ಬಿಜೆಪಿ ಯುವಮೋರ್ಚಾದಿಂದ ಕೇಸರಿ ದಿನಾಚರಣೆ
Team Udayavani, Sep 26, 2017, 9:56 AM IST
ಮಂಗಳೂರು: ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಅವರ ಜನ್ಮದಿನವಾದ ಸೆ. 25ರಂದು ದ. ಕ. ಜಿಲ್ಲಾ ಬಿಜೆಪಿ ಯುವ ಮೋರ್ಚಾ ವತಿಯಿಂದ ಜಿಲ್ಲಾದ್ಯಂತ ಕೇಸರಿ ದಿನ ಆಚರಿಸಲಾಯಿತು.
ಯುವ ಮೋರ್ಚಾ ವತಿಯಿಂದ ಹಲವೆಡೆಗಳಲ್ಲಿ ಕೇಸರಿ ಶಾಲನ್ನು ನೀಡಿ ಕೇಸರಿ ದಿನ ಆಚರಿಸಲಾಗಿದೆ. ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಅವರು ಶ್ರೇಷ್ಠ ರಾಜಕೀಯ ಸಂತ. ಭಾರತೀಯ ವಿಚಾರ ಧಾರೆಯ ಮೊದಲ ರಾಜಕೀಯ ಚಿಂತನೆ ಕೊಟ್ಟಿರುವ, ಕೇಸರಿ ಚಿಂತನೆಯ ಆಧಾರದಲ್ಲಿ ರಾಷ್ಟ್ರಕ್ಕೆ ಹೊಸ ಚಿಂತನೆ ಯನ್ನು ನೀಡಿರುವ ಮಹಾನ್ ನಾಯಕ. ಅಂತ್ಯೋ ದಯ ಹರಿಕಾರ ಹಾಗೂ ಏಕಾತ್ಮ ಮಾನವತಾ ವಾದದ ಸಿದ್ಧಾಂತವನ್ನು ಕೊಟ್ಟಿರುವ ನಾಯಕ. ಕೇಸರಿ ದಿನಕ್ಕೆ ಸ್ವ ಇಚ್ಛೆಯಿಂದಲೇ ಹೆಚ್ಚಿನ ಬೆಂಬಲ ದೊರಕಿದ್ದು, ವಿದ್ಯಾರ್ಥಿ- ವಿದ್ಯಾರ್ಥಿನಿಯರು, ಕಾರ್ಮಿಕರು, ಚಾಲಕರು ಸೇರಿದಂತೆ ಬೆಂಬಲ ನೀಡಿದ್ದಾರೆ. ದ.ಕ. ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಗೋಡಂಬಿ ಫ್ಯಾಕ್ಟರಿ, ಬಸ್ ನಿಲ್ದಾಣ, ಆಟೋ ನಿಲ್ದಾಣ, ಅಂಗಡಿ, ಕಚೇರಿ ಸೇರಿದಂತೆ ಹಲವೆಡೆ ಕೇಸರಿ ದಿನ ಆಚರಿಸಲಾಗಿದೆ.
ಯುವಮೋರ್ಚಾ ದ.ಕ. ಜಿಲ್ಲಾಧ್ಯಕ್ಷ ಹರೀಶ್ ಪೂಂಜಾ, ಪ್ರಧಾನ ಕಾರ್ಯದರ್ಶಿ ಹರೀಶ್ ಮೂಡುಶೆಡ್ಡೆ, ಮಂಗಳೂರು ಉತ್ತರ ಮಂಡಲ ಯುವಮೋರ್ಚಾ ಅಧ್ಯಕ್ಷ ಸಂದೀಪ್ ಶೆಟ್ಟಿ, ಕಾರ್ಯದರ್ಶಿ ನಂದನ್ ಮಲ್ಯ ಹಾಗೂ ಎಲ್ಲ ಯುವಮೋರ್ಚಾ ಕಾರ್ಯಕರ್ತರು ಪಾಲ್ಗೊಂಡಿ ದ್ದರು ಎಂದು ಪ್ರಕಟನೆ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.