ಸ್ಟಾರ್‌ಗಿರಿ ರಾಜಕೀಯಕ್ಕೆ ನೆರವಾಗದು: ರಜನಿಕಾಂತ್
Team Udayavani, Oct 2, 2017, 6:20 AM IST
ಚೆನ್ನೈ/ಮುಂಬಯಿ: ಇನ್ನೇನು ಕೆಲವೇ ದಿನಗಳಲ್ಲಿ ಬಹುಭಾಷಾ ನಟ ಕಮಲ್‌ಹಾಸನ್ ತಮಿಳುನಾಡಿನಲ್ಲಿ ಹೊಸ ರಾಜಕೀಯ ಪಕ್ಷ ಸ್ಥಾಪಿಸಿ, ಅದರಲ್ಲಿ ಆರಂಗೇಟ್ರಂ ನಡೆಸಲಿದ್ದಾರೆ. ಅದಕ್ಕೆ ಪೂರಕವಾಗಿ ಸೂಪರ್‌ಸ್ಟಾರ್ ರಜನೀ ಕಾಂತ್ ಮಾತನಾಡಿ, ಸಿನಿಮಾ ಕ್ಷೇತ್ರದಲ್ಲಿ ಸಂಪಾದಿಸಿದ ಕೀರ್ತಿ ಮತ್ತು ಜನಮನ್ನಣೆ ರಾಜಕೀಯ ಕ್ಷೇತ್ರದಲ್ಲಿ ಹೆಚ್ಚಿನ ನೆರವಾಗಲಾರದು.
ಸಾರ್ವಜನಿಕ ಜೀವನದಲ್ಲಿ ಯಶಸ್ಸು ಗಳಿಸಲು ಅದಕ್ಕಿಂತ ಹೆಚ್ಚಿನ ಪ್ರಯತ್ನ ಬೇಕಾಗಿದೆ ಎಂದು ಟಾಂಗ್ ನೀಡಿದ್ದಾರೆ.
ತಮಿಳು ಚಿತ್ರರಂಗದ ಮೇರು ನಟ ಶಿವಾಜಿ ಗಣೇಶನ್ ಸ್ಮರಣಾರ್ಥ ಅಲ್ಲಿನ ರಾಜ್ಯ ಸರಕಾರ ನಿರ್ಮಿಸಿರುವ ಸ್ಮಾರಕದ ಉದ್ಘಾಟನೆಯಲ್ಲಿ ರವಿವಾರ ಇಬ್ಬರು ಜನಪ್ರಿಯ ನಟರು ವೇದಿಕೆ ಹಂಚಿಕೊಂಡಿದ್ದರು. ಅಲ್ಲಿ ರಜನಿ ತಮ್ಮ ಮಾತುಗಳನ್ನು ಸಮರ್ಥಿಸಲು ಶಿವಾಜಿ ಗಣೇಶನ್‌ನ ಉದಾಹರಣೆ ನೀಡಿದರು.
“ಶಿವಾಜಿ ಗಣೇಶನ್ ತಮಿಳು ಚಿತ್ರರಂಗದಲ್ಲಿ ಜನಪ್ರಿಯತೆಯ ಉತ್ತುಂಗದಲ್ಲಿದ್ದಾಗಲೇ ರಾಜಕೀಯ ಪಕ್ಷ ಸ್ಥಾಪಿಸಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದರು. ಚುನಾವಣೆಯಲ್ಲಿ ಅವರದ್ದೇ ಕ್ಷೇತ್ರದಲ್ಲಿ ಸೋಲು ಅನುಭವಿಸಿದ್ದರು. ಈ ಬೆಳವಣಿಗೆ ನಟನಿಗೆ ಅವಮಾನ ತರಲಿಲ್ಲ. ಆದರೆ ಆ ಕ್ಷೇತ್ರದ ಜನರಿಗೆ ಹಿನ್ನಡೆಯಾಯಿತು’ ಎಂದರು. ರಾಜಕೀಯದಲ್ಲಿ ಹೇಗೆ ಯಶಸ್ವಿಯಾಗ ಬೇಕು ಎಂಬ ಸಲಹೆಗಳನ್ನು ಎರಡು ತಿಂಗಳ ಹಿಂದೆ ಕೇಳಿದ್ದರೆ, ಕಮಲ್ ನೀಡುತ್ತಿದ್ದರು. ಆದರೆ ಈಗ ಕೇಳಿದರೆ ನನ್ನ ಪಕ್ಷಕ್ಕೆ ಬಾ ಎಂದು ಆಹ್ವಾನ ನೀಡುತ್ತಾರೆ ಎನ್ನುತ್ತಾ ಕಮಲ್‌ರ ಕಾಲೆಳೆದರು ರಜನಿ.
