ಆಸ್ಪತ್ರೆ ಎಡವಟ್ಟು: ಇಲ್ಲದ ಎಚ್‌ಐವಿಗೆ 2 ವರ್ಷ ಔಷಧಿ ತಿಂದ ಮಹಿಳೆ!
Team Udayavani, Sep 27, 2017, 9:55 AM IST
ಶಿರಾ: 2 ವರ್ಷದ ಹಿಂದೆ ಎಚ್‌ಐವಿ ಸೋಂಕಿನಿಂದ ಪೀಡಿತವಾಗಿದ್ದ ಮಹಿಳೆ ಎರಡು ವರ್ಷಗಳ ಸತತ ಔಷಧೋಪಚಾರದಿಂದ ಗುಣ ಮುಖವಾಗಿರುವ ಅತ್ಯಾಶ್ಚರ್ಯ ಘಟನೆಗೆ ತುಮಕೂರು ಜಿಲ್ಲೆ ಶಿರಾ ಸರ್ಕಾರಿ ಆಸ್ಪತ್ರೆ ಸಾಕ್ಷಿಯಾಗಿದೆ!
ಎಚ್‌ಐವಿ ಸೋಂಕಿಗೆ ಔಷಧಿ ಸಂಶೋಧನೆ ಯಾಯಿತಾ ಎಂದು ಆಶ್ಚರ್ಯಪಡಬೇಡಿ. ಇದು ಶಿರಾ ಸರ್ಕಾರಿ ಆಸ್ಪತ್ರೆಯಲ್ಲಿ ಆಗಿರುವ ಎಡವಟ್ಟು. 2 ವರ್ಷದ ಹಿಂದೆ ತಪಾಸಣೆಗೆಂದು ಶಿರಾದ ಸರ್ಕಾರಿ ಆಸ್ಪತ್ರೆಗೆ ಬಂದ ಗರ್ಭಿಣಿಯ ರಕ್ತಪರೀಕ್ಷೆ ಮಾಡಿದಾಗ ಆಕೆಗೆ ಎಚ್‌ಐವಿ ಸೋಂಕು ತಗುಲಿದೆ ಎಂದು ವರದಿ ನೀಡಲಾಗಿತ್ತು. ವೈದ್ಯರ ವರದಿ ಯಿಂದ ಬೆಚ್ಚಿ ಬಿದ್ದ ಮಹಿಳೆ ತುಮಕೂರು ಜಿಲ್ಲಾ
ಆಸ್ಪತ್ರೆಯ ಐಸಿಟಿಸಿಗೆ ಈ ವರದಿ ತೋರಿಸಿದ್ದಾರೆ.
ಐಸಿಟಿಸಿಯಲ್ಲಿ ಮತ್ತೂಮ್ಮೆ ರಕ್ತಪರೀಕ್ಷೆ ಮಾಡದೆ ಸದರಿ ವರದಿ ಆಧಾರದಲ್ಲೇ ಔಷಧಿ ನೀಡಿದ್ದಾರೆ. ಎಚ್‌ಐವಿ ಪೀಡಿತ ವರದಿ ಹಿನ್ನೆಲೆಯಲ್ಲಿ ಗರ್ಭ ವನ್ನು ತೆಗೆಸಿಹಾಕಿದ್ದಾರೆ. ನಂತರ 2 ವರ್ಷಗಳಿಂದ ಔಷಧೋಪಚಾರ ಪಡೆದುಕೊಂಡಿದ್ದಾರೆ. ನಂತರ ಎರಡನೇ ಮಗುವಿನ ಗರ್ಭ ಧರಿಸಿದ ಮಹಿಳೆ ಖಾಸಗಿ ಆಸ್ಪತ್ರೆಗೆ ತಪಾಸಣೆಗೆ ಹೋದಾಗ ಅಲ್ಲಿ ರಕ್ತ ಪರೀಕ್ಷೆ ಮಾಡಿಸಿದ್ದು, ಎಚ್‌ಐವಿ ಇಲ್ಲ ಎಂಬ ವರದಿ ಬಂದಿದೆ. ಇದರಿಂದ ವಿಚಲಿತ ಳಾದ ಮಹಿಳೆ ಇನ್ನೊಂದು ಖಾಸಗಿ ಆಸ್ಪತ್ರೆಯಲ್ಲಿ ರಕ್ತಪರೀಕ್ಷೆ ಮಾಡಿಸಿದಾಗ ಮತ್ತೆ ನೆಗಟಿವ್
ವರದಿ ಬಂದಿದೆ. ವರದಿ ಬಗ್ಗೆ ಇನ್ನೂ ಸಂಶಯ ಹೊಂದಿದ್ದ ಮಹಿಳೆ ಜಿಲ್ಲಾಸ್ಪತ್ರೆಯಲ್ಲಿ ಪರೀಕ್ಷೆ ಮಾಡಿಸಿದ್ದಾರೆ. ಆಗಲೂ ಎಚ್‌ಐವಿ ನೆಗಟಿವ್ ವರದಿ ಬಂದಿದೆ.
ಶಿರಾ ಸರ್ಕಾರಿ ಆಸ್ಪತ್ರೆಯಲ್ಲಾದ ಎಡವಟ್ಟು 2 ವರ್ಷಗಳ ಕಾಲ ಈ ಮಹಿಳೆ ತನ್ನ ಜೀವನದ ಖುಷಿಯ ಕ್ಷಣಗಳನ್ನು ಬಲಿ ತೆಗೆದುಕೊಂಡಿದೆ. ಜೊತೆಗೆ ಚೊಚ್ಚಲ ಮಗುವನ್ನೂ ಕಳೆದುಕೊಂಡಿ ದ್ದಾರೆ. ಆಕೆಯ ಸಂಬಂಧಿಕರೂ ದೂರ ಇರಿಸಿದ್ದರು. ಸಮಾಜದಲ್ಲಿ ಆಕೆಯನ್ನು ನೋಡುವ ದೃಷ್ಟಿಯೇ ಬದಲಾಗಿದ್ದರಿಂದ ಆಕೆ ಬದುಕಿದ್ದಾಗಲೇ ನರಕಯಾತನೆ ಅನುಭವಿಸಿದ್ದಾರೆ. ಈ ಬಗ್ಗೆ ತಾಲೂಕು ವೈದ್ಯಾಧಿಕಾರಿ ಡಾ. ತಿಮ್ಮರಾಜು ಅವರನ್ನು ಸಂಪರ್ಕಿಸಿದಾಗ, ಈ ಬಗ್ಗೆ ನನಗೆ ಮಾಹಿತಿ ಇಲ್ಲ. ಸದ್ಯ ನಾನು ಮೀಟಿಂಗ್‌ನಲ್ಲಿದ್ದು, ಆಸ್ಪತ್ರೆಗೆ ಬಂದ ನಂತರ ಮಾಹಿತಿ ಪಡೆಯುತ್ತೇನೆ ಎಂದಿದ್ದಾರೆ.
ಶಿರಾ ಸರ್ಕಾರಿ ಆಸ್ಪತ್ರೆಯ ವೈದ್ಯರ ಎಡವಟ್ಟಿನಿಂದ ನನ್ನದಲ್ಲದ ತಪ್ಪಿಗೆ ಶಿಕ್ಷೆ ಅನುಭವಿಸಿದ್ದೇನೆ. ಈ ರೀತಿ ಮತ್ತಾರಿಗೂ ಸಮಸ್ಯೆ ಆಗಬಾರದು.
