ಜೀತವಿಮುಕ್ತರಿಗೂ ಸರ್ಕಾರಗಳ ಸೌಲಭ್ಯ ವಿಸ್ತರಣೆ
Team Udayavani, Oct 2, 2017, 7:20 AM IST
ಬೆಂಗಳೂರು: ಅನಿಷ್ಟ ಮತ್ತು ಕಾನೂನುಬಾಹಿರ ಜೀತ ಪದಟಛಿತಿಯಲ್ಲಿ ಸಿಲುಕಿ ಅಲ್ಲಿಂದ ಬಿಡುಗಡೆಗೊಂಡು ಪುನರ್ವಸತಿ ಮತ್ತು ಸ್ವಾವಲಂಬಿ ಜೀವನ ನಡೆಸಲು ಕಾದಿರುವ ಜೀತವಿಮುಕ್ತರಿಗೆ ವಿವಿಧ ಯೋಜನೆಗಳಡಿ “ಸೌಲಭ್ಯ ಭಾಗ್ಯ’ ನೀಡಲು ಮುಂದಾಗಿರುವ ಸರ್ಕಾರ, ರಾಜ್ಯ ಮತ್ತು ಕೇಂದ್ರ ಪ್ರಾಯೋಜಿತ ವಿವಿಧ ಯೋಜನೆಗಳಡಿ ಸಿಗುವ ಸೌಲಭ್ಯಗಳನ್ನು ಜೀತವಿಮುಕ್ತರಿಗೂ ವಿಸ್ತರಿಸಲು ನಿರ್ಧರಿಸಿದೆ.
ಜೀತ ಪದಟಛಿತಿಯ ಬಂಧನದಿಂದ ಬಿಡುಗಡೆಗೊಂಡ ಜೀತವಿಮುಕ್ತರಿಗೆ ಸಾಮಾಜಿಕ ಮತ್ತು ಆರ್ಥಿಕ ಭದ್ರತೆ ಒದಗಿಸಿ ಸಮಾಜದ ಮುಖ್ಯ ವಾಹಿನಿಗೆ ತರುವ ಹೊಣೆಗಾರಿಕೆ ಗ್ರಾಮೀಣಾಭಿವೃದಿಟಛಿ ಇಲಾಖೆಗೆ ಇದೆ. ಅದರಂತೆ ಜೀತವಿಮುಕ್ತರನ್ನು ಸಂಜೀವಿನಿ, ರಾಜೀವಗಾಂಧಿ ಚೈತನ್ಯ,ದೀನದಯಾಳ್ ಉಪಾಧ್ಯಾಯ ಗ್ರಾಮೀಣ ಕೌಶಲ್ಯ ಯೋಜನೆ ಹಾಗೂ ಮುಖ್ಯಮಂತ್ರಿಗಳ ಕೌಶಲ್ಯ ಕರ್ನಾಟಕ ಯೋಜನೆಗಳಿಗೆ ಪ್ರಥಮ ಆದ್ಯತೆ ಮೇರೆಗೆ ಫಲಾನುಭವಿಗಳಾಗಿ ಆಯ್ಕೆ ಮಾಡಿ ಪುನರ್ವಸತಿ ಸೌಲಭ್ಯಗಳನ್ನು ಒದಗಿಸಲು ಇಲಾಖೆ ತೀರ್ಮಾನಿಸಿ ಈ ಸಂಬಂಧ ಸಂಬಂಧಪಟ್ಟ ಅಧಿಕಾರಿಗಳಿಗೆ ಸುತ್ತೋಲೆ ಹೊರಡಿಸಿದೆ.
