ರಶ್ಯದ ಈ ರಕ್ಕಸ ದಂಪತಿ 30 ಮಂದಿಯನ್ನು ಕೊಂದು, ತಿಂದು ಮುಗಿಸಿದೆ
Team Udayavani, Sep 27, 2017, 11:32 AM IST
ಮಾಸ್ಕೋ : ಕನಿಷ್ಠ 30 ಮಂದಿಗೆ ಮಾದಕ ದ್ರವ್ಯ ತಿನ್ನಿಸಿ, ಕೊಂದು ಬಳಿಕ ಅವರನ್ನು ತಿಂದು ಮುಗಿಸಿದ ಅತ್ಯಮಾನುಷ ಭೀಭತ್ಸಕರ ಕೃತ್ಯ ಎಸಗಿದ ರಶ್ಯನ್ ದಂಪತಿಯನ್ನು ಬಂಧಿಸಲಾಗಿದೆ.
ಸಿಡ್ನಿ ಮಾರ್ನಿಂಗ್ ಹೆರಾಲ್ಡ್ ನಲ್ಲಿ ಪ್ರಕಟವಾಗಿರುವ ವರದಿಯ ಪ್ರಕಾರ ರಶ್ಯದ ಈ ರಾಕ್ಷಸೀ ಪ್ರವೃತ್ತಿಯ ದಂಪತಿ ತಮ್ಮ ಅಮಾಯಕ ಬಲಿಪಶುಗಳಿಗೆ ಹೈ ಡೋಸೆಜ್ ಡ್ರಗ್ ತಿನ್ನಿಸಿ ಅವರು ಜೀವಂತವಿರುವಾಗಲೇ ಅವರ ಚರ್ಮವನ್ನು ಸುಲಿದು, ಅವರ ಅಂಗಾಂಗಗಳನ್ನು ಡೀಪ್ ಫ್ರೀಜರ್‌ನಲ್ಲಿ ದಾಸ್ತಾನು ಇರಿಸಿ ಬಳಿಕ ತಿನ್ನುತ್ತಿದ್ದರು.
ರಶ್ಯದ ಈ ಬಂಧಿತ ರಕ್ಕಸ ದಂಪತಿಯನ್ನು ನತಾಲಿಯಾ ಬಕ್ಷೀವಾ ಮತ್ತು ದಿಮಿತ್ರಿ ಬಕ್‌ಶೀವ್ ಎಂದು ಗುರುತಿಸಲಾಗಿದೆ. ಇವರನ್ನು ರಶ್ಯದ ಕ್ರಸ್ನದೋರ್ ಎಂಬಲ್ಲಿ ಸೆರೆ ಹಿಡಿಯಲಾಯಿತು.
ಈ ರಕ್ಕಸ ದಂಪತಿಯನ್ನು ಸೆರೆ ಹಿಡಿಯುವುದಕ್ಕೆ ನಗರದ ರಸ್ತೆಯೊಂದರಲ್ಲಿ ಬಿದ್ದಿದ್ದ ಮೊಬೈಲ್ ಫೋನ್ ಸುಳಿವು ನೀಡಿತು. ಆ ಮೊಬೈಲ್‌ನಲ್ಲಿ ಮನುಷ್ಯರ ಅಂಗಾಂಗಗಳನ್ನು ವ್ಯಕ್ತಿಯೊಬ್ಬ ತಿನ್ನುತ್ತಿದ್ದ ಫೋಟೋಗಳು ಇದ್ದವು. ಈ ಮೊಬೈಲ್ ಫೋನ್ ಮೂಲಕವೇ ರಕ್ಕಸ ದಂಪತಿಯ ಜಾಡನ್ನು ಪೊಲೀಸರು ಪತ್ತೆ ಹಚ್ಚಿದರು.
ಬಿಬಿಸಿ ವರದಿ ಪ್ರಕಾರ ಈ ದಂಪತಿ ತಾವು ಕನಿಷ್ಠ 30 ಮಂದಿಗೆ ಡ್ರಗ್ ತಿನ್ನಿಸಿ, ಚರ್ಮ ಸುಲಿದು, ಕೊಂದು, ಅವರ ಅಂಗಾಂಗಗಳನ್ನು ತಿಂದಿರುವುದಾಗಿ ಪೊಲೀಸರಲ್ಲಿ ತಮ್ಮ ಅಪರಾಧವನ್ನು ಒಪ್ಪಿಕೊಂಡಿದ್ದಾರೆ.
ವಿಶೇಷವೆಂದರೆ ಈ ದಂಪತಿ ಮಿಲಿಟರಿ ನೆಲೆಯೊಂದರಲ್ಲಿ ಕೆಲಸ ಮಾಡುತ್ತಿತ್ತು ಎಂಬುದು ಗೊತ್ತಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pakistan: ಪಾಕ್ ಸೇನೆ ಮತ್ತು ಇಮ್ರಾನ್ ಸಂಘರ್ಷ- ಯುಎಇ ಮಧ್ಯಸ್ಥಿಕೆ ವಹಿಸಲಿ: ಐಎಸ್ ಐ
Bangla:ಬಂಧನಕ್ಕೊಳಗಾದ ಇಸ್ಕಾನ್ ನ ಕೃಷ್ಣದಾಸ್ ಗೆ ಜಾಮೀನು ನಿರಾಕರಿಸಿದ ಬಾಂಗ್ಲಾ ಕೋರ್ಟ್
Census: ಇರಾಕ್‌ನಲ್ಲಿ 37 ವರ್ಷಗಳ ಬಳಿಕ ಗಣತಿ… 4.54 ಕೋಟಿ ಜನಸಂಖ್ಯೆ
Tensions Grip: ಬಾಂಗ್ಲಾದೇಶ ಸರಕಾರದಿಂದ ಹಿಂದೂ ನಾಯಕ, ಇಸ್ಕಾನ್‌ನ ಕೃಷ್ಣದಾಸ್ ಸೆರೆ
warrant: ಇಸ್ರೇಲಿ ನಾಯಕರಿಗೆ ವಾರಂಟ್ ಬೇಡ, ಗಲ್ಲು ವಿಧಿಸಿ: ಇರಾನ್
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
ಹೊಸಪೇಟೆ: ಸ್ಕ್ಯಾನ್ ಮಾಡಿ, ಹಂಪಿ ಕಂಬಗಳ ಸಪ್ತ ಸ್ವರ ಕೇಳಿ
Opportunities: ಅವಕಾಶಗಳನ್ನು ಸೃಷ್ಟಿಸಿಕೊಳ್ಳುವ ಚತುರತೆ
Yadagiri: ಗ್ಯಾರಂಟಿಗಳಿಂದ ಹಿಂದೆ ಸರಿಯಲ್ಲ: ಸಚಿವ ದರ್ಶನಾಪುರ
Gundlupete:ಮರಿಯಾನೆ ಬೇಟೆಗೆ ಹೊಂಚುಹಾಕುತ್ತಿದ್ದ ಹುಲಿ ಮೇಲೆ ತಾಯಿಯಾನೆ ದಾಳಿ:ವಿಡಿಯೋ ವೈರಲ್
Pakistan: ಪಾಕ್ ಸೇನೆ ಮತ್ತು ಇಮ್ರಾನ್ ಸಂಘರ್ಷ- ಯುಎಇ ಮಧ್ಯಸ್ಥಿಕೆ ವಹಿಸಲಿ: ಐಎಸ್ ಐ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.