ಗಾಂಧಿ ಮತ್ತು ದಕ್ಷಿಣ ಆಫ್ರಿಕಾದ ಫುಟ್‌ಬಾಲ್‌ 


Team Udayavani, Oct 2, 2017, 2:59 AM IST

02-ANNNA-3.jpg

ದಕ್ಷಿಣ ಆಫ್ರಿಕಾದಲ್ಲಿ ಬಿಳಿಯರಲ್ಲದ ಜನರ ಮೊಟ್ಟ ಮೊದಲ ಅಚ್ಚುಕಟ್ಟಾದ ಮತ್ತು ಶಿಸ್ತಾದ ಫುಟ್‌ಬಾಲ್‌ ತಂಡವಾಗಿತ್ತು ಅದು. ಭಾರತೀಯ ಸಮುದಾಯದ ಜನರ ಒಳ್ಳೆಯ ಫುಟ್‌ಬಾಲ್‌ ತಂಡವೊಂದು ರಾಷ್ಟ್ರೀಯ ಮಟ್ಟದಲ್ಲಿ ಆಡಲು ಶುರುವಿಟ್ಟರೆ ಆಟವನ್ನು ನೋಡಲು ಬರುವ ದೊಡ್ಡ ಸಂಖ್ಯೆಯ ಬಿಳಿಯರಲ್ಲದ ಜನ ಸಮುದಾಯದತ್ತ ಗಾಂಧೀಜಿಯ ದೃಷ್ಟಿಯಿರುತ್ತಿತ್ತು.  ಇಂಥ ಸಂದರ್ಭಗಳಲ್ಲಿ ಗಾಂಧೀಜಿ ಸತ್ಯಾಗ್ರಹ ಮತ್ತು ಸಾಮಾಜಿಕ ಚಳವಳಿಯ ಕುರಿತು ಕರಪತ್ರ ಹಂಚುವ ವ್ಯವಸ್ಥೆ ಮಾಡುತ್ತಿದ್ದರು. ಹಾಗೆ ಬಹಳಷ್ಟು ಭಾರತೀಯರು, ಆಫ್ರಿಕನ್ನರು ಸತ್ಯಾಗ್ರಹದ ಚಳವಳಿಯತ್ತ ಆಕರ್ಷಿತರಾಗುತ್ತಿದ್ದರು.

ದಕ್ಷಿಣ ಆಫ್ರಿಕಾ ಎಂಬ ಕಾಮನಬಿಲ್ಲಿನಂಥ ದೇಶಕ್ಕೊಂದು ವಿಶಿಷ್ಟವೂ ಮತ್ತು ವಿಚಿತ್ರವೂ ಆದ ಹಿನ್ನೆಲೆಯಿದೆ. ಹದಿನಾರನೆಯ ಶತಮಾನದ ಹಿಂದು ಮುಂದೆ ಶುರುವಾದ ಬಿಳಿಯರ ಅತಿಕ್ರಮ ಣದ ಆಟದಲ್ಲಿ ದಕ್ಷಿಣ ಆಫ್ರಿಕಾ ದೇಶವು ತನ್ನನ್ನು ಆ ಅತಿಕ್ರಮಣಕ್ಕೆ ಒಗ್ಗಿಸಿಕೊಂಡಿದ್ದು, ಬಗ್ಗಿಸಿಕೊಂಡಿದ್ದು, ಎದ್ದು ಝಾಡಿಸಿ ಮತ್ತೆ ನಿಲ್ಲಹೊರಟಿದ್ದು ಮತ್ತು ಕೊನೆಗೂ ತನ್ನ ಕಾಲಮೇಲೆ ತಾನು ಗಟ್ಟಿಯಾಗಿ ನಿಂತಿದ್ದು (ಸದ್ಯದ ರಾಜಕೀಯ ಸ್ಥಿತಿಯನ್ನು ಹೊರತುಪಡಿಸಿ), ಇದೆಲ್ಲ ಪ್ರಾಯಶಃ ಬಿಳಿಯರು 1860ರಲ್ಲಿ ಭಾರತೀಯ ಕೂಲಿಗಳನ್ನು ಈ ದೇಶದ ಕಬ್ಬಿನ ಗದ್ದೆಯಲ್ಲಿ ದುಡಿ ಯಲು ಕರೆತರದಿದ್ದರೆ ಸುಲಭಕ್ಕೆ ಸಾಧ್ಯವಿರುತ್ತಿರಲಿಲ್ಲವೇನೋ! ಸಾಮಾನ್ಯ ಅಂದಾಜಿಗೆ ಅರ್ಥವಾಗುವಂಥ ವಿಚಾರವಿದು. 1893ರಲ್ಲಿ ಡರ್ಬನ್ನಿನ ಅಬ್ದುಲ್ಲಾ ಅಂಡ್‌ ಸನ್ಸ್‌ ಎಂಬ ಕಂಪನಿಯ ಕಾನೂನಿನ ತೊಡಕುಗಳನ್ನು ಪರಿಹರಿಸಲು ಭಾರತದಿಂದ ಬಂದ ಮೋಹನದಾಸ ಕರಮಚಂದ್‌ ಗಾಂಧಿ ಎಂಬ ಯುವ ವಕೀಲ, ತನ್ನ ಕೆಲಸದ ಜೊತೆಗೆ ದಕ್ಷಿಣ ಆಫ್ರಿಕಾದ ಬಿಳಿಯ ವಸಾಹತುಶಾಹಿ ದಬ್ಟಾಳಿಕೆಯ ವಿರುದ್ಧ ಸರ್ವೋದಯವೆಂಬ ಮನೆಯನ್ನೂ ಮನಸ್ಸನ್ನೂ ಕಟ್ಟುತ್ತಾ ಮುಂದೊಂದು ದಿನ ಮಹಾತ್ಮನಾಗಿದ್ದು ಬಿಳಿಯರು ಭಾರತೀಯ ಕೂಲಿಗಳನ್ನು ದಕ್ಷಿಣ ಆಫ್ರಿಕಾಕ್ಕೆ ಕರೆತಂದಿದ್ದರಿಂದಲೇ ಎಂಬುದು ಇತಿಹಾಸವನ್ನು ಸಮದರ್ಶಿಯಾಗಿ ಅರ್ಥೈಸಿಕೊಂಡರೆ ಅರಿವಿಗೆ ಬರುತ್ತದೆ. ಹೀಗೆ ಗಾಂಧೀಜಿಯ ಸತ್ಯಾನ್ವೇಷಣೆ ಮತ್ತು ಸತ್ಯಾಗ್ರಹದ ಆರಂಭವಾದದ್ದು ದಕ್ಷಿಣ ಆಫ್ರಿಕಾದಲ್ಲಿ ಎಂಬುದು ಸಾಮಾನ್ಯರಿಗೂ ತಿಳಿದ ಸಂಗತಿ. ಇಷ್ಟಾಗಿ ಗಾಂಧೀಜಿಯ ನಂತರದ ಕಾಲಘಟ್ಟದ ಸಮಾಜ ಗಾಂಧೀಜಿಯ ತಣ್ತೀ ಮತ್ತು ಆದರ್ಶಗಳನ್ನು ಅದೆಷ್ಟು ಔಚಿತ್ಯದಲ್ಲಿ ಬಳಸಿತು ಎಂಬುದು ಪ್ರಶ್ನೆಯಾಗಿಯೇ ಉಳಿಯು ತ್ತದೆ. ಗಾಂಧಿ ಎಂಬ ಹೆಸರಿನ ಮಹಾನ್‌ ಶಕ್ತಿಯನ್ನು ಗಾಂಧಿಯ ನಂತರದ ಕಾಲದಲ್ಲಿ ಪ್ರಪಂಚದ ಬಹುತೇಕ ಸರಕಾರಗಳು ಮತ್ತು ಸಂಸ್ಥೆಗಳು ಶುಭ ಲಾಭದ ಕಿರಾಣಿ ಅಂಗಡಿಯ ತಕ್ಕಡಿಯಲ್ಲಿ ತೂಗುತ್ತ ಆನಂದಿಸಿ¨ªಾವೆ ಎಂದು ಬಹಳ ಸಲ ಕನ್ನಡಿಯ ಮುಂದೆ ನಿಂತಾಗೆಲ್ಲ ಅನ್ನಿಸುವುದು ಸುಳ್ಳಲ್ಲ!  