ನಗ ಕಳವು ಪ್ರಕರಣದ ಪ್ರಮುಖ ಆರೋಪಿ ಸೆರೆ


Team Udayavani, Sep 26, 2017, 11:01 AM IST

26-STATE-32.jpg

ಪುತ್ತೂರು: ಪರ್ಲಡ್ಕದ ಮನೆಯೊಂದರಿಂದ ಅಪಾರ ಪ್ರಮಾಣದ ಚಿನ್ನಾಭರಣ ಕಳವು ಮಾಡಿದ್ದ ಪ್ರಕರಣದ ಪ್ರಮುಖ ಆರೋಪಿ ಯೊಬ್ಬನನ್ನು ಬಂಧಿಸುವಲ್ಲಿ ನಗರ ಪೊಲೀಸರು ಯಶಸ್ವಿಯಾಗಿದ್ದಾರೆ.

ಸುಳ್ಯ ತಾಲೂಕು ಜಾಲೂರಿನ ಸೋಣಂಗೇರಿ ನಿವಾಸಿ ಮಹಮ್ಮದ್‌ ಆಶಿಕ್‌ (26) ಬಂಧಿತ. ಕಳೆದ ಜೂನ್‌ನಲ್ಲಿ ಪರ್ಲಡ್ಕದ ಮನೆಯಲ್ಲಿ ನಡೆದ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಈತನನ್ನು ಬಂಧಿಸಲಾಗಿದೆ. ಈತನಿಂದ ಭಾಗಶಃ ಚಿನ್ನಾಭರಣ ಮತ್ತು ಕೆಲವು ಸೊತ್ತುಗಳನ್ನು ವಶಕ್ಕೆ ತೆಗೆದು ಕೊಳ್ಳಲಾಗಿದೆ. ಭಾನುವಾರ ಮಧ್ಯಾಹ್ನ ಪುತ್ತೂರು ನಗರದಲ್ಲಿ ಆರೋಪಿಯನ್ನು ಸೆರೆ ಹಿಡಿಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಸೋಮವಾರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಆರೋಪಿಯನ್ನು ಮೂರು ದಿನಗಳ  ಕಸ್ಟಡಿಗೆ ನೀಡಲಾಗಿದೆ. ಈತ ಬೇರೆ ಪ್ರಕರಣಗಳಲ್ಲಿ  ಭಾಗಿಯಾಗಿರುವ ಬಗ್ಗೆಯೂ ತನಿಖೆ ನಡೆಯುತ್ತಿದೆ.

ಪ್ರಮುಖ ಆರೋಪಿಯಾಗಿರುವ ಮಹಮ್ಮದ್‌ ಆಶಿಕ್‌ನಿಂದ ಸುಮಾರು 60 ಸಾವಿರ ರೂ. ಮೌಲ್ಯದ ಒಂದು ವಾಚ್‌ ಹಾಗೂ ಕಳವಿಗೆ ಬಳಸಿದ್ದ ಡಸ್ಟರ್‌ ಕಾರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಈತನ ಬಳಿಯಿಂದ ಭಾಗಶಃ ಚಿನ್ನವನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಉಳಿದಂತೆ ಇತರ ಆರೋಪಿಗಳ ಬಂಧನದೊಂದಿಗೆ ಚಿನ್ನ ವಶವಾಗುವ ಸಂಭವ ಇದೆ.

ಪೊಲೀಸ್‌ ನಿರೀಕ್ಷಕ ಮಹೇಶ್‌ ಪ್ರಸಾದ್‌ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ. ಪ್ರೊಬೆಶನರಿ ಎಸ್‌ಐ ರವಿ, ಎಎಸ್‌ಐ ಚಿದಾನಂದ ರೈ, ಹೆಡ್‌ಕಾನ್‌ಸ್ಟೆಬಲ್‌ಗ‌ಳಾದ ದಾಮೋದರ್‌, ಕೃಷ್ಣಪ್ಪ, ಸ್ಕರಿಯ, ಕಾನ್‌ಸ್ಟೆಬಲ್‌ಗ‌ಳಾದ ಪ್ರಶಾಂತ್‌ ಶೆಟ್ಟಿ, ಪ್ರಶಾಂತ್‌ ರೈ, ಪ್ರಸನ್ನ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಘಟನೆ: 2017ರ ಜೂನ್‌ 26 ರಂದು ಪರ್ಲಡ್ಕದ ಬೈಪಾಸ್‌ ರಸ್ತೆಯ ಉಮ್ಮರ್‌ ಫಾರೂಕ್‌ ಅವರ ಮನೆಯಲ್ಲಿ ಕಳ್ಳತನ ನಡೆದಿತ್ತು. ಸುಮಾರು 318 ಗ್ರಾಂ ಚಿನ್ನಾಭರಣ ಕಳವು ಮಾಡಲಾಗಿತ್ತು. ಉಮ್ಮರ್‌ ಫಾರೂಕ್‌ ವಿದೇಶದಲ್ಲಿದ್ದು, ಇವರ ಪತ್ನಿ ಅಫ್ರಿನಾ, ರಂಝಾನ್‌ ಹಿನ್ನೆಲೆಯಲ್ಲಿ ಮಧ್ಯಾಹ್ನ ಸಂಬಂಧಿಕರ ಮನೆಗೆ ತೆರಳಿದ್ದರು. ಸಂಜೆ ವೇಳೆ ಮನೆಗೆ ಬರುತ್ತಿದ್ದಂತೆ ಕಳ್ಳತನ ಬೆಳಕಿಗೆ ಬಂದಿತ್ತು.

ಮನೆಯ ಹಿಂಬಾಗಿಲು ಒಡೆದು ಕಳ್ಳರು ಪ್ರವೇಶಿಸಿದ್ದರು. ಮನೆಯ ಕಪಾಟಿನಲ್ಲಿದ್ದ ಚಿನ್ನಾಭರಣ ದೋಚಿಕೊಂಡು ಪರಾರಿಯಾಗಿದ್ದರು. ಮಧ್ಯಾಹ್ನದಿಂದ ಸಂಜೆ ನಡುವೆ ಕಳ್ಳತನ ನಡೆಸಲಾಗಿತ್ತು. ಈ ಬಗ್ಗೆ ಅಫ್ರಿನಾ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ತನಿಖೆ ಕೈಗೆತ್ತಿಕೊಂಡ ಪೊಲೀಸರು, ಓರ್ವ ಆರೋಪಿಯನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನುಳಿದಂತೆ ಮೂವರು ತಲೆ ಮರೆಸಿಕೊಂಡಿದ್ದಾರೆ. ಇವರನ್ನು ಕಾಸರಗೋಡಿನ ಉಪ್ಪಳದ ಸಯ್ಯದ್‌ ಜಂಶಿದ್‌, ಬಾಯಾರುಪದವಿ ನಿವಾಸಿ ಇಬ್ರಾಹಿಂ ಮುಜಾಮಿಲ್‌ ಹಾಗೂ ಹಂಝ ಎಂದು ಗುರುತಿಸಲಾಗಿದೆ. ಇವರಿಗಾಗಿ ಶೋಧ ಕಾರ್ಯ ನಡೆಯುತ್ತಿದೆ.

ಟಾಪ್ ನ್ಯೂಸ್

ಬಳ್ಳಾರಿಯಲ್ಲೇ ಏಕೆ 88ನೇ ಕನ್ನಡ ಸಾಹಿತ್ಯ ಸಮ್ಮೇಳನ?

ಬಳ್ಳಾರಿಯಲ್ಲೇ ಏಕೆ 88ನೇ ಕನ್ನಡ ಸಾಹಿತ್ಯ ಸಮ್ಮೇಳನ?

