ಶರಣಾಗತಿ ಸರದಿ ದಾವೂದ್ ಇಬ್ರಾಹಿಂನದ್ದೇ?
Team Udayavani, Sep 25, 2017, 10:02 AM IST
ತಾಜಾ ಮಾಹಿತಿ ಏನೆಂದರೆ ಭೂಗತ ಪಾತಕಿಗೆ ಈ ಹಿಂದೆ ವರದಿಯಾಗಿದ್ದಂತೆ ಹಲವು ಕಾಯಿಲೆಗಳಿವೆ, ಇನ್ನೇನು ದಿನಗಳ ಎಣಿಕೆ ಎಂಬಿತ್ಯಾದಿ ವದಂತಿಗಳಿಗೆ ಪೊಲೀಸ್ ಕಸ್ಟಡಿಯಲ್ಲಿರುವ ಇಬ್ರಾಹಿಂ ಕಸ್ಕರ್ ತೆರೆ ಎಳೆದಿದ್ದಾನೆ. ಆತ ಫಿಟ್ ಆ್ಯಂಡ್ ಫೈನ್. ಕೆಲವೊಂದು ವಹಿವಾಟುಗಳನ್ನು ದಾವೂದ್‌ನೇ ನೋಡಿಕೊಳ್ಳುತ್ತಿದ್ದಾನೆಂದು ಆತ ಹೇಳಿದ್ದಾನೆ. ಕಸ್ಕರ್‌ನಿಂದ ಬಂದ ಮತ್ತೂಂದು ಮಾಹಿತಿ ಏನೆಂದರೆ ಪ್ರಮುಖ ರಾಜಕೀಯ ಪಕ್ಷಗಳ ನಾಯಕರು ದಾವೂದ್ ಜತೆ ನಿಕಟ ಸಂಪರ್ಕ ಇರಿಸಿಕೊಂಡಿದ್ದರು.
ಸಾಹಸ ಸಿಂಹ ವಿಷ್ಣುವರ್ಧನ್ ಅಭಿನಯಿಸಿದ ಜನಪ್ರಿಯ ಸಿನೆಮಾಗಳಲ್ಲೊಂದು “ವೀರಪ್ಪ ನಾಯ್ಕ’. ಅದರ ಕೊನೆಯ ಸನ್ನಿವೇಶದಲ್ಲಿ ದೇಶದ ವಿರುದ್ಧ ಸಮರ ಸಾರಿರುವ ಪುತ್ರನ ಕೈಯ್ಯನ್ನೇ ಕಡಿಯಲಾಗುತ್ತದೆ. ಆಗ ಪುತ್ರ ನೋವಿನಿಂದ ಅಮ್ಮಾ ಎಂದು ಕಿರುಚಿಕೊಳ್ಳುವಾಗ “ಈಗ ನಿನಗೆ ಅಮ್ಮನ ನೆನಪಾಯಿತಾ’ ಎಂದು ವೀರಪ್ಪ ನಾಯ್ಕ ಪಾತ್ರಧಾರಿಯಾಗಿರುವ ವಿಷ್ಣುವರ್ಧನ್ ಕೇಳುತ್ತಾರೆ. ಈ ಸಂದರ್ಭ ವಿವರಿಸುವ ಅಗತ್ಯವೇನೆಂದರೆ, ಭಾರತದ ದೇಶದ ಪಾತಕ ಲೋಕ ವಿಶೇಷವಾಗಿ ಮುಂಬಯಿಯ ಭೂಗತ ಜಗತ್ತನ್ನು ಆಳಿ ಬೊಬ್ಬಿರಿದವರೆಲ್ಲ ಸಮಯದ ಪ್ರಭಾವ, ತನಿಖೆಯ ಹೊಡೆತಕ್ಕೆ ಸಿಕ್ಕಿಯೋ ಕೊನೆಗಾಲದಲ್ಲಿ “ಅಮ್ಮಾ’ ಎನ್ನುವಂತೆ ಭಾಸವಾಗುತ್ತಿದೆ. ಅದಕ್ಕೆ ಮೂರು ಪ್ರತ್ಯೇಕ ಉದಾಹರಣೆಗಳನ್ನು ನೀಡಬಹುದು. ಆರಂಭದಲ್ಲಿ ದಾವೂದ್ ಇಬ್ರಾಹಿಂ ಜತೆಗೆ ಚುಂಗು ಹಿಡಿದುಕೊಂಡು ಬೆಳವಣಿಗೆ ಕಂಡುಕೊಂಡ ಅಬು ಸಲೇಂ ಮೋನಿಕಾ ಬೇಡಿ ಜತೆಗೆ ಭಾರತಕ್ಕೆ ಬಂದ. 2005ರಲ್ಲಿ ಅದೇ ಗ್ಯಾಂಗ್‌ನಲ್ಲಿದ್ದು ನಂತರ ಪ್ರತ್ಯೇಕಗೊಂಡಿದ್ದ ಛೋಟಾ ರಾಜನ್‌ನನ್ನು ಬಂಧಿಸಿ (?) ಸ್ವದೇಶಕ್ಕೆ ಕರೆ ತರಲಾಗುತ್ತದೆ. ಇದೀಗ ಮುಂಬೈ ಅಂಡರ್ ವರ್ಲ್ಡ್ ಅನ್ನು ಆಳಿದ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಶರಣಾಗುತ್ತಾನಾ ಎಂಬ ಪ್ರಶ್ನೆಯೂ ಉದ್ಭವಿಸಿದೆ. ಈ ಚರ್ಚೆಗೆ ನಾಂದಿ ಹಾಡಿದ್ದು ಮಹಾರಾಷ್ಟ್ರ ನವ ನಿರ್ಮಾಣ ಸೇನೆಯ ಸಂಸ್ಥಾಪಕ ರಾಜ್ ಠಾಕ್ರೆ. ಅವರ ಪ್ರಕಾರ ಬಿಜೆಪಿ ಜತೆ ಆತ ನಿಕಟ ಸಂಪರ್ಕ ಇರಿಸಿಕೊಂಡಿದ್ದಾನೆ. ಶರಣಾಗತನಾಗುವ ಬಗ್ಗೆ ಮಾತುಕತೆಯಲ್ಲಿ ನಿರತನಾಗಿದ್ದಾನೆ ಎನ್ನುವುದು ಅವರ ಪ್ರಧಾನ ಆರೋಪ.
ಅದೇನೇ ಇರಲಿ ದಾವೂದ್ ನೆರಳಿನಲ್ಲಿ ಬೆಳೆದವರು ಘಾತಕ ಕೃತ್ಯಗಳನ್ನು ಮಾಡಿಕೊಂಡರೂ, ಗುರುವಿನಷ್ಟು ರಸವತ್ತಾದ ಕತೆಗಳನ್ನು ಖಂಡಿತವಾಗಿಯೂ ಹೊಂದಿದವರಲ್ಲ. ಏನೇನೋ ಕತೆಗಳು ಆತನ ಬಗ್ಗೆ ಹೊರ ಬರುತ್ತಲೇ ಇದೆ. ಬಾಲಿವುಡ್ಡಿಗರಂತೂ ಆತನ ಕತೆಯನ್ನು ಬೆಳ್ಳಿ ತೆರೆಯ ಮೇಲೆ ಪ್ರದರ್ಶಿಸಿ ಗಲ್ಲಾ ಪೆಟ್ಟಿಗೆಯಲ್ಲಿ ಕೋಟಿ ಕೋಟಿ ರೂ. ಬಾಚಿದ್ದಾರೆ. ಆತನ ಹೆಸರಿನಲ್ಲಿ ರಾಜಕೀಯ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಪ್ರಧಾನವಾಗಿ ಗುರುತರ ಕೇಸುಗಳು ಬಹಿರಂಗವಾದಾಗ ವಾಗ್ವಾದ ನಡೆಯುತ್ತಲೇ ಇರುತ್ತದೆ. ತಾಜಾ ನಿದರ್ಶನವೆಂದರೆ ಭೂಗತ ಪಾತಕಿಯ ಸಹೋದರ ಇಬ್ರಾಹಿಂ ಕಸ್ಕರ್‌ನನ್ನು ಬಂಧಿಸಿದ ಸಂದರ್ಭದಲ್ಲಿ ಹಲವು ವಿಚಾರಗಳು ಪ್ರಸ್ತಾಪವಾದದ್ದು. ವಿಚಾರಣೆಯ ಒಂದು ಹಂತದಲ್ಲಿ ಇಬ್ರಾಹಿಂನ ಪತ್ನಿ ಮೆಹಜಾಬಿನ್ ಶೇಕ್ 2016ರಲ್ಲಿ ಭಾರತಕ್ಕೆ ಆಗಮಿಸಿದ್ದಳು ಎಂದು ಪೊಲೀಸರಿಗೆ ತಿಳಿಸಿದ್ದ. ಅದಕ್ಕೆ ಕಾಂಗ್ರೆಸ್ ನಾಯಕ ರಣದೀಪ್ ಸುಜೇìವಾಲಾ ಪ್ರತಿಕ್ರಿಯೆ ನೀಡಿ “ನರೇಂದ್ರ ಮೋದಿ ಸರ್ಕಾರ ನಿದ್ರೆ ಮಾಡುತ್ತಿತ್ತೇ?’ ಎಂದು ಪ್ರಶ್ನೆ ಮಾಡಿದ್ದಾರೆ. ಅವರದ್ದೇ ಸರ್ಕಾರ ಇರುವಾಗ ಪಾಕಿಸ್ತಾನದಲ್ಲಿ ದಾವೂದ್ ಇರವಿನ ಬಗ್ಗೆ ಖಚಿತ ಮಾಹಿತಿ ದೊರೆತು ಅತನನ್ನು ಸೆರೆ ಹಿಡಿಯಲು ವಿಶೇಷ ತಂಡ ರಚನೆಯಾಗಿತ್ತು. ಇನ್ನೇನು ಅಲ್ಲಿಗೆ ತೆರಳಬೇಕು ಎಂದು ನಿರ್ಧರಿಸುವಷ್ಟರಲ್ಲಿಯೇ ಪ್ರಬಲ ನಾಯಕರೊಬ್ಬರು ಫೋನ್ ಮಾಡಿದ್ದರಿಂದ ಒಟ್ಟಾರೆ ಯೋಜನೆಗೇ ಎಳ್ಳುನೀರು ಬಿಡಬೇಕಾಗಿತ್ತು. ಬಹುಷಃ ಸುಜೇìವಾಲಾ ಅದನ್ನು ಮರೆತಿದ್ದರೆಂದು ಕಾಣಿಸುತ್ತದೆ.
ಕಸ್ಕರ್‌ನಿಂದ ಬಂದ ಮತ್ತೂಂದು ಮಾಹಿತಿ ಏನೆಂದರೆ ಪ್ರಮುಖ ರಾಜಕೀಯ ಪಕ್ಷಗಳ ನಾಯಕರು ಆತನ ಜತೆ ನಿಕಟ ಸಂಪರ್ಕ ಇರಿಸಿಕೊಂಡಿದ್ದರು. ಉದ್ಯಮಿಯೊಬ್ಬರಿಗೆ ಬೆದರಿಕೆ ಹಾಕಿದ ಆರೋಪ ಪ್ರಕರಣದಲ್ಲಿ ಥಾಣೆಯ ಮಹಾನಗರ ಪಾಲಿಕೆಯ ಎನ್‌ಸಿಪಿ ಸದಸ್ಯರೊಬ್ಬರು ಇದ್ದಾರೆನ್ನುವುದು ಪೊಲೀಸರು ಕಂಡುಕೊಂಡಿದ್ದಾರೆ. ಅದು ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿದ್ದಂತೆಯೇ ರಾಜಕೀಯ ಪಕ್ಷಗಳ ನಾಯಕರಿಗೂ ದಾವೂದ್ ಇಬ್ರಾಹಿಂನ ಗ್ಯಾಂಗ್‌ಗೂ ನಿಕಟ ಸಂಪರ್ಕ ಇದೆಯೆಂದು ಸಾಬೀತು ಮಾಡಲು ಸೂಕ್ತ ಸಮಯ ಬಂದಿಲ್ಲವೆನ್ನುವುದು ಎನ್‌ಸಿಪಿ ನಾಯಕ ಮಜಿದ್ ಮೆಮೊನ್ ವಾದ. ಇದು ನಿಜಕ್ಕೂ ಹಾಸ್ಯಾಸ್ಪದವೇ. ಅಂಡರ್‌ವರ್ಲ್ಡ್- ಪಾಲಿಟಿಕ್ಸ್- ಬಾಲಿವುಡ್ ಥಳಕು ಹಾಕಿಕೊಂಡಿರುವುದು ಇತ್ತೀಚಿನ ವರ್ಷ ಗಳಲ್ಲಲ್ಲ. ಅವುಗಳ ನಡುವಿನ ನಿಕಟ ಸಂಪರ್ಕದ ಕುರಿತಾಗಿನ ರೋಚಕ ಮಾಹಿತಿಗಳು ಮುಂಬೈ ಪೊಲೀಸರು ಮತ್ತು ಇತರ ಪಡಸಾಲೆಗಳಲ್ಲಿ ಆಗಾಗ ಚರ್ಚೆಯಾಗುತ್ತಲೇ ಇರುತ್ತದೆ.
ಮುಂಬೈ ಪಾತಕ ಲೋಕದಲ್ಲಿ ಇತರ ಗ್ಯಾಂಗ್‌ಗಳು ಕಾರ್ಯಾ ಚರಣೆ ನಡೆಸುತ್ತಿದ್ದರೂ ಎಲ್ಲರಿಗೂ ತಿಳಿದಿರುವಂತೆ ಪ್ರಬಲ ವಾಗಿರುವುದು ಡಿ ಕಂಪನಿಯೇ. 2015ರ ಜು.26ರಂದು “ಡಿಎನ್‌ಎ’ ಪತ್ರಿಕೆ ವರದಿ ಮಾಡಿರುವ ಪ್ರಕಾರ 26/11 ದಾಳಿಯ ನಂತರ ದಾವೂದ್ ಇಬ್ರಾಹಿಂ ಮತ್ತು ಪ್ರಮುಖ ರಾಜಕೀಯ ನಾಯಕರೊಬ್ಬರು ಪಕ್ಕದಲ್ಲಿಯೇ ಕುಳಿತು ವಿಶೇಷ ವಿಮಾನದಲ್ಲಿ ಯುಎಇ, ದಕ್ಷಿಣ ಆಫ್ರಿಕಾಕ್ಕೆ ಪ್ರಯಾಣಿಸಿದ್ದರು. 2003ರಲ್ಲಿ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಸರ್ಕಾರ ಪದೇ ಪದೆ ಮನವಿ ಮಾಡಿಕೊಂಡಿದ್ದರಿಂದ ಅಮೆರಿಕ ಸರ್ಕಾರ ಆತನನ್ನು “ಜಾಗತಿಕ ಭಯೋತ್ಪಾದಕ’ ಎಂದು ಘೋಷಣೆ ಮಾಡಿತು. ಕೆಲ ದಿನಗಳ ಹಿಂದಷ್ಟೇ ಯುನೈಟೆಡ್ ಕಿಂಗ್‌ಡಮ್ ಸರ್ಕಾರ ದಾವೂದ್‌ನ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿದೆ. ಅದಕ್ಕೆ ಕಾರಣವಾದ ಅಂಶವೇನೆಂದರೆ 2015ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅಲ್ಲಿಗೆ ಭೇಟಿ ನೀಡಿದ್ದ ವೇಳೆ ನೀಡಿದ್ದ ಪ್ರಬಲ ಸಾಕ್ಷ್ಯಾಧಾರವುಳ್ಳ ಮಾಹಿತಿ.
ಹಲವು ತನಿಖಾ ವರದಿಗಳ ಪ್ರಕಾರ ದಾವೂದ್‌ಗೆ ಐದು ಖಂಡಗಳ 12 ರಾಷ್ಟ್ರಗಳಲ್ಲಿ ಬಹುಕೋಟಿ ಮೌಲ್ಯದ ಆಸ್ತಿ ಇದೆ. 2006-2011ರ ಅವಧಿಯಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿರುವ ಆಸ್ತಿ, ವ್ಯಾಪಾರೋದ್ದಿಮೆಗಳನ್ನು ಮಾರಾಟ ಮಾಡಿದ್ದಾನೆಂದು ಅದರಲ್ಲಿ ಉಲ್ಲೇಖೀಸಲಾಗಿದೆ. ಈ ವರ್ಷದ ಜುಲೈ 17ರಂದು “ದ ವೈರ್’ ಎಂಬ ಆನ್‌ಲೈನ್ ಪತ್ರಿಕೆಯಲ್ಲಿ ಪ್ರಕಟವಾಗಿರುವ ವರದಿ ಪ್ರಕಾರ ದಾವೂದ್ ಗ್ಯಾಂಗ್ ಮತ್ತು ಮುಂಬೈ ಪೊಲೀಸ್‌ನ ಕೆಲ ಅಧಿಕಾರಿ ವರ್ಗದವರು ನಿಕಟ ಸಂಪರ್ಕ ಇರಿಸಿಕೊಂಡಿದ್ದಾರೆ ಎಂಬ ವಿಚಾರವೂ ಬಹಿರಂಗವಾಗಿದೆ.
ಇನ್ನು ಮಹಾರಾಷ್ಟ್ರ ನವ ನಿರ್ಮಾಣ ಸೇನೆಯ ಮುಖ್ಯಸ್ಥ ರಾಜ್ ಠಾಕ್ರೆ ಸಿಡಿಸಿರುವ ಹೊಸ ಮಾಹಿತಿಯ ವಿಷಯಕ್ಕೆ ಬರುವುದಾದರೆ ಭೂಗತ ಪಾತಕಿ ಶರಣಾಗತನಾಗುವ ವಿಚಾರ ಹೊಸತೇನೂ ಇಲ್ಲ. ಶರದ್ ಪವಾರ್ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿದ್ದಾಗ ಪಾತಕಿ ಈ ಬಗ್ಗೆ ಪ್ರಸ್ತಾಪವನ್ನಿಟ್ಟಿದ್ದ ಎಂದು ಅವರು ಹೇಳಿಕೊಂಡಿದ್ದರು. ಇನ್ನು ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಅಧಿಕಾರದಲ್ಲಿದ್ದಾಗ ಗ್ಯಾಂಗ್‌ನ ಕೇಸುಗಳನ್ನು ನಿಭಾಯಿಸುತ್ತಿದ್ದ ಖ್ಯಾತ ವಕೀಲ ರಾಮ್ ಜೇಠ್ಮಲಾನಿ ಆತ ಭಾರತಕ್ಕೆ ಬಂದು ಶರಣಾಗಲು ಸಿದ್ಧನಿದ್ದಾನೆ ಎಂದು ಹೇಳಿದ್ದರು. ಅದಕ್ಕೆ ಕಾಂಗ್ರೆಸ್ ನಾಯಕರೊಬ್ಬರು ಕೂಡ ನೇತೃತ್ವದ ವಹಿಸಿದ್ದರು. ಈ ವಿಚಾರ ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿದ್ದ ಶಿವಶಂಕರ ಮೆನನ್ ಮತ್ತು ಪ್ರಧಾನಿ ಮನಮೋಹನ್ ಸಿಂಗ್ ನಡುವೆ ಹಲವು ಹಂತಗಳಲ್ಲಿ ಚರ್ಚೆಯಾಯಿತು. ಆದರೆ ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಈ ಅಂಶ ನಿರಾಕರಿಸಿದ್ದರು. ಆದರೆ ಅಂತಿಮವಾಗಿ ಫಲಿತಾಂಶವೇನೂ ಕಂಡು ಬರಲಿಲ್ಲ.
ಹೀಗಾಗಿ, ರಾಜ್ ಠಾಕ್ರೆ ಹೇಳಿದ್ದು ಸರಿಯೋ ತಪ್ಪೋ ಎಂಬ ವಿಚಾರ ಚರ್ಚೆಗೆ ಆಸ್ಪದವಾದರೂ, ದಾವೂದ್ ಗ್ಯಾಂಗ್‌ನಿಂದ ಸಿಡಿದು ಪ್ರತ್ಯೇಕ ಅಸ್ತಿತ್ವ ಕಂಡ ಛೋಟಾ ರಾಜನ್ ಮತ್ತು ಅಬು ಸಲೇಂ ಶರಣಾಗತಿಯನ್ನು ಷರತ್ತಿನ ಮೇರೆಗೆ ಪ್ರಕಟಿಸಲಾಗಿದೆ. ಅದು ಹೇಗೆಂದರೆ ನಕಲಿ ದಾಖಲೆಗಳ ಮೂಲಕ ಪೋರ್ಚುಗಲ್‌ಗೆ ತೆರಳಿ ಲಿಸºನ್‌ನಲ್ಲಿ ಸಿಕ್ಕಿಬಿದ್ದಿದ್ದ ಆತನನ್ನು ಭಾರತಕ್ಕೆ ಕರೆ ತರುವಲ್ಲಿ ಎರಡು ವರ್ಷಗಳ ಪ್ರಕ್ರಿಯೆ ನಡೆದಿತ್ತು. ಕೊನೆಗೆ ಅಮೆರಿಕ ಸರ್ಕಾರ ಮಧ್ಯ ಪ್ರವೇಶ ಮಾಡಿ ಅಲ್ಲಿನ ಆಡಳಿತದ ಮೇಲೆ ಪ್ರಭಾವ ಬೀರಿ ಅಬು ಸಲೇಂ ಮತ್ತು ಮೋನಿಕಾ ಬೇಡಿಯನ್ನು ಕಷ್ಟಪಟ್ಟು ಭಾರತಕ್ಕೆ ಗಡೀಪಾರು ಮಾಡಲಾಯಿತು. ಪೋರ್ಚುಗಲ್ ಕಾನೂನಿನಲ್ಲಿ ಗಲ್ಲು ಶಿಕ್ಷೆ ಇಲ್ಲ.
ಹೀಗಾಗಿ, ಸಲೇಂಗೆ ಗರಿಷ್ಠ ಶಿಕ್ಷೆಯೆಂದರೆ ಜೀವ ಇರುವ ವರೆಗೆ ಜೈಲಿಲ್ಲಿಯೇ ಇರಬೇಕು. ಮರಣ ದಂಡನೆ ವಿಧಿಸುವಂತಿಲ್ಲ. ಆದರೆ ಮುಂಬೈ ದಾಳಿಯಂಥ ಗುರುತರ ಆರೋಪ ಆತನ ಮೇಲೆ ಇದ್ದುದರಿಂದ 1962ರ ಭಾರತೀಯ ಗಡೀಪಾರು ಕಾಯ್ದೆಗೆ ತಿದ್ದುಪಡಿ ತರಲಾಗಿತ್ತು.
2015ರ ನ.7ರಂದು ಛೋಟಾ ರಾಜನ್ ಭಾರತಕ್ಕೆ ಬರಲಿದ್ದಾನೆ ಎಂಬ ವಿಚಾರ ಸಂಚಲನ ಸೃಷ್ಟಿಸಿತ್ತು. ಈ ಬಗ್ಗೆ ನವದೆಹಲಿಯಲ್ಲಿ ಸಿಬಿಐ ವಕ್ತಾರರು ಸುದ್ದಿಗೋಷ್ಠಿಯಲ್ಲಿ ಆತ ಶರಣಾಗಿಧ್ದೋ ಅಥವಾ ಬಂಧನ ಮಾಡಿಧ್ದೋ ಎಂಬ ಪ್ರಶ್ನೆಗೆ ಹೇಳಿದ್ದೇನೆಂದರೆ ಇಂಡೋನೇಷ್ಯಾದ ಬಾಲಿ ವಿಮಾನ ನಿಲ್ದಾಣದಲ್ಲಿ ವಲಸೆ ಪ್ರಕ್ರಿಯೆ ಪೂರೈಸಲು ಸಾಲಿನಲ್ಲಿ ನಿಂತಿದ್ದ. ಆತನ ಚಲನವಲನಗಳ ಮೇಲೆ ನಿಗಾ ಇರಿಸಿದ್ದ ತನಿಖಾ ಸಂಸ್ಥೆ ಆತನನ್ನು ಸೆರೆ ಹಿಡಿಯಿತು ಎಂದರು. ಭದ್ರತಾ ಸಂಸ್ಥೆಗಳ ಅಧಿಕಾರಿಗಳು ಹೆಸರೇನೆಂದು ಕೇಳಿದಾಗ ರಾಜೇಂದ್ರ ಸದಾಶಿವ ನಿಕಾಲೆj ಎಂದು ಹೇಳಿದ. ಕೂಡಲೇ ಆತನ್ನು ವಶಕ್ಕೆ ಪಡೆದಾಗ ಕರ್ನಾಟಕದ ಮಂಡ್ಯದ ವಿಳಾಸ ಇರುವ ಪಾಸ್‌ಪೋರ್ಟ್ ಅನ್ನು ಬೆಂಗಳೂರಿನಲ್ಲಿ ಪಡೆದದ್ದೂ ಗಮನಕ್ಕೆ ಬಂದಿದೆ ಎಂದಿದ್ದರು. 55 ವರ್ಷದ ಡಾನ್‌ಗೆ ಇತ್ತೀಚಿನ ವರ್ಷಗಳಲ್ಲಿ ಆರೋಗ್ಯ ಸ್ಥಿತಿ ಹದಗೆಡುತ್ತಿತ್ತು. ಹೀಗಾಗಿ ಕೊನೆಯ ದಿನಗಳಲ್ಲಿ “ಪರದೇಶಿ’ಯಾಗಿ ಸಾಯುವುದಕ್ಕಿಂತ “ದೇಶವಾಸಿ’ಯಾಗಿ ಕೊನೆಯುಸಿರುಬಿಡುವುದು ಉತ್ತಮವೆಂದು ಆತ ಕಂಡುಕೊಂಡಿರುವ ಸಾಧ್ಯತೆಯೇ ಹೆಚ್ಚು. ಹೀಗಾಗಿಯೇ ಯಾವುದೋ ಒಂದು ಹಂತದಲ್ಲಿ ಒಪ್ಪಂದ ನಡೆದಿರುವ ಸಾಧ್ಯತೆಯೇ ಹೆಚ್ಚು.