ಗಾಂಧೀಜಿ ತಮ್ಮ ಜೀವಿತಾವಧಿಯಲ್ಲಿ ಅನುಭವಿಸುತ್ತ ಪ್ರತಿಪಾದಿಸಿದ ತಣ್ತೀ ಮತ್ತು ಆದರ್ಶಗಳ ನೆಲೆಗಟ್ಟಿನ ಎದುರು ನಿಂತು ಅವಲೋಕಿಸುವಾಗ ತಮ್ಮ ಹೋರಾಟದ ಆರಂಭದ ವರ್ಷಗಳಲ್ಲಿ ಅವರು  ದಕ್ಷಿಣ ಆಫ್ರಿಕಾದಲ್ಲಿ ಕಳೆದ ದಿನಗಳು ಹೇಗೆ ಪ್ರಸ್ತುತ ಮತ್ತು ಜೀವಂತ ಎಂಬುದು ಅತ್ಯಂತ ಮುಖ್ಯ ಸಂಗತಿ. ಭಾರತದಲ್ಲಿದ್ದಂತೇ ದಕ್ಷಿಣ ಆಫ್ರಿಕಾದಲ್ಲಿಯೂ ಮುಖ್ಯವಾಗಿ ಡರ್ಬನ್ನಿನಲ್ಲಿ ಗಾಂಧಿ ಹೆಸರಿನ ರಸ್ತೆಗಳಿವೆ, ಆಸ್ಪತ್ರೆಗಳಿವೆ, ಸಂಘ ಸಂಸ್ಥೆಗಳಿವೆ, ಉದ್ಯಾನವನಗಳಿವೆ, ಸ್ಮಾರಕಗಳಿವೆ, ಮ್ಯೂಸಿಯ ಮ್ಮುಗಳಿವೆ. ಇದೆಲ್ಲದರ ಹಿಂದೆ ಜಗತ್ತಿನ ಅರ್ಧಕ್ಕೂ ಹೆಚ್ಚು ಮನಸ್ಸು ಒಪ್ಪುವ ಅಹಿಂಸಾವಾದವಿದೆ. ಗಾಂಧಿ ಮತ್ತು ಅಹಿಂಸೆ ಈ ಎರಡು ಶಬ್ದಗಳು ಒಂದನ್ನೊಂದು ನೂರಕ್ಕೆ ನೂರರಷ್ಟು ಅವಲಂಬಿಸಿಯಾಗಿದೆ. ಇಂಥ ಅಹಿಂಸಾವಾದದ ಆರಂಭವಾಗುವುದಕ್ಕೂ ಮುನ್ನ, ಗಾಂಧೀಜಿಯೊಳಗಿನ ಸತ್ಯಾನ್ವೇಷಿಯು ತನ್ನ ಅಲೋಚನೆಗಳಿಗೆ ಮತ್ತು ತನ್ನೊಳಗಿದ್ದ ಸಂಘಟನಾ ಶಕ್ತಿಗೆ ಪೂರಕವಾಗಿ ಆಯ್ದುಕೊಂಡ ಅನೇಕ ಹೆಜ್ಜೆಗಳಲ್ಲಿ ಫುಟ್‌ಬಾಲ… ಕೂಡ ಒಂದು ಪ್ರಮುಖ ಅಂಗವಾಗಿತ್ತು ಎಂಬುದು ಬಹುಶಃ ಇಂದಿನ ನಮ್ಮ ಅನೇಕರಿಗೆ ಗೊತ್ತಿರಲಿಕ್ಕಿಲ್ಲ. 

