ಪಾರಂಪರಿಕ ಸ್ಥಳ ದರ್ಶನ “ಪುನೀತ ಯಾತ್ರೆ’ಗೆ ಚಾಲನೆ
Team Udayavani, Sep 28, 2017, 11:16 AM IST
ಬೆಂಗಳೂರು: ಪ್ರವಾಸೋದ್ಯಮ ಇಲಾಖೆ ಮತ್ತು ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಸಹಭಾಗಿತ್ವದಲ್ಲಿ ಜಾರಿಗೆ ತರಲಾಗಿರುವ ಪ್ರಸಿದ್ಧ ಧಾರ್ಮಿಕ, ಐತಿಹಾಸಿಕ ಮತ್ತು ಪಾರಂಪರಿಕ ಸ್ಥಳಗಳನ್ನು ರಿಯಾಯಿತಿ ದರದಲ್ಲಿ ದರ್ಶನ ಮಾಡಿಸುವ “ಪುನೀತ ಯಾತ್ರೆ’ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದರು.
ವಿಧಾನಸೌಧದ ಸಮಿತಿ ಕೊಠಡಿ ಯಲ್ಲಿ ಬುಧವಾರ ನಡೆದ ಸರಳ ಸಮಾರಂಭದಲ್ಲಿ “ಪುನೀತ ಯಾತ್ರೆ’ಗೆ ಚಾಲನೆ ನೀಡಿ ಶುಭ ಹಾರೈಸಿ ಮಾತನಾಡಿದ ಸಿಎಂ, “ಈ ಯೋಜನೆ ರಾಜ್ಯದ ಜನತೆಗೆ ಸರ್ಕಾರದ ದಸರಾ ಹಬ್ಬದ ಕೊಡುಗೆ. ರಾಜ್ಯ ಮತ್ತು ಹೊರ ರಾಜ್ಯದ ಧಾರ್ಮಿಕ, ಪಾರಂಪರಿಕ ಮತ್ತು ಐತಿಹಾಸಿಕ ಸ್ಥಳಗಳಿಗೆ ರಿಯಾಯತಿ ದರದಲ್ಲಿ ರಾಜ್ಯದ ಜನರನ್ನು ಕರೆದುಕೊಂಡು ಹೋಗು ವುದು ಪುನೀತ ಯಾತ್ರೆಯ ಉದ್ದೇಶ. ಈಗಾಗಲೇ ಪ್ರವಾಸೋದ್ಯಮ ಇಲಾಖೆ 21 ಮಾರ್ಗಗಳನ್ನು ಗುರುತಿಸಿದೆ. ಈ ವರ್ಷ 1.38 ಲಕ್ಷ ಪ್ರವಾಸಿಗರನ್ನು ಪುನೀತ ಯಾತ್ರೆಗೆ ಕರೆದೊಯ್ಯುವ ಗುರಿ ಇಟ್ಟುಕೊಳ್ಳಲಾಗಿದೆ. ಪ್ರತಿ ಯೊಬ್ಬರಿಗೆ ಸರ್ಕಾರ 2,844 ರೂ. ನೆರವು ನೀಡಲಿದ್ದು, ಉಳಿದ ವೆಚ್ಚವನ್ನು ಪ್ರವಾಸಿಗರು ಭರಿಸಿಕೊಳ್ಳಬೇಕು’ ಎಂದರು. ಇದೇ ವೇಳೆ ಪುನೀತ ಯಾತ್ರೆಯ ಕೈಪಿಡಿಯನ್ನು ಅವರು ಬಿಡುಗಡೆಗೊಳಿಸಿದರು.
