ಸಾವಿನ ಮನೆಯಿಂದ ಬಿಡುಗಡೆಗೆ ಜನರ ಪ್ರಾರ್ಥನೆ ಕಾರಣ


Team Udayavani, Oct 1, 2017, 7:00 AM IST

tom-ulu.jpg

ಬೆಂಗಳೂರು: “2016ರ ಮಾ. 4, ಶುಕ್ರವಾರದಂದು ನಾನು ಪ್ರಾರ್ಥನೆಯಲ್ಲಿ ತೊಡಗಿದ್ದೆ. ಇದ್ದಕ್ಕಿದ್ದಂತೆ ಗುಂಡಿನ ಸದ್ದು ಕೇಳಿ ಬಂದಿದ್ದರಿಂದ ಬೆಚ್ಚಿಬಿದ್ದು ಪ್ರಾರ್ಥನಾ ಮಂದಿರದಿಂದ ಹೊರಗೆ ಬಂದೆ. ಕೆಲವು ಅಪರಿಚಿತರು ನನ್ನನ್ನು ಅಪಹರಿಸಿ ಒಂದು ವೃದ್ಧಾಶ್ರಮಕ್ಕೆ ಕರೆದೊಯ್ದರು. ಅಲ್ಲಿ ರಕ್ತದ ಕೋಡಿಯೇ ಹರಿದಿತ್ತು. ನನ್ನ ಕಣ್ಣ ಮುಂದೆಯೇ ನಾಲ್ವರ ಹತ್ಯೆ ನಡೆದಿತ್ತು, ಮುಂದಿನ ಸರದಿ ನನ್ನದೇ ಎಂದು ಮನಸ್ಸಿನಲ್ಲಿ ತೀರ್ಮಾನಿಸಿದ್ದೆ’. 

– ಇದು ಐಸಿಸ್‌ ಉಗ್ರರಿಂದ ಅಪಹರಣಕ್ಕೊಳಗಾಗಿ 556 ದಿನ ನರಕಯಾತನೆ ಅನುಭವಿಸಿ ಬಿಡುಗಡೆ ಯಾಗಿರುವ ಕೇರಳ ಮೂಲದ ಫಾದರ್‌ ಟಾಮ್‌ ಉಳುನ್ನಲಿಲ್‌ ಅವರ ಮಾತುಗಳು.

ಡಾನ್‌ಬಾಸ್ಕೋ ಸಂಸ್ಥೆಯ ವತಿಯಿಂದ ಬೆಂಗಳೂರಿನಲ್ಲಿ ಆಯೋಜಿಸಿದ್ದ ಸಂವಾದದಲ್ಲಿ ಪಾಲ್ಗೊಂಡಿದ್ದ ಅವರು, ಉಗ್ರರ ವಶದಲ್ಲಿದ್ದಾಗ ಪ್ರತಿನಿತ್ಯ ರಕ್ತದ ಕೋಡಿ ಕಣ್ಣಾರೆ ಕಂಡು ತಮ್ಮ ಕಥೆಯೂ ಇದೇ ಎಂಬುದನ್ನು ನಿರ್ಧರಿಸಿ ದಿನ ಕಳೆಯುತ್ತಿದ್ದ ಬಗ್ಗೆ ಹಾಗೂ ಪ್ರಪಂಚದ ಸಂಪರ್ಕವೇ ಇಲ್ಲದೆ 18 ತಿಂಗಳುಗಳ ಕಾಲ ಒಂದು ಕಡೆಯಿಂದ ಮತ್ತೂಂದು ಕಡೆಗೆ ಕರೆದೊಯ್ದ ಭಯಾನಕ ಸತ್ಯವನ್ನು ಎಳೆ ಎಳೆಯಾಗಿ ಬಿಡಿಸಿಟ್ಟರು.

