6 ತಿಂಗಳ ಅಂದಾಜು ಬಾಳ್ವೆಯ ಮಂಗಳಾಯನಕ್ಕೆ 3 ವರ್ಷ ಪೂರ್ಣ
Team Udayavani, Sep 26, 2017, 4:03 PM IST
ಹೊಸದಿಲ್ಲಿ : ಮಂಗಳ ಗ್ರಹ ಅನ್ವೇಷಣೆಗಾಗಿ 2014ರ ಸೆ.24ರಂದು ಉಡಾವಣೆಗೊಂಡಿದ್ದ ಮತ್ತು ಕೇವಲ ಆರು ತಿಂಗಳ ಜೀವಿತಾವಾಧಿಯನ್ನು ಅಂದಾಜಿಸಲಾಗಿದ್ದ, ಅತ್ಯಂತ ಕಡಿಮೆ ವೆಚ್ಚದ, ಮಂಗಳಾಯನ ಬಾಹ್ಯಾಕಾಶ ನೌಕೆಯು ಇದೀಗ ಪೂರ್ತಿ ಮೂರು ವರ್ಷಗಳನ್ನು ಪೂರೈಸಿದೆ.
ಭಾರತೀಯ ಬಾಹ್ಯಾಕಾಶ ಸಂಶೋಧನ ಸಂಸ್ಥೆ (ಇಸ್ರೋ) ಹಾರಿಸಿದ್ದ ಮಾರ್ಸ್ ಆರ್ಬಿಟರ್ ಮಿಶನ್ (ಎಂಓಎಂ ಅಥವಾ ಮಾಮ್) ಅತ್ಯಂತ ಯಶಸ್ವೀ ಬಾಹ್ಯಾಕಾಶ ಅಭಿಯಾನವೆನಿಸಿದ್ದು ಈ ವರ್ಷ ಜೂನ್ ನಲ್ಲಿ ಇದು ಮಂಗಳ ಕಕ್ಷೆ ಪರಿಭ್ರಮಣದಲ್ಲಿ 1,000 ಭೂ-ದಿನಗಳ ಯಾನವನ್ನು ಪೂರೈಸಿತ್ತು. ಇದರ ಮೂಲ ಜೀವಿತಾವಧಿಯನ್ನು ಕೇವಲ 180 ದಿನಗಳೆಂದು ಅಂದಾಜಿಸಲಾಗಿತ್ತು.
ಮಂಗಳಯಾನ ಬಾಹ್ಯಾಕಾಶ ನೌಕೆಯ ಈಗಿನ ಶಕ್ತಿ, ಸಾಮಥ್ಯ ಮತ್ತು ದಕ್ಷತೆಯನ್ನು ಪರಿಗಣಿಸಿದರೆ ಇನ್ನೂ ಐದು ವರ್ಷಗಳ ಕಾಲ ಇದು ಮಂಗಳ ಗ್ರಹ ಕಕ್ಷೆ ಪರಿಭ್ರಮಣೆಯನ್ನು ಅನೂಚಾನವಾಗಿ ನಡೆಸಲಿದೆ. ಈ ನೌಕೆಯಲ್ಲಿ ಇನ್ನೂ 15 ಕೆಜಿ ಇಂಧನ ಬಳಕೆಗಾಗಿ ಉಳಿದಿದೆ.
ಅತ್ಯಂತ ಕಡಿಮೆ ವೆಚ್ಚದ ಮಂಗಳ ಕಕ್ಷೆ ಪರಿಭ್ರಮಣ ಅಭಿಯಾನವು ಮಂಗಳನ ಕಕ್ಷೆಯಲ್ಲಿ ಮೂರು ವರ್ಷಗಳ ಸುತ್ತಾಟವನ್ನು ಈಗಾಗಲೇ ಮುಗಿಸಿದ್ದು ಇನ್ನೂ ಐದು ವರ್ಷಗಳ ಕಾಲ ಅದು ತನ್ನ ಕೆಲಸವನ್ನು ಮುಂದುವರಿಸಲಿದೆ; ಈ ಉಪಗ್ರಹದ ಶಕ್ತಿ, ಸಾಮಥ್ಯ ಮತ್ತು ಸ್ವಾಸ್ಥ್ಯ ಎಲ್ಲವೂ ಚೆನ್ನಾಗಿದೆ ಎಂದು ಇಸ್ರೋ ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jammu and Kashmir; ಉಗ್ರವಾದ ಪರಿಸರ ವ್ಯವಸ್ಥೆ ಬಹುತೇಕ ಕೊನೆಗೊಂಡಿದೆ: ಶಾ
BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು
Jagdeep Dhankhar; ರಾಜ್ಯಸಭಾ ಸಭಾಪತಿ ವಿರುದ್ದದ ಪ್ರತಿಪಕ್ಷಗಳ ಅವಿಶ್ವಾಸ ನಿರ್ಣಯ ತಿರಸ್ಕೃತ
ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜೀನಾಮೆ ನೀಡುವುದು ಉತ್ತಮ: ಲಾಲು ಪ್ರಸಾದ್ ಯಾದವ್ ಕಿಡಿ
Video: ನ್ಯಾಯ ಕೇಳಲು ಬಂದ ವ್ಯಕ್ತಿಗೆ ಖಾಕಿಯಿಂದ 41 ಸೆಕೆಂಡ್ಗಳಲ್ಲಿ 31 ಬಾರಿ ಕಪಾಳ ಮೋಕ್ಷ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.