ವಿಶ್ವ ಹೃದಯ ದಿನ 2017


Team Udayavani, Oct 1, 2017, 6:15 AM IST

Heart-day-2017.jpg

ನಾವು ವಿಶ್ವ ಹೃದಯ ದಿನವನ್ನು ಸೆಪ್ಟಂಬರ್‌ 29ರಂದು ಆಚರಿಸುತ್ತಿದ್ದೇವೆ. 2012ರಿಂದೀಚೆಗೆ ಪ್ರತಿವರ್ಷ ಇದನ್ನು ಹಮ್ಮಿಕೊಳ್ಳಲಾಗುತ್ತಿದೆ. ಹೃದ್ರೋಗ ಮತ್ತು ಲಕ್ವಾಗಳು ಜಾಗತಿಕ ಮಟ್ಟದಲ್ಲಿ ನಂಬರ್‌ 1 ಮಾರಣಾಂತಿಕ ರೋಗಗಳು ಎಂಬ ಬಗ್ಗೆ ಜಗತ್ತಿನಾದ್ಯಂತ ಜನರಿಗೆ ಮಾಹಿತಿ ನೀಡಲು ಮತ್ತು ಅವರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ವಿಶ್ವ ಹೃದಯ ಒಕ್ಕೂಟವು ವಿಶ್ವ ಹೃದಯ ದಿನಾಚರಣೆಯ ಪರಿಕಲ್ಪನೆಯನ್ನು ಸೃಷ್ಟಿಸಿದೆ. ವಿಶ್ವ ಹೃದಯ ದಿನದಂದು ಹೃದ್ರೋಗಗಳು ಮತ್ತು ಅವುಗಳಿಗೆ ಕಾರಣವಾಗುವ ಅಪಾಯಾಂಶಗಳ ಬಗ್ಗೆ ಜನರಿಗೆ ಶಿಕ್ಷಣ ಮತ್ತು ಅರಿವು ಒದಗಿಸುವ ಗುರಿಯನ್ನು ನಾವು ಹೊಂದಿದ್ದೇವೆ. ವ್ಯಕ್ತಿಗಳು, ಕುಟುಂಬಗಳು, ಸಂಘಟನೆಗಳು, ಸಮುದಾಯಗಳು ಮತ್ತು ಸರಕಾರಗಳ ಸಕ್ರಿಯ ಭಾಗವಹಿಸುವಿಕೆಯಿಂದ ವಿಶ್ವ ಹೃದಯ ದಿನವು ಒಂದು ಜಾಗತಿಕ ಆಂದೋಲನವಾಗಿ ಮಾರ್ಪಟ್ಟಿದೆ. ಹೃದಯ ಅಥವಾ ಮಿದುಳಿನಂತಹ ದೇಹದ ವಿವಿಧ ಅಂಗಗಳ ರಕ್ತನಾಳಗಳ ಕಾಯಿಲೆಗಳು ಹೃದ್ರೋಗಗಳಡಿ ಸೇರಿಕೊಳ್ಳುತ್ತವೆ. ಕೊರೊನರಿ ಹಾರ್ಟ್‌ ಡಿಸೀಸ್‌ ಎಂದು ವೈದ್ಯಕೀಯ ಭಾಷೆಯಲ್ಲಿ ಕರೆಯಲ್ಪಡುವ ಹೃದಯಾಘಾತ ಮತ್ತು ಸೆರೆಬೊÅ-ವಾಸ್ಕಾಲಾರ್‌ ಡಿಸೀಸ್‌ ಎಂದು ಕರೆಯಲ್ಪಡುವ ಲಕ್ವಾ ಇವುಗಳ ಪೈಕಿ ಅತ್ಯಂತ ಸಾಮಾನ್ಯವಾದುವು. ಇವುಗಳು ಉಂಟಾಗುವ ಅಪಾಯವನ್ನು ಆಹಾರಾಭ್ಯಾಸ ನಿಯಂತ್ರಣ, ವ್ಯಾಯಾಮ, ರಕ್ತದೊತ್ತಡದ ನಿಯಂತ್ರಣ ಮತ್ತು ತಂಬಾಕು ಉತ್ಪನ್ನಗಳ ಬಳಕೆ, ಸೇವನೆಯನ್ನು ತ್ಯಜಿಸುವ ಮೂಲಕ ಕಡಿಮೆ ಮಾಡಿಕೊಳ್ಳಬಹುದಾಗಿದೆ. ವಿಶ್ವ ಹೃದಯ ದಿನದ ಈ ವರ್ಷದ ಘೋಷ ವಾಕ್ಯವು “”ಆರೋಗ್ಯದ ಹೃದಯದಲ್ಲಿ” ಎಂಬುದಕ್ಕೆ ಸಂಬಂಧಿಸಿದೆ. 