ಯೆಮೆನ್‌ನಲ್ಲಿ ತಮ್ಮನ್ನು ಅಪಹರಿಸಿದ ಗುಂಪು, ಅನಂತರ ತಮ್ಮನ್ನು ವೃದ್ಧಾಶ್ರಮಕ್ಕೆ ಕರೆದೊಯ್ದಿತು. ಈ ವೃದ್ಧಾಶ್ರಮ ಏಳು ಸುತ್ತಿನ ಕೋಟೆಯಂತಿತ್ತು. ಸುತ್ತಲೂ ಬಿಗಿ ಭದ್ರತೆ ಇತ್ತು. ಅಲ್ಲದೆ, ವೃದ್ಧಾಶ್ರಮದಲ್ಲಿ ಎಲ್ಲೆಂದರಲ್ಲಿ ರಕ್ತವೇ ಕಾಣುತ್ತಿತ್ತು.  ನನ್ನನ್ನು ಸೆರೆ ಹಿಡಿದ ವ್ಯಕ್ತಿಯೊಬ್ಬ ನನ್ನ ಪರಿಚಯ ಕೇಳಿದ. ನಾನು ಭಾರತೀಯ ಎಂದು ಪರಿಚಯಿಸಿಕೊಂಡೆ. ಆ ಇಡೀ ಪ್ರದೇಶವಂತೂ ಭಯಾನಕವಾಗಿತ್ತು. ಹತ್ಯೆ ಮಾಡಿದ್ದನ್ನು ಕಣ್ಣಾರೆ ಕಂಡೆ. ಅಲ್ಲಿ ರಕ್ತ ಸಾಮಾನ್ಯ. ನನ್ನ ಎದುರೇ ಕೊಲೆಗಳನ್ನು ಮಾಡುತ್ತಿದ್ದರು’. 

ವೃದ್ಧಾಶ್ರಮದಿಂದ ಆ ಗುಂಪು ನನ್ನನ್ನು ಮತ್ತೂಂದು ಭಯೋತ್ಪಾದಕ ಗುಂಪಿಗೆ ಹಸ್ತಾಂತರಿಸಿತು. ಒಂದು ಸ್ಥಳದಿಂದ ಮತ್ತೂಂದು ಸ್ಥಳಕ್ಕೆ ನನ್ನ ಕಣ್ಣು ಕಟ್ಟಿ ಕರೆದೊಯ್ಯಲಾಗುತ್ತಿತ್ತು. ಒಮ್ಮೊಮ್ಮೆ ಕೈ ಕಾಲು ಕಟ್ಟಿ ಊಟ ನೀಡಲಾಗುತ್ತಿತ್ತು. ಪದೇ ಪದೇ ಸ್ಥಳ ಬದಲಾವಣೆ ಮಾಡಲಾಗುತ್ತಿತ್ತು. ಅವರು ಅರೆಬಿಕ್‌ ಮಾತನಾಡುತ್ತಿದ್ದರು. ನಾನು ಇಂಗ್ಲಿಷ್‌ ಮಾತನಾಡುತ್ತಿದ್ದೆ. ಅರೆಬಿಕ್‌ನಲ್ಲಿ ಅವರೊಂದಿಗೆ ಸಂವಹನ ನಡೆಸಲು ಕಷ್ಟವಾಗುತ್ತಿತ್ತು. ಇಷ್ಟರ ನಡುವೆಯೂ ನಾನು ಅನಾರೋಗ್ಯ ಪೀಡಿತನಾಗಿದ್ದಾಗ ಹಾಗೂ ರಮ್ಜಾನ್‌ ಮಾಸದಲ್ಲಿ ಔಷಧ ಮತ್ತು ಆಹಾರ ಸರಿಯಾಗಿ ನೀಡಿ, ನೋಡಿಕೊಂಡಿದ್ದರು’ ಎಂದರು.

ಇಡೀ ವಿಶ್ವದ ಜನತೆ ನನಗಾಗಿ ಪ್ರಾರ್ಥಿಸುತ್ತಿದ್ದುದ ರಿಂದ ಉಗ್ರರಿಗೂ ನನ್ನನ್ನು ಏನೂ ಮಾಡಲಾಗಲಿಲ್ಲ. ಹೀಗಾಗಿಯೇ, ನಾನು ಸಾವಿನ ಮನೆಯಿಂದ ಬಿಡುಗಡೆಯಾಗಿ ಬಂದೆ. ಜನರ ಪ್ರಾರ್ಥನೆಯೇ ನನ್ನನ್ನು ಉಳಿಸಿತು. ಜನರ ಪ್ರಾರ್ಥನೆಗೆ ಅಷ್ಟು ಶಕ್ತಿಯಿದೆ’ ಎಂದು ಬಣ್ಣಿಸಿದರು.

