ರಾಜಕಾರಣ ವ್ರತವಾಗಬೇಕೆೆಂದ ದೀನ್‌ ದಯಾಳ್‌


Team Udayavani, Sep 26, 2017, 4:03 AM IST

26-STATE-20.jpg

ಏಕಾತ್ಮ ಮಾನವ ದರ್ಶನದ ಮೂಲಕ ಭಾರತಕ್ಕೆ ಹೊಸ ದಿಕ್ಕು ತೋರಿದ ಪಂಡಿತ್‌ ಜೀಯವರ ಜನ್ಮ ದಿನದ ಶತಮಾನೋತ್ಸವ ಆಚರಣೆ ಇದೀಗ ದೇಶಾದ್ಯಂತ ಅಭಿಮಾನದಿಂದ ನಡೆಯುತ್ತಿದೆ. ರಾಜಕಾರಣವೊಂದು ವ್ರತ, ಬದಲಾಗಿ ವೃತ್ತಿಯಲ್ಲ ಎಂಬ ಪಂಡಿತ್‌ ಜೀ ಮಾತು ಭಾರತದಾದ್ಯಂತ ಮಾರ್ದನಿಸಲಿ. 

ರಾಜಕೀಯವನ್ನು ಒಂದು ವೃತ್ತಿಯನ್ನಾಗಿ ಸ್ವೀಕರಿಸದವರು ಭಾರತದೆಲ್ಲೆಡೆ ಸಿಗುತ್ತಾರೆ. ಆದರೆ ರಾಜಕಾರಣವನ್ನು ಒಂದು ವ್ರತವಾಗಿ ಸ್ವೀಕರಿಸಿದವರು ಬೆರಳೆಣಿಕೆಯಷ್ಟು ಮಂದಿ ಈ ದೇಶದಲ್ಲಿದ್ದಾರೆ. ಅವರಲ್ಲಿ ಬಹು ಮುಖ್ಯ ಹೆಸರು ಪಂಡಿತ್‌ ದೀನ್‌ ದಯಾಳ್‌ಜೀ.

