ನಿರ್ದೇಶನಕ್ಕಿಳಿದ ಟೆನ್ನಿಸ್ ಕೃಷ್ಣ
Team Udayavani, Sep 24, 2017, 5:47 PM IST
“ನಮಸ್ಕಾರ ಕಣಣ್ಣೋ…’
– ಸಾಮಾನ್ಯವಾಗಿ ಈ ಡೈಲಾಗ್ ಕೇಳದವರೇ ಇಲ್ಲ. ಅದರಲ್ಲೂ ಈ ಡೈಲಾಗ್ ಹೊರಬರುತ್ತಿದ್ದಂತೆಯೇ, ಕಣ್ಣ ಮುಂದೆ ಕಾಣಿಸೋದು ಹಾಸ್ಯ ಕಲಾವಿದ ಟೆನ್ನಿಸ್ ಕೃಷ್ಣ. ಹೌದು, ಟೈಗರ್ ಪ್ರಭಾಕರ್ ಅಭಿನಯದ “ತ್ರಿನೇತ್ರ’ ಸಿನಿಮಾದಲ್ಲಿ ಟೆನ್ನಿಸ್ ಕೃಷ್ಣ ಮಾಡಿದ ಪಾತ್ರ ಮತ್ತು ಅವರು ಹರಿಬಿಟ್ಟ ಡೈಲಾಗ್ ಸೂಪರ್ ಹಿಟ್ ಆಗಿತ್ತು. “ನಮಸ್ಕಾರ ಕಣಣ್ಣೋ …’ ಎಂದು ಹೇಳುವ ಮೂಲಕ ಕನ್ನಡ ಚಿತ್ರರಂಗದಲ್ಲಿ ಒಬ್ಬ ಹಾಸ್ಯ ಕಲಾವಿದರಾಗಿ ಗಟ್ಟಿ ನೆಲೆಕಂಡುಕೊಂಡವರು ಟೆನ್ನಿಸ್ ಕೃಷ್ಣ. ಅದಷ್ಟೇ ಅಲ್ಲ, ಹಾಸ್ಯ ನಟ ಟೆನ್ನಿಸ್ ಕೃಷ್ಣ ಅಂದಾಕ್ಷಣ, “ಮತ್ತೆ ಮತ್ತೆ’ ನೆನಪಿಗೆ ಬರೋದೇ, “ನಂಜಪ್ಪನ ಮಗ ಗುಂಜಪ್ಪ’ ಎಂಬ ಡೈಲಾಗ್. ಇಷ್ಟಕ್ಕೂ ಟೆನ್ನಿಸ್ ಕೃಷ್ಣ ಅವರ ಬಗ್ಗೆ ಇಷ್ಟೊಂದು ಪೀಠಿಕೆ ಯಾಕೆ ಅಂತೀರಾ? ವಿಷಯ ಇರೋದೇ ಇಲ್ಲಿ. ಸುಮಾರು ಮೂರು ದಶಕಗಳಿಂದಲೂ ಕನ್ನಡ ಚಿತ್ರರಂಗದಲ್ಲಿರುವ ಟೆನ್ನಿಸ್‌ಕೃಷ್ಣ ಈವರೆಗೆ ಸುಮಾರು 350 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಇಷ್ಟು ವರ್ಷದ ಅನುಭವದ ಮೇಲೆ ಅವರೀಗ ಒಂದು ಸಿನಿಮಾ ನಿರ್ದೇಶನ ಮಾಡುವ ತಯಾರಿಯಲ್ಲಿದ್ದಾರೆ. ಹೌದು, ಟೆನ್ನಿಸ್ ಕೃಷ್ಣ ಈಗ ನಿರ್ದೇಶಕರಾಗುತ್ತಿದ್ದಾರೆ. ಆ ಸಿನಿಮಾಗೆ “ಮತ್ತೆ ಮತ್ತೆ’ ಎಂಬ ಹೆಸರಿಟ್ಟಿದ್ದಾರೆ.
