ಸೋಲ್‌ಮೇಟ್
Team Udayavani, Oct 1, 2017, 6:30 AM IST
ಜೀವನ ಪಯಣದಲ್ಲಿ ಎಷ್ಟೋ ಸಹಪ್ರಯಾಣಿಕರು ಜೊತೆಯಾಗುತ್ತಾರೆ. ಕೆಲವರು ಮನಸ್ಸಿನವರೆಗೂ ಬರುತ್ತಾರೆ. ಇನ್ನು ಕೆಲವರು ಮಧ್ಯದÇÉೇ ಇಳಿದುಹೋಗುತ್ತಾರೆ. ಇದನ್ನು ಸ್ನೇಹ ಎನ್ನುತ್ತೇವೆ. ಒಂದೇ ವೇವ್‌ಲೆಂಗ್¤ ಇರುವ ಸ್ನೇಹಿತರು ಸಿಗುವುದು ಸುಕೃತ.
ಕಚೇರಿಯಲ್ಲಿ ಏನೋ ಕೆಲಸದಲ್ಲಿದ್ದವಳು, ಫೋನ್ ರಿಂಗಣಿಸಿದಾಗ ಎತ್ತಿ “ಹಲೋ’ ಎಂದಳು. ಅತ್ತ ಕಡೆಯಿಂದ ಮೃದುವಾದ ದನಿ. “ನಾಳೆ ಸಿಗ್ತಿàರಾ, ಒಮ್ಮೆ ನೋಡಿ ಮಾತಾಡೋಣ’ ಅಂತ, ಆಮೇಲೆ, “ನಂಗೂ ಟ್ರಾವೆಲಿಂಗ್ ಇದೆ. ಬಿಡುವಾಗಲ್ಲ’ ಇವಳು, “ಸರಿ’ ಎಂದಳು. ಯಾವಾಗ, ಎಲ್ಲಿ, ಎಂದು ಕೇಳಿದಳು. “ನಿಮ್ಮ ಆಫೀಸಿಗೆ ಹತ್ತಿರವೇ, ನಿಮಗೆ ಹೆಚ್ಚು ತೊಂದರೆ ಕೊಡಲ್ಲ’ ಎನ್ನುತ್ತ ಭೇಟಿಯಾಗಬೇಕಾದ ಸ್ಥಳದ ಹೆಸರು ತಿಳಿಸಿದ್ದರು. “ಬರಿ¤àರಾ’ ಖಂಡಿತವಾಗಿ ಧ್ವನಿಯಲ್ಲಿ ಗೋಗರೆತವಿತ್ತು. ಆ ಧ್ವನಿಯಲ್ಲಿದ್ದ ಆದ್ರìತೆಗೆ ಮನಸ್ಸು ಮೃದುವಾಗಿತ್ತು. “ಆಗಲಿ ಬರ್ತೇನೆ, ನಾಳೆ ಸಂಜೆ ಆರೂವರೆಗೆ ಅಲ್ಲಿರ್ತೇನೆ’ ಎಂದಳು.
ಮಾರನೆಯ ದಿನ ಸಂಜೆ ಆರು ಗಂಟೆಯ ಮುಂಚೆ ಒಂದು ಮೆಸೇಜು, “ಬರ್ತಾ ಇದೀರ ಅಲ್ವಾ?’ ಎಂದು. ನಗು ಬಂದಿತ್ತು ಅವಳಿಗೆ. “ಬರ್ತಾ ಇದ್ದೀನಿ’ ಮಾರುತ್ತರ ಕಳಿಸಿದ್ದಳು. ಕೆಲಸಗಳೆಲ್ಲ ಬೇಗ ಮುಗಿಸಿ ತಲೆಕೂದಲಿಗೆ ಬಾಚಣಿಗೆಯಾಡಿಸಿ, ಸೀರೆಯ ನೆರಿಗೆ ಸರಿ ಮಾಡಿಕೊಂಡು ಲಗುಬಗೆಯಿಂದ ಆರಕ್ಕೆ ಕಚೇರಿಯಿಂದ ಹೊರಟಳು. ಅವರು ಹೇಳಿದ ವಿಳಾಸ ಅಂತ ದೂರವೇನಿರಲಿಲ್ಲ. ಆಟೋ ಬೇಡವೆನಿಸಿತ್ತು. ನಡೆದೇ ಹೊರಟಳು. ಆ ಜಾಗ ಆಟೋದಲ್ಲಿ ಹೋಗುವಷ್ಟು ದೂರವೂ ಇರಲಿಲ್ಲ. ನಡೆದು ಹೋಗುವಷ್ಟು ಹತ್ತಿರವೂ ಅಲ್ಲ. ತಾನು ನಡೆಯುವುದೇ ಕಡಿಮೆ ಅಪರೂಪಕ್ಕಾದರೂ ಒಂದಷ್ಟು ನಡೆಯೋಣವೆನಿಸಿತು. ಸಂಜೆಯ ತಂಗಾಳಿ ಹಿತವಾಗಿತ್ತು.
ಅವರೇನೂ ತುಂಬಾ ದಿನದ ಪರಿಚಯದವರೇನೂ ಅಲ್ಲ. ಹೀಗೇ ಅಚಾನಕ್ಕಾಗಿ ಪರಿಚಯವಾಗಿತ್ತು. ಇಬ್ಬರೂ ಸಾಹಿತ್ಯ ಪ್ರಿಯರು. ಅದೇ ವಿಷಯದ ಬಗ್ಗೆ ಒಂದಷ್ಟು ಹೊತ್ತು ಮಾತಾಡಿದ್ದರು. ಆತ ವಿಷಯಗಳ ಖಜಾನೆ ಎಂದು ಅವಳಿಗನಿಸಿದ್ದರೆ ಅವಳ ನವಿರು ಮಾತು, ಮಾರ್ದವತೆ, ಅವಳ ತಿಳಿವಳಿಕೆ ಅವರಿಗೆ ಹಿಡಿಸಿತ್ತು. ಒಂದೇ ವಿಚಾರಧಾರೆ ಇರುವವರ ಮಧ್ಯೆ ಸ್ನೇಹವಾಗಲು ಎಷ್ಟು ಹೊತ್ತು ಬೇಕು? ವೈಯುಕ್ತಿಕ ವಿಚಾರಗಳನ್ನು ಅವರೆಂದೂ ಮಾತಾಡಿದವರಲ್ಲ. ಬರೀ ಪ್ರಕೃತಿ ಗಾಳಿ-ಮಳೆ ಇಷ್ಟವಾದ ಸಿನಿಮಾ, ಸಾಹಿತ್ಯ, ಇಷ್ಟಪಟ್ಟು ಓದಿದ ಕೃತಿಗಳು, ಕೇಳಿದ ಗಝಲ್‌ಗಳು ಇಷ್ಟೇ. ಸ್ವಲ್ಪ ದಿನಗಳÇÉೇ ಸ್ನೇಹ ಆತ್ಮೀಯತೆಗೆ ತಿರುಗಿತ್ತು. ಯಾವ ಪುಸ್ತಕ ಓದಿದರೂ ಅದರ ಬಗ್ಗೆ ಚರ್ಚಿಸುತ್ತಿದ್ದರು. ನೋಡಿದ ಸಿನೆಮಾ ಅದರ ಹಾಡುಗಳು ಹೀಗೆ ಎಲ್ಲವೂ ಆ ಚರ್ಚೆಯಲ್ಲಿ ಬಂದುಹೋಗುತ್ತಿತ್ತು ಮಾತುಕತೆಯಲ್ಲಿ. ಹಾಗಂತ ಅವರು ಎದುರಾಬದುರಾ ಕೂತು ಚರ್ಚಿಸುತ್ತಿರಲಿಲ್ಲ. ಎಲ್ಲ ಪೋನು ಇಲ್ಲವೇ ಮೆಸೇಜು. ಯಾವುದೇ ಕಳಂಕವಿಲ್ಲದ ನಿರ್ಮಲ ಶುದ್ಧ ಸ್ನೇಹ. ಆಗ ತಾನೆ ಅರಳಿದ ಹೂವಿನಂಥ ಪರಿಶುಭ್ರ ಸ್ನೇಹ. ಇಬ್ಬರಿಗೂ ಪರಸ್ಪರರ ಬಗ್ಗೆ ಅಪಾರ ಗೌರವ. ಇಬ್ಬರೂ ಪ್ರಬುದ್ಧರಾದ್ದರಿಂದ ವೈಯಕ್ತಿಕ ಬದುಕು ಈ ಸ್ನೇಹಕ್ಕೆ ಅಡ್ಡ ಬರುತ್ತಿರಲಿಲ್ಲ. ವೈಯಕ್ತಿಕ ಬದುಕನ್ನೂ ಈ ಸ್ನೇಹವನ್ನು ಬೇರೆಯಾಗಿ ನೋಡುವ ಪ್ರಬುದ್ಧತೆ ಇಬ್ಬರಿಗೂ ಇತ್ತು.
ಯೋಚಿಸುತ್ತ ದಾರಿ ಸಾಗಿದ್ದೇ ಗೊತ್ತಾಗಲಿಲ್ಲ. ಅವರು ಹೇಳಿದ ಜಾಗ ತಲುಪಿ ಅವರಿಗೆ ಫೋನಾಯಿಸಿದಳು. “ಹಲೋ’ ಅದೇ ಮೃದು ಧ್ವನಿ! “ನಾನು ಇಲ್ಲಿದೀನಿ, ನೀವು ಎಲ್ಲಿದ್ದೀರಾ?’ ಎಂದಳು. ನಾನು ನಿಮ್ಮ ಎದುರು ರಸ್ತೆಯÇÉೇ ಇದೀನಿ ತಲೆ ಎತ್ತಿ ನೋಡಿ ಎಂದಿದ್ದರು. ತಲೆಯೆತ್ತಿ ನೋಡಿದವಳಿಗೆ ಕಂಡದ್ದು ನೀಲಿ ಚೌಕಳಿ ಶರಟಿನಲ್ಲಿ ನಿಂತಿದ್ದ ಆತ. ಅವಳಿಗೆ ಗುರುತಾಗಲಿ ಎಂದು ಕೈ ವೇವ್ ಮಾಡಿದ್ದರು. ತಾನು ಆ ಕಡೆ ಗಮನಿಸದೆ ಫೋನಾಯಿಸಿದ್ದಕ್ಕೆ ಅವಳಿಗೆ ನಾಚಿಕೆಯಾಗಿತ್ತು. ತನ್ನೊಳಗೇ ನಗುತ್ತ ರಸ್ತೆ ಆ ಕಡೆಗೆ ನಡೆದು ಬಂದಳು. ಎರಡೂ ಕೈ ಜೋಡಿಸಿ ನಮಸ್ಕರಿಸಿದ ಅವರು “ಬನ್ನಿ’ ಎಂದು ಮುಂದೆ ನಡೆದಿದ್ದರು. ತಲೆಯೆತ್ತಿದವಳಿಗೆ ಕಂಡದ್ದು ಜಗಮಗಿಸುತ್ತಿದ್ದ ಲೈಟಿನ ಬೆಳಕಲ್ಲಿ ಚಿತ್ತಾರವಾಗಿ ಬಿಡಿಸಿದ್ದ “ಸೋಲ್ ಮೇಟ್’ ಎಂಬ ಫಲಕ. ಅವರ ಹಿಂದೆ ಹೆಜ್ಜೆ ಹಾಕಿದ್ದಳು.