ಭಾರತದ ರಾಜಕಾರಣವೆಂಬ ದಿಗಂತದಲ್ಲಿ ದಿವ್ಯ ಪ್ರಕಾಶವನ್ನು ಪ್ರಜ್ವಲಿಸಿ, ಶುದ್ಧ ಚಾರಿತ್ರ್ಯದಿಂದ ರಾಜಕೀಯ ಕ್ಷೇತ್ರವನ್ನು ಪವಿತ್ರಗೊಳಿಸಲು ಸಾಧ್ಯವಿದೆ ಎಂದು ಸಾಧಿಸಿ ತೋರಿಸಿದ ಮಹಾನ್‌ ಹುತಾತ್ಮನೇ ಪಂಡಿತ್‌ ದೀನ್‌ದಯಾಳ್‌ ಉಪಾಧ್ಯಾಯರು.
1916ರ ಸಪ್ಟೆಂಬರ್‌ 25ರಂದು ಸೋಮವಾರ ರಾಜಸ್ಥಾನದ ಧನಕೀಯ ನಗರದಲ್ಲಿ ಪಂಡಿತ್‌ ಜೀ ಜನನವಾಯಿತು. ರೈಲ್ವೇ ಇಲಾಖೆಯಲ್ಲಿ ಸ್ಟೇಷನ್‌ ಮಾಸ್ಟರ್‌ ಆಗಿ ದುಡಿಯುತ್ತಿದ್ದ ತಂದೆ ಭಗವತಿ ಪ್ರಸಾದ್‌, ತಾಯಿ ರಾಮಪ್ಯಾರಿಯಂತೂ ಸಾಮಾನ್ಯ ಗೃಹಿಣಿ. ಬಾಲಕ ದೀನ್‌ನಿಗೆ ಎರಡೂವರೆ ವರ್ಷವಾಗುತ್ತಲೇ ತಂದೆ ವಿಧಿವಶರಾದರೆ 7 ವರ್ಷ ತುಂಬುತ್ತಲೇ ತಾಯಿ ಪ್ಯಾರಿ ಬಾರದ ಲೋಕ ಸೇರಿದರು. ಅನಾಥರಾದ ದೀನ್‌ ತನ್ನ ತಮ್ಮನ ಕೈಹಿಡಿದು ಸೋದರ ಮಾವ ರಾಧಾರಮಣ ಶುಕ್ಲರ ಆಶ್ರಯದಲ್ಲಿ ವಿದ್ಯಾಭ್ಯಾಸಕ್ಕೆ ಕಾಲಿಟ್ಟರೆ ಎಳೆಯ ಬಾಲಕನ ಹೃದಯಕ್ಕೆ ಮತ್ತೆ ಕಾಲನ ವಜ್ರಾಘಾತ ಬಡಿಯಿತು. ಕರುಳ ಬಳ್ಳಿ ಮುದ್ದಿನ ತಮ್ಮ ಶಿವ ದಯಾಳ್‌ ವಿಷಮ ಶೀತ ಜ್ವರಕ್ಕೆ ಬಲಿಯಾಗುತ್ತಾನೆ. ಮತ್ತೆ ಮತ್ತೆ ಅನಾಥರಾದ ದೀನ್‌ ಬಾಳ ರಥಕ್ಕೆ ಶಿಕ್ಷಣದ ದಾರಿ ಮತ್ತೆ ತೋರಿಸಿದವರು ಸೋದರಮಾವ ಶುಕ್ಲ. ತನ್ನವರನ್ನೆಲ್ಲ ಕಳೆದುಕೊಂಡ ವಿದ್ಯಾರ್ಥಿ ದೀನ್‌ ದಯಾಳ್‌ ಶಿಕ್ಷಣದಲ್ಲಿ ಮಾತ್ರ ಅದ್ಭುತ ಚುರುಕುತನ ಹೊಂದಿದ್ದರು. ರಾಜಸ್ಥಾನದ ಕೋಟದ ಕಲ್ಯಾಣ ಪ್ರೌಢಶಾಲೆಯಲ್ಲಿ ಎಲ್ಲ ಪರೀಕ್ಷೆಗಳಲ್ಲಿ ಪ್ರಥಮ ಸ್ಥಾನ ಪಡೆದ ದೀನ್‌ ದಯಾಳರ ಬುದ್ಧಿ ಶಕ್ತಿಯನ್ನು ಗ್ರಹಿಸಿದ ಸೀಕಾರದ ಕಲ್ಯಾಣ್‌ ಸಿಂಗ್‌ ಮಹಾರಾಜರು 2 ಚಿನ್ನದ ಪದಕ ಮತ್ತು ಮಾಸಿಕ ಗೌರವ ಧನ ನೀಡಿ ಗೌರವಿಸಿದ್ದರು. ವಿದ್ಯಾರ್ಥಿಯಾಗಿದ್ದಾಗಲೇ ಸಂಘ ಪರಿವಾರದ ಸೆಳೆತಕ್ಕೊಳಗಾಗಿದ್ದ ದೀನ್‌ ದಯಾಳರು ಪದವಿ ಮುಗಿಯುತ್ತಲೇ ಜನ ಸಂಘದ ಪ್ರಧಾನ ಕಾರ್ಯದರ್ಶಿ ಸುಂದರ್‌ ಸಿಂಗ್‌ ಭಂಡಾರಿಯವರ ನಿಕಟ ಬಂಧುತ್ವ ಹೊಂದಿದ್ದರು. ತಾನು ನಂಬಿದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಂಘಟನೆ ತನಗೆ ದೇಶ ಭಕ್ತಿಯ ಸಂಸ್ಕಾರ ನೀಡಿತು, ದೇಶಕ್ಕೆ ಅರ್ಪಿತ ಬಾಳಿಗೆ ಮುಂದಾಗಲು ಸ್ಫೂರ್ತಿ ಒದಗಿಸಿತು, ರಾಷ್ಟ್ರೀಯತೆಯ ಹಿನ್ನೆಲೆ ಬೆಳೆಸಿಕೊಳ್ಳಲು ಅವಕಾಶವಾಯಿತು. ಸಮಾಜ ಸಂಘಟನೆಯ ಪರಿಣತಿ, ಸೂಕ್ಷ್ಮ ಕ್ಷಮತೆಯ‌ು ಸಂಸ್ಕಾರದಲ್ಲಿ ನಂಬಿಕೆ ಬೆಳೆಸಿ ನನ್ನ ಬದುಕನ್ನು ರೂಪಿಸಿತು ಎಂದವರು ಹೆಮ್ಮೆಯಿಂದ ಹೇಳಿಕೊಂಡಿದ್ದರು.