ಉಗ್ರರ ವಶದಲ್ಲಿದ್ದ ತನ್ನ ಬಿಡುಗಡೆಗೆ ಸಹಾಯ ಮಾಡಿದ ಪ್ರಧಾನಿ ಮೋದಿ, ವಿದೇಶಾಂಗ ಇಲಾಖೆ ಸಚಿವೆ ಸುಷ್ಮಾ ಸ್ವರಾಜ್‌, ಭಾರತೀಯ ರಾಜತಾಂತ್ರಿಕ ಅಧಿಕಾರಿಗಳಿಗೂ ಟಾಮ್‌ ಕೃತಜ್ಞತೆ ಸಲ್ಲಿಸಿದರು. ಯೆಮೆನ್‌ ಉಗ್ರರಿಂದ ಬಿಡುಗಡೆಯಾಗಿದ್ದ 59 ವರ್ಷದ ಫಾದರ್‌ ಟಾಮ್‌ ವ್ಯಾಟಿಕನ್‌ ಸಿಟಿಯ ಮೂಲಕ ಗುರುವಾರ ದಿಲ್ಲಿಗೆ ಬಂದಿಳಿದಿದ್ದರು.

ಟಾಪ್ ನ್ಯೂಸ್

Kallabete

Udupi: ಕಳ್ಳಬೇಟೆ ನಿಗ್ರಹ ಸಿಬಂದಿಗೆ ಕತ್ತಿ ಕೋಲುಗಳೇ ಆಯುಧ!

UDP-DC

Udupi: ಇಂದ್ರಾಳಿ ರೈಲ್ವೇ ಮೇಲ್ಸೇತುವೆ: ಜ.10ರಿಂದ ವಾಹನ ಬಳಕೆಗೆ ಮುಕ್ತಗೊಳಿಸಿ: ಡಿಸಿ

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

Council Session: ಪವರ್‌ ಕಾರ್ಪೋರೇಷನ್‌ನ 260 ಕೋಟಿ ರೂ. ಅಕ್ರಮ: ನಿಲುವಳಿ ತಿರಸ್ಕಾರ

Council Session: ಪವರ್‌ ಕಾರ್ಪೋರೇಷನ್‌ನ 260 ಕೋಟಿ ರೂ. ಅಕ್ರಮ: ನಿಲುವಳಿ ತಿರಸ್ಕಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

ಮೂಲಗೇಣಿದಾರರ ಅರ್ಜಿ ತತ್‌ಕ್ಷಣ ಇತ್ಯರ್ಥಗೊಳಿಸಲು ಐವನ್‌ ಮನವಿ

ಮೂಲಗೇಣಿದಾರರ ಅರ್ಜಿ ತತ್‌ಕ್ಷಣ ಇತ್ಯರ್ಥಗೊಳಿಸಲು ಐವನ್‌ ಮನವಿ

ಮಂಗಳೂರಲ್ಲಿ ಹೈಕೋರ್ಟ್‌ ಪೀಠ ಸ್ಥಾಪನೆಗೆ ಮನವಿ

Karnataka Govt.,: ಮಂಗಳೂರಲ್ಲಿ ಹೈಕೋರ್ಟ್‌ ಪೀಠ ಸ್ಥಾಪನೆಗೆ ಮನವಿ

BGV-CM

Belagavi: ಎಐಸಿಸಿ ಅಧಿವೇಶನದ ಶತಮಾನೋತ್ಸವಕ್ಕೆ ಅಡ್ಡಿಪಡಿಸಿದರೆ ಕ್ರಮ: ಸಿದ್ದರಾಮಯ್ಯ

Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ

Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

Kallabete

Udupi: ಕಳ್ಳಬೇಟೆ ನಿಗ್ರಹ ಸಿಬಂದಿಗೆ ಕತ್ತಿ ಕೋಲುಗಳೇ ಆಯುಧ!

Fake-Gold

Mangaluru: ನಕಲಿ ಚಿನ್ನ ಅಡವಿಟ್ಟು ವಂಚನೆ; 7ನೇ ಸಲ ಬಂದಾಗ ಸಿಕ್ಕಿಬಿದ್ದ ಮಹಿಳೆ!

Suside-Boy

PaduBidri: ಬಸ್‌ ಢಿಕ್ಕಿ: ಪಾದಚಾರಿ ಸಾವು

Kallabatti

Bantwala: ಪಂಜಿಕಲ್ಲು: ಅಕ್ರಮ ಕಳ್ಳಬಟ್ಟಿ ಅಡ್ಡೆಗೆ ದಾಳಿ

money

Mangaluru: ಹಣ ದ್ವಿಗುಣ ಆಮಿಷ: 3.70 ಲ.ರೂ. ವಂಚನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.