ಆಸೀಸ್‌ ಆತ್ಮವಿಶ್ವಾಸಕ್ಕೆ ಭಾರತದ ಸವಾಲು


Team Udayavani, Oct 1, 2017, 6:30 AM IST

PTI9_30_2017_000149b.jpg

ನಾಗ್ಪುರ: ಭಾರತದ ಸತತ ಗೆಲುವಿನ ಓಟಕ್ಕೆ ಬ್ರೇಕ್‌ ಹಾಕುವುದರ ಜತೆಗೆ ತನ್ನ ಸೋಲಿನ ಸರಪಳಿಯನ್ನು ತುಂಡರಿಸಿಕೊಂಡ ವಿಶ್ವ ಚಾಂಪಿಯನ್‌ ಆಸ್ಟ್ರೇಲಿಯ ತಂಡ ರವಿವಾರ ನಾಗ್ಪುರದಲ್ಲಿ ಕೊನೆಯ ಸಲ ಟೀಮ್‌ ಇಂಡಿಯಾ ಸವಾಲಿಗೆ ಅಣಿಯಾಗಿದೆ. 

ಇತ್ತ ಸರಣಿ ವಿಜೇತ ಕೊಹ್ಲಿ ಪಡೆ ಬೆಂಗಳೂರು ಸೋಲನ್ನು ಮರೆತು 4ನೇ ಜಯ ಸಾಧಿಸಿ ಸರಣಿಯನ್ನು ದೊಡ್ಡ ಅಂತರದಲ್ಲಿ ಗೆಲ್ಲುವ ಯೋಜನೆಯಲ್ಲಿದೆ.

ಬೆಂಗಳೂರಿನ ದೊಡ್ಡ ಮೊತ್ತದ ಹೋರಾಟದಲ್ಲಿ ಭಾರತ ಕೇವಲ 21 ರನ್ನುಗಳ ಸೋಲಿಗೆ ತುತ್ತಾಗಿತ್ತು. ಹೀಗಾಗಿ ಸತತ 10 ಗೆಲುವಿನ ದಾಖಲೆ ತಪ್ಪಿಹೋಗಿತ್ತು. ಬೌಲಿಂಗ್‌ ವಿಭಾಗದಲ್ಲಿ ಮಹತ್ತರ ಬದಲಾವಣೆ ಮಾಡಿಕೊಂಡು ಮೊಹಮ್ಮದ್‌ ಶಮಿ, ಉಮೇಶ್‌ ಯಾದವ್‌ ಮತ್ತು ಅಕ್ಷರ್‌ ಪಟೇಲ್‌ ಅವರನ್ನು ಸರಣಿಯಲ್ಲಿ ಮೊದಲ ಸಲ ಆಡಿಸಲಾಗಿತ್ತು. ಇವರಲ್ಲಿ ಯಶಸ್ಸು ಸಾಧಿಸಿದವರು ಉಮೇಶ್‌ ಯಾದವ್‌ ಮಾತ್ರ. ಆದರೂ ಅಂತಿಮ ಪಂದ್ಯದಲ್ಲಿ ಈ ಮೂವರಿಗೆ ಮತ್ತೂಂದು ಅವಕಾಶ ಲಭಿಸಿದರೂ ಅಚ್ಚರಿ ಇಲ್ಲ. ಆಗ ಭುವನೇಶ್ವರ್‌ ಕುಮಾರ್‌, ಜಸ್‌ಪ್ರೀತ್‌ ಬುಮ್ರಾ ಮತ್ತು ಕುಲದೀಪ್‌ ಯಾದವ್‌ ಪುನಃ ಹೊರಗುಳಿಯಬಹುದು.

ಆದರೆ ಡೆತ್‌ ಓವರ್‌ ಸ್ಪೆಷಲಿಸ್ಟ್‌ಗಳಾದ ಭುವಿ, ಬುಮ್ರಾ ಗೈರು ಆಸೀಸ್‌ ಜಯದಲ್ಲಿ ಮಹತ್ತರ ಪಾತ್ರ ವಹಿಸಿತು ಎಂದೂ ವ್ಯಾಖ್ಯಾನಿಸಲಾಗುತ್ತದೆ. ಇದು ಪೂರ್ತಿ ಸುಳ್ಳಲ್ಲ!

