ಲಂಕಾ ಕ್ರಿಕೆಟಿಗ ಚಾಮರ ಸಿಲ್ವ ಮೇಲಿನ ನಿಷೇಧ ತೆರವು
Team Udayavani, Oct 2, 2017, 7:45 AM IST
ಕೊಲೊಂಬೊ: ಕೆಲವು ದಿನಗಳ ಹಿಂದೆ ಸ್ಪಾಟ್ ಫಿಕ್ಸಿಂಗ್ ಆರೋಪಕ್ಕೆ ಸಿಲುಕಿದ್ದ ಶ್ರೀಲಂಕಾದ ಮಾಜಿ ಕ್ರಿಕೆಟಿಗ ಚಾಮರ ಸಿಲ್ವ ಈಗ ತಾತ್ಕಾಲಿಕವಾಗಿ ಬಚಾವ್ ಆಗಿದ್ದಾರೆ.
ಜನವರಿಯಲ್ಲಿ ಲಂಕಾ ದೇಶಿ ಕ್ರಿಕೆಟ್‌ನಲ್ಲಿ ಪಾಂಡೂರಾ ಕ್ರಿಕೆಟ್ ಕ್ಲಬ್-ಕಲುಟರಾ ಫಿಸಿಕಲ್ ಕಲ್ಚರ್ ಕ್ಲಬ್ ತಂಡಗಳ ನಡುವೆ ಪಂದ್ಯ ನಡೆದಿತ್ತು. ಈ ಪಂದ್ಯದ ವೇಳೆ ಲಂಕಾ ಅಂತಾರಾಷ್ಟ್ರೀಯ ತಂಡದ ಮಾಜಿ ಆಟಗಾರ ಹಾಲಿ ಪಾಂಡೂರಾ ತಂಡದ ನಾಯಕ ಚಾಮರ ಸಿಲ್ವ ಸ್ಪಾಟ್ ಫಿಕ್ಸಿಂಗ್ ನಡೆಸಿರುವುದು ಸಾಬೀತಾಗಿತ್ತು. ಹೀಗಾಗಿ ಅವರಿಗೆ 2 ವರ್ಷದ ನಿಷೇಧ ಶಿಕ್ಷೆ ವಿಧಿಸಲಾಗಿತ್ತು. ಇದರ ವಿರುದ್ಧ ಸಿಲ್ವ ಮೇಲ್ಮನವಿ ಸಲ್ಲಿಸಿದ್ದರು.
ಈಗ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಆ ಪಂದ್ಯಗಳೇ ಅಸಿಂಧು ಎಂದು ಶ್ರೀಲಂಕಾ ಕ್ರಿಕೆಟ್ ಮಂಡಳಿ ಘೋಷಿಸಿದೆ. ಹೀಗಾಗಿ ಚಾಮರ ಸಿಲ್ವ ಮೇಲಿನ ನಿಷೇಧವನ್ನು ಸದ್ಯಕ್ಕೆ ತೆರವುಗೊಳಿಸಲಾಗಿದೆ. ಅವರು ದೇಶಿ ಪಂದ್ಯಗಳಲ್ಲಿ ಭಾಗವಹಿಸಬಹುದು. ಈ ಕುರಿತಂತೆ ತನಿಖೆ ಮುಂದುವರಿಯಲಿದೆ. ಆರೋಪಿ ಎನ್ನುವುದು ಮತ್ತೂಮ್ಮೆ ತನಿಖೆಯಿಂದ ಸಾಬೀತಾದಲ್ಲಿ ಚಾಮರ ಸಿಲ್ವ ಶಿಕ್ಷೆಗೆ ಗುರಿಯಾಗಲೂಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್ ಮುಖ್ಯಸ್ಥೆ
Daily Horoscope: ಉದ್ಯೋಗಾಸಕ್ತರಿಗೆ ಹೊಸ ಅವಕಾಶಗಳು ಗೋಚರ, ಸ್ವರ್ಣೋದ್ಯಮಕ್ಕೆ ಲಾಭ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.