ಮರಳು ಕೊರತೆ: ವ್ಯವಹಾರಕ್ಕೇ ಕೊಡಲಿ, ಕಾರ್ಮಿಕರು ಕಂಗಾಲು!

Team Udayavani, Sep 26, 2017, 10:07 AM IST

26-STATE-29.jpg

ವಿಟ್ಲ: ಹಲವು ಕೊರತೆಗಳ ನಡುವೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈಗ ಮರಳು ಕೊರತೆಯೂ ಕಾಣಿಸಿಕೊಂಡಿದೆ. ಮರಳುಗಾರಿಕೆ ಆರಂಭವಾಗದೇ ಇರುವುದರಿಂದ ವ್ಯಾಪಾರಿಗಳ ವ್ಯವಹಾರಕ್ಕೇ ಕೊಡಲಿ ಏಟು ಬಿದ್ದಿದ್ದರೆ, ಕಾರ್ಮಿಕರ ಕೆಲಸಕ್ಕೂ ಸಮಸ್ಯೆ ಕಾಡಿದೆ.

ಆ. 15ರಿಂದ ಮರಳುಗಾರಿಕೆ ಆರಂಭವಾಗಬಹುದೆಂಬ ನಿರೀಕ್ಷೆ ಇದ್ದರೂ ಈವರೆಗೂ ಮರಳುಗಾರಿಕೆ ಆರಂಭವಾಗಿಲ್ಲ. ಪರಿಣಾಮ ಸಿಮೆಂಟ್‌, ಕಬ್ಬಿಣ, ಪೈಂಟ್‌, ಹೊಟೇಲ್‌, ದಿನಸಿ, ಟೆಕ್ಸ್‌ಟೈಲ್ಸ್‌ ಮತ್ತು ಇನ್ನಿತರ ಎಲ್ಲ ವ್ಯವಹಾರಗಳು ಸಂಪೂರ್ಣವಾಗಿ ಕುಸಿದಿವೆ. ಸರಕಾರಿ ಅಭಿವೃದ್ಧಿ ಕಾಮಗಾರಿಗಳೂ ಸ್ಥಗಿತಗೊಂಡಿವೆ.

ದಾಸ್ತಾನಿಲ್ಲ, ಮರಳುಗಾರಿಕೆ ವಿಳಂಬ
ಜಿಲ್ಲೆಯಲ್ಲಿ ಸಾಮಾನ್ಯವಾಗಿ ಮಳೆಗಾಲ ತಿಂಗಳುಗಳಲ್ಲಿ ಮರಳುಗಾರಿಕೆ ನಡೆಯಲ್ಲ. ಇದು ಶುರುವಾಗುವುದು ಸೆಪ್ಟೆಂಬರ್‌ನಲ್ಲಿ. ಸಾಮಾನ್ಯವಾಗಿ ಮಳೆಗಾಲದಲ್ಲಿ ಅವಶ್ಯ ಇರುವಷ್ಟು ಮರಳನ್ನು ವ್ಯಾಪಾರಿಗಳು ದಾಸ್ತಾನು ಇರಿಸುತ್ತಿದ್ದರು. ಆದರೆ ಮರಳು ದಾಸ್ತಾನು ಮಾಡಲೂ ಆಗದೇ ನದಿಯಿಂದ ತೆಗೆಯಲೂ ಆಗದೇ ಸಮಸ್ಯೆ ಹೆಚ್ಚಾಗಿದೆ. ಅಷ್ಟೇ ಅಲ್ಲ ಈ ವರ್ಷ ಮರಳುಗಾರಿಕೆ ಆರಂಭದ ಲಕ್ಷಣಗಳೂ ಕಂಡುಬರುತ್ತಿಲ್ಲ. ಈ ವಿಳಂಬವೇಕೆ ಎಂದೂ ಗೊತ್ತಾಗುತ್ತಿಲ್ಲ!

