ಮತ್ತೆ ಪ್ರೇಮ ಪರ್ವ
Team Udayavani, Sep 26, 2017, 12:51 PM IST
ಅದೊಂದು ದಿನ ನಿರ್ಮಾಪಕ ಶ್ರೀರಾಮ್ ಫೋನ್ ಮಾಡಿದ್ದರಂತೆ. ತೆಲುಗಿನ “ಸೋಗ್ಗಾಡೇ ಚಿನ್ನಿನಾಯನ’ ಎಂಬ ಚಿತ್ರವನ್ನು ಕನ್ನಡಕ್ಕೆ ರೀಮೇಕ್ ಮಾಡುತ್ತಿದ್ದು, ಚಿತ್ರದಲ್ಲಿ ಒಂದು ಪಾತ್ರ ಮಾಡಬೇಕು ಎಂದರಂತೆ. ಪ್ರೇಮಾ ಚಿತ್ರ ನೋಡಿದ್ದಾರೆ. ಕಥೆ ಇಷ್ಟವಾಗಿದೆ. ತಕ್ಷಣ “ಐ ವಿಲ್ ಡೂ ಇಟ್’ ಎಂದಿದ್ದಾರೆ. ಅಲ್ಲಿಗೆ ಪ್ರೇಮ ಮತ್ತೆ ವಾಪಸ್ಸು ಬಂದಿದ್ದಾರೆ. ಅಷ್ಟೇ ಅಲ್ಲ, “ಉಪೇಂದ್ರ’ ಚಿತ್ರದ ನಂತರ, ಈ ಚಿತ್ರದಲ್ಲಿ ಮತ್ತೆ ಉಪೇಂದ್ರ ಅವರೊಂದಿಗೆ ನಟಿಸುತ್ತಿದ್ದಾರೆ. ಇನ್ನೇನು “ಉಪೇಂದ್ರ ಮತ್ತೆ ಬಾ’ ಚಿತ್ರದ ಈ ತಿಂಗಳು ಬಿಡುಗಡೆಯಾಗಲಿದೆ. ಈ ಮೂಲಕ ಪ್ರೇಮ ಬಹಳ ದಿನಗಳ ನಂತರ ಮತ್ತೆ ಚಿತ್ರರಂಗಕ್ಕೆ ವಾಪಸ್ಸು ಬಂದಿದ್ದಾರೆ. ಇಷ್ಟು ದಿನ ಪ್ರೇಮ ಯಾಕೆ ಸಿನಿಮಾ ಮಾಡಲಿಲ್ಲ? ಈ ಪ್ರಶ್ನೆ ಸಹಜ. ಅದೇ ಪ್ರಶ್ನೆಯನ್ನು ಅವರ ಮುಂದಿಟ್ಟಾಗ …
“ಸಿನಿಮಾ ಮಾಡದಿರಬಹುದು. ಆದರೆ, ಬಹಳ ಬಿಝಿ ಇದ್ದೆ’ ಥಟ್ಟಂತ ಹೇಳಿದರು ಪ್ರೇಮ.