ಪ್ರವಾಸೋದ್ಯಮ ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ, “ಕರ್ನಾಟಕ ಹಾಗೂ ಇತರೆ ರಾಜ್ಯಗಳ 21 ತಾಣಗಳಿಗೆ ರಿಯಾಯಿತಿ ದರದಲ್ಲಿ ಪ್ರವಾಸ ಏರ್ಪಡಿಸಲಾಗುವುದು. ಖಾಸಗಿಯವರಿಗೆ ಹೋಲಿಕೆ ಮಾಡಿ ದರೆ ಶೇ.25 ರಿಯಾಯಿತಿ
ದರದಲ್ಲಿ ಪುನೀತ ಯಾತ್ರೆಯ ಅಡಿಯಲ್ಲಿ ಧಾರ್ಮಿಕ, ಪಾರಂಪರಿಕ ಸ್ಥಳಗಳಿಗೆ ಭೇಟಿ ನೀಡಬಹುದಾಗಿದೆ. ಪ್ರಯಾಣ ಮತ್ತು ವಸತಿ ಸೌಲಭ್ಯವನ್ನು ಇಲಾಖೆ ವ್ಯವಸ್ಥೆ ಮಾಡಲಿದ್ದು, ಊಟದ ವ್ಯವಸ್ಥೆಯನ್ನು ಪ್ರವಾಸಿಗರು ಮಾಡಿ ಕೊಳ್ಳಬೇಕು. ವಿವಿಧ ಧರ್ಮಗಳ ಪುಣ್ಯಕ್ಷೇತ್ರಗಳಿಗೆ ಭೇಟಿ ನೀಡಿದಾಗ ಶೀಘ್ರ ದರ್ಶನ ವ್ಯವಸ್ಥೆ ಮಾಡಿಸಲಾ ಗುವುದು. 21 ತಾಣಗಳ ಪೈಕಿ ಇಂದಿನಿಂದ 9 ತಾಣಗಳಿಗೆ ಪುನೀತ ಯಾತ್ರೆ ಆರಂಭವಾಗಿದ್ದು, 2ನೇ ಹಂತದಲ್ಲಿ 12 ತಾಣಗಳಿಗೆ ಪ್ರವಾಸ ಏರ್ಪಡಿಸ ಲಾಗುವುದು. ಈ ಪೈಕಿ 8 ಹೊರ ರಾಜ್ಯಗಳ ತಾಣಗಳಾಗಿದ್ದು, ಬೆಂಗಳೂರು ಮತ್ತು ಕಲಬುರಗಿಯಿಂದ ಪ್ರವಾಸಿಗರನ್ನು ಕರೆದೊಯ್ಯುವ ವ್ಯವಸ್ಥೆ ಮಾಡಲಾಗಿದೆ’ ಎಂದರು.
ಎಲ್ಲೆಲ್ಲಿಗೆ ಪ್ರವಾಸ ಪ್ಯಾಕೇಜ್?
ಮೊದಲ ಹಂತದಲ್ಲಿ ಬೇಲೂರು-ಹಳೇ ಬೀಡು, ಶ್ರವಣಬೆಳಗೂಳ, ಉತ್ತರ ಕರ್ನಾಟಕದ ಕ್ಷೇತ್ರಗಳಲ್ಲದೇ ತಿರುಪತಿ, ಕಾಳಹಸ್ತಿ, ಮಂತ್ರಾಲಯ ಮತ್ತು ಶಿರಡಿ ಪ್ರವಾಸದ ಪ್ಯಾಕೇಜ್ ಇದೆ. ಅ.15ರಿಂದ ಎರಡನೇ ಹಂತದಲ್ಲಿ ರಾಜ್ಯದ ಇತಿಹಾಸ ಪ್ರಸಿದ್ಧ ದೇವಾಲಯ, ಚರ್ಚ್, ಮಸೀದಿಗಳ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಇದಲ್ಲದೇ ಗಾಣಗಾಪುರ, ದತ್ತಾತ್ರೇಯ ಮಳಖೇಡ ರಾಘ ವೇಂದ್ರ, ಸನ್ನತಿ ಚಂದ್ರಲಾಂಬಮ್ಮ, ಸವದತ್ತಿ ಯಲ್ಲಮ್ಮ, ಶರಣಬಸವರ ಪವಿತ್ರ ಸ್ಥಳಗಳ ದರ್ಶನ ಇರಲಿದೆ. ನಂಜನಗೂಡು, ಬಾಬುಡನ್‌ಗಿರಿ, ಆದಿಚುಂಚನಗಿರಿ, ಗೋಕರ್ಣ, ಶಿರಸಿ ಮಾರಿಕಾಂಬೆ, ಶಿರಡಿ, ಶಬರಿಮಲೆ, ಮಧುರೆಗೆ ಪ್ರವಾಸಕ್ಕೆ ಕರೆದುಕೊಂಡು ಹೋಗಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಹಿಂದೂ, ಮುಸ್ಲಿಂ, ಸಿಖ್ಖರು, ಜೈನರು, ಬೌದ್ಧರು ಹಾಗೂ ಕ್ರೈಸ್ತರು ಸೇರಿದಂತೆ ಎಲ್ಲ ಧರ್ಮದವರ ಆಯಾ ಧರ್ಮದ ಧಾರ್ಮಿಕ ಮತ್ತು ಪುಣ್ಯ ಕ್ಷೇತ್ರಗಳಿಗಲ್ಲದೇ ಪಾರಂಪರಿಕ ಮತ್ತು ಐತಿಹಾಸಿಕ ಕೇಂದ್ರಗಳಿಗೆ ಭೇಟಿ ಕೊಡಬಹುದು. ಸರ್ವ ಧರ್ಮೀಯರು ಪುನೀತ ಯಾತ್ರೆಯ ಪ್ರಯೋಜನ ಪಡೆದುಕೊಳ್ಳಬೇಕು.