ಸಾಮಾನ್ಯವಾಗಿ ದೀನ್‌ ದಯಾಳ್‌ ಎಂದೇ ಕರೆಸಿಕೊಳ್ಳುತ್ತಿದ್ದ ದೀನ ತನ್ನ ಸೋದರತ್ತೆಯ ಒತ್ತಾಯಕ್ಕೆ ಮಣಿದು ಕೆಲಸಕ್ಕಾಗಿ ಸರಕಾರದ ಪರೀಕ್ಷೆಯೊಂದಕ್ಕೆ ಕುಳಿತರು. ಪರೀಕ್ಷೆ ಪಾಸಾದ್ದರಿಂದ ಸಂದರ್ಶನಕ್ಕೆ ಕರೆ ಬಂದಿತ್ತು. ಅದರಲ್ಲಿ ಭಾಗವಹಿಸಬೇಕಾದರೆ ಅಂದಿನ ದಿನಗಳ ನಿಯಮದಂತೆ ಸೂಟು ಧರಿಸಿ ಹೊಗುವುದು ಅನಿವಾರ್ಯವಾಗಿತ್ತು. ಸೂಟಿಗೆ ಬೇಕಾಗುವಷ್ಟು ಹಣವನ್ನು ಅತ್ತೆಯೇ ಕೊಡಿಸಿದ್ದರು, ಸಂದರ್ಶನದ ಮುನ್ನಾ ದಿನ ಸೂಟ್‌ ಕೊಡಬೇಕೆಂಬ ಮಾತಿಗೆ ದರ್ಜಿಯು ಒಪ್ಪಿದ್ದ. ಆದರೆ ಮುನ್ನಾ ದಿನ ಹೋದರೆ ದರ್ಜಿಯು ಬಟ್ಟೆ ಹೊಲಿದಿರಲಿಲ್ಲ. ಸರಿ, ತನಗೆ ಸೂಟೇ ಬೇಕಿಲ್ಲ ಎಂದು ದಯಾಳ್‌ಜೀ ಧೋತಿ, ಕುರ್ತಾ, ಟೋಪಿಯಲ್ಲಿ ಸಂದರ್ಶನಕ್ಕೆ ಹೋಗಿದ್ದರು. ಅದಾಗಲೇ ಅಲ್ಲಿ ನೆರೆದ ಸೂಟುಧಾರಿ ಅಭ್ಯರ್ಥಿಗಳು ದೀನಾರನ್ನು ನೋಡಿ ಗೇಲಿ ಮಾಡುತ್ತಾ ಅವರೊಬ್ಬ (ಪಂಡಿತ್‌ಜೀ) ಹಳೇ ಕಾಲದ ಪುರೋಹಿತ ಎಂದು ಮನದಣಿಯೆ ನಕ್ಕಿದ್ದರು. ಅಚ್ಚರಿಯೆಂದರೆ ದೀನ್‌ ದಯಾಳ್‌ ಅವರನ್ನು ಸಂದರ್ಶನ ಮಾಡಿದ ವ್ಯಕ್ತಿ ಶುದ್ಧ ಇಂಗ್ಲಿಷ್‌ನವನಾದರೂ ಪ್ರತಿಭೆಯೆದುರು ಪಂಚೆ ಕುರ್ತವನ್ನು ಮರೆತ, ಫ‌‌ಲಿತಾಂಶದ ಪಟ್ಟಿಯಲ್ಲಿ ದೀನರ ಹೆಸರೇ ಘೋಷಿಸಲಾಗಿತ್ತು. ಅಂದಿನಿಂದ ದೀನ್‌ ದಯಾಳ್‌ರವರು “ಪಂಡಿತ್‌ ದೀನ್‌ ದಯಾಳ್‌ಜೀ’ಯಾಗಿ ಜನಮಾನಸದಲ್ಲಿ ಗೌರವಿಸಲ್ಪಟ್ಟರು. ಆದರೂ ಸಂಘದ ಪ್ರಚಾರಕರಾದ ಪಂಡಿತ್‌ ಜೀ ಸರಕಾರದ ಕೆಲಸಕ್ಕೆ ಒಗ್ಗಿಕೊಳ್ಳದೇ ಸಂಪೂರ್ಣವಾಗಿ ಪ್ರಚಾರಕರಾಗಿ ನಿಯುಕ್ತಿಗೊಂಡರು, 