ಅವರು ಮಾತಿಗೆ ಸಿಕ್ಕಿ ಅದ್ಯಾವ ಕಾಲವಾಗಿತ್ತೋ ನೆನಪಿಲ್ಲ. ಅದೊಂದು ದಿನ “ಫಸ್ಟ್ ಲವ್’ ಎಂಬ ಚಿತ್ರದ ಟ್ರೇಲರ್ ಬಿಡುಗಡೆ ಮಾಡುವುದಕ್ಕೆ ಚಾಮುಂಡೇಶ್ವರಿ ಸ್ಟುಡಿಯೋಗೆ ಪ್ರೇಮ ಬಂದಿದ್ದರು. ಟ್ರೇಲರ್ ಬಿಡುಗಡೆ ಮಾಡಿ, ಚಿತ್ರಕ್ಕೆ ಮತ್ತು ಚಿತ್ರತಂಡಕ್ಕೆ ಶುಭ ಕೋರಿದರು. ಎಲ್ಲರಿಗೂ ಒಳ್ಳೆಯದಾಗಲಿ ಎಂದು ಹಾರೈಸಿ ವೇದಿಕೆ ಇಳಿದರು. ಪ್ರೇಮ ಮಾತಾಡಿದ್ದು ಆಗಲೇ. ಮೊದಲೇ ಹೇಳಿದಂತೆ ಅವರು ಮಾತಿಗೆ ಸಿಕ್ಕಿ ಬಹಳ ದಿನಗಳಾಗಿತ್ತು. ಈ ಗ್ಯಾಪ್ನಲ್ಲಿ ಅವರು ಏನು ಮಾಡುತ್ತಿದ್ದರು, ಯಾಕೆ ಚಿತ್ರರಂಗದಿಂದ ದೂರವಿದ್ದರು, ಅವರಿಗೆ ಅವಕಾಶಗಳು ಬರುತಿತ್ತಾ …? ಹೀಗೆ ಅವರನ್ನು ಕೇಳ್ಳೋಕೆ ಹಲವಾರು ಪ್ರಶ್ನೆಗಳು ಇದ್ದವು. ಸರಿ ಒಂದೊಂದನ್ನೇ ಅವರೆದುರು ಇಡಲಾಯಿತು.
“ಈ ಗ್ಯಾಪ್ನಲ್ಲಿ ನಾನು ಬಹಳ ಕಲಿತಿದ್ದೀನಿ. ನಿಜ ಹೇಳಬೇಕೆಂದರೆ, ನಾನು ಸಿನಿಮಾ ಮಾಡದಿದ್ದರೂ ಬಹಳ ಬಿಝಿಯಾಗಿದ್ದೆ. ಹಿಂದೊಮ್ಮೆ ನಾನು ಸತತವಾಗಿ ಚಿತ್ರಗಳಲ್ಲಿ ನಟಿಸುವಾಗ, ತಂದೆ-ತಾಯಿ ಅವರೊಂದಿಗೆ ಹೆಚ್ಚು ಸಮಯ ಇರೋಕೆ, ಅವರ ಬಗ್ಗೆ ಗಮನ ಕೊಡೋಕೆ ಆಗುತ್ತಿರಲಿಲ್ಲ. ಈಗ ಅವರಿಗಾಗಿ ಟೈಮ್ ಕೊಡ್ತಿದ್ದೀನಿ. ಈ ವಯಸ್ಸಲ್ಲಿ ಅವರು ಸಂತೋಷವಾಗಿರಬೇಕು ಅಂತ ನನ್ನ ಆಸೆ. ಅವರ ಜೊತೆಗೆ ನಾನೂ ಸಂತೋಷವಾಗಿದ್ದೀನಿ’ ಎನ್ನುತ್ತಾರೆ ಪ್ರೇಮ.
ಒಂದು ಬ್ರೇಕ್ ಬೇಕು ಅಂತ ಪ್ರೇಮಗೆ ಅನಿಸುತಿತ್ತಂತೆ. ಅದಕ್ಕೆ ಕಾರಣವೂ ಇದೆ.