ಸಿದ್ದರಾಮಯ್ಯ, ಮುಖ್ಯಮಂತ್ರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Naxal; ರಾಜ್ಯದಲ್ಲಿ 99 % ನಕ್ಸಲಿಸಂ ಅಂತ್ಯಗೊಂಡಿದೆ: ಡಾ.ಜಿ.ಪರಮೇಶ್ವರ್
Dharwad: ಬಂದ್ ಹೆಸರಲ್ಲಿ ವ್ಯಾಪಾರಿಗೆ ಕಪಾಳಮೋಕ್ಷ?: ಕಾಲೇಜು ಪ್ರಾಧ್ಯಾಪಕರಿಗೆ ಅವಾಜ್
Shimoga: ತ್ಯಾವರೆಕೊಪ್ಪ ಧಾಮದಲ್ಲಿ ಮೃತಪಟ್ಟ ಹೆಣ್ಣು ಹುಲಿ ಅಂಜನಿ
Dharwad: ದಲಿತಪರ ಸಂಘಟನೆ ಕರೆ ನೀಡಿದ ಬಂದ್ ಗೆ ಮಿಶ್ರ ಪ್ರತಿಕ್ರಿಯೆ
Bidar: ಬಂದ್‌ಗೆ ಉತ್ತಮ ಪ್ರತಿಕ್ರಿಯೆ… ಸಾರಿಗೆ ಸಂಚಾರ ಸ್ಥಗಿತ, ಅಂಗಡಿ ಮುಂಗಟ್ಟು ಬಂದ್
MUST WATCH
ಹೊಸ ಸೇರ್ಪಡೆ
Naxal; ರಾಜ್ಯದಲ್ಲಿ 99 % ನಕ್ಸಲಿಸಂ ಅಂತ್ಯಗೊಂಡಿದೆ: ಡಾ.ಜಿ.ಪರಮೇಶ್ವರ್
SS Rajamouli: ʼಮಹಾಭಾರತʼ ಕಥೆಗೆ ರಾಜಮೌಳಿ ಆ್ಯಕ್ಷನ್ ಕಟ್; ಯಾವಾಗ ಪ್ರಾಜೆಕ್ಟ್ ಶುರು?
Delhi airport; ಮೊಸಳೆ ತಲೆಬುರುಡೆ ಸಾಗಿಸುತ್ತಿದ್ದ ಕೆನಡಾ ಪ್ರಜೆ ಬಂಧನ
Kumbh Mela 2025: ಮಹಾಕುಂಭ ಮೇಳದ ಆಕರ್ಷಣೆಯ ಕೇಂದ್ರ ಬಿಂದು ಅಂಬಾಸಿಡರ್ ಬಾಬಾ…ರುದ್ರಾಕ್ಷಾ!
Shirva: ಮೂಡುಬೆಳ್ಳೆ ಪೇಟೆ; ನಿತ್ಯ ಟ್ರಾಫಿಕ್ ಜಾಮ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.