ನಿಮ್ಮ ಹೃದಯವನ್ನು ಹೇಗೆ ರಕ್ಷಿಸಿಕೊಳ್ಳಬಹುದು
– ವ್ಯಾಯಾಮ:
ದಿನಕ್ಕೆ ಸುಮಾರು 30 ನಿಮಿಷಗಳ ವ್ಯಾಯಾಮವನ್ನು ನಿಯಮಿತವಾಗಿ ಮಾಡುವುದರಿಂದ ಹೃದಯಾಘಾತ ಮತ್ತು ಲಕ್ವಾ ಉಂಟಾಗುವ ಅಪಾಯವನ್ನು ತಡೆಯಲು ಸಹಾಯವಾಗುತ್ತದೆ. ಲಿಫ್ಟ್ನ ಬದಲಾಗಿ ಏರಿಳಿಯಲು ಮೆಟ್ಟಿಲುಗಳನ್ನು ಉಪಯೋಗಿಸಿ, ಬಸ್‌ ಪ್ರಯಾಣದ ಸಂದರ್ಭದಲ್ಲಿ ಒಂದು ನಿಲ್ದಾಣ ಮುಂಚಿತವಾಗಿ ಇಳಿದು ನಡೆದು ಸಾಗಿರಿ – ಇವು ಕೆಲವು ಉದಾಹರಣೆಗಳು ಮಾತ್ರ. ವ್ಯಾಯಾಮವು ತೂಕ ನಿಯಂತ್ರಣಕ್ಕೆ ಮತ್ತು ಒತ್ತಡವನ್ನು ದೂರ ಮಾಡುವುದಕ್ಕೆ ಕೂಡ ನೆರವಾಗುತ್ತದೆ. 

-ಧೂಮಪಾನ ಮತ್ತು ಇತರ ತಂಬಾಕು ಉತ್ಪನ್ನಗಳ ಬಳಕೆ ನಿಲ್ಲಿಸಿ: ನಾವು ಧೂಮಪಾನವನ್ನು ತ್ಯಜಿಸಿದರೆ ಅಪಾಯವು ಒಂದು ವರ್ಷದಲ್ಲಿ ಅರ್ಧಕ್ಕೆ ಇಳಿಯುತ್ತದೆ ಮತ್ತು ಕೆಲವು ವರ್ಷಗಳ ಬಳಿಕ ಸಹಜ ಅಪಾಯ ಮಟ್ಟಕ್ಕೆ ಮರಳುತ್ತೇವೆ. ಇದರ ಜತೆಗೆ ಅನಾರೋಗ್ಯಕರ ಹೊಗೆ ತುಂಬಿದ ಕಾರ್ಖಾನೆಗಳಂತಹ ಹೊಗೆತುಂಬಿದ ಪರಿಸರವನ್ನೂ ಮುಖಕವಚ ಇಲ್ಲದೆ ಪ್ರವೇಶಿಸುವುದರಿಂದ ದೂರ ಇರಿ. 