“ನಂಗೆ ಒಂದೇ ತರಹದ ಚಿತ್ರಗಳನ್ನ, ಪಾತ್ರಗಳನ್ನ ಮಾಡೋಕೆ ಇಷ್ಟವಿಲ್ಲ. ವಿಭಿನ್ನವಾದ ಸಿನಿಮಾಗಳು ಮಾಡಬೇಕು ಅಂತ ಆಸೆ. ಆಗ ನನಗೆ ಅಂತಹ ಪಾತ್ರಗಳೇ ಸಿಗೋದು; ಇಷ್ಟವಾಗೋದು. ಅದಕ್ಕೇ ಕಂಟಿನ್ಯೂಸ್ ಆಗಿ ಮಾಡುತ್ತಿದ್ದೆ. ಈಗಲೂ ವಿಭಿನ್ನ ಪಾತ್ರಗಳು ಬಂದರೆ, ಅಭಿನಯಿಸೋಕೆ ನಾನು ಸಿದ್ಧ. ಜನ ದುಡ್ಡು ಕೊಟ್ಟು ಚಿತ್ರಮಂದಿರಕ್ಕೆ ಬಂದಾಗ, ಅವರಿಗೂ ಏನೋ ನಿರೀಕ್ಷೆ ಇರುತ್ತೆ. ಅವರ ಆಸೆಗೆ ಭಂಗ ತರೋಕೆ ನನಗೆ ಇಷ್ಟವಿಲ್ಲ. ಮಾಡಿದರೆ ವಿಭಿನ್ನವಾಗಿ ಏನಾದರೂ ಮಾಡಬೇಕು. ಅದೇ ನನ್ನ ಆಸೆ. ಈಗ ನೋಡಿ ಹಿಂದಿಯಲ್ಲಿ ಕಾಜೋಲ್, ಶ್ರೀದೇವಿ ಅವರೆಲ್ಲಾ ಎಷ್ಟು ವಿಭಿನ್ನವಾದ ಪಾತ್ರಗಳನ್ನು ಆಯ್ಕೆ ಮಾಡುತ್ತಿದ್ದಾರೆ. ನನಗೂ ಅದೇ ತರಹದ ಆಸೆ ಇದೆ. ಒಳ್ಳೆಯ ಪಾತ್ರ ಮಾಡಬೇಕು, ಆ ಪಾತ್ರಕ್ಕೆ ಜೀವ ತುಂಬಬೇಕು ಅಂತ. ಅಂತಹ ಪಾತ್ರ ಬಂದರೆ ಖಂಡಿತಾ ಮಾಡುತ್ತೀನಿ’ ಎನ್ನುವುದು ಅವರ ಅಭಿಪ್ರಾಯ.
ಒಂದು ಪಾತ್ರ ಬರೆದು, ಅದನ್ನು ಯಾರಿಂದ ಮಾಡಿಸಬೇಕು ಅಂತ ಯೋಚಿಸುವುದಕ್ಕಿಂತ, ಪಾತ್ರ ಬರೆಯುವಾಗಲೇ ಅದು ಇಂಥವರೇ ಮಾಡಬೇಕು ಎಂದು ನಿರ್ದೇಶಕರಿಗೆ ಗೊತ್ತಿರಬೇಕು ಎನ್ನುತ್ತಾರೆ ಪ್ರೇಮ.
“ಐ ನೀಡ್ ಇಂಟಲೆಕುಯಲ್ ಡೈರೆಕ್ಟರ್- ಸಾಧಾರಣ ನಿರ್ದೇಶಕರು ಬೇಡ. ಕಥೆ ಬರೆಯುವಾಗಲೇ, ಈ ಪಾತ್ರವನ್ನ ಪ್ರೇಮ ಅವರೇ ಮಾಡಿದರೆ ಚೆನ್ನ ಅಂತ ಗೊತ್ತಾಗಬೇಕು. ಸುನೀಲ್ ಕುಮಾರ್ ದೇಸಾಯಿ, ಉಪೇಂದ್ರ ಎಲ್ಲರೂ ಪಾತ್ರ ಬರೆಯುವಾಗಲೇ, ಈ ಪಾತ್ರವನ್ನು ಮಾಡಬೇಕು ಎಂದು ನಿರ್ಧರಿಸೋರು. ಅವರಿಗೆ ನಾನು ಪಾತ್ರ ಮಾಡುತ್ತೀನಿ ಎಂಬ ನಂಬಿಕೆ ಇತ್ತು. ಅದೇ ತರಹದ ನಂಬಿಕೆ ಬೇರೆ ನಿರ್ದೇಶಕರಿಗೂ ಇರಬೇಕು. ಉದಾಹರಣೆಗೆ- “ಶಿಶಿರ’ ಕಥೆ ತಗೊಂಡು ಮಂಜು ಸ್ವರಾಜ್ ಬಂದಾಗ, “ನಾನು ಮಾಡಲ್ಲ, ನನಗೆ ಸೆಟ್ ಆಗಲ್ಲ, ಇದು ಹೋಗಲ್ಲ …’ ಅಂತ ಹೇಳಿದ್ದೆ. ಆದರೆ, ಅವರು ಬಿಡಲಿಲ್ಲ. 10 ಸಾರಿ ಬಂದು ಕನ್ವಿನ್ಸ್ ಮಾಡೋಕೆ ಪ್ರಯತ್ನಪಟ್ಟರು. ಅವರಿಗೆ ನಿರಾಶೆ ಮಾಡುವುದಕ್ಕೆ ನನಗೆ ಇಷ್ಟವಿರಲಿಲ್ಲ’ ಹಾಗಾಗಿ ಒಪ್ಪಿಕೊಂಡೆ ಎನ್ನುತ್ತಾರೆ ಪ್ರೇಮ.
