ಕಾವ್ಯದ ನಂತರವೇ ಸಿದ್ಧಾಂತಗಳ ಉಗಮ

Team Udayavani, Sep 26, 2017, 10:14 AM IST

bid-1.jpg

ಬಸವಕಲ್ಯಾಣ: ಜಗತ್ತಿನ ಜ್ಞಾನಪರಂಪರೆಗಳು ಇರುವುದು ಕಾವ್ಯದಲ್ಲಿಯೆ. ಕಾವ್ಯ ಹುಟ್ಟಿದ ನಂತರವೇ ಸಿದ್ಧಾಂತಗಳ ಉಗಮವಾಗಿದೆ ಎಂದು ಮಹಾರಾಷ್ಟ್ರದ ಸಾಂಗ್ಲಿಯ ಕವಿ ಮಧು ಬಿರಾದಾರ ಹೇಳಿದರು.

ನಗರದ ನೀಲಾಂಬಿಕಾ ಕಾಲೇಜಿನಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ನಿಂದ ಆಯೋಜಿಸಲಾಗಿದ್ದ ಆಧುನಿಕ ಕನ್ನಡ ಕಾವ್ಯದ ತಾತ್ವಿಕ ನೆಲೆಗಳು ಕುರಿತ ಉಪನ್ಯಾಸ ಹಾಗೂ ದಸರಾ ಕವಿಗೋಷ್ಠಿಯಲ್ಲಿ ಆಶಯ ನುಡಿಗಳನ್ನಾಡಿದ ಅವರು, ಕನ್ನಡ ಅಸ್ಮಿತೆಯನ್ನು ಕಟ್ಟಿದ ನೆಲ ಕಲ್ಯಾಣ. ಕನ್ನಡ ಭಾಷೆ ಸಾಹಿತ್ಯದ ಬೆಳವಣಿಗೆಯ ಸಂದರ್ಭದಲ್ಲಿ ವಚನಗಳ ಬಹುಮುಖ ದಾಖಲೆಗಳಾಗುತ್ತಿವೆ ಎಂದರು. ಬಸವಣ್ಣನ ಲೋಕ ಚಿಂತನೆ, ಅಲ್ಲಮ ಕೊಟ್ಟ ಜಾಗತಿಕ ಜ್ಞಾನ, ಅಕ್ಕಮಹಾದೇವಿಯ ಮಹಿಳಾ ಚಿಂತನೆಯ ಧೋರಣೆಗಳು ಸಾಂಸ್ಕೃತಿಕ ಬಹುತ್ವದ ಆಯಾಮಗಳ ಮೂಲಕ ವಚನಗಳು ಕನ್ನಡ ಅಸ್ಮಿತೆಯನ್ನು ಕಟ್ಟಿವೆ. ಆತ್ಮಕ್ಕೆ ಸ್ಪಂದಿಸುವ ಕಾವ್ಯ ಸಾಕಷ್ಟು ಪ್ರತಿರೋಧ, ಸಂಘರ್ಷಗಳಲ್ಲಿಯೇ ಹುಟ್ಟುತ್ತವೆ. ಮಾತು, ಘೋಷಣೆಗಳು ಕೂಡ ಕನ್ನಡ ದಲಿತ ಬಂಡಾಯ ಘಟ್ಟದಲ್ಲಿ ಕವಿತೆಗಳಾದವು ಎಂದು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿದ ಕನ್ನಡ ಪುಸ್ತಕ ಪ್ರಾಧಿಕಾರಿದ ಸದಸ್ಯೆ ಡಾ|ಜಯದೇವಿ ಗಾಯಕವಾಡ ಮಾತನಾಡಿ, ಕನ್ನಡ ನಾಡು-ನುಡಿಗೆ ಚ್ಯುತಿ ಬಂದಾಗ ಕನ್ನಡಿಗಡಿರೆಲ್ಲರೂ ಎದ್ದೇಳಬೇಕು. ಬಸವ ಸಂಸ್ಕೃತಿಯ “ಇವ ನಮ್ಮವ’ ಸಿದ್ಧಾಂತವನ್ನು ಎಲ್ಲ ಕನ್ನಡ ಸಂಘಟನೆಗಳು ಅನುಸರಿಸುವ ಮೂಲಕ ಸ್ಥಳೀಯ ಎಲ್ಲ ಬರಹಗಾರಿಗರಿಗೆ ಗೌರವಿಸಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಸುರೇಶ ಅಕ್ಕಣ್ಣ ಮಾತನಾಡಿ, ಸಾಹಿತ್ಯ ಮನುಷ್ಯ ಪ್ರಜ್ಞೆಯನ್ನು ವಿಸ್ತರಿಸುವ ಸಾಧನವಾಗಿದೆ. ಬದುಕನ್ನು ಲೋಕವನ್ನು ಅರ್ಥೈಸಿಕೊಳ್ಳುವ ಮಹಾಮಾರ್ಗವಾಗಿದೆ ಎಂದರು. ಸಾಹಿತಿ ಪಂಚಾಕ್ಷರಿ ಹಿರೇಮಠ, ಕೊಪ್ಪಳದ ಸಾಹಿತಿ ಪ್ರವೀಣ ಪಾಟೀಲ ಮಾತನಾಡಿದರು.