– ಆರೋಗ್ಯಕರ ಆಹಾರಾಭ್ಯಾಸ: ಸಾಕಷ್ಟು ತಾಜಾ ಹಣ್ಣುಗಳು, ತರಕಾರಿಗಳು, ಮೀನು, ಬಟಾಣಿ, ಬೀನ್ಸ್‌ ಮತ್ತು ಕೊಬ್ಬು ಕಡಿಮೆ ಇರುವ ಆಹಾರವಸ್ತುಗಳನ್ನು ಸೇವಿಸಿ. ಸಂಸ್ಕರಿತ ಆಹಾರವಸ್ತುಗಳಲ್ಲಿ ಉಪ್ಪಿನಂಶ ಹೇರಳವಾಗಿರುವ ಕಾರಣ ಅವುಗಳನ್ನು ವರ್ಜಿಸಿ. ನೀರು ಕುಡಿಯಿರಿ, ಮದ್ಯವನ್ನಲ್ಲ.

– ತೂಕ ನಿಯಂತ್ರಣ: ನಿಮ್ಮ ದೇಹ ಪರಿಮಾಣ ಸೂಚಿ (ಬಾಡಿ ಮಾಸ್‌ ಇಂಡೆಕ್ಸ್‌-ಬಿಎಂಐ) ಲೆಕ್ಕ ಹಾಕಿ (ತೂಕ; ಕಿ.ಗ್ರಾಂಗಳಲ್ಲಿ/ ಎತ್ತರ ಮೀಟರ್‌ ಘಾತ 2). 18.5ರಿಂದ 24.9ರ ನಡುವಣ ಬಿಎಂಐ ಆರೋಗ್ಯಪೂರ್ಣವಾದುದು. ಇದು ರಕ್ತದ ಒತ್ತಡ ನಿಯಂತ್ರಣಕ್ಕೂ ಸಹಕಾರಿಯಾಗಿದೆ. 

40 ವರ್ಷ ವಯಸ್ಸಿನ ಬಳಿಕ, ನಿಮ್ಮ ರಕ್ತದೊತ್ತಡ, ಗುÉಕೋಸ್‌  ಮತ್ತು ಕೊಲೆಸ್ಟರಾಲ್‌ ಅನ್ನು ವರ್ಷಕ್ಕೊಮ್ಮೆ ತಪಾಸಿಸಿಕೊಳ್ಳಿ.ಹಠಾತ್‌ ಹೃದಯಾಘಾತವು ನಿಮ್ಮ ಸುತ್ತಮುತ್ತ ಯಾರಿಗೇ ಆದರೂ ಸಂಭವಿಸಬಹುದು. ಹಾಗಾಗಿ ಸಿಪಿಆರ್‌ (ಹೃದಯ ಪುನಶ್ಚೇತನ)/ಹೃದಯ ಮಸಾಜ್‌ ಬಗ್ಗೆ ಕಲಿತುಕೊಳ್ಳಿ; ಅದರಿಂದ ಸಂದರ್ಭವೊದಗಿದಲ್ಲಿ ಅಗತ್ಯವುಳ್ಳವರನ್ನು ರಕ್ಷಿಸುವುದು ನಿಮಗೆ ಸಾಧ್ಯವಾಗಬಲ್ಲುದು.

ವೈದ್ಯರು ಶಿಫಾರಸು ಮಾಡಿರುವ ಔಷಧಿಗಳನ್ನು ನೀವು ಮತ್ತು ನಿಮ್ಮ ಸ್ನೇಹಿತರು ಹಾಗೂ ಬಂಧುವರ್ಗದವರು ತಡೆಯಿಲ್ಲದೆ ತೆಗೆದುಕೊಳ್ಳುತ್ತಿದ್ದಾರೆ ಎಂಬುದನ್ನು ಖಾತರಿ ಪಡಿಸಿಕೊಳ್ಳಿ.