ಸಂತ್ರಸ್ತ ಮಹಿಳೆ
ಸರ್ಕಾರಿ ಆಸ್ಪತ್ರೆಗಳಲ್ಲಿ 3 ಹಂತದಲ್ಲಿ ಎಚ್‌ಐವಿ ಪರೀಕ್ಷೆ ಮಾಡಲಾಗುತ್ತದೆ. ಆದರೆ, ಎಚ್‌ಐವಿ ಕಂಡುಬಂದು ಚಿಕಿತ್ಸೆ ಪಡೆದು ನಂತರ ಎಚ್‌ಐವಿ ಇಲ್ಲ ಎನ್ನುವುದು ಅಪರೂಪದಲ್ಲಿ ಅಪರೂಪದ ಘಟನೆ. ಸಂತ್ರಸ್ತ ಮಹಿಳೆ ಈವರೆಗೂ ನಮಗೆ ದೂರು ನೀಡಿಲ್ಲ. ಈ ಬಗ್ಗೆ ಮಾಧ್ಯಮಗಳಲ್ಲಿ ಬರುತ್ತಿರುವ ಸುದ್ದಿ ಆಧರಿಸಿ ಶಿರಾ ಆಸ್ಪತ್ರೆಗೆ ಅಧಿಕಾರಿಗಳನ್ನು ಕಳುಹಿಸಲಾಗಿದ್ದು, ಸಮಗ್ರ ವರದಿ ನೀಡಲು ಸೂಚಿಸಿದ್ದೇನೆ. ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಲಾಗುವುದು.
ಡಾ.ಎಚ್.ವಿ.ರಂಗಸ್ವಾಮಿ, ಡಿಎಚ್‌ಒ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Fraud: ಸಿಬಿಐ ಹೆಸರಲ್ಲಿ ಕಾರ್ಕಳದ ಮಹಿಳೆಗೆ 24 ಲಕ್ಷ ರೂ. ವಂಚನೆ
Naxalites ಶರಣಾಗತಿಯಲ್ಲಿ ಟ್ವಿಸ್ಟ್; ಚಿಕ್ಕಮಗಳೂರು ಬದಲು ಬೆಂಗಳೂರಿನಲ್ಲಿ ನಕ್ಸಲರ ಶರಣಾಗತಿ
Belagavi: ತಹಶೀಲ್ದಾರ್ ಮನೆ ಮೇಲೆ ಲೋಕಾಯುಕ್ತ ದಾಳಿ
Naxalites; ಶರಣಾಗತಿ ಪ್ಯಾಕೇಜ್ ಬೆಚ್ಚಿಬೀಳಿಸಿದೆ: ಸುನಿಲ್ ಕುಮಾರ್ ತೀವ್ರ ಆಕ್ರೋಶ
Raichur; ಜೆಸ್ಕಾಂ ಜೆ.ಇ ಹುಲಿರಾಜ ಮನೆ ಮೇಲೆ ಲೋಕಾಯುಕ್ತ ದಾಳಿ
MUST WATCH
ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !
ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ
ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಹೊಸ ಸೇರ್ಪಡೆ
OnePlus 13 ಮತ್ತು 13R ಬಿಡುಗಡೆ: ಹೊಸ ವೈಶಿಷ್ಟ್ಯಗಳ ಪವರ್ ಹೌಸ್ ಫೋನ್
Fraud: ಸಿಬಿಐ ಹೆಸರಲ್ಲಿ ಕಾರ್ಕಳದ ಮಹಿಳೆಗೆ 24 ಲಕ್ಷ ರೂ. ವಂಚನೆ
Caught On Cam!;ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ: Video
2047 ರ ವೇಳೆಗೆ ದೇಶದ 50% ಜನ ನಗರ ಪ್ರದೇಶಗಳಲ್ಲಿ ವಾಸಿಸುತ್ತಾರೆ: ಸಚಿವ ಖಟ್ಟರ್
VIDEO: ಅಪ್ಪಿಕೊಳ್ಳಲು ಬಂದ ನಿರ್ದೇಶಕನನ್ನು ತಡೆದು ಕೆನ್ನೆಗೆ ಮುತ್ತು ಕೊಟ್ಟ ನಿತ್ಯಾ ಮೆನನ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.