ಮಾರುಕಟ್ಟೆ ಮೇಲೆ ಹಿಡಿತ
ಅಚ್ಚರಿ ಎಂದರೆ ಜಿಲ್ಲೆಯಲ್ಲಿ ಮರಳುಗಾರಿಕೆ ಮಾರುಕಟ್ಟೆ ಹಿಡಿತವನ್ನೂ ಹೊಂದಿದೆ! ಮರಳು ಸರಬರಾಜು ಇಲ್ಲದ ಕಾರಣ ಕಟ್ಟಡ, ಮನೆ, ರಸ್ತೆ ಕಾಂಕ್ರೀಟ್‌ ಕಾಮಗಾರಿಗಳು ಸ್ಥಗಿತಗೊಂಡಿದೆ. ಗುತ್ತಿಗೆದಾರರು, ಜತೆಗೆ ಗಾರೆ ಕಾರ್ಮಿಕರು, ಬಾರ್‌ಬೆಂಡರ್, ಲಕ್ಷಾಂತರ ಕೂಲಿ ಕಾರ್ಮಿಕರು ಉದ್ಯೋಗವಿಲ್ಲದೇ ಪರದಾಡುತ್ತಿದ್ದಾರೆ. ಜಿಲ್ಲೆಯ ವ್ಯವಹಾರ ಶೇ. 30ರಿಂದ 40ರಷ್ಟು ಕುಸಿದಿದೆ ಎನ್ನಲಾಗುತ್ತಿದೆ.

ಗಗನಕ್ಕೇರಿದ ಬೆಲೆ 
2010ಕ್ಕೂ ಹಿಂದೆ ಒಂದು ಲೋಡ್‌ ಮರಳಿಗೆ ಜಿಲ್ಲೆಯಲ್ಲಿ 1,500ರಿಂದ 2,000 ರೂ. ಇತ್ತು. ಕೇರಳದಲ್ಲಿ ಮರಳು ನಿಷೇಧವಾದ ಬಳಿಕ ಆ ರಾಜ್ಯಕ್ಕೆ ಅಕ್ರಮ ಸಾಗಾಟ ಆರಂಭವಾಗಿದ್ದು, ಬೆಲೆ ಏರಿಕೆಗೆ ಕಾರಣವಾಯಿತು. ಬೆಂಗಳೂರು ಹಾಗೂ ಹೊರಜಿಲ್ಲೆಗಳಿಗೂ ಸಾಗಾಟ ಶುರುವಾಗಿ ದಂಧೆಯಾಗಿ ಪರಿವರ್ತನೆಯಾಯಿತು. ಪರಿಣಾಮ ಸರಕಾರ ಕೆಲ ಕಾನೂನು ಜಾರಿಗೊಳಿಸಿತು. ಈಗಿನ ನಿಯಮಾವಳಿ ಪ್ರಕಾರ ಒಂದು ಲೋಡ್‌ ಮರಳಿಗೆ ಗಣಿ ಇಲಾಖೆಗೆ 650 ರೂ. ಪಾವತಿಸಬೇಕು. ಲಾರಿ ಬಾಡಿಗೆ, ಲೋಡಿಂಗ್‌ ಅನ್‌ಲೋಡಿಂಗ್‌ ಕೆಲಸ ಸೇರಿ ಗರಿಷ್ಠ ಎಂದರೆ ಸುಮಾರು 6,000 ರೂ.ಗೆ ಸಿಗಬೇಕು. ಆದರೆ ಈ ಬೆಲೆಗೆ ಮರಳು ಸಿಗುವುದೇ ಕಷ್ಟ. 15, 20 ಸಾವಿರ ನೀಡಲು ಒಪ್ಪಿದರೆ ಮಾತ್ರ ಮರಳು ಬಂದು ಬೀಳುತ್ತದೆ ಎಂಬಂತಾಗಿದೆ. 

ಸಮರ್ಪಕ ಮರಳು ನೀತಿ ಅನುಷ್ಠಾನವಾಗಲಿ
ಅಕ್ರಮ ಮರಳು ಸಾಗಾಟಕ್ಕೆ ಭಾರೀ ದಂಡ ಹಾಕುವ ಅವಕಾಶವಿದೆ. ಲಾರಿಗಳು ಅಕ್ರಮವಾಗಿ ಮರಳು ಸಾಗಾಟ ಮಾಡುವುದು ಬೆಳಕಿಗೆ ಬಂದರೆ, ಲಾರಿ ವಶಪಡಿಸಿ, ಲಾರಿಯ ನಿಗದಿತ ಬೆಲೆಯ ಅರ್ಧದಷ್ಟು ಮೊತ್ತ ದಂಡ ಹಾಕಬಹುದು. ಇಷ್ಟಾದರೂ ಅಕ್ರಮ ಸಾಗಾಟ ನಿಂತಿಲ್ಲ. ನೆರೆಯ ಉಡುಪಿ ಜಿಲ್ಲೆಯಲ್ಲಿ ಮರಳು ಸಾಗಾಟದ ಬಗ್ಗೆ ಗೊಂದಲವಿಲ್ಲ. ಅದೇ ರೀತಿ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಸಮರ್ಪಕವಾದ ಮರಳು ನೀತಿ ಅನುಷ್ಠಾನಗೊಳ್ಳಬೇಕು ಎಂದು ನಾಗರಿಕರ ಆಗ್ರಹವಾಗಿದೆ. 