ಮೀಸಲು ಸಾಮರ್ಥ್ಯ ಪರೀಕ್ಷೆ
“ನಾವು ಈಗಾಗಲೇ ಸರಣಿ ಜಯಿಸಿದ್ದೇವೆ. ತಂಡದ ಮೀಸಲು ಸಾಮರ್ಥ್ಯವನ್ನು ಪರೀಕ್ಷಿಸಬೇಕಿತ್ತು. ಹೀಗಾಗಿ ಬೌಲಿಂಗ್‌ ವಿಭಾಗದಲ್ಲಿ ಬದಲಾವಣೆ ಮಾಡಿಕೊಂಡೆವು. ಎಲ್ಲರಿಗೂ ಆಡುವ ಅವಕಾಶ ಕಲ್ಪಿಸುವುದು ನಮ್ಮ ಯೋಜನೆ’ ಎಂದು ಬೆಂಗಳೂರು ಸೋಲಿನ ಬಳಿಕ ನಾಯಕ ವಿರಾಟ್‌ ಕೊಹ್ಲಿ ಪ್ರತಿಕ್ರಿಯಿಸಿದ್ದರು.

ಈ ಸರಣಿಯಲ್ಲಿ ಈವರೆಗೆ ಆಡುವ ಅವಕಾಶ ಪಡೆಯದಿದ್ದುದು ಕೆ.ಎಲ್‌. ರಾಹುಲ್‌ ಮಾತ್ರ. ಕರ್ನಾಟಕದ ಈ ಆರಂಭಕಾರನಿಗೆ ನಾಗ್ಪುರದಲ್ಲಿ ಆಡುವ ಅವಕಾಶ ಲಭಿಸುವ ಸಾಧ್ಯತೆ ಇದೆ. ಆದರೆ ರಾಹುಲ್‌ ಅವರನ್ನು ಯಾವ ಕ್ರಮಾಂಕದಲ್ಲಿ ಆಡಿಸುವುದು ಎಂಬುದೇ ದೊಡ್ಡ ಪ್ರಶ್ನೆ. ಅವರನ್ನು ಆರಂಭಿಕನನ್ನಾಗಿ ಇಳಿಸುವುದಾದರೆ ಆಗ ಅಜಿಂಕ್ಯ ರಹಾನೆ ಹೊರಗುಳಿಯಬಹುದು, ಮಧ್ಯಮ ಕ್ರಮಾಂಕದಲ್ಲಿ ಆಡಿಸುವುದಾದರೆ ಮನೀಷ್‌ ಪಾಂಡೆ ಜಾಗ ಖಾಲಿ ಮಾಡಬೇಕಾಗಬಹುದು. ಆದರೆ ರಾಹುಲ್‌ ಓಪನಿಂಗ್‌ ಹೊರತುಪಡಿಸಿ ಬೇರೆ ಕ್ರಮಾಂಕದಲ್ಲಿ ಯಶಸ್ಸು ಕಂಡಿಲ್ಲ ಎಂಬುದನ್ನು ಗಮನಿಸಬೇಕಾಗುತ್ತದೆ.