2010ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಫೀಫಾ ವಿಶ್ವಕಪ್‌ ನಡೆದಾಗ ದಕ್ಷಿಣ ಆಫ್ರಿಕಾದ ಒಳಾಂಗಣ ಫುಟ್‌ಬಾಲ್‌ ಅಸೋಸಿಯೇಷನ್‌ನ ಅಧ್ಯಕ್ಷ ಪೂಬಾಲನ್‌ ಗೋವಿಂದಸಾಮಿ ಸಂದರ್ಶನವೊಂದರಲ್ಲಿ ಈ ಬಗ್ಗೆ ವಿವರವಾಗಿ ಹೇಳುತ್ತಾರೆ. 1896ರಲ್ಲಿ ಸತ್ಯಾಗ್ರಹದ ಚಳವಳಿ ಆಫ್ರಿಕನ್‌ ಇಂಡಿಯನ್‌ ಕಾಂಗ್ರೆಸ್‌ ಮೂಲಕ ನಡೆಯುವಾಗ ಗಾಂಧೀಜಿ ಜೊಹಾನ್ಸ್‌ ಬರ್ಗಿನ ಟ್ರಾನ್ಸಾ$Ìಲ… ಇಂಡಿಯನ್‌ ಫುಟ್‌ಬಾಲ್‌ ಅಸೋಸಿಯೇಷನ್ನಿನ ಸಂಘಟನೆ ಮತ್ತು ಅಭಿವೃದ್ಧಿಗೆ ಬಹಳ ಕೆಲಸ ಮಾಡಿದ್ದರು. ಮಿಚಿಗನ್‌ ಸ್ಟೇಟ್‌ ಯುನಿವರ್ಸಿಟಿಯ ಆಫ್ರಿಕನ್‌ ಅಧ್ಯಯನದ ಮುಖ್ಯಸ್ಥ ಪೀಟರ್‌ ಅಲೆಗಿ ಎಂಬ ವಿದ್ವಾಂಸರ ಪ್ರಕಾರ ದಕ್ಷಿಣ ಆಫ್ರಿಕಾದಲ್ಲಿ ಬಿಳಿಯರಲ್ಲದ ಜನರ ಮೊಟ್ಟ ಮೊದಲ ಅಚ್ಚುಕಟ್ಟಾದ ಮತ್ತು ಶಿಸ್ತಾದ ಫುಟ್‌ಬಾಲ… ತಂಡವಾಗಿತ್ತು ಅದು. ಭಾರತೀಯ ಸಮುದಾಯದ ಜನರ ಒಳ್ಳೆಯ ಫುಟ್‌ ಬಾಲ… ತಂಡವೊಂದು ರಾಷ್ಟ್ರೀಯ ಮಟ್ಟದಲ್ಲಿ ಆಡಲು ಶುರುವಿಟ್ಟರೆ ಆಟವನ್ನು ನೋಡಲು ಬರುವ ದೊಡª ಸಂಖ್ಯೆಯ ಬಿಳಿಯರಲ್ಲದ ಜನಸಮುದಾಯದತ್ತ ಗಾಂಧೀಜಿಯ ದೃಷ್ಟಿಯಿರುತ್ತಿತ್ತು. ಇಂಥ ಸಂದರ್ಭಗಳನ್ನು ಗಾಂಧೀಜಿ ತಮ್ಮ ಸತ್ಯಾಗ್ರಹ ಮತ್ತು ಸಾಮಾಜಿಕ ಚಳವಳಿಯ ಕುರಿತು ಕರಪತ್ರಗಳನ್ನು ಹಂಚುವ ವ್ಯವಸ್ಥೆ ಮಾಡುತ್ತಿದ್ದರು ಮತ್ತು ಹಾಗೆ ಬಹಳಷ್ಟು ಭಾರತೀಯರು ಮತ್ತು ಆಫ್ರಿಕನ್ನರು ಸತ್ಯಾಗ್ರಹದ ಚಳವಳಿಯತ್ತ ಆಕರ್ಷಿತರಾಗುತ್ತಿದ್ದರು. ಹೀಗೆ ಮುಖ್ಯವಾಗಿ ತಮ್ಮ ಸಂಘಟನಾ ಶಕ್ತಿಯ ಮೂಲಕ ಸತ್ಯಾಗ್ರಹದ ಚಳವಳಿಯತ್ತ ಗಾಂಧೀಜಿ ಕೇವಲ ಭಾರತೀಯರನ್ನಷ್ಟೆ ಅಲ್ಲದೆ ಆಫ್ರಿಕನ್ನರನ್ನೂ ಮತ್ತು ಕಾಲಾಂತರದಲ್ಲಿ ಸಮದರ್ಶೀ ಮನಃಸ್ಥಿತಿಯ ಬಿಳಿಯ ರನ್ನೂ ಆಕರ್ಷಿಸುವಲ್ಲಿ ಸಫಲರಾಗುತ್ತ ಹೋದರು. 

