Operation Arjun: ಪಾಕ್ ಸೇನಾಧಿಕಾರಿ ಮನೆಗಳ ಮೇಲೆ ದಾಳಿ
Team Udayavani, Sep 27, 2017, 3:28 PM IST
ಹೊಸದಿಲ್ಲಿ : ಪದೇ ಪದೇ ಕದನ ವಿರಾಮ ಉಲ್ಲಂಘನೆಗೈದು ಭಾರತೀಯ ಸೇನಾ ಪಡೆಯ ಮುಂಚೂಣಿ ಹೊರ ಠಾಣೆಗಳು ಹಾಗೂ ಪೌರರ ವಸತಿ ಪ್ರದೇಶಗಳ ಮೇಲೆ ಶೆಲ್ ಹಾಗೂ ಗುಂಡಿನ ದಾಳಿ ನಡೆಸುತ್ತಾ ತನ್ನ ಉಗ್ರರನ್ನು ಭಾರತದ ಗಡಿಯೊಳಗೆ ನುಸುಳಿಸುವ ಕುತಂತ್ರವನ್ನು ಕಾರ್ಯಗತಗೊಳಿಸುತ್ತಿರುವ ಪಾಕಿಸ್ಥಾನಕ್ಕೆ ಸರಿಯಾದ ರೀತಿಯಲ್ಲಿ ಬುದ್ಧಿ ಕಲಿಸಲು ಭಾರತೀಯ ಸೇನೆ, ಭಾರತದ ಗಡಿಯ ಉದ್ದಕ್ಕೂ ಇರುವ ನಿವೃತ್ತ ಪಾಕ್ ಸೇನಾಧಿಕಾರಿಗಳು, ಐಎಸ್‌ಐ ಮತ್ತು ಪಾಕ್ ರೇಂಜರ್ ಅಧಿಕಾರಿಗಳ ನಿವಾಸದ ಮೇಲೆ ದಾಳಿಯನ್ನು ಆರಂಭಿಸಿದೆ.
ಭಾರತ ವಿರುದ್ಧದ ಕಾರ್ಯಾಚರಣೆಗೆ ನೆರವಾಗಬೇಕೆಂಬ ಉದ್ದೇಶದಿಂದ ಪಾಕ್ ಸರಕಾರ, ತನ್ನ ನಿವೃತ್ತ ಸೇನಾಧಿಕಾರಿಗಳಿಗೆ, ಐಎಸ್‌ಐ ಅಧಿಕಾರಿಗಳಿಗೆ ಮತ್ತು ರೇಂಜರ್ ಅಧಿಕಾರಿಗಳಿಗೆ ಭಾರತದ ಗಡಿಯುದ್ದಕ್ಕೂ ಮನೆ ನಿವೇಶನಗಳನ್ನು ನೀಡಿದ್ದು ಅಲ್ಲಿ ಅವರ ವಸತಿ ಗೃಹಗಳು ಇವೆ.
“ಆಪರೇಶನ್ ಅರ್ಜುನ್”ನಾಮಾಂಕಿತ ಈ ದಾಳಿಯಲ್ಲಿ ಭಾರತೀಯ ಸೇನೆ ಪಾಕ್ ನಿವೃತ್ತ ಸೇನಾಧಿಕಾರಿಗಳು ಮನೆಗಳನ್ನು ಗುರಿ ಇರಿಸಿ ಲಘು, ಮಧ್ಯಮ ಹಾಗೂ ಪ್ರಾದೇಶಿಕ ಶಸ್ತ್ರಾಸ್ತ್ರಗಳನ್ನು ಬಳಸುತ್ತಿದೆ ಎಂದು ದಿ ಟೈಮ್ಸ್ ಆಫ್ ಇಂಡಿಯಾ ವರದಿ ತಿಳಿಸಿದೆ.
ಭಾರತೀಯ ಸೇನೆಯ “ಆಪರೇಶನ್ ಅರ್ಜುನ್” ಪರಿಣಾಮವಾಗಿ ಪಾಕ್ ಕಡೆಯಲ್ಲಿ ಭಾರೀ ಹಾನಿ ಉಂಟಾಗಿದ್ದು ಕನಿಷ್ಠ 7 ಪಾಕ್ ರೇಂಜರ್‌ಗಳು ಮತ್ತು 11 ಪೌರರು ಹತರಾಗಿರುವುದಾಗಿ ವರದಿ ತಿಳಿಸಿದೆ.
ಆಪರೇಶನ್ ಅರ್ಜುನ್ ನಿಂದ ಕಂಗಾಲಾಗಿರುವ ಪಾಕ್ ರೇಂಜರ್ ನ ಪಂಜಾಬ್ ಡಿಜಿ ಮೇಜರ್ ಜನರಲ್ ಅಸ್‌ಗರ್ ನವೀದ್ ಹಯಾತ್ ಅವರು ಬಿಎಸ್‌ಎಫ್ ನಿರ್ದೇಶಕ ಕೆ ಎಸ್ ಶರ್ಮಾ ಅವರನ್ನು ಸಂಪರ್ಕಿಸಿದ್ದು ಫಯರಿಂಗ್ ಕೊನೆಗೊಳಿಸುವಂತೆ ಯಾಚಿಸಿದ್ದಾರೆ.
