ನೇಪಾಲಕ್ಕೆ ಹೋಗುತ್ತಿದ್ದ ಬಸ್ಸುಗಳಿಂದ 174 ತಲವಾರು ವಶ
Team Udayavani, Sep 27, 2017, 4:35 PM IST
ಬಹರೇಚ್, ಉತ್ತರ ಪ್ರದೇಶ : ನೇಪಾಲ ಮತ್ತು ಭಾರತ-ನೇಪಾಲ ಗಡಿಭಾಗದಲ್ಲಿನ ಜಿಲ್ಲೆಗಳಿಗೆ ಹೋಗುತ್ತಿದ್ದ ಎರಡು ಪ್ರವಾಸೀ ಬಸ್ಸುಗಳಿಂದ 170 ತಲವಾರುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಯೋರ್ವರು ತಿಳಿಸಿದ್ದಾರೆ.
ಎಸ್‌ಎಸ್‌ಬಿ ಮತ್ತು ಸ್ಥಳೀಯ ಪೊಲೀಸ್ ತಂಡದವರು ನಿನ್ನೆ ಮಂಗಳವಾರ ರಾತ್ರಿ ಟೂರಿಸ್ಟ್ ಬಸ್ ಒಂದರಿಂದ 93 ತಲವಾರುಗಳನ್ನು ವಶಪಡಿಸಿಕೊಂಡರೆ ಇನ್ನೊಂದು ಬಸ್ಸಿನಿಂದ 81 ತಲವಾರುಗಳನ್ನು ವಶಪಡಿಸಿಕೊಂಡರು ಎಂದು ಎಸ್‌ಪಿ ಜುಗಲ್ ಕಿಶೋರ್ ತಿಳಿಸಿದರು.
ಪೊಲೀಸರು ಈ ಸಂಬಂಧ ನಾಲ್ವರನ್ನು ಬಂಧಿಸಿದ್ದು ಇವರಲ್ಲಿ ಮೂವರನ್ನು ಮುನ್ನಾವರ್, ಇರ್ಫಾನ್ ಮತ್ತು ರಾಜು (ಇವರೆಲ್ಲ ನೇಪಾಲದ ಬಾಂಕೀ ಜಿಲ್ಲೆಯವರು) ಎಂದು ಗುರುತಿಸಲಾಗಿದೆ. ನಾಲ್ಕನೇ ವ್ಯಕ್ತಿಯು ಉತ್ತರ ಪ್ರದೇಶದ ಹರ್‌ದೋಲ್ ಜಿಲ್ಲೆಯವನೆಂದು ಎಸ್ ಪಿ ತಿಳಿಸಿದ್ದಾರೆ.
ಈ ತಲವಾರುಗಳನ್ನು ನೇಪಾಲ ಮತ್ತು ಗಡಿ ಭಾಗದಲ್ಲಿನ ಗೊಂಡಾ ಮತ್ತು ಶ್ರವಸ್ಥಿಗೆ ಒಯ್ಯಲಾಗುತ್ತಿತ್ತು; ಆದರೆ ಇದರ ಹಿಂದಿನ ಉದ್ದೇಶ ಏನೆಂಬುದು ಗೊತ್ತಾಗಿಲ್ಲ ಎಂದು ಎಸ್‌ಪಿ ಹೇಳಿದ್ದಾರೆ. ಆದರೂ ಈ ಹಿನ್ನೆಲೆಯಲ್ಲಿ ಉ.ಪ್ರ.ದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ ಎಂದವರು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Himachal Pradesh; ಸಿಎಂಗೆ ತಂದಿದ್ದ ಸಮೋಸಾ ಮಾಯ: ಸಿಐಡಿ ತನಿಖೆ?
Minister Sudhakar: ಸೀಟ್ ಬ್ಲಾಕಿಂಗ್ ದಂಧೆ ವಿರುದ್ಧ ಕ್ರಿಮಿನಲ್ ಕೇಸ್ ಅಸ್ತ್ರ
Trump ಗೆಲ್ಲುತ್ತಿದ್ದಂತೆ ಅಮೆರಿಕ ತೊರೆಯಲು ಜನರಿಂದ ಭರದ ಸಿದ್ಧತೆ
Yogi ‘ಬಟೇಂಗೆ’ಹೇಳಿಕೆ ಒಪ್ಪಲ್ಲ ಎಂದ ಅಜಿತ್: ಮಹಾಯುತೀಲಿ ಬಿರುಕು?
Canada; ನಮ್ಮಲ್ಲಿರುವ ಎಲ್ಲ ಹಿಂದೂಗಳು ಮೋದಿ ಬೆಂಬಲಿಗರಲ್ಲ: ಟ್ರಾಡೋ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.