಲಿಯಲು ಸಾಧ್ಯವಿಲ್ಲವೇ? ಖಂಡಿತ ಸಾಧ್ಯ. ಅದಕ್ಕೆ ಎರಡು ಅಂಶಗಳು ಮುಖ್ಯ. ಒಂದು ಕಲಿಸುವಾತನ ಸಂಕಲ್ಪ ಹಾಗೂ ನಿರಂತರ ಪರಿಶ್ರಮ, ಇನ್ನೊಂದು ಕಲಿಯುವಾತನ ಅದಮ್ಯ ಆಸಕ್ತಿ ಮತ್ತು ಉತ್ಸಾಹ. ಇಂತಹ ಒಂದು ಸಾಧ್ಯತೆಯನ್ನು ಕಾಯ ರೂಪಕ್ಕೆ ತಂದ ಶ್ರೇಯಸ್ಸು ಉಡುಪಿ ಜಿಲ್ಲೆಯ ಹಂಗಾರಕಟ್ಟೆ ಯಕ್ಷಗಾನ ಕಲಾಕೇಂದ್ರಕ್ಕೆ ಸಲ್ಲುತ್ತದೆ. ಉಡುಪಿ ಯಕ್ಷಗಾನ ಕೇಂದ್ರದಲ್ಲಿ ಗುರು ಬನ್ನಂಜೆ ಸಂಜೀವ ಸುವರ್ಣರು ಈಗಾಗಲೇ ಯಕ್ಷಗಾನಕ್ಕೆ ‘ಅನ್ಯದೇಶೀಯ’ರಾದ ಯುವಕ-ಯುವತಿಯರಿಗೆ ಹೀಗೆಯೇ ಅಲ್ಪಾವಧಿಯಲ್ಲಿ ತರಬೇತಿ ನೀಡಿ, ಯಶಸ್ವೀ ಪ್ರದರ್ಶನ ನೀಡಿದ್ದಾರೆ.

ಇತ್ತೀಚೆಗೆ ಚಿತ್ರದುರ್ಗ ಜಿಲ್ಲೆಯ ಸಾಣೇಹಳ್ಳಿ ಶ್ರೀ ಶಿವಕುಮಾರ ರಂಗ ಪ್ರಯೋಗ ಶಾಲೆಯ ಸುಮಾರು ಇಪ್ಪತ್ತು ಮಂದಿ ವಿದ್ಯಾರ್ಥಿಗಳ ತಂಡ ಯಕ್ಷಗಾನ ತರಬೇತಿಗಾಗಿ ಐರೋಡಿ ಹಂಗಾರಕಟ್ಟೆಯ ಯಕ್ಷಗಾನ ಕಲಾಕೇಂದ್ರಕ್ಕೆ ಬಂದಿದೆ. ಕಲಾಕೇಂದ್ರದ ಪ್ರಾಚಾರ್ಯ ಗುಂಡ್ಮಿ ಸದಾನಂದ ಐತಾಳರ ನೇತೃತ್ವದಲ್ಲಿ ತರಬೇತಿ ಪಡೆದು, ಮೊನ್ನೆ ಸೆ.11ರಂದು ‘ಅಂಬಾ ಪ್ರಕರಣ’ವೆಂಬ ಪ್ರಸಂಗವನ್ನು ಕೇಂದ್ರದಲ್ಲಿ ಆಡಿ ತೋರಿಸಿದ್ದಾರೆ. ತಂಡದಲ್ಲಿ ಕೆಲವು ವಿದ್ಯಾರ್ಥಿನಿಯರೂ ಇದ್ದರು. ಇವರೆಲ್ಲರೂ ಉತ್ತರ ಕರ್ನಾಟಕದ ಕಡೆಯವರಾಗಿದ್ದು, ಯಕ್ಷಗಾನವನ್ನು ಕಂಡವರೂ ಅಲ್ಲ. ಹಾಗಾಗಿ ದಾಖಲೆಯ ಕಿರು ಅವಧಿಯ ತರಬೇತಿ ಪಡೆದು ನೀಡಿದ, ಪ್ರಥಮ ಪ್ರದರ್ಶನ ಇದಾಗಿದ್ದು ಕೇವಲ ಗುಣವನ್ನು ಮಾತ್ರ ಗಣನೆಗೆ ತೆಗೆದುಕೊಳ್ಳುವುದು ವಿಹಿತ.