1951ರಲ್ಲಿ ಪ್ರಧಾನಿ ನೆಹರೂ ಅವರ ಕಾಶ್ಮೀರ ಸ್ವಾಯತ್ತತೆ ವಿಚಾರ ಧಾರೆಗಳಿಗೆ ಸೆಟೆದು ವಿರೋಧ ವ್ಯಕ್ತ ಪಡಿಸಿದ ಡಾ| ಶ್ಯಾಮ್‌ ಪ್ರಸಾದ್‌ ಮುಖರ್ಜಿಯ “ಏಕ್‌ ದೇಶ್‌ ಮೆ ದೋ ವಿಧಾನ್‌, ದೋ ನಿಶಾನ್‌, ದೋ ಪ್ರಧಾನ್‌, ನಹೀ ಚಲೇಂಗೆ ನಹೀ ಚಲೇಂಗೆ” ಎಂದು ಘೋಷಿಸಿ ಕೇಂದ್ರ ಸಂಪುಟದ ಸಚಿವ ಸ್ಥಾನಕ್ಕೆ ರಾಜೀನಾಮೆ ಎಸೆದು ಹೊರಬಂದರು. ಮುಖರ್ಜಿ ನೇತೃತ್ವದಲ್ಲಿ ಜನ ಸಂಘ ಅಸ್ತಿತ್ವ ಪಡೆಯಿತು. ಆಗ ಭಾರತದ ಒಂದು ಭಾಗವಾಗಿದ್ದ ಕಾಶ್ಮೀರ ಪ್ರವೇಶಿಸಬೇಕಿದ್ದರೆ ಪ್ರತ್ಯೇಕ ವೀಸಾ ಪಡೆಯಬೇಕಾಗಿತ್ತು. ಕಾಶ್ಮೀರ ವಿಮೋಚನಾ ಚಳವಳಿಯ ನೇತೃತ್ವ ವಹಿಸಿದ್ದ ಮುಖರ್ಜಿ, “ಕಾಶ್ಮೀರ ಭಾರತದಲ್ಲಿ ಇರಬಯಸದವರು ಬೇಕಿದ್ದರೆ ಹೊರನಡೆಯಲಿ; ಆದರೆ ಅವರ ಜತೆ ಭಾರತದ ಒಂದೂ ಭಾಗವನ್ನು ಕಚ್ಚಿಕೊಂಡು ಹೋಗಲು ಸಾಧ್ಯವಿಲ್ಲ’ ಎಂದು ಗುಡುಗಿದ್ದರು. ಹರದಾರಿ ನಿರ್ಬಂಧ ಧಿಕ್ಕರಿಸಿ ಕಾಶ್ಮೀರ ಪ್ರವೇಶ ಮಾಡಿದ ಮುಖರ್ಜಿ ಶೇಖ್‌ ಅಬ್ದುಲ್ಲರ ಆಡಳಿತದ ಶ್ರೀನಗರದಲ್ಲಿ ಬಂಧಿತರಾಗಿ ಕಾರಾಗೃಹದಲ್ಲೇ ನಿಗೂಢ ಸಾವನ್ನಪ್ಪಿದರು. ಆನಂತರ ನಡೆದ ವಿದ್ಯಾಮಾನದಲ್ಲಿ ಕಾಶ್ಮೀರ ಭಾರತದ ಭಾಗವಾಯಿತು. ದೇಶ ಭಕ್ತ ಮುಖರ್ಜಿ ಸಾವಿನ ನೋವು ಮರೆಯಲು ಅಂದಿನ ಕೇಂದ್ರ ಸರಕಾರ ಕನಿಷ್ಠ ನ್ಯಾಯಾಂಗ ತನಿಖೆ ಮಾಡಲೂ ಮುಂದಾಗಲಿಲ್ಲ.

 1952ರಲ್ಲಿ ಪ್ರಮುಖರ ಸಭೆಯೊಂದರಲ್ಲಿ ಡಾ| ಮುಖರ್ಜಿ “ತನಗೆ ದೀನ್‌ ದಯಾಳ್‌ಜೀಯಂತಹ ಇನ್ನಿಬ್ಬರು ಯುವಕರು ಸಿಕ್ಕಿದ್ದರೆ ದೇಶದ ಸಮಗ್ರ ರಾಜಕೀಯ ಭೂಪಟವನ್ನು ಬದಲಿಸಬಲ್ಲೆ’ ಎಂದು ಉದ್ಗರಿಸಿದ್ದರು. ಅಂತಹ ಶ್ಯಾಮ್‌ ಪ್ರಸಾದರ ನಿಧನದ ಅನಂತರ ಅವರ ಆದರ್ಶ ಹೊತ್ತ ರಾಜಕೀಯ ಸಂಘಟನೆಯನ್ನು ತಳಮಟ್ಟದಲ್ಲೇ ಬೆಳೆಸುವ, ಮುನ್ನಡೆಸುವ ಹೊಣೆ ಪಂಡಿತ್‌ಜೀಯ ಹೆಗಲಿಗೆ ಬಿತ್ತು. ಆ ಕಾಲದಲ್ಲಿ ಅದು ಅನಿವಾರ್ಯವೂ ಆಗಿತ್ತು.