1-sambhal

Sambhal; ದೇಗುಲ ಬಳಿಕ 150 ವರ್ಷ ಹಳೆ ಬಾವಿ ಪತ್ತೆ

ರಾಜ್ಯದ ಅರಣ್ಯ ವಿಸ್ತರಣೆ, ಸಂರಕ್ಷಣೆಗೆ ವೇಗ ಸಿಗಲಿ

ರಾಜ್ಯದ ಅರಣ್ಯ ವಿಸ್ತರಣೆ, ಸಂರಕ್ಷಣೆಗೆ ವೇಗ ಸಿಗಲಿ

Mulki-kambla

Mulki: ಕಂಬಳದಿಂದ ಕೃಷಿ, ಧಾರ್ಮಿಕ ನಂಬಿಕೆ ವೃದ್ಧಿ: ನ್ಯಾ. ಎನ್‌. ಸಂತೋಷ್‌ ಹೆಗ್ಡೆ

udupi-Bar-Asso

Udupi: ಸುಪ್ರೀಂ, ಹೈಕೋರ್ಟ್‌ಗಳ ತೀರ್ಪು ಆನ್‌ಲೈನ್‌ನಲ್ಲಿ ಲಭ್ಯ: ನ್ಯಾ.ಸೂರಜ್‌

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

SASTHANA-TOLL

Kota: ಸಾಸ್ತಾನ ಟೋಲ್‌: ಡಿ.30ರ ತನಕ ಯಥಾಸ್ಥಿತಿ ಮುಂದುವರಿಕೆಗೆ ಸೂಚನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Car-Palti

Sulya: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

Accident-logo

Putturu: ಬೈಕ್‌-ಪಿಕಪ್‌ ಢಿಕ್ಕಿ: ಇಬ್ಬರು ಸವಾರರಿಗೆ ಗಂಭೀರ ಗಾಯ

Arrest

Bantwala: ನಾವೂರು: ಅತ್ಯಾಚಾರ; ಆರೋಪಿಗೆ ನ್ಯಾಯಾಂಗ ಬಂಧನ

Perla-fire

Disaster: ಪೆರ್ಲದಲ್ಲಿ ಭಾರೀ ಬೆಂಕಿ ದುರಂತ; ಐದು ಅಂಗಡಿಗಳು ಸಂಪೂರ್ಣ ಭಸ್ಮ

death

Puttur: ಎಲೆಕ್ಟ್ರಿಕ್‌ ಆಟೋ ರಿಕ್ಷಾ ಪಲ್ಟಿ; ಚಾಲಕ ಮೃತ್ಯು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

ಬಳ್ಳಾರಿಯಲ್ಲೇ ಏಕೆ 88ನೇ ಕನ್ನಡ ಸಾಹಿತ್ಯ ಸಮ್ಮೇಳನ?

ಬಳ್ಳಾರಿಯಲ್ಲೇ ಏಕೆ 88ನೇ ಕನ್ನಡ ಸಾಹಿತ್ಯ ಸಮ್ಮೇಳನ?

1-ru

PF fraud; ಆರೋಪಿ ಕಂಪೆನಿಗಳಿಗೆ ನಾನು ನಿರ್ದೇಶಕನಲ್ಲ: ರಾಬಿನ್‌ ಉತ್ತಪ್ಪ

1-sambhal

Sambhal; ದೇಗುಲ ಬಳಿಕ 150 ವರ್ಷ ಹಳೆ ಬಾವಿ ಪತ್ತೆ

1-reeeee

Vijay Hazare Trophy Cricket: ಇಂದು ಕರ್ನಾಟಕಕ್ಕೆ ಪುದುಚೇರಿ ಎದುರಾಳಿ

ರಾಜ್ಯದ ಅರಣ್ಯ ವಿಸ್ತರಣೆ, ಸಂರಕ್ಷಣೆಗೆ ವೇಗ ಸಿಗಲಿ

ರಾಜ್ಯದ ಅರಣ್ಯ ವಿಸ್ತರಣೆ, ಸಂರಕ್ಷಣೆಗೆ ವೇಗ ಸಿಗಲಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.