“ಹೀಗಾಗಿ, ಸಿನಿಮಾ ರಂಗದ ಜನಪ್ರಿಯತೆ, ಯಶಸ್ಸು ಇದ್ದರೂ ಪ್ರಾಯೋಗಿಕವಾಗಿರುವ ರಾಜಕೀಯಕ್ಕೆ ಅದಕ್ಕಿಂತ ಮಿಗಿಲಾದ ಪ್ರಯತ್ನಗಳು ಬೇಕಾಗಿವೆ ಎಂದಿದ್ದಾರೆ ತಮಿಳು ಸೂಪರ್‌ಸ್ಟಾರ್. ಈ ಅಂಶ ನಟ, ಸ್ನೇಹಿತ ಕಮಲ್‌ಹಾಸನ್‌ಗೆ ತಿಳಿದಿದೆ ಎಂದು ಭಾವಿಸುವೆ. ಒಂದು ವೇಳೆ ಅವರಿಗೆ ಗೊತ್ತಿದ್ದರೂ, ನನ್ನ ಜತೆ ಹೇಳಲಾರರು ಎಂದುಕೊಂಡಿದ್ದೇನೆ’ ಎಂದಾಗ ಗೊಳ್ಳನೆ ನಗುವ ಸರದಿ ಅಲ್ಲಿ ಸೇರಿದವರದ್ದು.
ಎಐಎಡಿಎಂಕೆಗೆ ಟೀಕೆ: ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕಮಲ್‌ಹಾಸನ್ ರಜನಿ ಮಾತುಗಳಿಗೆ ಮೌನ ವಹಿಸಿದರೂ, ರಾಜ್ಯ ಸರಕಾರದ ವಿರುದ್ಧ ಹರಿಹಾಯದೆ ಬಿಡಲಿಲ್ಲ. “ನನಗೆ ಆಹ್ವಾನ ಇಲ್ಲದೇ ಇರುತ್ತಿದ್ದರೆ ವೇದಿಕೆಗೆ ಬರುತ್ತಿರಲಿಲ್ಲ. ಆದರೆ ಹೊರಗೆ ಒಬ್ಬ ಅಭಿಮಾನಿಯಾಗಿ ಬಂದು ಹೋಗುತ್ತಿದ್ದೆ. ಅದನ್ನು ತಡೆಯಲು ಯಾರಿಗೂ ಸಾಧ್ಯವಿಲ್ಲ. ಯಾವುದೇ ಸರ್ಕಾರ ಶಿವಾಜಿ ಗಣೇಶನ್‌ರನ್ನು ಗೌರವಿಸಲೇಬೇಕು ಎಂದಿದ್ದಾರೆ.
50 ವರ್ಷಗಳ ಸಂಬಂಧ: ಬೆಳ್ಳಿತೆರೆಯ ಹಿಂದೆ ಕಮಲ್ ಮತ್ತು ರಜನಿ ಅವರದ್ದು 50 ವರ್ಷಗಳ ಬಾಂಧವ್ಯ. ರಜನಿಕಾಂತ್ ರಾಜ ಕೀಯ ಪ್ರವೇಶದ ಗುಸು ಗುಸು ಮತ್ತು ಕಮಲ್‌ಹಾಸನ್‌ರ ರಾಜಕೀಯ ಪ್ರವೇಶದ ಘೋಷಣೆ ಬಳಿಕ ಇದೇ ಮೊದ ಲ ಬಾರಿಗೆ ಕಾರ್ಯಕ್ರಮವೊಂದರಲ್ಲಿ ಇಬ್ಬರು ನಟರು ವೇದಿಕೆ ಹಂಚಿಕೊಂಡಿದ್ದಾರೆ.
