ಯು ಮುಂಬಾ ತಂಡದಿಂದ ಫುಟ್‌ಬಾಲ್ ಪ್ರತಿಭಾಶೋಧ
Team Udayavani, Sep 26, 2017, 9:19 AM IST
ನವದೆಹಲಿ: ಪ್ರೊ ಕಬಡ್ಡಿಗಾಗಿ ಹುಟ್ಟಿಕೊಂಡ ತಂಡವೊಂದು ಕಬಡ್ಡಿ ಜತೆಗೆ ಈಗ ದೇಶದ ಫುಟ್‌ಬಾಲ್ ಏಳಿಗೆಗಾಗಿಯೂ ಶ್ರಮಿಸುತ್ತಿದೆ. ದೇಶದ ಪ್ರತಿಭಾನ್ವಿತ ಯುವ ಕ್ರೀಡಾಪಟುಗಳನ್ನು ಒಂದೆಡೆ ಕಲೆ ಹಾಕಿ, ಅವರಲ್ಲಿರುವ ಕಲಿಕಾ ಆಸಕ್ತಿ, ಪ್ರತಿಭೆ ಗುರುತಿಸಿ ಜರ್ಮನಿಯಲ್ಲಿ ಸದ್ದಿಲ್ಲದೆ ಉಚಿತ ತರಬೇತಿಯನ್ನೂ ನೀಡುತ್ತಿದೆ. ಹೌದು, ಕಳೆದ 2 ವರ್ಷದಿಂದ ಇಂತಹದೊಂದು ಮಹತ್ವಾಕಾಂಕ್ಷಿ ಯೋಜನೆಯನ್ನು ಪ್ರೊ ಕಬಡ್ಡಿಯ ಪ್ರಮುಖ ತಂಡವಾಗಿರುವ ಯು ಮುಂಬಾ ತಂಡ ಕಾರ್ಯಗತಗೊಳಿಸಿದೆ. ಫುಟ್‌ಬಾಲ್
ಜೊತೆಗೆ ವಿದೇಶದಲ್ಲಿ ಉಚಿತ ಶಿಕ್ಷಣ ನೀಡುತ್ತಾ, ಜರ್ಮನಿಯ ಬಿಟ್‌ಬರ್ಗ್‌ನಲ್ಲಿ ಮಕ್ಕಳಿಗೆ ಭವಿಷ್ಯ ಕಟ್ಟಿಕೊಳ್ಳುವ ಸುವರ್ಣಾವಕಾಶವನ್ನು ಯು ಮುಂಬಾ ನೀಡಿದೆ. ಇದರೊಂದಿಗೆ ಇತರೆ ಫ್ರಾಂಚೈಸಿಗಳಿಗೆ ಮಾದರಿಯಾಗಿದೆ.
ಕನಸುಗಳ ಸಾಕಾರಕ್ಕಾಗಿ ಯು ಡ್ರೀಮ್: ಯು ಮುಂಬಾ ಫ್ರಾಂಚೈಸಿ ರೋನಿ ಸ್ಕಿವ್‌ವಾಲಾ ಯು ಡ್ರೀಮ್ ಸಂಸ್ಥೆ ಹುಟ್ಟು ಹಾಕಿದ್ದು ವೃತ್ತಿಪರ ಫುಟ್‌ಬಾಲ್ ಆಟಗಾರರನ್ನು ಹೊರ ತರುವ ಭಾರೀ ಸಂಕಲ್ಪ ಮಾಡಿದ್ದಾರೆ, ಇದಕ್ಕೆ ಟಾಟಾ ಟ್ರಸ್ಟ್ ಸಂಸ್ಥೆ ಸಾಥ್ ನೀಡುತ್ತಿದೆ.
ವಿದೇಶಿ ಕ್ಲಬ್‌ಗಳ ಜತೆಗೆ ಕಲಿಕೆಗೆ ಅವಕಾಶ: ಬಿವಿಬಿ
ಡಾರ್ಟ್‌ಮಂಡ್ ಜರ್ಮನಿಯ ಖ್ಯಾತ ಫುಟ್‌ಬಾಲ್ ಕ್ಲಬ್ ತಂಡ. ಇಲ್ಲಿನ ಆಟಗಾರರೊಂದಿಗೆ ಕಲಿಯುವ ಅವಕಾಶ ಎಲ್ಲರಿಗೂ ಸಿಗುವುದಿಲ್ಲ. ಆದರೆ ನಮ್ಮ ದೇಶದ ಪ್ರತಿಭಾನ್ವಿತರಿಗೆ ಇಂತಹದೊಂದು ಅವಕಾಶವನ್ನು ಯು ಡ್ರೀಮ್ಸ್ ಮಾಡಿಕೊಟ್ಟಿದೆ.