ಸೋಲ್‌ಮೇಟ್ ಒಂದು ರೆಸ್ಟೋರೆಂಟ್. ಬ್ರಿಟಿಷರ ಕಾಲದ ಕಟ್ಟಡ. ಹಳೆಯ ವಿನ್ಯಾಸವನ್ನು ಹಾಗೇ ಉಳಿಸಿಕೊಂಡಿದ್ದ ಗತಕಾಲದ ನೆನಪುಗಳನ್ನು ಕಟ್ಟಿ ಕೊಡುವಂತಿದ್ದ ರೆಸ್ಟೋರೆಂಟ್. ದೊಡ್ಡ ದೊಡ್ಡ ಕಿಟಕಿಗಳು, ಹಳೆಯ ಕಾಲದ ಮರದ ಪೀಠೊಪಕರಣಗಳು ಬಿಳಿ ಸಮವಸ್ತ್ರದಲ್ಲಿದ್ದ ಬೇರರ್‌ಗಳು ರೆಸ್ಟುರಾದ ಒಳಗಿದ್ದ ಶಾಂತ ವಾತಾವರಣ ಮನಸ್ಸಿಗೆ ಹಿತವಾಗಿತ್ತು. ಹೆಚ್ಚು ಗೌಜು ಗದ್ದಲ ಇಲ್ಲದೆ ನೆಮ್ಮದಿಯಾಗಿ ಕುಳಿತು ಮಾತಾಡಬಹುದಿತ್ತು. ಇಬ್ಬರೂ ಒಂದು ಪ್ರಶಾಂತವಾದ ಜಾಗ ಹಿಡಿದು ಕುಳಿತರು.
ತಿಂಡಿ ತಿನ್ನುತ್ತಾ ಹರಟಿದ್ದರು. ಅವರ ಮಾತಿನಲ್ಲಿ ಫೇಸ್ ಬುಕ್, ಇತ್ತೀಚಿನ ರಾಜಕೀಯ ವಿದ್ಯಮಾನಗಳು, ಸಾಹಿತ್ಯ, ಇತ್ತೀಚೆಗೆ ಓದಿದ ಪುಸ್ತಕಗಳು, ಪ್ರಕಾಶಕರು ಇತ್ತೀಚೆಗೆ ನೋಡಿದ ಸಿನೆಮಾಗಳು ಎಲ್ಲವೂ ಹಾಸುಹೊಕ್ಕಾಯಿತು. ಅವಳಿಗಾಗಿ ದೆಹಲಿಯಲ್ಲಿ ಖರೀದಿಸಿದ್ದ ಒಂದು ಶಾಲನ್ನು ತಮ್ಮ ಕೈಚೀಲದಿಂದ ತೆಗೆದುಕೊಟ್ಟರು. ಕಡುಗೆಂಪು ವರ್ಣದ ಹಕ್ಕಿಯ ತುಪ್ಪಳದಂತೆ ಮೃದುವಾಗಿದ್ದ ಶಾಲು. ಅವಳದನ್ನು ತನ್ನ ಹ್ಯಾಂಡ್ ಬ್ಯಾಗಿಗೆ ಸೇರಿಸಿದ್ದಳು. ಆ ಆತ್ಮೀಯತೆಯಲ್ಲಿ ಮಾತಿಗೆ ನಿಲುಕಲಾರದ ಭಾವವಿತ್ತು. ಮನಸು ಮೂಕವಾಗಿತ್ತು.
ಹೊತ್ತಾಯಿತೆಂದು ಇಬ್ಬರೂ ಎದ್ದರು. ಹಾಗೆಯೇ ಮೆಯಿನ್‌ರೋಡಿನವರೆಗೂ ಮಾತನಾಡುತ್ತ ಬಂದರು.
– ವೀಣಾ ರಾವ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್ ಮುಖ್ಯಸ್ಥೆ
Daily Horoscope: ಉದ್ಯೋಗಾಸಕ್ತರಿಗೆ ಹೊಸ ಅವಕಾಶಗಳು ಗೋಚರ, ಸ್ವರ್ಣೋದ್ಯಮಕ್ಕೆ ಲಾಭ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.