ಭಾರತದ ರಾಜಕಾರಣದಲ್ಲಿ ಇಂದೂ ಕೂಡ ಆರೆಂಟು ಬಾರಿ ಶಾಸಕರು, ಎಂಪಿಗಳು ಆಗಿದ್ದೇವೆ ಎಂದು ಹೇಳಿಕೊಳ್ಳುವವರಿದ್ದಾರೆ. ಆದರೆ ಅಂತಹ ಶಕ್ತಿ ಪಡೆಯಲು ಅವರೆಲ್ಲ ಹಾಕಿಕೊಂಡ ಶ್ರಮದ ಮಾರ್ಗದಿಂದ ವ್ಯಕ್ತಿ ಬೆಳೆದನೇ ಹೊರತು, ದೇಶ ಕಟ್ಟುವ ಆಚಾರ ವಿಚಾರಗಳು ಬೆಳೆಯಲೇ ಇಲ್ಲ. 

ಜನಸಾಮಾನ್ಯರಿಗೆ ಹಿತವಾಗುವ ಸ್ವದೇಶಿ ನೀತಿ, ಕೈಗಾರಿಕೆಗಳಲ್ಲಿರುವ ಮಾಲಕ ಮತ್ತು ಕಾರ್ಮಿಕರ ಹಿತಾಸಕ್ತಿಗಳನ್ನು ಬೇರೆ ಬೇರೆಯಾಗಿ ಅಳೆಯುವುದಕ್ಕಿಂತ ಕೈಗಾರಿಕೆ ಇಲ್ಲದೆ-ನೌಕರರಿಲ್ಲ; ನೌಕರರಿಲ್ಲದೇ ಕೈಗಾರಿಕೆ ಇಲ್ಲ ಎಂಬ ವಿಭಿನ್ನ ಕೈಗಾರಿಕಾ ನೀತಿಯ ಬಗ್ಗೆ ಪ್ರಥಮ ಬಾರಿಗೆ ಪಂಡಿತ್‌ಜೀ ಪ್ರಸ್ತಾಪಿಸಿದ್ದರು. 

ಸ್ವಾತಂತ್ರ ಪಡೆದು 70 ವರ್ಷಗಳ ಅನಂತರವೂ ಗರೀಬಿ ಹಠಾವೊ, ಬಡತನ ನಿರ್ಮೂಲನೆ, ಸಾಮಾಜಿಕ ನ್ಯಾಯ, ಅಸ್ಪೃಶ್ಯತೆ ನಿವಾರಣೆ, ಹಸಿವು ಮುಕ್ತ ರಾಜ್ಯ, ದೇಶಗಳ ಕಥೆ ಹೇಳುವ ನಮಗೆಲ್ಲ ದೀನ್‌ ದಯಾಳ್‌ ಜೀ ಅಂದೇ ಅಂತ್ಯೋದಯ ಕಲ್ಪನೆಯ ಮೂಲಕ ಸಮಾನತೆಯ ಕಟು ಸಂದೇಶ ರವಾನಿಸಿದ್ದರು, ಮತ್ತು ಇವತ್ತಿಗೂ ಅಂತ್ಯೋದಯದ ಅನುಷ್ಠಾನದ ಅನಿವಾರ್ಯತೆ ಬಿತ್ತಿ ಹೋಗಿದ್ದಾರೆ.

ಮನುಷ್ಯನನ್ನು ಕೊಲ್ಲುವ ಪ್ರಾಣಿಗಳನ್ನು ದುಷ್ಟ ಮೃಗವೆಂದು ತಿಳಿದು ಪ್ರತಿದಾಳಿ ಮಾಡಿ ಕೊಲ್ಲುವುದಕ್ಕಿಂತ ಅಭಯಾರಣ್ಯದ ಬಗ್ಗೆ ಯೋಚಿಸೋಣ ಎಂಬ ದೀನ್‌ರ ನುಡಿ, ಆ ಕಾಲದಲ್ಲಿ ಆಳುವವರಿಗೆ ಅರ್ಥವಾಗಲು ಬಹು ಸಮಯ ಹಿಡಿಯಿತು. 