ಗುರು ಸದಾನಂದ ಐತಾಳರು ಸವಾಲಾಗಿಯೇ ಈ ಕಾರ್ಯವನ್ನು ಸ್ವೀಕರಿಸಿದ್ದಾರೆಂದರೆ ಉತ್ಪ್ರೇಕ್ಷೆಯಾಗಲಾರದು. ದೇಹಾಯಾಸವನ್ನು ಲೆಕ್ಕಿಸದೆ ತಾವೇ ಕುಣಿದು ಅಭಿನಯಿಸಿ ತೋರಿಸುತ್ತಾ ತರಬೇತಿಯಲ್ಲಿ ತಲ್ಲೀನರಾಗಿದ್ದರು ಎಂದು ಬೇರೆ ಹೇಳಬೇಕಾಗಿಲ್ಲ. ವಿದ್ಯಾರ್ಥಿಗಳೂ ಉತ್ಸಾಹದಿಂದ ಹಾಗೂ ಅತಿ ಶ್ರದ್ಧೆಯಿಂದ ಕಲಿತಿದ್ದಾರೆ ಎಂಬುದಕ್ಕೆ ಅವರು ನೀಡಿದ ಪ್ರದರ್ಶನದಲ್ಲಿ ತೋರಿದ ನಿರ್ವಹಣೆಯೇ ಸಾಕ್ಷಿ. ಅವರ ಹೆಜ್ಜೆ, ಅಂಗನ್ಯಾಸ -ಕರನ್ಯಾಸ, ನಿಲುವು ಹಾಗೂ ವಾಚಿಕದ ಶ್ರುತಿ ಗಮನಿಸುವಾಗ ಅವರ ಉದ್ದೇಶದ ಯಕ್ಷಗಾನ ಕಲಿಕೆ ಫ‌ಲಪ್ರದವಾಗಿದೆ ಎಂದರೆ ಅವಸರದ ಹೇಳಿಕೆಯಾಗಲಾರದು. ಎಲ್ಲ ವಿದ್ಯಾರ್ಥಿಗಳೂ ರಂಗದ ಮೇಲೆ ಒಂದಲ್ಲ ಒಂದು ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. 

ಭೀಷ್ಮನಾಗಿ ಮಧು ಎಂ., ಅಂಬೆಯಾಗಿ ಕು| ಅಕ್ಷತಾ, ಸಾಲ್ವನಾಗಿ ವಿಶ್ವನಾಥಸ್ವಾಮಿ, ಪರಶುರಾಮನಾಗಿ ಪ್ರಶಾಂತ್‌, ಪ್ರತಾಪಸೇನನಾಗಿ ಶ್ರೇಯಸ್‌ ಹಾಗೂ ಕಿರಾತನಾಗಿ ಸಂತೋಷ್‌- ಇವರುಗಳ ನಿರ್ವಹಣೆ ಅಚ್ಚುಕಟ್ಟಾಗಿತ್ತು. ಇಲ್ಲಿ ಉಲ್ಲೇಖೀಸಲೇಬೇಕಾದ ಪಾತ್ರ ಅಂಬೆ. ಇದೊಂದು ವಿಶಿಷ್ಟ ಪಾತ್ರ. ಏಕಕಾಲದಲ್ಲಿ ದುಖ, ದುಮ್ಮಾನ, ಹತಾಶೆ, ರೋಷ, ಛಲ ಹೀಗೆ ಬಹುಭಾವನೆಗಳನ್ನು ಪ್ರಕಟಿಸಬೇಕಾದ ಪಾತ್ರ. ಅಕ್ಷತಾ ಅವರ  ನಿರ್ವಹಣೆ ಚೆನ್ನಾಗಿತ್ತು. ಸಭಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದು ತರಬೇತುದಾರರ ಶ್ರಮ ಸಾರ್ಥಕ.

ಭಾಗವತರಾಗಿ ಕೇಶವ ಆಚಾರ್‌, ಶಶಿಕಲಾ ಪ್ರಭು ಮತ್ತು ಗಣೇಶ್‌ ಆಚಾರ್‌ ಸಹಕರಿಸಿದರೆ, ಮದ್ದಳೆವಾದಕರಾಗಿ  ರವಿಶಂಕರಲಿಂಗ ಹಾಗೂ ಚೆಂಡೆಯಲ್ಲಿ ಮಾಧವ ಮಣೂರು ಸಹಕರಿಸಿರುತ್ತಾರೆ. ಇಲ್ಲಿ ಹೇಳಲೇಬೇಕಾದ ಇನ್ನೊಂದು ವಿಚಾರವೆಂದರೆ, ಈ ಕಾರ್ಯಕ್ರಮದ ಹಿಂದಿನ ಚೇತನಶಕ್ತಿಯ ಮೂಲ ಕಲಾಕೇಂದ್ರದ ಕಾರ್ಯದರ್ಶಿಯವರಾದ ಎ. ರಾಜಶೇಖರ ಹೆಬ್ಟಾರ್‌. ಕೇಂದ್ರದಲ್ಲಿ ಭಾಗವತಿಕೆಯ ತರಬೇತಿ ನೀಡುವ ಜತೆಗೆ ಸದಾನಂದ ಮಂಟಪದಲ್ಲಿ ಯಕ್ಷಗಾನದ ಪ್ರದರ್ಶನ, ಕಮ್ಮಟ, ಗೋಷ್ಠಿ ಇತ್ಯಾದಿಗಳನ್ನು ಯಾವತ್ತೂ ಹಮ್ಮಿಕೊಳ್ಳಲಾಗುತ್ತಿದೆ. ಯಕ್ಷಗಾನ ಕುರಿತಾದ ಹೆಬ್ಟಾರರ ಕಳಕಳಿ ನಿಜವಾಗಿಯೂ ಶ್ಲಾಘನೀಯ. 