ತಮ್ಮ ವೃತ್ತಿ ಜೀವನದದಲ್ಲಿ ಇದುವರೆಗೆ ನಟಿಸಿರುವ 350 ಕ್ಕೂ ಹೆಚ್ಚು ಚಿತ್ರಗಳಲ್ಲಿ, ಹಾಸ್ಯ ಕಲಾವಿದೆ ರೇಖಾ ದಾಸ್ ಅವರೊಂದಿಗೆ ನೂರು ಚಿತ್ರಗಳಲ್ಲಿ ಪರದೆ ಹಂಚಿಕೊಂಡಿರುವ ಟೆನ್ನಿಸ್ ಕೃಷ್ಣ ಅವರು ಈ ಬಣ್ಣದ ಲೋಕಕ್ಕೆ ಬಂದಿದ್ದೇ ನಿರ್ದೇಶಕರಾಗಬೇಕು ಅಂತ. ಆದರೆ, ಅವರಿಗೆ ಸಿಕ್ಕಿದ್ದು ನಟಿಸೋ ಅವಕಾಶ. ಸಿಕ್ಕ ಅವಕಾಶವನ್ನು ಚೆನ್ನಾಗಿ ಬಳಸಿಕೊಂಡ ಟೆನ್ನಿಸ್ ಕೃಷ್ಣ ಈಗ ನಿರ್ದೇಶಕರಾಗುತ್ತಿದ್ದಾರೆ.
ನಿರ್ದೇಶನ ಎಂಬುದು ಅವರ ಬಹಳ ವರ್ಷಗಳ ಕನಸು. ಮೊದಲು ಅವರು ಕೆಲಸ ಮಾಡುತ್ತಿದ್ದದ್ದೇ ನಿರ್ದೇಶನ ವಿಭಾಗದಲ್ಲಿ. ಆರ್.ಎನ್ ಜಯಗೋಪಾಲ್ ನಿರ್ದೇಶನದ “ಹೃದಯ ಪಲ್ಲವಿ’ ಸಿನಿಮಾದಲ್ಲಿ ಟೆನ್ನಿಸ್ ಕೃಷ್ಣ ಸಹ ನಿರ್ದೇಶಕರಾಗಿ ದುಡಿದಿದ್ದಾರೆ. ಆ ಚಿತ್ರದಲ್ಲಿ ಶ್ರೀನಾಥ್, ಚರಣ್‌ರಾಜ್, ಗೀತಾ, ಸುದರ್ಶನ್ ನಟಿಸಿದ್ದರು. ವೇಮಗಲ್ ಜಗನ್ನಾಥ್ ನಿರ್ದೇಶನದ “ತುಳಸಿದಳ’ ಹಾಗೂ ಸುನೀಲ್‌ಕುಮಾರ್ ದೇಸಾಯಿ ಅವರ “ತರ್ಕ’ ಚಿತ್ರದಲ್ಲೂ ಸಹ ನಿರ್ದೇಶನ ಕೆಲಸ ಮಾಡಿದ್ದರು. ಆಗಿನಿಂದಲೂ ನಿರ್ದೇಶನ ಮಾಡುವ ಆಸೆ ಇತ್ತಾದರೂ, ಅವರು ಸೆಟ್‌ನಲ್ಲಿ ಮಾಡುತ್ತಿದ್ದ ಕಾಮಿಡಿ, ಎಲ್ಲರಿಗೂ ಇಷ್ಟವಾಗುತ್ತಿತ್ತು. ನಿರ್ದೇಶಕರು ಒಂದೊಂದು ಪಾತ್ರ ಕೊಟ್ಟು ಮಾಡಿಸುತ್ತಿದ್ದರು. ಅದೇ ಅವರ ಬದುಕಿಗೆ ಆಸರೆಯಾಯ್ತು. ರಂಗಭೂಮಿ, ಬೀದಿನಾಟಕ, ವೇದಿಕೆ ನಾಟಕಗಳನ್ನು ಮಾಡುತ್ತಲೇ ನೂರಾರು ಚಿತ್ರಗಳಲಿ ನಟಿಸಿ ಸೈ ಎನಿಸಿಕೊಂಡ ಟೆನ್ನಿಸ್ ಕೃಷ್ಣ ಇದೀಗ ನಿರ್ದೇಶನಕ್ಕೆ ಅಣಿಯಾಗಿದ್ದಾರೆ.
ನೈರುತ್ಯ ಆರ್ಟ್ ಮೀಡಿಯಾ ಬ್ಯಾನರ್‌ನಲ್ಲಿ “ಮತ್ತೆ ಮತ್ತೆ’ ಎಂಬ ಚಿತ್ರ ತಯಾರಾಗುತ್ತಿದೆ. ಈ ಚಿತ್ರಕ್ಕೆ ಡಾ. ಅರುಣ್ ಕಥೆ ಮತ್ತು ಸಂಭಾಷಣೆ ಬರೆದಿದ್ದಾರೆ. ಹೊಸ ಪ್ರತಿಭೆಗಳಿಗೆ ಇಲ್ಲಿ ಅವಕಾಶ ಕೊಡುತ್ತಿರುವ ಟೆನ್ನಿಸ್, ಅವರ ಸಮಕಾಲೀನದ ಕಲಾವಿದರು ಯಾರು ಸಂಕಷ್ಟದಲ್ಲಿದ್ದಾರೋ, ಅವರನ್ನು ಗುರುತಿಸಿ, ಈ ಚಿತ್ರದಿಂದ ಬರುವಂತಹ ಲಾಭದ ಶೇ.20 ರಷ್ಟು ಸಹಾಯ ಮಾಡುವ ಉದ್ದೇಶವೂ ಅವರಿಗಿದೆ. ಅಷ್ಟೇ ಅಲ್ಲ, ಹಿರಿಯ ಕಲಾವಿದರಿಗೂ ಇಲ್ಲಿ ಅವಕಾಶ ಕೊಡುತ್ತಿದ್ದಾರೆ.
ಬೆಂಗಳೂರು, ತೀರ್ಥಹಳ್ಳಿ ಸೇರಿದಂತೆ ಬಹುತೇಕ ಮಲೆನಾಡ ಸುತ್ತಮುತ್ತಲಿನಲ್ಲಿ ಸುಮಾರು 35 ದಿನಗಳ ಕಾಲ ಚಿತ್ರೀಕರಣ ಮಾಡಲಿದ್ದಾರೆ. ಇಮಿಯಾಜ್ ಚಿತ್ರದ ಐದು ಹಾಡುಗಳಿಗೆ ಸಂಗೀತ ನೀಡುತ್ತಿದ್ದಾರೆ. ಮುಂಬೈನ ಛಾಯಾಗ್ರಾಹಕರೊಬ್ಬರು ಚಿತ್ರಕ್ಕೆ ಕ್ಯಾಮೆರಾ ಹಿಡಿಯಲಿದ್ದಾರೆ. ಇದೊಂದು ಸಸ್ಪೆನ್ಸ್ ಕಾಮಿಡಿ ಸಿನಿಮಾ ಆಗಿದ್ದು, ಶ್ರಾವಣದಲ್ಲಿ ಸೆಟ್ಟೇರಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BBK11: ಟಾಸ್ಕ್ ವಿಚಾರದಲ್ಲಿ ಫೈಯರ್ ಚೈತ್ರಾ ಠುಸ್.. ಮನೆಮಂದಿ ಸುಸ್ತು
BBK11: ಮತ್ತೆ ಬಿಗ್ ಬಾಸ್ ಮನೆಗೆ ಗೋಲ್ಡ್ ಸುರೇಶ್..? ವಿಡಿಯೋದಲ್ಲಿ ಸುಳಿವು
Sandalwood: ಕಣ್ಣಾ ಮುಚ್ಚೆ ಕಾಡೇ ಗೂಡೇ ತೆರೆಗೆ ಸಿದ್ಧ
Adhipatra Movie: ರೂಪೇಶ್ ಅಧಿಪತ್ರ ಫೆ.7ಕ್ಕೆ ಬಿಡುಗಡೆ
ShivaRajkumar: ಅಮೆರಿಕಾಕ್ಕೆ ತೆರಳುವ ಮುನ್ನ ಶಿವಣ್ಣನ ಮನೆಯಲ್ಲಿ ವಿಶೇಷ ಪೂಜೆ; ಕಿಚ್ಚ ಭಾಗಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.