ಮಧ್ಯಂತರ ಪರಿಹಾರ ತಕ್ಷಣವೇ ಘೋಷಿಸಲು ನೌಕರರ ಒತ್ತಾಯ
Team Udayavani, Sep 27, 2017, 1:26 PM IST
ಧಾರವಾಡ: ವೇತನ ಪರಿಷ್ಕರಣೆ ಆಯೋಗವು ವರದಿ ಸಲ್ಲಿಕೆಯನ್ನು ನಾಲ್ಕು ತಿಂಗಳು ಮುಂದೂಡಿರುವುದರಿಂದ ಶೇ. 30ರಷ್ಟು ಮಧ್ಯಂತರ ಪರಿಹಾರ ತಕ್ಷಣವೇ ಘೋಷಣೆ ಮಾಡುವಂತೆ ಆಗ್ರಹಿಸಿ ರಾಜ್ಯ ಪಿಯು ಮಹಾವಿದ್ಯಾಲಯಗಳ ನೌಕರರ ಸಂಘ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದೆ.
ರಾಜ್ಯ ಸರ್ಕಾರಿ ನೌಕರರು, ಅನುದಾನಿತ ಶಿಕ್ಷಣ ಸಂಸ್ಥೆಗಳ ಸಿಬ್ಬಂದಿ ಸ್ಥಳೀಯ ಸಂಸ್ಥೆಗಳ ಸಿಬ್ಬಂದಿ ಹಾಗೂ ವಿವಿಗಳ ಬೋಧಕೇತರ ಸಿಬ್ಬಂದಿ ವೇತನ ಶ್ರೇಣಿಗಳ ಪರಿಷ್ಕರಣೆ ಹಾಗೂ ಇತರ ಲಭ್ಯಗಳಿಗಾಗಿ ರಾಜ್ಯ ಸರ್ಕಾರ ಎಂ. ಆರ್. ಶ್ರೀನಿವಾಸಮೂರ್ತಿಯವರ ಅಧ್ಯಕ್ಷತೆಯಲ್ಲಿ 6ನೇ ವೇತನ ಆಯೋಗ ರಚಿಸಿ ನಾಲ್ಕು ತಿಂಗಳಲ್ಲಿ ವರದಿ ನೀಡುವಂತೆ ಆದೇಶಿಸಿತ್ತು.
ಈಗ ಆಯೋಗ ವರದಿ ನೀಡಲು ಜನವರಿ 2018ರ ವರೆಗೆ ಸರ್ಕಾರವೇ ಅವ ಧಿ ವಿಸ್ತರಿಸಿದೆ. ಈ ಹಿನ್ನೆಲೆಯಲ್ಲಿ ಆಯೋಗದ ಶಿಫಾರಸುಗಳು ವಿಳಂಬವಾಗುವ ಸಾಧ್ಯತೆಗಳಿದ್ದು, ಸರ್ಕಾರ ಶೇ. 30ರಷ್ಟು ಮಧ್ಯಂತರ ಪರಿಹಾರವನ್ನು ತಕ್ಷಣವೇ ಬಿಡುಗಡೆ ಮಾಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಸಂಘದ ರಾಜ್ಯ ಕಾರ್ಯದರ್ಶಿ ಎಸ್.ಎಲ್. ಶೇಖರಗೋಳ, ರಾಜ್ಯ ಖಜಾಂಚಿ ಡಾ| ಬಿ.ಆರ್. ರಾಠೊಡ, ಡಾ| ಸುರೇಶ ಮುಳೆ, ಜಿ.ಸಿ. ಕುಲಕರ್ಣೀ, ಮೋಹನ ಸಿದ್ದಾಂತಿ, ಆರ್.ಕೆ. ರಂಗಣ್ಣವರ, ಎಸ್.ವಿ. ತಡಸಮಠ, ಪ್ರಹ್ಲಾದ ಯಾವಗಲ್, ಬಿ.ಪಿ. ಮಳ್ಳೂರ, ಟಿ.ಎಚ್. ತಳವಾರ, ಆರ್.ಜಿ. ಮಾಂಗ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Choo Mantar Review: ಬಂಗಲೆಯಲ್ಲೊಂದು ಭಯಾನಕ ಕಥೆ!
Mudhol: ಪ್ರತ್ಯೇಕ ಅಪಘಾತ, ಇಬ್ಬರು ಮೃತ್ಯು..
Naxal: ತನಿಖೆ ನಡೆಸಿ ಪ್ಯಾಕೇಜ್ ನೀಡಬೇಕು,ಇಲ್ಲದಿದ್ದರೇ ಪ್ಯಾಕೇಜ್ ನೀಡುವುದರಲ್ಲಿ ಅರ್ಥವಿಲ್ಲ
AAP MLA: ಗುಂಡೇಟಿನಿಂದ ಎಎಪಿ ಶಾಸಕ ಗುರುಪ್ರೀತ್ ಗೋಗಿ ಸಾ*ವು… ಕುಟುಂಬಸ್ಥರು ಹೇಳಿದ್ದೇನು?
Gangavati: ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ವಿಜಯಪ್ರಸಾದ್ ಅಮಾನತು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.