ಬೇಳೂರು ರಾಘವ ಶೆಟ್ಟಿ

ಟಾಪ್ ನ್ಯೂಸ್

Bharamasagara: ಅರಣ್ಯ ಇಲಾಖೆ ಕಾರ್ಯಾಚರಣೆ; ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಸೆರೆ

Bharamasagara: ಅರಣ್ಯ ಇಲಾಖೆ ಕಾರ್ಯಾಚರಣೆ; ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಸೆರೆ

Kailash Gahlot: ಚುನಾವಣೆಗೂ ಮೊದಲೇ ಆಪ್ ತೊರೆದ ಸಚಿವ ಕೈಲಾಶ್ ಗೆಹ್ಲೋಟ್…

Kailash Gahlot: ಚುನಾವಣೆಗೂ ಮೊದಲೇ ಆಪ್ ತೊರೆದ ಸಚಿವ ಕೈಲಾಶ್ ಗೆಹ್ಲೋಟ್…

101

Daali Dhananjay: ಸರಳವಾಗಿ ನೆರವೇರಿತು ಡಾಲಿ – ಧನ್ಯತಾ ನಿಶ್ಚಿತಾರ್ಥ

No support for liquor bandh: Tourism Hotel Owners Association

Liquor: ಮದ್ಯ ಬಂದ್‌ ಗೆ ಬೆಂಬಲವಿಲ್ಲ: ಪ್ರವಾಸೋದ್ಯಮ ಹೋಟೆಲ್ ಮಾಲೀಕರ ಸಂಘ

: ಸಿಎಂ ಸಿದ್ದರಾಮಯ್ಯ

Bagalakote: ಅನರ್ಹರ ಬಿಪಿಎಲ್ ಕಾರ್ಡ್ ಗಳು ಮಾತ್ರ ರದ್ದು: ಸಿಎಂ ಸಿದ್ದರಾಮಯ್ಯ

Kunigal: ಹಳ್ಳಕ್ಕೆ ಉರುಳಿ ಬಿದ್ದ ಟ್ರ್ಯಾಕ್ಟರ್… ತಂದೆ ಮಗ ಸಾವು

Kunigal: ಹಳ್ಳಕ್ಕೆ ಉರುಳಿ ಬಿದ್ದ ಟ್ರ್ಯಾಕ್ಟರ್… ತಂದೆ ಮಗ ಸಾವು

Shimoga; Omini caught fire while filling with petrol

Shimoga; ಪೆಟ್ರೋಲ್ ಹಾಕುವಾಗ ಹೊತ್ತಿ ಉರಿದ ಓಮಿನಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

19

ಸಂಪ್ರದಾಯಬದ್ಧವಾಗಿ ರಂಗಶಿಸ್ತಿನೊಂದಿಗೆ ಹೊಸತನ ಅಳವಡಿಸಿಕೊಂಡರೆ ತಪ್ಪಿಲ್ಲ

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

1-trrr

Yakshagana: ತೆಂಕುತಿಟ್ಟಿನ “ರಂಗಸ್ಥಳದ ರಾಜ’ʼ ಅರುವ ಕೊರಗಪ್ಪ ಶೆಟ್ಟಿ

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

3

Yakshagana: ಚಪ್ಪಾಳೆಗಾಗಿ ರಸಾಭಾಸ ಮಾಡಬಾರದು

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

4(1)

Lupus Nephritis: ಲೂಪಸ್‌ ನೆಫ್ರೈಟಿಸ್‌ ರೋಗಿಗಳಿಗೆ ಒಂದು ಮಾರ್ಗದರ್ಶಿ

Sagara: ಸಹಕಾರಿ ಚಳುವಳಿಯ ಭದ್ರ ಬೇರು ಕರ್ನಾಟಕದಲ್ಲಿದೆ: ಬಿ.ಎಸ್.ಯಡಿಯೂರಪ್ಪ

Sagara: ಸಹಕಾರಿ ಚಳುವಳಿಯ ಭದ್ರ ಬೇರು ಕರ್ನಾಟಕದಲ್ಲಿದೆ: ಬಿ.ಎಸ್.ಯಡಿಯೂರಪ್ಪ

Bharamasagara: ಅರಣ್ಯ ಇಲಾಖೆ ಕಾರ್ಯಾಚರಣೆ; ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಸೆರೆ

Bharamasagara: ಅರಣ್ಯ ಇಲಾಖೆ ಕಾರ್ಯಾಚರಣೆ; ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಸೆರೆ

Kailash Gahlot: ಚುನಾವಣೆಗೂ ಮೊದಲೇ ಆಪ್ ತೊರೆದ ಸಚಿವ ಕೈಲಾಶ್ ಗೆಹ್ಲೋಟ್…

Kailash Gahlot: ಚುನಾವಣೆಗೂ ಮೊದಲೇ ಆಪ್ ತೊರೆದ ಸಚಿವ ಕೈಲಾಶ್ ಗೆಹ್ಲೋಟ್…

101

Daali Dhananjay: ಸರಳವಾಗಿ ನೆರವೇರಿತು ಡಾಲಿ – ಧನ್ಯತಾ ನಿಶ್ಚಿತಾರ್ಥ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.