ದಯಾಳ್‌ಜೀಯ ಪ್ರಖರವಾದ ಬರವಣಿಗೆ, ರೋಮಾಂಚನಕಾರಿ ಭಾಷಣ, ಜನಸಾಮಾನ್ಯರೊಂದಿಗೆ ಬೆರೆತು ಕೆಲಸಮಾಡುವ ರೀತಿ ಅನ್ಯರಿಗೆ ಆದರ್ಶ ಪ್ರಾಯವಾಗಿತ್ತು. ಕೇವಲ 17 ವರ್ಷಗಳ ಸಕ್ರಿಯ ರಾಜಕಾರಣದಲ್ಲಿ ಪಂಡಿತ್‌ ಜೀ ರಾಷ್ಟ್ರ ಕಟ್ಟುವ ಕಾರ್ಯಕ್ಕೆ ತಮ್ಮನ್ನು ತೊಡಗಿಸಿಕೊಳ್ಳಬಲ್ಲ ಹೊಸ ಯುವ ಜನಾಂಗವನ್ನು ಸೃಷ್ಟಿ ಮಾಡಿದರು. ಪಟ್ಟು ಬಿಡದೇ ಹಿಡಿದ ಕೆಲಸ ಮಾಡುತ್ತಿದ್ದ ದೀನ್‌ಜಿà, ಸರಕಾರವು ಸೇರಿದಂತೆ ಸಮಾಜವನ್ನು ಜಾಗೃತಗೊಳಿಸಲು “ಪಾಂಚಜನ್ಯ’ ವಾರಪತ್ರಿಕೆ ಆರಂಭಿಸಿದ್ದರು. ಸ್ವದೇಶಿ ಎಂಬ ದಿನಪತ್ರಿಕೆ ಇಂದಿಗೂ ಕೂಡ “ತರುಣ ಭಾರತ’ ಎಂಬ ಹೆಸರಿನಲ್ಲಿ ಪ್ರಕಟವಾಗುತ್ತಿದೆ. 1967ರಲ್ಲಿ ಪಂಡಿತ್‌ ಜೀ ಬಗ್ಗೆ ಅಂದಿನ ರಷ್ಯಾ ಸರಕಾರದ ಮುಖವಾಣಿ “ಪ್ರಾವಾx’ ಪತ್ರಿಕೆ “”ಒಂದು ಬಹುದೊಡ್ಡ ರಾಷ್ಟ್ರ ಸಂಘಟನೆಯಲ್ಲಿ ಮಿಂದು ಬಂದ ದೀನ ದಯಳ್‌ ಜೀ ಸರಕಾರದ ಎದುರು ರಾಜಕೀಯ ಪಕ್ಷವೊಂದರ ಮುಖಂಡನಾಗಿ ಸೆಟೆದು ನಿಂತಿದ್ದಾರೆ. ದೀನ್‌ರ ನಿಲುವನ್ನು ನಿರ್ಲಕ್ಷಿಸುವ ಮುನ್ನ ಭಾರತ ಸರಕಾರ ಅವರನ್ನೊಮ್ಮೆ ಗಂಭೀರವಾಗಿ ಗಮನಿಸಬೇಕು” ಎಂದು ಉದ್ಗಾರ ತೆಗೆದಿತ್ತು. 1968 ಫೆಬ್ರವರಿ 11ರಂದು ಪಂಡಿತರ ಬದುಕು ಅಂತ್ಯವಾಯಿತು ಎನ್ನುವುದಕ್ಕಿಂತ ಉತ್ತರ ಪ್ರದೇಶದ ಮೊಗಲಸರಾಯಿ ರೈಲ್ವೇ ನಿಲ್ದಾಣದ ಹೊರ ಅಂಗಳದಲ್ಲಿ ಈ ಅಸಾಮಾನ್ಯ ರಾಷ್ಟ್ರ ಭಕ್ತನ ಶವ ಅನಾಥ ಹೆಣದಂತೆ ಬಿದ್ದುಕೊಳ್ಳುವ ಸ್ಥಿತಿಯಲ್ಲಿ ಕೊಲೆಮಾಡಿ ಕೆಡವಲಾಗಿತ್ತು ಎನ್ನುವುದೇ ಪೂರ್ಣ ಸತ್ಯ ಮತ್ತು ಸರಿ. 

