ಬುರ್ಖಾಧಾರಿ ಹನಿಪ್ರೀತ್?
Team Udayavani, Sep 27, 2017, 10:16 AM IST
ಹೊಸದಿಲ್ಲಿ: ಅತ್ಯಾಚಾರ ಪ್ರಕರಣದಲ್ಲಿ ಜೈಲು ಸೇರಿರುವ ಗುರ್ಮೀತ್ ಸಿಂಗ್ನ ದತ್ತುಪುತ್ರಿ ಹನಿಪ್ರೀತ್ ಇನ್ಸಾಸ್ ನೇಪಾಲಕ್ಕೆ ಪರಾರಿಯಾಗಿದ್ದಾರೆ ಎಂಬ ಸುದ್ದಿಗಳ ನಡುವೆಯೇ ಹೊಸ ವಿಚಾರ ಬೆಳಕಿಗೆ ಬಂದಿದೆ. ಮಂಗಳವಾರ ಬೆಳಗ್ಗೆ ಆಕೆ ದಿಲ್ಲಿಯಲ್ಲಿನ ವಕೀಲರ ನಿವಾಸಕ್ಕೆ ಆಗಮಿಸಿ, ಬಂಧನದಿಂದ ರಕ್ಷಿಸುವಂತೆ ಕೇಳಿಕೊಂಡಿದ್ದಾರೆ ಎಂದು ಹೇಳಲಾಗಿದೆ.
ಬುರ್ಖಾ ಧರಿಸಿ ಮಹಿಳೆಯೊಬ್ಬರು ವಕೀಲರ ನಿವಾಸದತ್ತ ಆಗಮಿಸುತ್ತಿರುವ ಸಿಸಿಟಿವಿ ದೃಶ್ಯಾವಳಿಗಳನ್ನು ವಕೀಲರ ಪಕ್ಕದ ಮನೆಯ ನಿವಾಸಿಯೊಬ್ಬರು ನೀಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಇನ್ನೊಂದೆಡೆ, ಬಾಲಿವುಡ್ ನಟಿ ರಾಖೀ ಸಾವಂತ್ ಅವರು ಗುರ್ಮೀತ್ ಮತ್ತು ಹನಿಪ್ರೀತ್ ನಡುವಿನ ಸಂಬಂಧದ ಕುರಿತು ಹೊಸ ಸಿನಿಮಾ ಮಾಡಲು ಮುಂದಾಗಿದ್ದಾರೆ. ಮೂರೂವರೆ ವರ್ಷಗಳಿಂದಲೂ ಅವರಿ ಬ್ಬರೂ ನನಗೆ ಗೊತ್ತು ಎಂದಿದ್ದಾರೆ ರಾಖೀ. ಅಷ್ಟೇ ಅಲ್ಲ, ನಾನು ಗುರ್ಮೀತ್ ಜತೆಗೆ ಆತ್ಮೀಯವಾಗಿದ್ದುದನ್ನು ನೋಡಿ, ನಾನೆಲ್ಲಿ ಆತನನ್ನು ಮದುವೆ ಆಗಿಬಿಡುತ್ತೇನೋ ಎಂಬ ಭಯ ಹನಿಪ್ರೀತ್ಗೆ ಕಾಡುತ್ತಿತ್ತು ಎಂದೂ ಹೇಳಿದ್ದಾರೆ ರಾಖೀ.
ಜಾಮೀನು ಅರ್ಜಿ ತಿರಸ್ಕೃತ
ದೇಶದ್ರೋಹ ಮತ್ತು ಹಿಂಸೆಗೆ ಪ್ರಚೋದನೆ ಆರೋಪ ಹೊತ್ತಿರುವ ಹನಿಪ್ರೀತ್ರ ನಿರೀಕ್ಷಣ ಜಾಮೀನು ಅರ್ಜಿಯನ್ನು ದಿಲ್ಲಿ ಹೈಕೋರ್ಟ್ ಮಂಗಳವಾರ ತಿರಸ್ಕರಿಸಿದೆ. ಬಂಧನದಿಂದ ತಪ್ಪಿಸಿಕೊಳ್ಳಲೆಂದು ತಲೆಮರೆಸಿಕೊಂಡು ಓಡಾಡುತ್ತಿರುವ ಕಾರಣ, ಜಾಮೀನಿಗೆ ಆಕೆ ಅರ್ಹಳಲ್ಲ ಎಂದು ಕೋರ್ಟ್ ಹೇಳಿದೆ. ಇದಕ್ಕೂ ಮುನ್ನ “ನೀವು ಶರಣಾಗುವುದು ಸೂಕ್ತ’ ಎಂದು ಹೇಳಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Poll code violations ; ಖರ್ಗೆ, ನಡ್ಡಾ ಪ್ರತಿಕ್ರಿಯೆ ಕೇಳಿದ ಚುನಾವಣ ಆಯೋಗ
Rahul Gandhi ಭರವಸೆಗಳನ್ನು ನೀಡುತ್ತಾರೆ ಮತ್ತು ವಿದೇಶಕ್ಕೆ ಹಾರುತ್ತಾರೆ: ಶಾ ವಾಗ್ದಾಳಿ
PM Modi ಅವರು ಜೋ ಬೈಡೆನ್ ಅವರಂತೆ ನೆನಪಿನ ಶಕ್ತಿ ಕಳೆದುಕೊಳ್ಳುತ್ತಿದ್ದಾರೆ: ರಾಹುಲ್ ಗಾಂಧಿ
Resign: ಶಿರೋಮಣಿ ಅಕಾಲಿದಳದ ಅಧ್ಯಕ್ಷ ಸ್ಥಾನಕ್ಕೆ ಸುಖಬೀರ್ ಸಿಂಗ್ ಬಾದಲ್ ರಾಜೀನಾಮೆ
Maharashtra; ನಮ್ಮ ಮೈತ್ರಿ ಕೂಟ ಗೆದ್ದು ಮಹಾರಾಷ್ಟ್ರ ಉಳಿಸಲಿದೆ: ಡಿ.ಕೆ. ಶಿವಕುಮಾರ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.