ಹಾಗಂತ ದೊಡ್ಡ ನಿರ್ದೇಶಕರ ಚಿತ್ರದಲ್ಲೇ ನಟಿಸಬೇಕು ಎಂಬ ಆಸೆ ಇಲ್ಲ ಎನ್ನುವುದು ಪ್ರೇಮ ಅವರ ಮಾತಿನ ಅರ್ಥ.
“ಇಲ್ಲಿ ದೊಡ್ಡವರು, ಚಿಕ್ಕವರು ಎಂಬ ಪ್ರಶ್ನೆ ಬರಲ್ಲ. ಸಿನಿಮಾ ಅನ್ನೋದು ಯಾರು ಬೇಕಾದರೂ ಮಾಡಬಹುದು. ಆದರೆ, ಒಂದೊಳ್ಳೆಯ ಚಿತ್ರಕ್ಕೆ ಟೇಸ್ಟು, ಪ್ಯಾಶನ್ ಎಲ್ಲವೂ ಬೇಕು. ಬರೆಯುವಾಗಲೇ ಏನಾದರೂ ವಿಭಿನ್ನವಾಗಿ ಬರೆದಿರಬೇಕು ಮತ್ತು ಪಾತ್ರ ಕೇಳುತ್ತಿದ್ದಂತೆ, ಇವರೇನೋ ವಿಶೇಷವಾಗಿ ಬರೆದಿದ್ದಾರೆ ಅಂತ ನಮಗೂ ಅನಿಸಬೇಕು. ಅದು ಆಗ್ತಿಲ್ಲ. ಎಷ್ಟೋ ಬಾರಿ ಕಥೆ ಕೇಳುವಾಗಲೇ ಗೊತ್ತಾಗಿಬಿಡುತ್ತದೆ. ಆಗ ನಿರಾಕರಿಸದೆ ಬೇರೆ ದಾರಿಯೇ ಇಲ್ಲ. ಆ ತರಹದ ಅದೆಷ್ಟು ಚಿತ್ರಗಳನ್ನು ನಿರಾಕರಿಸಿದ್ದೀನಿ ಗೊತ್ತಾ?’ ಎಂದು ಪ್ರಶ್ನಿಸಿದರು ಪ್ರೇಮ.