ದೇಹದ ಕಣಕಣವನ್ನು, ಬಾಳಿನ ಪ್ರತೀ ಕ್ಷಣವನ್ನು ಅವರು ಭಾರತವೆಂಬ ರಾಷ್ಟ್ರ ದೇವತೆಯ ಕಾಲಡಿಯ ಧೂಳಾಗಬಯಸಿದ್ದರು. ಇಂತಹ ರಾಷ್ಟ್ರ ಭಕ್ತನ ಕಣ್ಮರೆಗೆ ಕಾರಣರಾದ ನೈಜ ಪಾಪಿಗಳನ್ನು ಕಾನೂನು ಚೌಕಟ್ಟಿನಲ್ಲಿ ತರಲಾಗಲಿಲ್ಲ ಎಂಬ ಕೊರಗಿನ ನಡುವೆಯೂ ಫೆಬ್ರವರಿ 11ರ ದಿನ ಪಂಡಿತ್‌ಜೀಯ ಅನುಯಾಯಿಗಳಿಂದ ಸಮರ್ಪಣಾ ದಿನವಾಗಿ ಭಾರತದಾದ್ಯಂತ ಆಚರಣೆಗೊಳ್ಳುತ್ತಿದೆ. 

ರಾಷ್ಟ್ರ ಕಟ್ಟುವ ಪಂಡಿತ್‌ ದೀನ್‌ ದಯಾಳ್‌ಜೀ ಎಂಬ ಸ್ವಯಂ ಸೇವಕ ರಾಜಕಾರಣಿ ಕೊಲೆ ರೂಪದ ನಿಗೂಢ ಸಾವನ್ನಪ್ಪಿದಾಗ ಅವರಿಗೆ ಶ್ರದ್ಧಾಂಜಲಿ ಅರ್ಪಿಸಿದ ಅಟಲ್‌ ಬಿಹಾರಿ ವಾಜಪೇಯಿ, “”ನಂದಾದೀಪ ನಂದಿ ಹೋಯಿತು, ಅವರ ಅನುಯಾಯಿಗಳಾದ ನಾವು ಪಂಡಿತ್‌ ಜೀಯ ದೇಹದಿಂದ ಹರಿದ ಒಂದೊಂದು ಹನಿ- ಹನಿ ರಕ್ತವನ್ನು ತಿಲಕವಾಗಿ ಧರಿಸಿ ಧ್ಯೇಯ ಪಥ‌ದಲ್ಲಿ ಸಾಗೋಣ. ದೇಶವೇ ಅವರ ಮನೆ, ಸಮಾಜವೇ ಅವರ ಕುಟುಂಬ, ಅವರ ಜೀವನವೇ ಒಂದು ತಪಸ್ಸು. ಪಂಡಿತ್‌ ಜೀಯು ಕೈಗೊಂಡಿದ್ದ ಕಾರ್ಯ ವ್ಯಕ್ತಿ ನಿಷ್ಠವಾಗಿರಲಿಲ್ಲ, ತತ್ವ ನಿಷ್ಠವಾಗಿತ್ತು. ಅವರ ಹುಟ್ಟು-ಬದುಕು ಹೋರಾಡಿದ ಮಾರ್ಗದಲ್ಲಿ ಮುನ್ನಡೆಯೋಣ. ಅದೇ ಅವರಿಗೆ ಸಲ್ಲಿಸುವ ಶ್ರದ್ಧಾಂಜಲಿ ಎಂದಿದ್ದರು.