ಅದೇ ವಿಚಾರ ದಾವೂದ್ ಇಬ್ರಾಹಿಂನ ವಿಚಾರದಲ್ಲೂ ನಡೆದೀತೇ? ಆದರೆ ತಾಜಾ ಮಾಹಿತಿ ಏನೆಂದರೆ ಭೂಗತ ಪಾತಕಿಗೆ ಈ ಹಿಂದೆ ವರದಿಯಾಗಿದ್ದಂತೆ ಹಲವು ಕಾಯಿಲೆಗಳಿವೆ, ಇನ್ನೇನು ದಿನಗಳ ಎಣಿಕೆ ಎಂಬಿತ್ಯಾದಿ ವದಂತಿಗಳಿಗೆ ಪೊಲೀಸ್ ಕಸ್ಟಡಿಯಲ್ಲಿರುವ ಇಬ್ರಾಹಿಂ ಕಸ್ಕರ್ ತೆರೆ ಎಳೆದಿದ್ದಾನೆ. ಆತ ಫಿಟ್ ಆ್ಯಂಡ್ ಫೈನ್. ಕೆಲವೊಂದು ವಹಿವಾಟುಗಳನ್ನು ತಾನೇ ನೋಡಿಕೊಳ್ಳುತ್ತಿದ್ದಾನೆಂದು ಆತ ಹೇಳಿಕೊಂಡಿದ್ದಾನೆ. ಹೀಗಾಗಿ, ಭೂಗತ ಪಾತಕಿಯ ಶರಣಾಗತಿ ಎಂಬ ವಿಚಾರ ಈಗಷ್ಟೇ ತೇಲಿಬಂದಿದೆ. ಅದು ಕಾರ್ಯಸಾಧ್ಯವಾಗುತ್ತದೋ ಇಲ್ಲವೋ ಎನ್ನುವುದನ್ನು ಸಮಯವೇ ನಿರ್ಧಾರ ಮಾಡಬೇಕಷ್ಟೇ.
ಸದಾಶಿವ ಖಂಡಿಗೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Shimoga; ತೇಜೋವಧೆ ಮಾಡಲು ನನ್ನ ಹೆಸರಲ್ಲಿ ಕಳಪೆ ಸ್ವೀಟ್ ಹಂಚಿಕೆ; ಡಾ.ಸರ್ಜಿ
Father of the Nation: ಬಾಂಗ್ಲಾ ರಾಷ್ಟ್ರಪಿತನಿಗೆ ಪಠ್ಯದಿಂದಲೇ ಕೊಕ್!
Shocking: ಹೆರಿಗೆ ವೇಳೆ ಹೃದಯಾಘಾತ: ಮಹಿಳೆ ಮೃತ್ಯು, ಮಗುವನ್ನು ಉಳಿಸುವ ಯತ್ನವೂ ವಿಫಲವಾಯಿತು
Rohit Sharma; ಮುಗಿಯಿತಾ ರೋಹಿತ್ ಕ್ರಿಕೆಟ್ ವೃತ್ತಿಜೀವನ? ಗಂಭೀರ ಕೋಪಕ್ಕೆ ಕಾರಣವೇನು?
Channapatna; ನ್ಯೂಇಯರ್ ಪಾರ್ಟಿ ಮಾಡಲು ಹೋದವನ ಕೊಲೆ ಮಾಡಿದ ಬಾವಿಗೆ ಎಸೆದರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.