ಅದಕ್ಕೆ ಉತ್ತರವಾಗಿ ಅವರೇ ಮಾತು ಮುಂದುವರೆಸಿದರು-
“ಯಾವುದೋ ಕಥೆ ಒಪ್ಪಿಕೊಂಡು, ನಾನು ಈಗಲೂ ಬಿಝಿಯಾಗಬಹುದು. ಅದು ದೊಡ್ಡ ವಿಷಯವೇ ಅಲ್ಲ. ಆದರೆ, ನನಗೆ ಅದು ಇಷ್ಟವಿಲ್ಲ. ವರ್ಷಕ್ಕೆ ಒಂದೇ ಚಿತ್ರ ಮಾಡಿದರೂ, ಒಂದೇ ಕಥೆ ಒಪ್ಪಿದರೂ, ಅದು ಚೆನ್ನಾಗಿರಬೇಕು ಮತ್ತು ತೃಪ್ತಿ ಕೊಡಬೇಕು ಎಂದು ಬಯಸುವವಳು ನಾನು. ಅಮೀರ್ ಖಾನ್ ಎರಡು ವರ್ಷಕ್ಕೊಂದು ಚಿತ್ರ ಮಾಡಿದರೂ, ತಮಗೆ ಖುಷಿಯಾಗುವ ಮತ್ತು ತೃಪ್ತಿಯಾಗುವ ಪಾತ್ರಗಳನ್ನೇ ಯಾಕೆ ಮಾಡುತ್ತಾರೆ. ಎರಡು ಮಕ್ಕಳ ತಾಯಿಯಾಗಿದ್ದರೂ ಕಾಜೋಲ್ ಹೇಗೆ ವಿಭಿನ್ನ ಚಿತ್ರಗಳನ್ನು ಮಾಡುತ್ತಾರೆ? ಇಲ್ಲಿ ಬರವಣಿಗೆ ಮುಖ್ಯ. ಅವರಿಗೋಸ್ಕರ ಪಾತ್ರ ಬರೆಯುವವರು ಇದ್ದಾರೆ… ನಮ್ಮಲ್ಲಿ ಯಾಕೆ ಅದು ಸಾಧ್ಯವಿಲ್ಲ. ವಿಭಿನ್ನ ಅಂದರೆ ಯಾರೂ ಮಾಡದ, ಯಾರೂ ಬರೆಯದ ಪಾತ್ರವನ್ನು ಮಾಡಬೇಕು ಅಂತ ನಾನು ಹೇಳುತ್ತಿಲ್ಲ. ಒಂದು ರೇಂಜ್ಗಾದರೂ ವಿಭಿನ್ನತೆ ಇರಬೇಕಲ್ಲವಾ? ನನಗೇನೂ ಸಮಸ್ಯೆ ಇಲ್ಲ. ಒಳ್ಳೆಯ ಪಾತ್ರಕ್ಕೆ ಕಾಯುತ್ತೀನಿ. ಬೇಕಾದರೆ, ಸುಮ್ಮನೆ ಹೀಗೆ ಕೂತಿರ್ತಿನಿ. ಆದರೆ, ಯಾವುದೋ ಒಂದು ಪಾತ್ರ ಆದರೆ ಸಾಕು ಅಂತ ಪಾತ್ರ ಮಾಡುವುದಿಲ್ಲ; ಒಪ್ಪಿಕೊಳ್ಳುವುದಿಲ್ಲ’ ಎಂದು ಸ್ಪಷ್ಟಪಡಿಸಿ ಹೊರಟರು ಪ್ರೇಮ.
ಬರಹ: ಚೇತನ್; ಚಿತ್ರಗಳು: ಮನು ಮತ್ತು ಸಂಗ್ರಹ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sandalwood: ಯಾರೋ ನಾ ಕಾಣೆ, ಚಂದಾಗೌಳೆ ಶಾಣೆ..: ಕಟ್ಲೆ ಹಾಡು ಬಂತು
Viral Photo: ಬಾಲಿವುಡ್ ನಟ ಆಮಿರ್ ಖಾನ್ ಭೇಟಿಯಾದ ಕಿಚ್ಚ ಸುದೀಪ್; ಫ್ಯಾನ್ಸ್ ಥ್ರಿಲ್
Renukaswamy Case: ದರ್ಶನ್ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ
ZEBRA Movie: ಜೀಬ್ರಾ ಮೇಲೆ ಡಾಲಿ ಕಣ್ಣು
Drone Prathap: ಸಿನಿಮಾರಂಗಕ್ಕೆ ಡ್ರೋನ್ ಪ್ರತಾಪ್ ಎಂಟ್ರಿ; ಮೊದಲ ಚಿತ್ರದಲ್ಲೇ ಹೀರೋ
MUST WATCH
ಹೊಸ ಸೇರ್ಪಡೆ
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.