ದಸರಾ ಕವಿಗೋಷ್ಠಿಯಲ್ಲಿ ಡಾ| ಜಯದೇವಿ ಗಾಯಕವಾಡ, ಹಣಮಂತರಾವ್‌ ವಿಸಾಜಿ, ಪಂಚಾಕ್ಷರಿ ಹಿರೇಮಠ, ಎಂ.ಆರ್‌.ಶ್ರೀಕಾಂತ, ನಾಗೇಂದ್ರ ಬಿರಾದಾರ, ವೀರಶೆಟ್ಟಿ ಪಾಟೀಲ, ಡಾ| ಶಿವಲೀಲಾ ಮಠಪತಿ, ರೇವಣಸಿದ್ದಪ್ಪ ದೊರೆಗಳು ಕವನ ವಾಚನ ಮಾಡಿದರು.

ಡಾ| ಬಿ.ಬಿ. ಕಾಳಗಿ ಅಧ್ಯಕ್ಷತೆ ವಹಿಸಿದ್ದರು. ಪುಸ್ತಕ ಪ್ರಾಧಿಕಾರದ ಸದಸ್ಯೆ ಡಾ| ಜಯದೇವಿ ಗಾಯಕವಾಡ, ಗುವಿವಿಯಿಂದ ಡಾಕ್ಟರೇಟ್‌ ಪಡೆದ ಡಾ| ಬಸವರಾಜ ಖಂಡಾಳೆ, ಡಾ| ಶಿವಲಿಲಾ ಮಠಪತಿ ಅವರನ್ನು ಇದೇ
ವೇಳೆ ಸನ್ಮಾನಿಸಲಾಯಿತು.

ತಾಲೂಕು ಕಸಾಪ ಅಧ್ಯಕ್ಷ ರುದ್ರಮಣಿ ಮಠಪತಿ, ಉಪಾಧ್ಯಕ್ಷ ರಮೇಶ ಉಪಾಪುರೆ, ಮಾಜಿ ಅಧ್ಯಕ್ಷ ಪ್ರಭುಲಿಂಗಯ್ಯ ಟಂಕಸಾಲಿಮಠ, ರತಿಕಾಂತ ಕೋಹಿನೂರ, ಶಂಕರಕುಕ್ಕಾ ಪಾಟೀಲ, ಗಂಗಾಧರ ಸಾಲಿಮಠ, ಬಸವಣ್ಣಪ್ಪ ನೇಲೋಗಿ, ಶಿವಕುಮಾರ ಜಡಗೆ ಉಪಸ್ಥಿತರಿದ್ದರು. ಭೀಮಾಶಂಕರ ಬಿರಾದಾರ ಸ್ವಾಗತಿ ಪ್ರಾಸ್ತಾವಿಕ ಮಾತನಾಡಿದರು. ಕಾರ್ಯದರ್ಶಿ ದೇವಿಂದ್ರ ಬರಗಾಲೆ ವಂದಿಸಿದರು. ರಾಜಕುಮಾರ ಹೂಗಾರ ನಿರೂಪಿಸಿದರು.