ಗ್ರಾಮೀಣಾಭಿವೃದಿಟಛಿ ಇಲಾಖೆಯ ಈ ಯೋಜನೆ ಅನುಷ್ಠಾನಕ್ಕೆ ಬಂದರೆ 2010ರಿಂದ 2017ರ ಆಗಸ್ಟ್ ವರೆಗೆ ಜೀತ ಪದಟಛಿತಿಯಿಂದ ಮುಕ್ತಿ ಹೊಂದಿ ಜಿಲ್ಲಾಧಿಕಾರಿಗಳಿಗೆ ಬಿಡುಗಡೆ ಪತ್ರ ಹಾಗೂ ಪುನರ್ವಸತಿ ಅರ್ಜಿ ಸಲ್ಲಿಸಿರುವ
ರಾಜ್ಯದ 28 ಜಿಲ್ಲೆಗಳ 15,213 ಜೀತವಿಮುಕ್ತರಿಗೆ ಅನುಕೂಲವಾಗಲಿದೆ. ಆದರೆ, ಕ್ರಮ ಕೈಗೊಂಡಿದ್ದೇವೆ ಎಂದು ನ್ಯಾಯಾಲಯಕ್ಕೆ ಮಾಹಿತಿ ನೀಡಿ ನ್ಯಾಯಾಂಗ ನಿಂದನೆಯಿಂದ ತಪ್ಪಿಸಿಕೊಳ್ಳಲು ಈ ಸುತ್ತೋಲೆ ಹೊರಡಿಸಲಾಗಿದೆ. ಇದರಿಂದ ಯಾವುದೇ ಪ್ರಯೋಜನ ಆಗುವುದಿಲ್ಲ. ಇದೊಂದು ಕಣ್ಣೊರೆಸುವ ತಂತ್ರ ಎಂದು ಜೀತ ಕಾರ್ಮಿಕರ ಬಿಡುಗಡೆ ಮತ್ತು ಪುನರ್ವಸತಿಗಾಗಿ ಕೆಲಸ ಮಾಡುತ್ತಿರುವ ಜೀತ ವಿಮುಕ್ತ ಕರ್ನಾಟಕ (ಜೀವಿಕ) ಇದರ ಸಂಚಾಲಕ ಕಿರಣ್ ಕಮಲ ಪ್ರಸಾದ್ ಹೇಳುತ್ತಾರೆ.
ರಾಜ್ಯ ಮತ್ತು ಕೇಂದ್ರ ಪ್ರಾಯೋಜಿತ ಯೋಜನೆಗಳಾದ ಸಂಜೀವಿನಿ, ರಾಜೀವಗಾಂಧಿ ಚೈತನ್ಯ ಯೋಜನೆ, ದೀನದಯಾಳ್ ಉಪಾಧ್ಯಾಯ ಗ್ರಾಮೀಣ ಕೌಶಲ್ಯ ಮತ್ತು ಮುಖ್ಯಮಂತ್ರಿಗಳ ಕೌಶಲ್ಯ ಕರ್ನಾಟಕ ಯೋಜನೆಗಳಡಿ ತರಬೇತಿ ಹಾಗೂ ಉದ್ಯೋಗಾವಕಾಶ ಸೌಲಭ್ಯಗಳನ್ನು ಅರ್ಹ ಫಲಾನುಭವಿಗಳಿಗೆ ಮತ್ತು ಉದ್ಯೋಗಾಕಾಂಕ್ಷಿಗಳಿಗೆ ವಿಸ್ತರಿಸುವ ಕಾರ್ಯವನ್ನು ಜಿಲ್ಲಾ ಪಂಚಾಯಿತಿಗಳ ಮೂಲಕ ಈಗಾಗಲೇ ಮಾಡಲಾಗುತ್ತಿದೆ. ಅದೇ ರೀತಿ, ಜೀತವಿಮುಕ್ತರಲ್ಲಿ ಮಹಿಳೆಯರು, ಯುವಕರು ಸಾಕಷ್ಟು ಸಂಖ್ಯೆಯಲ್ಲಿದ್ದು, ಇವರಿಗೂ ಯೋಜನೆಗಳ ಸೌಲಭ್ಯ ನೀಡುವುದರಿಂದ ಅವರ ಆರ್ಥಿಕ ಪರಿಸ್ಥಿತಿ ಸುಧಾರಿಸಿ, ಪುನರ್ವಸತಿ ಸಿಕ್ಕಂತಾಗುತ್ತದೆ ಎಂದು ಗ್ರಾಮೀಣಾಭಿವೃದಿಟಛಿ ಇಲಾಖೆ ಅಧಿಕಾರಿಗಳು ವಿವರಿಸುತ್ತಾರೆ.
– ರμàಕ್ ಅಹ್ಮದ್