ದಕ್ಷಿಣ ಆಫ್ರಿಕಾದ ಒಳಾಂಗಣ ಫುಟ್‌ಬಾಲ… ಅಸೋಸಿಯೇ ಷನ್ನಿನ ಅಧ್ಯಕ್ಷ ಪೂಬಾಲನ್‌ ಗೋವಿಂದಸಾಮಿಯವರ ಪ್ರಕಾರ ಇಂದಿನ ದಕ್ಷಿಣ ಆಫ್ರಿಕಾದ ಕ್ರೀಡಾ ಜಗತ್ತಿನಲ್ಲಿ ಎಲ್ಲ ಸಂಸ್ಕೃತಿಯ ಎಲ್ಲ ಬಣ್ಣದವರೂ ಪಾಲ್ಗೊಳ್ಳುತ್ತಿರುವುದರ ಹಿಂದಿನ ನಿಜವಾದ ಶಕ್ತಿ ಗಾಂಧೀಜಿ. ತಾನೆಷ್ಟು ಗೋಲ್‌ ಮಾಡಿದೆ ಅಥವಾ ತಾನೆಷ್ಟು ಗೋಲ್‌ಗ‌ಳನ್ನು ತಡೆದೆ ಎಂಬುದಕ್ಕಿಂತ ತನ್ನ ತಂಡದ ಪ್ರದರ್ಶನ ಹೇಗಿತ್ತು ಎಂಬಂಥ ತೀರಾ ಸಾಮಾನ್ಯವಾದರೂ ಗಟ್ಟಿಯಾದ ಚಿಂತನೆಗಳನ್ನು ಅವರು ತಮ್ಮ ಸಭೆಯ ಭಾಷಣಗಳಲ್ಲಿ ಉಲ್ಲೇಖೀಸಿ ಮಾತನಾಡುತ್ತಿದ್ದರು. ಅಂದು ಅವರ ಸತ್ಯಾಗ್ರಹದ ನಿಜವಾದ ಉದ್ದೇಶವು ಇಂದಿನ ದಕ್ಷಿಣ ಆಫ್ರಿಕಾದ ಮಲ್ಟಿಕಲ್ಚರಲ… ಕ್ರೀಡಾ ಜಗತ್ತಿನ ಮೂಲಕ ಸಫಲವಾಗುತ್ತಿದೆ. ಈ ಕೆಲಸವು ಮೇಲಿನಿಂದ ಕಂಡಷ್ಟು ಸುಲಭ¨ªಾಗಿರಲಿಲ್ಲ. ಕಬ್ಬಿನ ಗ¨ªೆಗಳಲ್ಲಿ ಐದು ವರ್ಷಗಳ ಕಾಂಟ್ರಾಕ್ಟಿಗೆ ಕೂಲಿಗಳಾಗಿ ಬಂದು ಇಲ್ಲಿಯೇ ನೆಲೆಸಿದ ಭಾರತೀಯರು ತಮ್ಮ ಪ್ರತಿಯೊಂದು ಹಕ್ಕಿಗಾಗಿಯೂ ಬಹಳ ಒ¨ªಾಡಬೇಕಿತ್ತು. ಸಮಾಜದ ಮುಖ್ಯ ವಾಹಿನಿಯಲ್ಲಿ ತಮ್ಮ ಪ್ರಾಬಲ್ಯವನ್ನು ಮೆರೆಯುತ್ತಿದ್ದ ಬಿಳಿಯ ಸಮುದಾಯವು ಭಾರತೀಯರ, ಆಫ್ರಿಕ್ಕನ್ನರ ಹಕ್ಕುಗಳನ್ನು ಹತ್ತಿಕ್ಕುವ ಮತ್ತು ತಮ್ಮ ಪ್ರಾಬಲ್ಯವನ್ನು ಮುಂದುವರೆಸುವ ನಿಟ್ಟಿನಲ್ಲಿ ಸಾಧ್ಯವಾದಷ್ಟು ಯಶಸ್ವಿಯಾಗುತ್ತಿದ್ದರು. ಇಂಥ ಕಾಲಘಟ್ಟ ದಲ್ಲಿ ಸಾಧಾರಣ ಕೂಲಿಗಳ¨ªೊಂದು ