ಅಂಧೇರಿ ಜಗದಂಬಾ ದೇವಸ್ಥಾನ: 63ನೇ ಶರನ್ನವರಾತ್ರಿ
Team Udayavani, Sep 26, 2017, 4:58 PM IST
ಮುಂಬಯಿ: ಅಂಧೇರಿ ಪೂರ್ವದ ಬ್ಯಾಪ್ಟಿಸ್ಟ್‌ವಾಡಿಯ ಶ್ರೀ ಕ್ಷೇತ್ರ ದತ್ತ ಜಗದಂಬಾ ದೇವಸ್ಥಾನದಲ್ಲಿ 63 ನೇ ವಾರ್ಷಿಕ ಶರನ್ನವರಾತ್ರಿ ಉತ್ಸವವು ಸೆ. 21 ರಂದು ವಿವಿಧ ಧಾರ್ಮಿಕ, ಆಧ್ಯಾತ್ಮಿಕ ಪೂಜಾ ಕೈಂಕರ್ಯಗಳೊಂದಿಗೆ ಮಂದಿರದ ಪ್ರಾಂಗಣದಲ್ಲಿ ಚಾಲನೆಗೊಂಡಿತು.
ಮಹೇಶ್ ಶಾಂತಿ ಅವರ ಪೌರೋಹಿತ್ಯದಲ್ಲಿ ಕಲಶ ಸ್ಥಾಪನೆ, ಪುಷ್ಪ ಸೇವೆ, ಹಿಂಗಾರ ಸೇವೆ, ಕುಂಕುಮ ಸೇವೆ, ಅಗ್ನಿ ಸೇವು, ಎಳನೀರು ಅಭಿಷೇಕ, ಪಂಚಾಮೃತ ಅಭಿಷೇಕ, ಚಂಡಿಕಾ ಹೋಮ, ಲಲಿತ ಸಹಸ್ರನಾಮಾರ್ಚನೆ, ಇತ್ಯಾದಿ ಪೂಜೆಗಳನ್ನು ಆಯೋಜಿಸಲಾಗಿದೆ.
ಶ್ರೀ ಕ್ಷೇತ್ರದ ದತ್ತ ಜಗದಂಬಾ ದೇವಸ್ಥಾನದ ಅಧ್ಯಕ್ಷ ದಯಾನಂದ ಸಿ. ಅಂಚನ್ ಅವರು ಕ್ಷೇತ್ರದ ಬಗ್ಗೆ ತಿಳಿಸಿ, ಗುಡ್ಡಕಾಡು ಪ್ರದೇಶದ ಬ್ಯಾಪ್ಟಿಸ್ಟ್‌ವಾಡಿಯ ಶ್ರೀ ದತ್ತಜಗದಂಬಾ ದೇವಸ್ಥಾನಕ್ಕೆ 63 ವರ್ಷಗಳ ಇತಿಹಾಸವಿದೆ. ಮೂಲಭೂತ ಸೌಕರ್ಯಗಳು ಇಲ್ಲದ ಅಂದಿನ ಕಷ್ಟ, ಕಾರ್ಪಣ್ಯಗಳ ದಿನಗಳಲ್ಲೂ ನಮ್ಮ ಪೂರ್ವಜರು ನಾಡು-ನುಡಿಯ ಸೇವೆಗಾಗಿ ಅವಿಶ್ರಾಂತವಾಗಿ ದುಡಿದಿದ್ದಾರೆ. ಅವರ ತ್ಯಾಗಮಯ ಜೀವನದ ಪ್ರತಿಬಿಂಬವಾಗಿ ಇಲ್ಲಿನ ಪ್ರತಿಯೊಂದು ಕಾರ್ಯಕ್ರಮ ಸಾಂಪ್ರದಾಯಿಕ ಶೈಲಿಯಲ್ಲಿ ಬೆಳಗುತ್ತಿದೆ. ಶ್ರಾವಣ ಮಾಸದಲ್ಲಿ ಪ್ರತೀ ದಿನ ಭಜನೆ, ಪ್ರತಿ ವರ್ಷ ಆಮಂತ್ರಿತ ಭಜನ ಮಂಡಳಿಗಳಿಂದ ಏಕಾಹ ಭಜನೆ, ದತ್ತಜಯಂತಿ ಇತ್ಯಾದಿಗಳನ್ನು ಶಾಸ್ತೊÅàಕ್ತವಾಗಿ ಆಚರಿಸಲಾಗುತ್ತದೆ. ಸೆ. 31 ರಂದು ಶೋಭಾಯಾತ್ರೆಯೊಂದಿಗೆ ಅಂಧೇರಿ ವಸೋìವಾದಲ್ಲಿ ದೇವಿಯ ವಿಸರ್ಜನ ಕಾರ್ಯಕ್ರಮ ನಡೆಯಲಿದೆ ಎಂದರು.
ಗೌರವ ಪ್ರಧಾನ ಕಾರ್ಯದರ್ಶಿ ಯಶವಂತ್ ಅಮೀನ್ ಪ್ರಾಸ್ತಾವಿಕವಾಗಿ ಮಾತನಾಡಿ, ಮಹಾರಾಷ್ಟ್ರ ಕನ್ನಡಿಗ ಕಲಾವಿದರ ಅಧ್ಯಕ್ಷ ಸುರೇಂದ್ರ ಕುಮಾರ್ ಹೆಗ್ಡೆ ಅವರ ಮಾರ್ಗದರ್ಶನದೊಂದಿಗೆ ಸ್ಥಳೀಯ ತುಳು-ಕನ್ನಡಿಗರ ಸಂಪೂರ್ಣ ಸಹಕಾರದೊಂದಿಗೆ ತವರೂರಿನ ಜಾತ್ರೆಯನ್ನು ಹೋಲುವ ಕೆಲವೊಂದು ಕಾರ್ಯಕ್ರಮಗಳು 60 ರ ಸಂಭ್ರಮದಲ್ಲಿ ನಡೆದಿತ್ತು. ಈ ಷಷ್ಠಬ್ಧÂ ಆಚರಣೆಯ ಸಂದರ್ಭದಲ್ಲಿ ಉಪಸ್ಥಿತರಿದ್ದ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ ಅವರು ಆಶೀರ್ವಚನದಲ್ಲಿ ಇದೊಂದು ಮಹಾನಗರದ ಧಾರ್ಮಿಕ ಕ್ಷೇತ್ರ ಎಂದು ವ್ಯಾಖ್ಯಾನಿಸಿದ್ದರು. ಮಹಿಳಾ ಸದಸ್ಯೆಯರು, ಕಾರ್ಯಕಾರಿ ಸಮಿತಿಯ ಸದಸ್ಯರು, ಯುವ ಜನಾಂಗದ ಸಂಪೂರ್ಣ ಸಹಕಾರ ಶ್ರೀ ಕ್ಷೇತ್ರದ ಅಭಿವೃದ್ಧಿಗೆ ಅಪಾರ ಕೊಡುಗೆಯಾಗಿದೆ. ಪ್ರತೀ ದಿನ ಶ್ರೀ ಕ್ಷೇತ್ರದಲ್ಲಿ ಸಂಜೆ ದೇವಿ ಗ್ರಂಥ ಪಾರಾಯಣ, ಭಜನೆ, ಮಂಗಳಾರತಿ, ಅನ್ನಸಂತರ್ಪಣೆ ನಡೆಯಲಿದೆ ಎಂದರು.
ಸ್ಥಳೀಯ ತುಳು-ಕನ್ನಡಿಗರು, ಕನ್ನಡೇತರರು, ನಗರ ಸೇವಕರು, ವಿವಿಧ ಸಂಘಟನಗಳ ಸದಸ್ಯರು, ಸ್ಥಳೀಯ ಉದ್ಯಮಿಗಳು, ಸಮಾಜ ಸೇವಕರು, ಭಕ್ತಾದಿಗಳು ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು.
ಚಿತ್ರ-ವರದಿ : ರಮೇಶ್ ಅಮೀನ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
PoK ಪ್ರದೇಶದಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು: ಬಿಸಿಸಿಐ ನಿಂದ ತೀವ್ರ ಖಂಡನೆ
Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್.ಅಶೋಕ್
50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ
‘Kanguva’; ಮೊದಲ ದಿನವೇ 58.62 ಕೋಟಿ ರೂ. ಬಾಚಿದ ಕಂಗುವ
Udupi: ಮೀನುಗಾರಿಕೆ ಕಾರ್ಮಿಕ ಸಾವು; ಪ್ರಕರಣ ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.