ಆದರೆ ಹಯಾತ್ ಖಾನ್ ಅವರ ಈ ಕೋರಿಕೆಯನ್ನು ತಿರಸ್ಕರಿಸಿರುವ ಶರ್ಮಾ ಅವರು, “ನಿಮ್ಮ ಕಡೆಯ 12ನೇ ಚೀನಾಬ್ ರೇಂಜರ್ನ ಕಮಾಂಡಿಂಗ್ ಆಫೀಸರ್ ಆಗಿರುವ ಲೆ| ಕ| ಇರ್ಫಾನ್ ಅವರು ಪ್ರಚೋದನಾತ್ಮಕ ದಾಳಿಯನ್ನು ಮುಂದುವರಿಸಿರುವುದರಿಂದ ನಾವು ಕೈಕಟ್ಟಿ ಕುಳಿತಿರಲು ಸಾಧ್ಯವಿಲ್ಲ’ ಎಂದು ಖಡಕ್ ಉತ್ತರ ನೀಡಿದ್ದಾರೆ.
ಪಾಕ್ ರೇಂಜರ್‌ಗಳು ಭಾರತೀಯ ನೆಲೆಗಳನ್ನು, ಪೌರರನ್ನು ಗುರಿ ಇರಿಸಿಕೊಂಡು ನಿರಂತರವಾಗಿ ಶೆಲ್ ಮತ್ತು ಗುಂಡಿನ ದಾಳಿ ನಡೆಸುತ್ತಿರುವುದರಿಂದ ಬಿಎಸ್‌ಎಫ್ “ಆಪರೇಶನ್ ಅರ್ಜುನ್ ‘ ಆರಂಭಿಸಲೇಬೇಕಾಯಿತೆಂದು ಶರ್ಮಾ ಹೇಳಿದ್ದಾರೆ.
ಪಶ್ಚಿಮ ಗಡಿ ಉದ್ದಕ್ಕೂ ಭಾರತೀಯ ಸೇನಾ ಕಾರ್ಯಾಚರಣೆಯನ್ನು ಪುನರ್ ರೂಪಿಸುವ ನಿರ್ಧಾರವನ್ನು ಉನ್ನತ ಮಟ್ಟದಲ್ಲಿ ತೆಗೆದುಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ.
ಕಳೆದ ವರ್ಷವೂ ಪಾಕಿಸ್ಥಾನ ಭಾರತದ ಗಡಿ ಉದ್ದಕ್ಕೂ ಇದೇ ರೀತಿ ನಿರಂತರ ಶೆಲ್ ಹಾಗೂ ಗುಂಡಿನ ದಾಳಿಯನ್ನು ಕೈಗೊಂಡಿದ್ದಾಗ ಭಾರತ, “ಆಪರೇಶನ್ ರುಸ್ತುಂ’ ಕಾರ್ಯಾಚರಣೆಯನ್ನು ನಡೆಸಿತ್ತು. ಆ ಬಳಿಕ ಸೆ.19ರಂದು ಸರ್ಜಿಕಲ್ ದಾಳಿಯನ್ನು ನಡೆಸಿತ್ತು. ಭಾರತೀಯ ಸೇನಾ ಕಾರ್ಯಾಚರಣೆಯ ಪರಿಣಾಮವಾಗಿ ಪಾಕ್ ರೇಂಜರ್‌ಗಳು ಕೊನೆಗೂ ತಮ್ಮ ಶೆಲ್ ಹಾಗೂ ಗುಂಡಿನ ದಾಳಿಯನ್ನು ನಿಲ್ಲಿಸಿದ್ದವು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
AAP MLA: ಗುಂಡೇಟಿನಿಂದ ಎಎಪಿ ಶಾಸಕ ಗುರುಪ್ರೀತ್ ಗೋಗಿ ಸಾ*ವು… ಕುಟುಂಬಸ್ಥರು ಹೇಳಿದ್ದೇನು?
Police Nabs: 930 “ಡಿಜಿಟಲ್ ಅರೆಸ್ಟ್’ ಪ್ರಕರಣಗಳ ರೂವಾರಿ ಬೆಂಗಳೂರಿನಲ್ಲಿ ಬಂಧನ!
PM-Kisan Samman; ರೈತರಿಗೆ 6000 ರೂ. ಸಿಗುವ ಯೋಜನೆಗೆ ಐ.ಡಿ. ಕಡ್ಡಾಯ : ಏನಿದು ರೈತ ಚೀಟಿ?
Ayodhya ರಾಮಮಂದಿರಕ್ಕೆ ಇಂದು ವರ್ಷಪೂರ್ಣ: ಹೇಗಿರಲಿದೆ ಕಾರ್ಯಕ್ರಮ?
Sambhal ಬಾವಿ ಬಗ್ಗೆ ಯಾವ ಕ್ರಮವೂ ಬೇಡ: ಸುಪ್ರೀಂಕೋರ್ಟ್
MUST WATCH
ಹೊಸ ಸೇರ್ಪಡೆ
Choo Mantar Review: ಬಂಗಲೆಯಲ್ಲೊಂದು ಭಯಾನಕ ಕಥೆ!
Mudhol: ಪ್ರತ್ಯೇಕ ಅಪಘಾತ, ಇಬ್ಬರು ಮೃತ್ಯು..
Naxal: ತನಿಖೆ ನಡೆಸಿ ಪ್ಯಾಕೇಜ್ ನೀಡಬೇಕು,ಇಲ್ಲದಿದ್ದರೇ ಪ್ಯಾಕೇಜ್ ನೀಡುವುದರಲ್ಲಿ ಅರ್ಥವಿಲ್ಲ
AAP MLA: ಗುಂಡೇಟಿನಿಂದ ಎಎಪಿ ಶಾಸಕ ಗುರುಪ್ರೀತ್ ಗೋಗಿ ಸಾ*ವು… ಕುಟುಂಬಸ್ಥರು ಹೇಳಿದ್ದೇನು?
Gangavati: ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ವಿಜಯಪ್ರಸಾದ್ ಅಮಾನತು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.