ಹೊಸ ಪಕ್ಷ ಘೋಷಣೆ
ಮಾಡಿದ ನಾರಾಯಣ ರಾಣೆ
ಮಹಾರಾಷ್ಟ್ರದ ರಾಜಕೀಯಕ್ಕೆ ಮತ್ತೂಂದು ಹೊಸ ಪಕ್ಷದ ಸೇರ್ಪಡೆಯಾಗಿದೆ. ಕಾಂಗ್ರೆಸ್‌ಗೆ ಕಳೆದ ತಿಂಗಳು ವಿದಾಯ ಹೇಳಿದ ಮಾಜಿ ಮುಖ್ಯಮಂತ್ರಿ ನಾರಾಯಣ ರಾಣೆ “ಮಹಾರಾಷ್ಟ್ರ ಸ್ವಾಭಿಮಾನಿ ಪಕ್ಷ’ ಎಂಬ ಹೊಸ ಪಕ್ಷ ರಚಿಸಿದ್ದಾರೆ. ಹೊಸ ಪಕ್ಷಕ್ಕೆ ಶೀಘ್ರವೇ ಹಲವಾರು ಮಂದಿ ನಾಯಕರು ಸೇರ್ಪಡೆಯಾಗಲಿದ್ದಾರೆ. ಬಳಿಕ ಮುಂದಿನ ನಿರ್ಧಾರ ಪ್ರಕಟಿಸುವುದಾಗಿ ರಾಣೆ ಹೇಳಿದ್ದಾರೆ. ಈ ನಡುವೆ ಅವರು ಬಿಜೆಪಿ-ಶಿವಸೇನೆ ಮೈತ್ರಿಕೂಟ ಸರ್ಕಾರಕ್ಕೆ ಹಿರಿಯ ಸಚಿವರಾಗಿ ಸೇರ್ಪಡೆಗೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಮೂಲಕ ಪದೇ ಪದೆ ಬೆಂಬಲ ಹಿಂಪಡೆಯುವ ಬೆದರಿಕೆ ಹಾಕುವ ಶಿವಸೇನೆ ಮೇಲೆ ನಿಯಂತ್ರಣ ಹೇರಲೂ ಬಿಜೆಪಿ ಮುಂದಾಗಿದೆ ಎಂದು ಹೇಳಲಾಗುತ್ತಿದೆ. ರಾಣೆ ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ ಎಂದು ಹೇಳಲಾಗಿತ್ತು. ಅದಕ್ಕೆ ಪೂರಕವಾಗಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮತ್ತು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಜತೆಗೆ ಕೂಡ ಮಾತುಕತೆ ನಡೆದಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಏಕಕಾಲದಲ್ಲಿ ಭಾರತ ಸೇರಿ 3 ದೇಶಗಳಲ್ಲಿ ಕಂಪಿಸಿದ ಭೂಮಿ… ಟಿಬೆಟ್‌ನಲ್ಲಿ 7.1 ತೀವ್ರತೆ ಭೂಕಂಪ
ಆಪರೇಷನ್ ಬಾಂಗ್ಲಾದೇಶಿ; ಅಕ್ರಮ ವಲಸಿಗರ ಪತ್ತೆ ಹಚ್ಚುವ ಕಾರ್ಯಾಚರಣೆ ಚುರುಕು
HMPV ಸೋಂಕಿಗೆ ಆತಂಕ ಬೇಡ: ಐಸಿಎಂಆರ್
Mahakumbh 2025; ವಕ್ಫ್ ಮಂಡಳಿಗೆ ಸೇರಿದ ಜಾಗದಲ್ಲಿ ಕುಂಭಮೇಳ: ಮೌಲ್ವಿ ವಿವಾದ
ಆಸೀಸ್ ರೀತಿ ಸಾಮಾಜಿಕ ಜಾಲತಾಣ ಬಳಕೆ ಬ್ಯಾನ್ ಮಾಡಿಲ್ಲ: ಐಟಿ ಕಾರ್ಯದರ್ಶಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು
ಏಕಕಾಲದಲ್ಲಿ ಭಾರತ ಸೇರಿ 3 ದೇಶಗಳಲ್ಲಿ ಕಂಪಿಸಿದ ಭೂಮಿ… ಟಿಬೆಟ್‌ನಲ್ಲಿ 7.1 ತೀವ್ರತೆ ಭೂಕಂಪ
ಆಪರೇಷನ್ ಬಾಂಗ್ಲಾದೇಶಿ; ಅಕ್ರಮ ವಲಸಿಗರ ಪತ್ತೆ ಹಚ್ಚುವ ಕಾರ್ಯಾಚರಣೆ ಚುರುಕು
Bengaluru: ಇಬ್ಬರು ಮಕ್ಕಳಿಗೆ ವಿಷವುಣಿಸಿ ಕೊಂದು ಟೆಕಿ ದಂಪತಿ ಆತ್ಮಹ*ತ್ಯೆ!
Percentage War: ಮತ್ತೆ 60 ಪರ್ಸೆಂಟ್ ಕಮಿಷನ್ ಯುದ್ಧ ; ಆರೋಪ – ಪ್ರತ್ಯಾರೋಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.