ಉದಯಶಂಕರ್‌ ನೀರ್ಪಾಜೆ

ಟಾಪ್ ನ್ಯೂಸ್

BYV-yathnal

BJP Internal Dispute: ಶಾಸಕ ಬಸನಗೌಡ ಯತ್ನಾಳ್‌ ವಿವಾದ ಇತ್ಯರ್ಥಕ್ಕೆ ಡಿ.9ರ ಗಡುವು

Pejavara-Shree–Siddu

Constitution Day: ಉಡುಪಿ ಪೇಜಾವರ ಶ್ರೀ ಮನುಸ್ಮೃತಿ ಪ್ರತಿಪಾದಕರು: ಸಿಎಂ ಸಿದ್ದರಾಮಯ್ಯ

Train: ಗೋಮಟೇಶ್ವರ ಎಕ್ಸ್‌ಪ್ರೆಸ್‌ ರೈಲು ಮಂಗಳೂರು ಸೆಂಟ್ರಲ್‌ಗೆ ಬಾರದು

Train: ಗೋಮಟೇಶ್ವರ ಎಕ್ಸ್‌ಪ್ರೆಸ್‌ ರೈಲು ಮಂಗಳೂರು ಸೆಂಟ್ರಲ್‌ಗೆ ಬಾರದು

Kambala: ತೀರ್ಪುಗಾರರ ತೀರ್ಮಾನವೇ ಅಂತಿಮ:ಜಿಲ್ಲಾ ಕಂಬಳ ಸಮಿತಿ ಸಭೆಯಲ್ಲಿ ನಿರ್ಣಯ

Kambala: ತೀರ್ಪುಗಾರರ ತೀರ್ಮಾನವೇ ಅಂತಿಮ:ಜಿಲ್ಲಾ ಕಂಬಳ ಸಮಿತಿ ಸಭೆಯಲ್ಲಿ ನಿರ್ಣಯ

DKShivakumar

Congress: ಗ್ಯಾರಂಟಿ ಯೋಜನೆಗಳ ಬಗ್ಗೆ ಅಪಸ್ವರ ಎತ್ತಿದರೆ ಶಿಸ್ತುಕ್ರಮ: ಡಿ.ಕೆ.ಶಿವಕುಮಾರ್‌

Gaviyappa-MLA

Congress Guarantee: ಎರಡು-ಮೂರು ಗ್ಯಾರಂಟಿ ನಿಲ್ಲಿಸಿ: ಎಚ್‌.ಆರ್‌. ಗವಿಯಪ್ಪ ಒತ್ತಾಯ

ಕೆರೆ ಬತ್ತುವ ಮೊದಲೇ ಎಚ್ಚರಿಕೆ ಅಗತ್ಯ; ಜೀವ ಸೆಲೆಯಾಗಿರುವ ಕೆರೆಗಳ ನಿರ್ವಹಣೆಯೇ ಆಗುತ್ತಿಲ್ಲ

ಕೆರೆ ಬತ್ತುವ ಮೊದಲೇ ಎಚ್ಚರಿಕೆ ಅಗತ್ಯ; ಜೀವ ಸೆಲೆಯಾಗಿರುವ ಕೆರೆಗಳ ನಿರ್ವಹಣೆಯೇ ಆಗುತ್ತಿಲ್ಲ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Train: ಗೋಮಟೇಶ್ವರ ಎಕ್ಸ್‌ಪ್ರೆಸ್‌ ರೈಲು ಮಂಗಳೂರು ಸೆಂಟ್ರಲ್‌ಗೆ ಬಾರದು

