ಸಹಕಾರಿ ಬ್ಯಾಂಕ್‌ಗಳಿಂದ ಬಡವರು-ವ್ಯಾಪಾರಸ್ಥರಿಗೆ ಅನುಕೂಲ
Team Udayavani, Sep 24, 2017, 2:43 PM IST
ಮಾನ್ವಿ: ಸಹಕಾರಿ ಸಂಸ್ಥೆಗಳು ಬಡವರು, ರೈತರು ಹಾಗೂ ಮಧ್ಯಮ ವರ್ಗದ ಜನರ ಆರ್ಥಿಕ ಅಭಿವೃದ್ಧಿಗೆ ಸಹಕಾರಿಯಾಗಿವೆ ಎಂದು ಚೀಕಲಪರ್ವಿ ಮಠದ ಶ್ರೀ ಅಭಿನವ ರುದ್ರಮುನಿ ಸ್ವಾಮೀಜಿ ಹೇಳಿದರು.
ಪಟ್ಟಣದ ಧ್ಯಾನ ಮಂದಿರದಲ್ಲಿ ನಡೆದ ವಿರೂಪಾಕ್ಷೇಶ್ವರ ಪತ್ತಿನ ಸೌಹರ್ದ ಸಹಕಾರಿ ಬ್ಯಾಂಕಿನ ವಾರ್ಷಿಕ ಮಹಾಸಭೆಯಲ್ಲಿ ಅವರು ಮಾತನಾಡಿದರು. ಗ್ರಾಹಕರಿಗೆ ಉತ್ತಮ ಸೇವೆ ಸಲ್ಲಿಸುವುದರಿಂದ ಹಾಗೂ ಸಾಲಗಾರರು ಸಮಯಕ್ಕೆ ಸರಿಯಾಗಿ ಸಾಲ ಮರುಪಾವತಿ ಮಾಡುವುದರಿಂದ ಸಹಕಾರಿ ಬ್ಯಾಂಕ್‌ಗಳ ಅಭಿವೃದ್ಧಿ ಸಾಧ್ಯ
ಎಂದರು.
ವಿರೂಪಾಕ್ಷೇಶ್ವರ ಪತ್ತಿನ ಬ್ಯಾಂಕ್ 2016-17ನೇ ಸಾಲಿನಲ್ಲಿ 96 ಲಕ್ಷಕ್ಕೂ ಅಧಿಕ ನಿವ್ವಳ ಲಾಭ ಗಳಿಸಿರುವುದು
ಶ್ಲಾಘನೀಯ ಕಾರ್ಯ ಎಂದರು. ಅಧ್ಯಕ್ಷತೆ ವಹಿಸಿದ್ದ ಕಲ್ಮಠದ ಡಾ|ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಸಹಕಾರಿ ಸಂಸ್ಥೆಗಳ ಮೂಲಕ ಬಡವರಿಗೆ, ರೈತರಿಗೆ ಮತ್ತು ಸಣ್ಣ ವ್ಯಾಪಾರಸ್ಥರಿಗೆ ಸಾಲ ಸೌಭ್ಯವನ್ನು ಒದಗಿಸಲಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಗಣ್ಯರಿಗೆ ವರ್ಷದ ವ್ಯಕ್ತಿ ಎಂದು ಗುರುತಿಸಿ ಸನ್ಮಾನಿಸಲಾಯಿತು. ಸಿಂಧನೂರಿನ ರಾಜಶೇಖರ, ಬ್ಯಾಂಕಿನ ಕಾ.ನಿ. ಅಧಿಕಾರಿ ಶಂಕರಾನಂದ, ನಿರ್ದೇಶಕರಾದ ಅಮರಗುಂಡಪ್ಪ ಮೇಟಿ, ಶಿವಯ್ಯಸ್ವಾಮಿ, ಎಚ್.ಎಂ.ಬಸವರಾಜಪ್ಪಗೌಡ, ಅಶೋಕಕುಮಾರ ಎಚ್.ಎಂ., ವಿಶ್ವಾರಾಧ್ಯಸ್ವಾಮಿ, ಆರ್. ರಾಘವೇಂದ್ರ ಶೆಟ್ಟಿ, ಎಚ್. ಸೂಗಪ್ಪಗೌಡ, ಆರ್. ಪಾಂಡುರಂಗ ಶೆಟ್ಟಿ, ಆರ್. ನಾಗರಾಜ ಶೆಟ್ಟಿ, ಚನ್ನಪ್ಪಗೌಡ, ಕೃಪಾಸಾಗರ ಪಾಟೀಲ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Raichur: ಮೂರೂ ದಶಕಗಳ ಬಳಿಕ ನಕ್ಸಲ್ ಮಾರೆಪ್ಪ ಅರೋಳಿ ಶರಣಾಗತಿ… ಕುಟುಂಬದಲ್ಲಿ ಖುಷಿ
Raichur; ಜೆಸ್ಕಾಂ ಜೆ.ಇ ಹುಲಿರಾಜ ಮನೆ ಮೇಲೆ ಲೋಕಾಯುಕ್ತ ದಾಳಿ
Raichuru: ರಿಮ್ಸ್ ಆಸ್ಪತ್ರೆಯಲ್ಲಿ ಮತ್ತೋರ್ವ ಬಾಣಂತಿ ಸಾವು; 3 ತಿಂಗಳಿನಲ್ಲಿ 12 ಮಂದಿ ಬಲಿ
Karnataka Politics: ಮುಂದಿನ ಅವಧಿಗೆ ‘ನಾನೇ ಸಿಎಂ ಅಭ್ಯರ್ಥಿ’: ಸತೀಶ್ ಜಾರಕಿಹೊಳಿ
Maski ಅಕ್ರಮ ಮರಂ ಸಾಗಾಣಿಕೆ: ಎರಡು ಟಿಪ್ಪರ್ ವಶಕ್ಕೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.