ಭ್ರಷ್ಟರನ್ನು ಸುಮ್ಮನೆ ಬಿಡಲ್ಲ ನನಗಾರೂ ಸಂಬಂಧಿ ಇಲ್ಲ
Team Udayavani, Sep 26, 2017, 6:30 AM IST
ಹೊಸದಿಲ್ಲಿ: “ಪ್ರತಿಪಕ್ಷಗಳಿಗೆ ಅಧಿಕಾರ ಎಂದರೆ ಮೋಜು. ಆದರೆ, ನಮಗೆ ಹಾಗಲ್ಲ. ಭ್ರಷ್ಟಾಚಾರದ ವಿರುದ್ಧದ ನಮ್ಮ ಹೋರಾಟದಲ್ಲಿ ಯಾವುದೇ ರಾಜಿಯಿಲ್ಲ. ಭ್ರಷ್ಟರನ್ನು ನಾವು ಸುಮ್ಮನೆ ಬಿಡುವುದೂ ಇಲ್ಲ. ಏಕೆಂದರೆ, ನನಗ್ಯಾರೂ ಸಂಬಂಧಿಕರಿಲ್ಲ.’
ಇದು ಸೋಮವಾರ ಅಂತ್ಯಗೊಂಡ ಬಿಜೆಪಿಯ ಎರಡು ದಿನಗಳ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಪ್ರಧಾನಿ ಮೋದಿ ಅವರು ಪ್ರತಿಪಕ್ಷಗಳ ವಿರುದ್ಧ ಗುಡುಗಿದ ಪರಿ. ಬಿಜೆಪಿ ಆಡಳಿತದಲ್ಲಿರುವ ರಾಜ್ಯಗಳ 13 ಮಂದಿ ಸಿಎಂಗಳು, 6 ಉಪ ಮುಖ್ಯಮಂತ್ರಿಗಳು, ಸುಮಾರು 60 ಕೇಂದ್ರ ಸಚಿವರು, ಪಕ್ಷದ ಸಂಸದರು, ಶಾಸಕರು ಸೇರಿದ್ದ ಸಭೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ ಅವರು, “ಎಲ್ಲರೂ ಪಕ್ಷವನ್ನು ಚುನಾವಣೆ ಯಾಚೆಗೂ ಕೊಂಡೊಯ್ಯಬೇಕು ಹಾಗೂ ಜನರ ಜೀವನಮಟ್ಟ ಸುಧಾರಣೆ ಕ್ರಮದಲ್ಲಿ ಸಾಮೂಹಿಕವಾಗಿ ಪಾಲ್ಗೊಳ್ಳಬೇಕು’ ಎಂದು ಕರೆ ನೀಡಿದರು.
ರಾಹುಲ್ ವಿರುದ್ಧ ಶಾ ಕಿಡಿ: ಇದಕ್ಕೂ ಮುನ್ನ ಭಾಷಣ ಮಾಡಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರ ವಿರುದ್ಧ ಕಿಡಿಕಾರಿದ್ದು ಕಂಡುಬಂತು. “ಕಾಂಗ್ರೆಸ್ ವಂಶಾಡಳಿತ, ಓಲೈಕೆಯ ರಾಜಕಾರಣ ಮಾಡಿದರೆ, ನಾವು ಸಾಧನೆಯ ರಾಜಕಾರಣ ಮಾಡುತ್ತಿದ್ದೇವೆ. ಪ್ರಧಾನಿ ಮೋದಿ, ರಾಷ್ಟ್ರಪತಿ ಕೋವಿಂದ್, ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಕೆಲಸ ಮಾಡಿ ಸ್ವಂತ ಬಲದಿಂದ ಉನ್ನತ ಹುದ್ದೆಗೆ ಏರಿದರೇ ಹೊರತು, ಕುಟುಂಬದ ಮೂಲದಿಂ ದಾಗಿ ಅಲ್ಲ,’ ಎನ್ನುವ ಮೂಲಕ ರಾಹುಲ್‌ಗೆ ಟಾಂಗ್ ನೀಡಿದರು. ಇದೇ ವೇಳೆ, ಕೇರಳದಲ್ಲಿ ನಡೆಯುತ್ತಿರುವ ರಾಜಕೀಯ ಹತ್ಯೆ ಖಂಡಿಸಿ ಅ.3ರಿಂದ 15 ದಿನ ಅಲ್ಲಿ ಪಾದಯಾತ್ರೆ ನಡೆಸುವುದಾಗಿಯೂ ಘೋಷಿಸಿದರು.