ಈ ಸರಣಿಯಲ್ಲಿ ರೋಹಿತ್‌-ರಹಾನೆ ಆರಂಭಿಕರಾಗಿ ಕ್ಲಿಕ್‌ ಆಗಿದ್ದಾರೆ. ಸತತ 2 ಶತಕಗಳ ಜತೆಯಾಟದ ಮೂಲಕ ಗಮನ ಸೆಳೆದಿದ್ದಾರೆ. ಹೀಗಿರುವಾಗ ಈ ಜೋಡಿಯನ್ನು ಬೇರ್ಪಡಿಸುವ ಸಾಧ್ಯತೆ ತೀರಾ ಕಡಿಮೆ ಎಂದೇ ಹೇಳಬೇಕಾಗುತ್ತದೆ. ಆದರೆ ಮನೀಷ್‌ ಪಾಂಡೆ ಈವರೆಗೆ ಗಮನಾರ್ಹ ಬ್ಯಾಟಿಂಗ್‌ ಪ್ರದರ್ಶಿಸಿಲ್ಲ. ಅವರಿಂದ ಒಂದೂ ಅರ್ಧ ಶತಕ ಬಂದಿಲ್ಲ. ದೊಡ್ಡ ಮೊತ್ತದ ಸವಾಲು ಮುಂದಿರುವಾಗಲೆಲ್ಲ ಹಾರ್ದಿಕ್‌ ಪಾಂಡ್ಯ ಅವರಿಗೆ ಬಡ್ತಿ ನೀಡಲಾಗುತ್ತಿದೆ. ಬಿಗ್‌ ಹಿಟ್ಟರ್‌ ಪಾಂಡ್ಯ ಯಾವ ಕ್ರಮಾಂಕಕ್ಕೂ ಸೈ ಎಂಬುದನ್ನು ಈಗಾಗಲೇ ಸಾಬೀತುಪಡಿಸಿದ್ದಾರೆ.

ಪಾಂಡ್ಯ ಅವರಿಗೆ ಪ್ರಮೋಶನ್‌ ನೀಡಿದಾಗ ಸಹಜವಾಗಿಯೇ ಧೋನಿ ಅವರನ್ನು ಕೆಳ ಕ್ರಮಾಂಕಕ್ಕೆ ಇಳಿಸಲಾಯಿತು. ಈ ಕ್ರಮ ಸಾಕಷ್ಟು ಟೀಕೆಗೆ ಗುರಿಯಾದರೂ ವಿಶ್ವಕಪ್‌ ಪ್ರಯೋಗದ ಹಿನ್ನೆಲೆಯಲ್ಲಿ ಈ ಬದಲಾವಣೆಯನ್ನು ಸ್ವೀಕರಿಸುವುದು ಅನಿವಾರ್ಯವಾಗುತ್ತದೆ.

ಆಸೀಸ್‌ ಆಲ್‌ರೌಂಡ್‌ ಶೋ
ಆಸ್ಟ್ರೇಲಿಯ ಸತತ 3 ಸೋಲುಂಡು ಸರಣಿ ಕಳೆದುಕೊಂಡರೂ ಗೆಲುವಿನ ಅವಕಾಶ ಸ್ಮಿತ್‌ ಪಡೆಗೂ ಇದ್ದಿತ್ತು. ಕೊನೆಗೆ ಬೆಂಗಳೂರಿನಲ್ಲಿ ಈ ಅವಕಾಶವನ್ನು ಬಾಚಿಕೊಂಡಿತು. ಈಗ ನಾಗ್ಪುರದಲ್ಲೂ ಗೆದ್ದು ಸರಣಿ ಸೋಲಿನ ಅಂತರವನ್ನು ತಗ್ಗಿಸುವುದು ಕಾಂಗರೂ ಯೋಜನೆ.

ಬೆಂಗಳೂರಿನಲ್ಲಿ ಆಸ್ಟ್ರೇಲಿಯದ ಆಲ್‌ರೌಂಡ್‌ ಪ್ರದರ್ಶನ ಎದ್ದು ಕಂಡಿದೆ. ಬ್ಯಾಟಿಂಗಿನಲ್ಲಿ ವಾರ್ನರ್‌, ಫಿಂಚ್‌; ಡೆತ್‌ ಓವರ್‌ಗಳಲ್ಲಿ ಕಮಿನ್ಸ್‌, ಕೋಲ್ಟರ್‌ ನೈಲ್‌, ರಿಚರ್ಡ್‌ಸನ್‌ ಅವರ ಪೇಸ್‌ ದಾಳಿ ಕ್ಲಿಕ್‌ ಆಗಿತ್ತು. ಆದರೆ ವಾರ್ನರ್‌ ಮತ್ತು ಫಿಂಚ್‌ ಅವರನ್ನು ಬೇಗನೇ ಪೆವಿಲಿಯನ್ನಿಗೆ ಅಟ್ಟಿದರೆ ಆಗ ಕಾಂಗರೂ ಕತೆ ಗಂಡಾಂತರವಾಗುವುದರಲ್ಲಿ ಅನುಮಾನವಿಲ್ಲ. ಹೀಗಾಗಿ ಭಾರತ “ಅರ್ಲಿ ಬ್ರೇಕ್‌’ ಸಾಧಿಸಿದರೆ ನಾಗ್ಪುರದಲ್ಲಿ ಗೆಲುವಿನ ಬಾವುಟ ಹಾರಿಸಬಹುದು.