ಟಾಪ್ ನ್ಯೂಸ್

Gundlupet-Arrest

Gundlupet: ಜಿಂಕೆ ಮಾಂಸ ಸಾಗಾಣೆ: ಐವರ ಬಂಧಿಸಿದ ಅರಣ್ಯಾಧಿಕಾರಿಗಳು

amit Shah (2)

Rahul Gandhi ಭರವಸೆಗಳನ್ನು ನೀಡುತ್ತಾರೆ ಮತ್ತು ವಿದೇಶಕ್ಕೆ ಹಾರುತ್ತಾರೆ: ಶಾ ವಾಗ್ದಾಳಿ

ICC: ಬಿಸಿಸಿಐನ ಆಕ್ಷೇಪದ ನಂತರ ಚಾಂಪಿಯನ್ಸ್ ಟ್ರೋಫಿ ಪ್ರವಾಸದ ಸ್ಥಳ ಪರಿಷ್ಕರಣೆ

ICC: ಬಿಸಿಸಿಐನ ಆಕ್ಷೇಪದ ನಂತರ ಚಾಂಪಿಯನ್ಸ್ ಟ್ರೋಫಿ ಪ್ರವಾಸದ ಸ್ಥಳ ಪರಿಷ್ಕರಣೆ

renukaacharya

BJP;ಯತ್ನಾಳ್ ರನ್ನು ತಡೆಯದಿದ್ದರೆ ನಾನೂ ಪ್ರತ್ಯೇಕ ಪಾದಯಾತ್ರೆ ಮಾಡುತ್ತೇನೆ:ರೇಣುಕಾಚಾರ್ಯ

Team India: ದ.ಆಫ್ರಿಕಾ ವಿರುದ್ದದ ಗೆಲುವಿನೊಂದಿಗೆ ಪಾಕ್‌ ದಾಖಲೆ ಮುರಿದ ಟೀಂ ಇಂಡಿಯಾ

Team India: ದ.ಆಫ್ರಿಕಾ ವಿರುದ್ದದ ಗೆಲುವಿನೊಂದಿಗೆ ಪಾಕ್‌ ದಾಖಲೆ ಮುರಿದ ಟೀಂ ಇಂಡಿಯಾ

BGT: Another shock for Team India; After Virat and Rahul, another batsman is injured

BGT: ಟೀಂ ಇಂಡಿಯಾಗೆ ಮತ್ತೆ ಆಘಾತ; ವಿರಾಟ್‌, ರಾಹುಲ್‌ ಬಳಿಕ ಮತ್ತೊಬ್ಬ ಬ್ಯಾಟರ್‌ ಗೆ ಗಾಯ

1-ragaaa

PM Modi ಅವರು ಜೋ ಬೈಡೆನ್ ಅವರಂತೆ ನೆನಪಿನ ಶಕ್ತಿ ಕಳೆದುಕೊಳ್ಳುತ್ತಿದ್ದಾರೆ: ರಾಹುಲ್ ಗಾಂಧಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bidar: ವಾಂತಿ-ಭೇದಿ… ವಸತಿ ಶಾಲೆಯ 50ಕ್ಕೂ ಹೆಚ್ಚು ಮಕ್ಕಳು ಆಸ್ಪತ್ರೆಗೆ ದಾಖಲು