ನವಭಾರತದ ಕನಸು ನನಸಾಗಿಸುವ ನಿರ್ಣಯ
ಕಾರ್ಯಕಾರಿಣಿಯಲ್ಲಿ ಬಿಜೆಪಿ 6 ಅಂಶಗಳ ನಿರ್ಣಯವನ್ನು ಕೈಗೊಂಡಿದೆ. ಅವೆಂದರೆ, ದೇಶವನ್ನು ಬಡತನ, ಭಯೋತ್ಪಾದನೆ, ಜಾತಿವಾದ, ಕೋಮುವಾದ ಮತ್ತು ಭ್ರಷ್ಟಾಚಾರದಿಂದ ಮುಕ್ತಗೊಳಿಸುವುದು ಹಾಗೂ ಪ್ರಧಾನಿ ಮೋದಿ ಅವರ 2022ರ ನವಭಾರತದ ಕನಸನ್ನು ನನಸಾಗಿಸುವುದು. ಹೀಗೆಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಮಾಹಿತಿ ನೀಡಿದ್ದಾರೆ. ಇದೇ ವೇಳೆ, ನೋಟು ಅಮಾನ್ಯ ಮತ್ತು ಜಿಎಸ್‌ಟಿಯಂಥ ಸುಧಾರಣಾ ಕ್ರಮಗಳನ್ನು ಕಾರ್ಯಕಾರಿಣಿಯಲ್ಲಿ ಶ್ಲಾ ಸಲಾಯಿತು, ನೋಟು ಅಮಾನ್ಯದಿಂದಾಗಿ ಕಾಳಸಂತೆ ಮತ್ತು ಕಪ್ಪುಕುಳಗಳ ಬೆನ್ನುಮೂಳೆ ಮುರಿಯಲಾಗಿದೆ ಎಂದು ಅಭಿಪ್ರಾಯ ಪಡಲಾಯಿತು, ರೊಹಿಂಗ್ಯಾಗಳನ್ನು ಗಡಿಪಾರು ಮಾಡುವ ನಿರ್ಧಾರವನ್ನು ಬೆಂಬಲಿಸಲಾಯಿತು, ಡೋಕ್ಲಾಂ ವಿವಾದ ಬಗೆಹರಿಸಿದ್ದಕ್ಕೆ ಪ್ರಧಾನಿ ಮೋದಿ ಅವರನ್ನು ಶ್ಲಾ ಸಲಾಯಿತು ಎಂದಿದ್ದಾರೆ.
ಟಿಎಂಸಿಗೆ ಮುಕುಲ್ ರಾಜೀನಾಮೆ; ಬಿಜೆಪಿಯತ್ತ ನಡೆ
ಟಿಎಂಸಿ ರಾಜ್ಯಸಭಾ ಸದಸ್ಯ, ಪಕ್ಷದ ನಂ2 ನಾಯಕ ಮುಕುಲ್ ರಾಯ್ ಪಕ್ಷಕ್ಕೆ ರಾಜೀನಾಮೆ ನೀಡುತ್ತಿರುವುದಾಗಿ ಘೋಷಿಸಿದ್ದಾರೆ. ಪಕ್ಷದ ಕಾರ್ಯಕಾರಿ ಸಮಿತಿಗೆ ರಾಜೀನಾಮೆ ನೀಡಿದ್ದು, ದುರ್ಗಾ ಪೂಜೆಯ ಬಳಿಕ ರಾಜ್ಯಸಭಾ ಸದಸ್ಯ ಸ್ಥಾನಕ್ಕೆ ಮತ್ತು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತೇನೆ ಎಂದಿದ್ದಾರೆ. ಬಿಜೆಪಿ ನಾಯಕ ರನ್ನು ಭೇಟಿಯಾದ ಬೆನ್ನಲ್ಲೇ ರಾಯ್ ಈ ಘೋಷಣೆ ಮಾಡಿದ್ದು, ಅವರು ಬಿಜೆಪಿಗೆ ಸೇರುವ ಇಂಗಿತ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಅವರು ಬಿಜೆಪಿಗೆ ಸೇರ್ಪಡೆಯಾದರೆ ಪಶ್ಚಿಮ ಬಂಗಾಲದಲ್ಲಿ ಪಕ್ಷವನ್ನು ಬಲಪಡಿಸುವ ಬಿಜೆಪಿ ಯತ್ನಕ್ಕೆ ಬಲಬರಲಿದೆ. ರಾಜೀನಾಮೆ ಘೋಷಣೆ ಬೆನ್ನಲ್ಲೇ ಪಕ್ಷ ವಿರೋಧಿ ಚಟುವಟಿಕೆ ಆರೋಪದಲ್ಲಿ ಅವರನ್ನು 6 ವರ್ಷಗಳ ಅಮಾನತು ಮಾಡಿ ಟಿಎಂಸಿ ಆದೇಶ ಹೊರ ಡಿಸಿದೆ. ಇನ್ನೊಂದೆಡೆ, ಕಳೆದ ವಾರ ಕಾಂಗ್ರೆಸ್‌ಗೆ ಗುಡ್‌ಬೈ ಹೇಳಿದ್ದ ಮಹಾರಾಷ್ಟ್ರ ಮಾಜಿ ಸಿಎಂ ನಾರಾಯಣ ರಾಣೆ ಅವರು ಬಿಜೆಪಿ ಅಧ್ಯಕ್ಷ ಅಮಿತ್ ಶಾರನ್ನು ಭೇಟಿಯಾಗಿದ್ದು, ಅವರೂ ಬಿಜೆಪಿ ಸೇರ್ಪಡೆಯಾಗುವ ಸಾಧ್ಯತೆಯಿದೆ.