ನಾಗ್ಪುರ: ಟರ್ನಿಂಗ್‌ ಟ್ರ್ಯಾಕ್‌?
ನೂತನವಾಗಿ ನಿರ್ಮಿಸಲಾದ ನಾಗ್ಪುರ ಪಿಚ್‌ ಕೊನೆಯ ಹಂತದಲ್ಲಿ ತಿರುವು ಪಡೆದುಕೊಳ್ಳುವ ಸಾಧ್ಯತೆ ಇದ್ದರೂ ಇದು ಎಂದಿನಂತೆ ದೊಡ್ಡ ಮೊತ್ತದ ಹೋರಾಟವಾದೀತು ಎಂಬುದಾಗಿ ಕ್ಯುರೇಟರ್‌ ಪ್ರವೀಣ್‌ ಹಿಂಗ್ನಿಕರ್‌ ಹೇಳಿದ್ದಾರೆ.

2015ರ ದಕ್ಷಿಣ ಆಫ್ರಿಕಾ ಪಂದ್ಯದ ವೇಳೆ ನಾಗ್ಪುರ ಪಿಚ್‌ ತೀವ್ರ ಟೀಕೆಗೆ ಗುರಿಯಾಗಿತ್ತು. ಅಂದು ಐಸಿಸಿ ಇದನ್ನು “ತೀರಾ ಕೆಳ ದರ್ಜೆಯ ಪಿಚ್‌’ ಸಾಲಿಗೆ ಸೇರಿಸಿತ್ತು.

“ಅದೇನಿದ್ದರೂ ಮುಗಿದ ಕತೆ. ನಾವೀಗ ಪುನರ್‌ ವೈಭವವನ್ನು ಕಾಣಬೇಕಿದೆ. ನಾವೀಗ ಈ ಪಿಚ್‌ನ ಮಣ್ಣನ್ನು ಸಂಪೂರ್ಣವಾಗಿ ಬದಲಿಸಿದ್ದು, ವಿದರ್ಭದ ಮಣ್ಣಿನಿಂದಲೇ ನೂತನ ಪಿಚ್‌ ನಿರ್ಮಿಸಲಾಗಿದೆ. ರವಿವಾರ ಉತ್ತಮ ಹೋರಾಟ ನಿರೀಕ್ಷಿಸಬಹುದು’ ಎಂಬುದು ಹಿಂಗ್ನಿಕರ್‌ ಅಭಿಪ್ರಾಯ.

ಟಾಪ್ ನ್ಯೂಸ್

Hyderabad: Student dies after getting a puri stuck in his throat

Hyderabad: ಗಂಟಲಿಗೆ ಪೂರಿ ಸಿಲುಕಿ ವಿದ್ಯಾರ್ಥಿ ಸಾವು

I have not encroached on anyone’s jurisdiction: Modi

Narendra Modi: ನಾನು ಯಾರದ್ದೇ ಅಧಿಕಾರ ವ್ಯಾಪ್ತಿ ಅತಿಕ್ರಮಿಸಿಕೊಂಡಿಲ್ಲ: ಮೋದಿ

Trump imposes no taxes on India, only taxes on Canada and China!

US: ಭಾರತದ ಮೇಲೆ ತೆರಿಗೆ ಇಲ್ಲ, ಕೆನಡಾ, ಚೀನಾಕ್ಕಷ್ಟೇ ತೆರಿಗೆ ವಿಧಿಸಿದ ಟ್ರಂಪ್‌!