Train: ಗೋಮಟೇಶ್ವರ ಎಕ್ಸ್‌ಪ್ರೆಸ್‌ ರೈಲು ಮಂಗಳೂರು ಸೆಂಟ್ರಲ್‌ಗೆ ಬಾರದು

Kambala: ತೀರ್ಪುಗಾರರ ತೀರ್ಮಾನವೇ ಅಂತಿಮ:ಜಿಲ್ಲಾ ಕಂಬಳ ಸಮಿತಿ ಸಭೆಯಲ್ಲಿ ನಿರ್ಣಯ

Kambala: ತೀರ್ಪುಗಾರರ ತೀರ್ಮಾನವೇ ಅಂತಿಮ:ಜಿಲ್ಲಾ ಕಂಬಳ ಸಮಿತಿ ಸಭೆಯಲ್ಲಿ ನಿರ್ಣಯ

ಕರಾವಳಿಯಲ್ಲಿ ಈ ಬಾರಿ ವಾಡಿಕೆಯಂತೆ ಚಳಿ

Mangaluru: ಕರಾವಳಿಯಲ್ಲಿ ಈ ಬಾರಿ ವಾಡಿಕೆಯಂತೆ ಚಳಿ

ಎಪಿಕೆ ಫೈಲ್‌ ಕಳುಹಿಸಿ 1.31 ಲ.ರೂ. ವಂಚನೆಎಪಿಕೆ ಫೈಲ್‌ ಕಳುಹಿಸಿ 1.31 ಲ.ರೂ. ವಂಚನೆ

Fraud Case: ಎಪಿಕೆ ಫೈಲ್‌ ಕಳುಹಿಸಿ 1.31 ಲ.ರೂ. ವಂಚನೆ

Mangaluru: ನ್ಯಾಯಾಂಗ ನಿಂದನೆ ಪ್ರಕರಣ: ಹನುಮಂತ ಕಾಮತ್‌ಗೆ ಕಾರಾಗೃಹ ಶಿಕ್ಷೆ

Mangaluru: ನ್ಯಾಯಾಂಗ ನಿಂದನೆ ಪ್ರಕರಣ: ಹನುಮಂತ ಕಾಮತ್‌ಗೆ ಕಾರಾಗೃಹ ಶಿಕ್ಷೆ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

BYV-yathnal

BJP Internal Dispute: ಶಾಸಕ ಬಸನಗೌಡ ಯತ್ನಾಳ್‌ ವಿವಾದ ಇತ್ಯರ್ಥಕ್ಕೆ ಡಿ.9ರ ಗಡುವು

Pejavara-Shree–Siddu

Constitution Day: ಉಡುಪಿ ಪೇಜಾವರ ಶ್ರೀ ಮನುಸ್ಮೃತಿ ಪ್ರತಿಪಾದಕರು: ಸಿಎಂ ಸಿದ್ದರಾಮಯ್ಯ

Train: ಗೋಮಟೇಶ್ವರ ಎಕ್ಸ್‌ಪ್ರೆಸ್‌ ರೈಲು ಮಂಗಳೂರು ಸೆಂಟ್ರಲ್‌ಗೆ ಬಾರದು

Train: ಗೋಮಟೇಶ್ವರ ಎಕ್ಸ್‌ಪ್ರೆಸ್‌ ರೈಲು ಮಂಗಳೂರು ಸೆಂಟ್ರಲ್‌ಗೆ ಬಾರದು

Kambala: ತೀರ್ಪುಗಾರರ ತೀರ್ಮಾನವೇ ಅಂತಿಮ:ಜಿಲ್ಲಾ ಕಂಬಳ ಸಮಿತಿ ಸಭೆಯಲ್ಲಿ ನಿರ್ಣಯ

Kambala: ತೀರ್ಪುಗಾರರ ತೀರ್ಮಾನವೇ ಅಂತಿಮ:ಜಿಲ್ಲಾ ಕಂಬಳ ಸಮಿತಿ ಸಭೆಯಲ್ಲಿ ನಿರ್ಣಯ

DKShivakumar

Congress: ಗ್ಯಾರಂಟಿ ಯೋಜನೆಗಳ ಬಗ್ಗೆ ಅಪಸ್ವರ ಎತ್ತಿದರೆ ಶಿಸ್ತುಕ್ರಮ: ಡಿ.ಕೆ.ಶಿವಕುಮಾರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.