ಸಾಲ ಮನ್ನಾ: ಸಿಎಂರನ್ನು ಅಭಿನಂದಿಸಬೇಕು
Team Udayavani, Sep 27, 2017, 11:40 AM IST
ದೇವನಹಳ್ಳಿ: ರಾಜ್ಯ ಸರ್ಕಾರ 599 ಸದಸ್ಯರ 2.52 ಕೋಟಿ ರೂ.ಗಳ ಸಾಲ ಮನ್ನಾ ಮಾಡಿದೆ. ಅದಕ್ಕಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಸಂಘದ ಪರವಾಗಿ ಅಭಿನಂದಿಸಬೇಕು ಎಂದು ವಿಶ್ವನಾಥಪುರ ವ್ಯವಸಾಯ ಸೇವಾ ಸಹಕಾರ ಸಂಘದ ಅಧ್ಯಕ್ಷ ಸಿ.ವಿಜಯ್ ಕುಮಾರ್ ತಿಳಿಸಿದರು.
ತಾಲೂಕಿನ ವಿಶ್ವನಾಥಪುರ ಗ್ರಾಪಂ ಆವರಣದಲ್ಲಿ ವಿಶ್ವನಾಥಪುರ ವ್ಯವಸಾಯ ಸಹಕಾರ ಸಂಘದ 2016-17ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಂಘ 19 ಗ್ರಾಮಗಳ ಆಡಳಿತ ವ್ಯಾಪ್ತಿಗೆ ಸೀಮಿತವಾಗಿದ್ದು, 3,192 ಸದಸ್ಯರಿದ್ದಾರೆ. 2,285 ಎಕರೆ ಸಾಗುವಳಿಯಲ್ಲಿ ಆಲೂಗಡ್ಡೆ, ಟೊಮೊಟೋ, ದ್ರಾಕ್ಷಿ, ಬಾಳೆ, ತರಕಾರಿ, ರೇಷ್ಮೆ ಬೆಳೆಗಳಿಗೆ ಪ್ರಸ್ತುತವಾಗಿ ಸಂಘ ಆರ್ಥಿಕ ಸುಸ್ಥಿತಿಯಲ್ಲಿದೆ.
ಸಾಲ ಪಡೆದ ಸದಸ್ಯರು ಸಕಾಲದಲ್ಲಿ ಮರುಪಾವತಿ ಮಾಡಿದರೆ ಇತರೆ ರೈತರಿಗೆ ಸಾಲ ನೀಡಲು ಅನುಕೂಲವಾಗಲಿದೆ. ರೈತರಿಗೆ ಹೆಚ್ಚಿನ ಸಾಲ ಸೌಲಭ್ಯ ನೀಡುವ ಗುರಿ ಇಟ್ಟುಕೊಂಡಿದ್ದೇವೆ ಎಂದರು. 2016-17ನೇ ಸಾಲಿನಲ್ಲಿ ವ್ಯವಸಾಯ ಸೇವಾ ಸಂಘ ನಾಲ್ಕು ಲಕ್ಷ ಎಪ್ಪತ್ತು ಸಾವಿರ ನಿವ್ವಳ ಲಾಭ ಗಳಿಸಿದೆ.
ಅಲ್ಪಾವಧಿ ಬೆಳೆ ಸಾಲ 26 ಕೋಟಿ ರೂ., ಸ್ವಸಾಹಾಯ ಗುಂಪಿನ ಸಾಲ 1.43 ಕೋಟಿ ರೂ. ವಿತರಿಸಲಾಗಿದೆ. 45 ಕೋಟಿ ರೂ. ವಾರ್ಷಿಕ ವಹಿವಾಟು ನಡೆಸಲಾಗಿದೆ ಎಂದು ಹೇಳಿದರು. ಮುಖ್ಯ ಕಾರ್ಯನಿರ್ವ ಹಣಾಧಿಕಾರಿ ಕೃಷ್ಣಮೂರ್ತಿ ವಾರ್ಷಿಕ ವರದಿ ಮಂಡಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.