Bidar: ವಾಂತಿ-ಭೇದಿ… ವಸತಿ ಶಾಲೆಯ 50ಕ್ಕೂ ಹೆಚ್ಚು ಮಕ್ಕಳು ಆಸ್ಪತ್ರೆಗೆ ದಾಖಲು

Lokayukta Raid: ಜಿಲ್ಲಾ ತರಬೇತಿ‌ ಕೇಂದ್ರದ‌ ಅಧಿಕಾರಿ‌ ನಿವಾಸದಲ್ಲಿ ದಾಖಲೆಗಳ ಪರಿಶೀಲನೆ

Lokayukta Raid: ಜಿಲ್ಲಾ ತರಬೇತಿ‌ ಕೇಂದ್ರದ‌ ಅಧಿಕಾರಿ‌ ನಿವಾಸದಲ್ಲಿ ದಾಖಲೆಗಳ ಪರಿಶೀಲನೆ

Waqf Issue: ಬೀದರ್‌ ರೈತ ಸಂಘ, ಬಿಜೆಪಿಯಿಂದ ಬೃಹತ್‌ ಪ್ರತಿಭಟನೆ

Waqf Issue: ಬೀದರ್‌ ರೈತ ಸಂಘ, ಬಿಜೆಪಿಯಿಂದ ಬೃಹತ್‌ ಪ್ರತಿಭಟನೆ

Bidar; ಕಲಾ ಬಿದರಿ ಸಂಗಮ-2024ಕ್ಕೆ ಚಾಲನೆ

Bidar; ಕಲಾ ಬಿದರಿ ಸಂಗಮ-2024ಕ್ಕೆ ಚಾಲನೆ

Bidar-Solha-kamb

Waqf Property: ಬೀದರ್‌ನ ಬಹುಮನಿ ಕೋಟೆಗೂ ವಕ್ಫ್ ಮೊಹರು!

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

Udupi: ಗಾಂಜಾ ಮಾರಾಟ ಮಾಡುತ್ತಿದ್ದ ಮೂವರ ಬಂಧನ; 8 ಲಕ್ಷ ಮೌಲ್ಯದ ಗಾಂಜಾ ವಶಕ್ಕೆ

Udupi: ಗಾಂಜಾ ಮಾರಾಟ ಮಾಡುತ್ತಿದ್ದ ಮೂವರ ಬಂಧನ; 8 ಲಕ್ಷ ಮೌಲ್ಯದ ಗಾಂಜಾ ವಶಕ್ಕೆ

Gundlupet-Arrest

Gundlupet: ಜಿಂಕೆ ಮಾಂಸ ಸಾಗಾಣೆ: ಐವರ ಬಂಧಿಸಿದ ಅರಣ್ಯಾಧಿಕಾರಿಗಳು

amit Shah (2)

Rahul Gandhi ಭರವಸೆಗಳನ್ನು ನೀಡುತ್ತಾರೆ ಮತ್ತು ವಿದೇಶಕ್ಕೆ ಹಾರುತ್ತಾರೆ: ಶಾ ವಾಗ್ದಾಳಿ

ICC: ಬಿಸಿಸಿಐನ ಆಕ್ಷೇಪದ ನಂತರ ಚಾಂಪಿಯನ್ಸ್ ಟ್ರೋಫಿ ಪ್ರವಾಸದ ಸ್ಥಳ ಪರಿಷ್ಕರಣೆ

ICC: ಬಿಸಿಸಿಐನ ಆಕ್ಷೇಪದ ನಂತರ ಚಾಂಪಿಯನ್ಸ್ ಟ್ರೋಫಿ ಪ್ರವಾಸದ ಸ್ಥಳ ಪರಿಷ್ಕರಣೆ

renukaacharya

BJP;ಯತ್ನಾಳ್ ರನ್ನು ತಡೆಯದಿದ್ದರೆ ನಾನೂ ಪ್ರತ್ಯೇಕ ಪಾದಯಾತ್ರೆ ಮಾಡುತ್ತೇನೆ:ರೇಣುಕಾಚಾರ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.