2015ರಲ್ಲಿ 45 ನಗರದಲ್ಲಿ ಪ್ರತಿಭಾನ್ವೇಷಣೆ: 15 ವರ್ಷ ವಯೋಮಿತಿಯೊಳಗಿನ ಭಾರತ ಫುಟ್‌ಬಾಲ್ ಪ್ರತಿಭೆಗಳನ್ನು ಯು ಡ್ರೀಮ್ ಮೊದಲ ಬಾರಿಗೆ ಹುಡುಕಲು ಆರಂಭಿಸಿದ್ದು 2015ರಲ್ಲಿ. ಮೊದಲ ಪ್ರಯತ್ನವಾಗಿ ದೇಶದ 46 ನಗರದ ಶಾಲೆಗಳಲ್ಲಿ ಫುಟ್ಬಾಲಿಗರನ್ನು ಅನ್ವೇಷಿಸಲಾಯಿತು. ಜರ್ಮನಿಯ ಖ್ಯಾತ ಕ್ಲಬ್ ತಂಡದ ಕೋಚ್‌ಗಳು ಹುಡುಕಾಟದಲ್ಲಿ ಪಾಲ್ಗೊಂಡರು. ಮೊದಲ ಸಲ 20ಕ್ಕೂ ಹೆಚ್ಚು ಯುವ ಆಟಗಾರರನ್ನು ಆಯ್ಕೆ ಮಾಡಲಾಯಿತು. ಇವರೆಲ್ಲರೂ ದೇಶದ ಸಿಬಿಎಸ್‌ಸಿ ಪಠ್ಯಕ್ರಮದ ವಿದ್ಯಾರ್ಥಿಗಳಾಗಿದ್ದಾರೆ.
ಇತರೆ ವಿದೇಶಿ ತಂಡಗಳ ಜತೆಗೂ ಅಭ್ಯಾಸ:
ಜರ್ಮನಿಯಲ್ಲಿರುವ ಭಾರತೀಯ ಆಟಗಾರರಿಗೆ ಲಕ್ಸೆಂಬರ್ಗ್, ಬೆಲ್ಜಿಯಂ, ಫ್ರಾನ್ಸ್, ಹಾಲೆಂಡ್ ಹಾಗೂ ಯುಕೆ ಕ್ಲಬ್ ತಂಡಗಳ ಜತೆಗೆ ಆಡುವ ಅವಕಾಶ ಸಿಗುತ್ತಿದೆ. ಜತೆಗೆ ಅಲ್ಲಿನ ಒಲಿಂಪಿಕ್ಸ್ ಕೋಚ್‌ಗಳಿಂದಲೂ ಸಲಹೆಗಳು ದೊರೆಯುತ್ತಿವೆ. 2016ರಲ್ಲಿ
40ಕ್ಕೂ ಹೆಚ್ಚಿನ ಮಕ್ಕಳನ್ನು ಯೋಜನೆ ಮೂಲಕ ಯು ಡ್ರೀಮ್ ಜರ್ಮನಿಗೆ ಕಳುಹಿಸಿಕೊಟ್ಟಿದೆ.
ದೇಶದಲ್ಲಿ ಫುಟ್‌ಬಾಲ್ ಕೇಂದ್ರ ಸ್ಥಾಪಿಸುವ ಕನಸು:
ಯು ಡ್ರೀಮ್‌ಗೆ ಸದ್ಯ ದೇಶದಲ್ಲಿ ಮಿಜೋರಾಮ್, ಹರ್ಯಾಣ, ಮಣಿಪುರದಲ್ಲಿ ಯು ಡ್ರೀಮ್ ಫುಟ್‌ಬಾಲ್ ಅಕಾಡೆಮಿ ಸ್ಥಾಪಿಸುವ ಗುರಿಯನ್ನು ಹೊಂದಿದೆ. ಒಟ್ಟಾರೆ 2017-18ರಲ್ಲಿ 7 ಕೇಂದ್ರವನ್ನು ಸ್ಥಾಪಿಸುವ ಗುರಿ ನೀಡಲಾಗಿದೆ. ಇದು 3 ವರ್ಷದ
ಯೋಜನೆಯಾಗಿದೆ. ಒಟ್ಟು 600 ಕ್ರೀಡಾಪಟುಗಳು ಡ್ರೀಮ್ ಸೌಲಭ್ಯ ಪಡೆಯಲಿದ್ದಾರೆ. ಸುಮಾರು 70-100 ಮಂದಿ ಕೋಚ್‌ಗಳು ಇಲ್ಲಿ ತರಬೇತಿ ನೀಡಲಿದ್ದಾರೆ. ಯುವ ಆಟಗಾರರನ್ನು ಒಂದು ಹಂತದಲ್ಲಿ ತಯಾರಿ ಮಾಡಿ ಹೆಚ್ಚಿನ ಕೋಚಿಂಗ್‌ಗಾಗಿ ಇಲ್ಲಿಂದ ಜರ್ಮನಿಗೆ ಕಳುಹಿಸಲಾಗುತ್ತದೆ.