CT-Ravi

Congress: ಗ್ಯಾರಂಟಿಗಳ ಹಿಂಭಾರ, ಮುಂಭಾರ ಹೆಚ್ಚಾಗಿ ಮುಗ್ಗರಿಸುತ್ತಿದೆ ಸರಕಾರ: ಸಿ.ಟಿ.ರವಿ

Higher-Edu

Higher Education: ಕಾಲೇಜು ಸಿಬಂದಿ ರಜೆ ಹಾಕದೆ ಕೇಂದ್ರ ಕಚೇರಿಗೆ ಬರುವಂತಿಲ್ಲ

BJP_Cong

Local Bodies: ಸ್ಥಳೀಯ ಸಂಸ್ಥೆ ಉಪಚುನಾವಣೆ: ಕಾಂಗ್ರೆಸ್‌ 8, ಬಿಜೆಪಿ 3, ಪಕ್ಷೇತರ 1

newspaper

Medical Asist: ಪತ್ರಿಕಾ ವಿತರಕರಿಗೆ ವೈದ್ಯ ನೆರವು: 70 ವರ್ಷಕ್ಕೆ ವಯೋಮಿತಿ ಹೆಚ್ಚಳ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Tamil-tahala

Pro Kabaddi: ಯೋಧಾಸ್‌ಗೆ ತಲೈವಾಸ್‌ ಆಘಾತ

Hockey

Hockey: ಇಂದಿನಿಂದ ಜೂ. ಏಷ್ಯಾ ಕಪ್‌ ಹಾಕಿ; ಭಾರತಕ್ಕೆ ಥಾಯ್ಲೆಂಡ್‌ ಎದುರಾಳಿ

IPL 2025: Here’s what all ten teams look like after the mega auction

IPL 2025: ಮೆಗಾ ಹರಾಜಿನ ಬಳಿಕ ಎಲ್ಲಾ ಹತ್ತು ತಂಡಗಳು ಹೀಗಿವೆ ನೋಡಿ

IPL: RCB buys young Sehwag amid confusion; Who is this Swastik Chikara

IPL: ಗೊಂದಲದಲ್ಲಿ ಮರಿ ಸೆಹ್ವಾಗ್‌ ನನ್ನು ಖರೀದಿಸಿದ ಆರ್‌ ಸಿಬಿ; ಯಾರು ಈ ಸ್ವಸ್ತಿಕ್ ಚಿಕಾರ

Mohammed Siraj: ಬಿಟೌನ್‌ನ ಈ ಹಾಟ್‌ ಬೆಡಗಿ ಜತೆ ಕ್ರಿಕೆಟಿಗ ಸಿರಾಜ್‌ ಡೇಟಿಂಗ್?

Mohammed Siraj: ಬಿಟೌನ್‌ನ ಈ ಹಾಟ್‌ ಬೆಡಗಿ ಜತೆ ಕ್ರಿಕೆಟಿಗ ಸಿರಾಜ್‌ ಡೇಟಿಂಗ್?

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

Hyderabad: Student dies after getting a puri stuck in his throat

Hyderabad: ಗಂಟಲಿಗೆ ಪೂರಿ ಸಿಲುಕಿ ವಿದ್ಯಾರ್ಥಿ ಸಾವು

I have not encroached on anyone’s jurisdiction: Modi

Narendra Modi: ನಾನು ಯಾರದ್ದೇ ಅಧಿಕಾರ ವ್ಯಾಪ್ತಿ ಅತಿಕ್ರಮಿಸಿಕೊಂಡಿಲ್ಲ: ಮೋದಿ

Trump imposes no taxes on India, only taxes on Canada and China!

US: ಭಾರತದ ಮೇಲೆ ತೆರಿಗೆ ಇಲ್ಲ, ಕೆನಡಾ, ಚೀನಾಕ್ಕಷ್ಟೇ ತೆರಿಗೆ ವಿಧಿಸಿದ ಟ್ರಂಪ್‌!

ban

Kumble: ಹೆತ್ತವರನ್ನೇ ಕೊಠಡಿಯಲ್ಲಿ ಕೂಡಿ ಹಾಕಿದ ಪುತ್ರಿ

CT-Ravi

Congress: ಗ್ಯಾರಂಟಿಗಳ ಹಿಂಭಾರ, ಮುಂಭಾರ ಹೆಚ್ಚಾಗಿ ಮುಗ್ಗರಿಸುತ್ತಿದೆ ಸರಕಾರ: ಸಿ.ಟಿ.ರವಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.