ಪೂಜ್ಯರಾದ ಡಾ| ವಿ.ಎಸ್‌. ಆಚಾರ್ಯ ಅನೇಕ ಬಾರಿ ನಮಗೆಲ್ಲ ತಿಳಿ ಹೇಳುವಾಗ ಹೇಳಿದ್ದು, “”ನಿಮ್ಮಂತಹ ಎಳೆಯ ಕಾರ್ಯಕರ್ತರಿಗೆ ಮಾದರಿ ಯಾರು ಎಂದು ಕೇಳಿದರೆ ನೀವು ನಮ್ಮಂಥವರನ್ನು ತೋರಿಸಬೇಕಾಗಬಹುದು. ಆದರೆ ನನಗೆ ಇದೇ ಪ್ರಶ್ನೆ ಹಾಕಿದರೆ ಭಾವುಕನಾಗಿ ನಾನು ಹೇಳಬಲ್ಲೆ, “ನನ್ನ ಮಾದರಿ ಆದರ್ಶ ವ್ಯಕ್ತಿ ಪಂಡಿತ್‌ ದೀನ್‌ ದಯಾಳ್‌ ಜೀ”. 
ಏಕಾತ್ಮ ಮಾನವ ದರ್ಶನದ ಮೂಲಕ ಭಾರತಕ್ಕೆ ಹೊಸ ದಿಕ್ಕು ತೋರಿದ ಪಂಡಿತ್‌ ಜೀಯವರ ಜನ್ಮ ದಿನದ ಶತಮಾನೋತ್ಸವ ಆಚರಣೆ ಇದೀಗ ದೇಶಾದ್ಯಂತ ಅಭಿಮಾನದಿಂದ ನಡೆಯುತ್ತಿದೆ. ರಾಜಕಾರಣವೊಂದು ವ್ರತ, ಬದಲಾಗಿ ವೃತ್ತಿಯಲ್ಲ ಎಂಬ ಪಂಡಿತ್‌ಜೀ ಮಾತು ಭಾರತದಾದ್ಯಂತ ಮಾರ್ದನಿಸಲಿ. 

ಕೋಟ ಶ್ರೀನಿವಾಸ ಪೂಜಾರಿ, ವಿಧಾನ ಪರಿಷತ್‌ ಸದಸ್ಯರು

ಟಾಪ್ ನ್ಯೂಸ್

NITK-Padavi-pradana

Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್‌ ರಂಗರಾಜನ್‌

Nalin-Kateel

Result: ಮಹಾರಾಷ್ಟ್ರದಲ್ಲಿ ಎನ್‌ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್‌

Padmaraj–JPoojary

Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್‌

Sanjeev-Matandoor

Putturu: ಬಜೆಟ್‌ನಲ್ಲಿ ಹೊರಡಿಸಿರುವ ಆದೇಶ ಅನುಷ್ಠಾನಿಸದೆ ಕೃಷಿಕರಿಗೆ ವಂಚನೆ: ಮಠಂದೂರು

Sri-Home-minister

Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್‌ ಶಾ ಭೇಟಿ

Udupi-DC-Dr.-Vidya-kumari

Udupi: ಮಂಗನಕಾಯಿಲೆ ಪ್ರಕರಣ: ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಿ: ಡಿಸಿ ಡಾ.ವಿದ್ಯಾಕುಮಾರಿ

adani (2)

Adani; 2,200 ಕೋಟಿ ರೂ. ಲಂಚ: ಅಮೆರಿಕ ಸಮನ್ಸ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ

ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ

1-kannada

Kannada; ಅನಿವಾಸಿ ಕನ್ನಡಿಗರ ಮಕ್ಕಳಲ್ಲೂ ಕನ್ನಡ ಚಿಗುರಲಿ

1-kanchi

Kanchi swamiji; ದೇವಸ್ಥಾನಗಳ ಭೂಮಿ ದೇವಸ್ಥಾನಗಳಿಗೇ ಇರಲಿ

1-reee

ದಿ| ದಾಮೋದರ ಆರ್‌. ಸುವರ್ಣ: ಬಡಜನರ ಕಣ್ಣೀರಿಗೆ ಸ್ಪಂದಿಸಿದ ಹೃದಯ ಸಿರಿವಂತ

ಕನ್ನಡ ಅನ್ನ ನೀಡುವ ಭಾಷೆಯಾಗಿ ಬೆಳೆಯಬೇಕು

Education: ಕನ್ನಡ ಅನ್ನ ನೀಡುವ ಭಾಷೆಯಾಗಿ ಬೆಳೆಯಬೇಕು

MUST WATCH

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

ಹೊಸ ಸೇರ್ಪಡೆ

NITK-Padavi-pradana

Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್‌ ರಂಗರಾಜನ್‌

Nalin-Kateel

Result: ಮಹಾರಾಷ್ಟ್ರದಲ್ಲಿ ಎನ್‌ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್‌

Padmaraj–JPoojary

Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್‌

Sanjeev-Matandoor

Putturu: ಬಜೆಟ್‌ನಲ್ಲಿ ಹೊರಡಿಸಿರುವ ಆದೇಶ ಅನುಷ್ಠಾನಿಸದೆ ಕೃಷಿಕರಿಗೆ ವಂಚನೆ: ಮಠಂದೂರು

Sri-Home-minister

Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್‌ ಶಾ ಭೇಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.