ಹೃದಯಾಘಾತದ 
ಎಚ್ಚರಿಕೆ ಸಂಕೇತಗಳು

ದವಡೆಯಿಂದ ಕೆಳಭಾಗ ಮತ್ತು ಹೊಕ್ಕುಳಿಗಿಂತ ಮೇಲು ಭಾಗದ ಯಾವುದೇ ಸ್ಥಳದಲ್ಲಿ ಅಸ್ವಸ್ಥತೆಯು ಹೃದಯ ರೋಗದ ಕಾರಣವಾಗಿ ಉಂಟಾಗಿರಬಹುದು ಮತ್ತು ಅದರ ಸಂಕೀರ್ಣ ಸಮಸ್ಯೆಗಳನ್ನು ತಡೆಯಲು ಎಷ್ಟು ಸಾಧ್ಯವೋ ಅಷ್ಟು ಬೇಗ ಪರಿಣಿತ ವೈದ್ಯಕೀಯ ಅಭಿಪ್ರಾಯವನ್ನು ಪಡೆಯಬೇಕು. ಹೃದಯಾಘಾತದ ಕೌಟುಂಬಿಕ ಚರಿತ್ರೆ ಇರುವವರು ಸಮಾನ ವಯಸ್ಸುಗಳಲ್ಲಿ ಹೃದಯರೋಗಗಳಿಗೆ ತುತ್ತಾಗುವ ಅಪಾಯ ಇರುವುದರಿಂದ ಇನ್ನಷ್ಟು ಎಚ್ಚರಿಕೆಯಿಂದ ಇರಬೇಕು.

– ಡಾ| ಟಾಮ್‌ ದೇವಸ್ಯ,   
ಪ್ರೊಫೆಸರ್‌ ಹಾಗೂ ಮುಖ್ಯಸ್ಥರು,
ಹೃದಯ ಚಿಕಿತ್ಸಾ ವಿಭಾಗ,
ಕೆ.ಎಂ.ಸಿ. ಆಸ್ಪತ್ರೆ, ಮಣಿಪಾಲ.

ಟಾಪ್ ನ್ಯೂಸ್

Kasaragod: ಬಾಲಕಿಯೊಂದಿಗೆ ಅನುಚಿತ ವರ್ತನೆ: ಯುವಕನ ಬಂಧನ

Kasaragod: ಬಾಲಕಿಯೊಂದಿಗೆ ಅನುಚಿತ ವರ್ತನೆ: ಯುವಕನ ಬಂಧನ

Mangaluru: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ನೆಪದಲ್ಲಿ 10.84 ಲಕ್ಷ ರೂ. ವಂಚನೆ: ಆರೋಪಿ ಬಂಧನ

Mangaluru: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ನೆಪದಲ್ಲಿ 10.84 ಲಕ್ಷ ರೂ. ವಂಚನೆ: ಆರೋಪಿ ಬಂಧನ

Mangaluru: ಎಂಸಿಸಿ ಬ್ಯಾಂಕ್‌ ಅಧ್ಯಕ್ಷರ ಮಧ್ಯಂತರ ಜಾಮೀನು ಅರ್ಜಿ ತಿರಸ್ಕೃತ

Mangaluru: ಎಂಸಿಸಿ ಬ್ಯಾಂಕ್‌ ಅಧ್ಯಕ್ಷರ ಮಧ್ಯಂತರ ಜಾಮೀನು ಅರ್ಜಿ ತಿರಸ್ಕೃತ

Fraud Case: ಷೇರು ಮಾರುಕಟ್ಟೆಯಲ್ಲಿ ಲಾಭ ಆಮಿಷ 40.64 ಲಕ್ಷ ರೂ. ವಂಚನೆ: ಆರೋಪಿಯ ಬಂಧನ

Fraud Case: ಷೇರು ಮಾರುಕಟ್ಟೆಯಲ್ಲಿ ಲಾಭ ಆಮಿಷ 40.64 ಲಕ್ಷ ರೂ. ವಂಚನೆ: ಆರೋಪಿಯ ಬಂಧನ

1-ct

C.T.Ravi; ಬಿಡುಗಡೆ ಬಳಿಕ ಬಿಜೆಪಿ ಕಿಡಿ ಕಿಡಿ: ನಾವೇನು ಬಳೆ ತೊಟ್ಟು ಕುಳಿತಿಲ್ಲ…!

horatti

C.T. Ravi; ಅವಾಚ್ಯ ಶಬ್ದಗಳಿಂದ ನಿಂದಿಸಿದ ದಾಖಲೆ ಇಲ್ಲ: ಮಹತ್ವ ಪಡೆದ ಸಭಾಪತಿ ಹೇಳಿಕೆ

TuluMovie; Middle Class Family is ready to hit the screens: Release date has arrived

TuluMovie; ತೆರೆಗೆ ಬರಲು ಸಿದ್ದವಾಯ್ತು ಮಿಡಲ್‌ ಕ್ಲಾಸ್‌ ಫ್ಯಾಮಿಲಿ: ರಿಲೀಸ್‌ ದಿನಾಂಕ ಬಂತು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5–jaundice

Jaundice: ಜಾಂಡಿಸ್‌ ಅಥವಾ ಅರಶಿನ ಕಾಮಾಲೆ

4-oral-cancer-2

Oral cancer: ನಿಶ್ಶಬ್ದ ಅಪಾಯ; ಬಾಯಿಯ ಕ್ಯಾನ್ಸರ್‌ ವಿರುದ್ಧ ಹೋರಾಟ

7-health

Cleft Lip and Palate: ಸೀಳು ತುಟಿ ಮತ್ತು ಅಂಗುಳ- ಹೆತ್ತವರಿಗೆ ತಿಳಿವಳಿಕೆ

6-surgery

Surgery: ನಾನು ಯಾಕೆ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕು?

6-1

Infections: ಅಗೋಚರ ಕೊಲೆಗಾರ – ಸೋಂಕುಗಳ ವಿರುದ್ಧದ ಹೋರಾಟದಲ್ಲಿ ನಾವು ಸೋಲುತ್ತಿದ್ದೇವೆಯೇ?

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Kasaragod: ಬಾಲಕಿಯೊಂದಿಗೆ ಅನುಚಿತ ವರ್ತನೆ: ಯುವಕನ ಬಂಧನ

Kasaragod: ಬಾಲಕಿಯೊಂದಿಗೆ ಅನುಚಿತ ವರ್ತನೆ: ಯುವಕನ ಬಂಧನ

Mangaluru: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ನೆಪದಲ್ಲಿ 10.84 ಲಕ್ಷ ರೂ. ವಂಚನೆ: ಆರೋಪಿ ಬಂಧನ

Mangaluru: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ನೆಪದಲ್ಲಿ 10.84 ಲಕ್ಷ ರೂ. ವಂಚನೆ: ಆರೋಪಿ ಬಂಧನ

Sullia: ಚಿನ್ನ ಕಳ್ಳತನ ಪ್ರಕರಣ: ಇಬ್ಬರು ಪೊಲೀಸರ ವಶಕ್ಕೆ

Sullia: ಚಿನ್ನ ಕಳ್ಳತನ ಪ್ರಕರಣ: ಇಬ್ಬರು ಪೊಲೀಸರ ವಶಕ್ಕೆ

Mangaluru: ಎಂಸಿಸಿ ಬ್ಯಾಂಕ್‌ ಅಧ್ಯಕ್ಷರ ಮಧ್ಯಂತರ ಜಾಮೀನು ಅರ್ಜಿ ತಿರಸ್ಕೃತ

Mangaluru: ಎಂಸಿಸಿ ಬ್ಯಾಂಕ್‌ ಅಧ್ಯಕ್ಷರ ಮಧ್ಯಂತರ ಜಾಮೀನು ಅರ್ಜಿ ತಿರಸ್ಕೃತ

Fraud Case: ಷೇರು ಮಾರುಕಟ್ಟೆಯಲ್ಲಿ ಲಾಭ ಆಮಿಷ 40.64 ಲಕ್ಷ ರೂ. ವಂಚನೆ: ಆರೋಪಿಯ ಬಂಧನ

Fraud Case: ಷೇರು ಮಾರುಕಟ್ಟೆಯಲ್ಲಿ ಲಾಭ ಆಮಿಷ 40.64 ಲಕ್ಷ ರೂ. ವಂಚನೆ: ಆರೋಪಿಯ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.