ಕಬಡ್ಡಿ ಮಾತ್ರವಲ್ಲ ಫುಟ್‌ಬಾಲ್‌ನತ್ತಲೂ ಯು ಮುಂಬಾ ಗಮನ ಹರಿಸುತ್ತಿರುವುದು ಕ್ರೀಡೆಯ ಹಿತ ದೃಷ್ಟಿಯಿಂದ ಒಳ್ಳೆಯದು.
ಯು ಮುಂಬಾ ತಂಡದ ಫ್ರಾಂಚೈಸಿ ಇಂತಹದೊಂದು ಕೆಲಸ ಮಾಡುತ್ತಿರುವುದು ಶ್ಲಾಘನೀಯ.
ರವಿ ಶೆಟ್ಟಿ, ಯು ಮುಂಬಾ ಕೋಚ್
ಹೇಮಂತ್ ಸಂಪಾಜೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
R Ashwin: ಅಶ್ವಿನ್‌ಗೆ ಖೇಲ್ ರತ್ನ; ಕ್ರೀಡಾ ಸಚಿವರಿಗೆ ಸಂಸದರಿಂದ ಪತ್ರ
Virat Kohli: ಬಾಕ್ಸಿಂಗ್ ಡೇ ಟೆಸ್ಟ್‌ಗೂ ಮುನ್ನ ವಿರಾಟ್ ನೂತನ ಕೇಶ ವಿನ್ಯಾಸ
Vijay Hazare Trophy;ಕೃಷ್ಣನ್ ಶ್ರೀಜಿತ್ ಅಮೋಘ ಶತಕ:ಬಲಿಷ್ಠ ಮುಂಬೈ ಎದುರು ಕರ್ನಾಟಕ ಜಯಭೇರಿ
Arrest Warrant: ರಾಬಿನ್ ಉತ್ತಪ್ಪ ವಿರುದ್ದ ಬಂಧನ ವಾರೆಂಟ್; ಜೈಲು ಪಾಲಾಗ್ತಾರಾ ಕ್ರಿಕೆಟಿಗ
M. Chinnaswamy ಸ್ಟಾಂಡ್‌ಗೆ ಶಾಂತಾ ರಂಗಸ್ವಾಮಿ ಹೆಸರಿಡಲು ಯಾಕೆ ಹಿಂದೇಟು? ಏನಿದು ವಿವಾದ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kota: ಕೋಟಾದಲ್ಲಿ ಮತ್ತೂಬ್ಬ ವಿದ್ಯಾರ್ಥಿ ಆತ್ಮಹತ್ಯೆ: ವರ್ಷದ 17ನೇ ಪ್ರಕರಣ
Allu Arjun; ತಪ್ಪು ಮಾಹಿತಿ, ಚಾರಿತ್ರ್ಯ ಹರಣಕ್ಕೆ ಯತ್ನ: ರೇವಂತ್ ರೆಡ್ಡಿಗೆ ತಿರುಗೇಟು
R Ashwin: ಅಶ್ವಿನ್‌ಗೆ ಖೇಲ್ ರತ್ನ; ಕ್ರೀಡಾ ಸಚಿವರಿಗೆ ಸಂಸದರಿಂದ ಪತ್ರ
Virat Kohli: ಬಾಕ್ಸಿಂಗ್ ಡೇ ಟೆಸ್ಟ್‌ಗೂ ಮುನ್ನ ವಿರಾಟ್ ನೂತನ ಕೇಶ ವಿನ್ಯಾಸ
Hala Modi; ಮಿನಿ ಹಿಂದೂಸ್ಥಾನಕ್ಕೆ ಸಾಕ್ಷಿಯಾಗುತ್ತಿದ್ದೇನೆ: ಕುವೈಟ್ ನಲ್ಲಿ ಮೋದಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.