ಬಿಜೆಪಿ ವಂಶಾಡಳಿತದಲ್ಲಿ ನಂಬಿಕೆ ಇಟ್ಟಿಲ್ಲ ಎಂದಾದರೆ, ಸಿಎಂ ವಸುಂಧರಾ ರಾಜೇ, ರಮಣ್ ಸಿಂಗ್, ಮಾಜಿ ಸಿಎಂ ಪ್ರೇಮ್ ಕುಮಾರ್ ಧುಮಾಲ್ ಅವರ ಮಕ್ಕಳೆಲ್ಲ ಲೋಕಸಭೆಯಲ್ಲಿ ಏನು ಮಾಡುತ್ತಿದ್ದಾರೆ?
– ಮನೀಷ್ ತಿವಾರಿ, ಕಾಂಗ್ರೆಸ್ ವಕ್ತಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Poll code violations ; ಖರ್ಗೆ, ನಡ್ಡಾ ಪ್ರತಿಕ್ರಿಯೆ ಕೇಳಿದ ಚುನಾವಣ ಆಯೋಗ
Rahul Gandhi ಭರವಸೆಗಳನ್ನು ನೀಡುತ್ತಾರೆ ಮತ್ತು ವಿದೇಶಕ್ಕೆ ಹಾರುತ್ತಾರೆ: ಶಾ ವಾಗ್ದಾಳಿ
PM Modi ಅವರು ಜೋ ಬೈಡೆನ್ ಅವರಂತೆ ನೆನಪಿನ ಶಕ್ತಿ ಕಳೆದುಕೊಳ್ಳುತ್ತಿದ್ದಾರೆ: ರಾಹುಲ್ ಗಾಂಧಿ
Resign: ಶಿರೋಮಣಿ ಅಕಾಲಿದಳದ ಅಧ್ಯಕ್ಷ ಸ್ಥಾನಕ್ಕೆ ಸುಖಬೀರ್ ಸಿಂಗ್ ಬಾದಲ್ ರಾಜೀನಾಮೆ
Maharashtra; ನಮ್ಮ ಮೈತ್ರಿ ಕೂಟ ಗೆದ್ದು ಮಹಾರಾಷ್ಟ್ರ ಉಳಿಸಲಿದೆ: ಡಿ.ಕೆ. ಶಿವಕುಮಾರ್
MUST WATCH
ಹೊಸ ಸೇರ್ಪಡೆ
Karkala; ಕಸದಲ್ಲಿದ್ದ 25 ಗ್ರಾಂ ಚಿನ್ನದ ಸರ ಮರಳಿಸಿ ಪ್ರಾಮಾಣಿಕತೆ ಮೆರೆದ SLRM ಸಿಬಂದಿಗಳು
BBK11: ಬಿಗ್ ಬಾಸ್ ಮನೆಯಿಂದ ಹೊರಗಡೆ ಬರಲು ನಿರ್ಧರಿಸಿದ ಚೈತ್ರಾ ಕುಂದಾಪುರ
Keerthy Suresh: ಪೋಷಕರು ನಿಶ್ಚಯಿಸಿದ ಹುಡುಗನ ಜತೆ ನಡೆಯಲಿದೆ ಕೀರ್ತಿ ಸುರೇಶ್ ಮದುವೆ?
ಕಿರುತೆರೆ To ಹಿರಿತೆರೆ.. ಧಾರಾವಾಹಿಯಿಂದ ನೇಮ್ ಪಡೆದು ಸಿನಿಮಾದಲ್ಲಿ ಫೇಮ್ ಆದ ಕಲಾವಿದರು
Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.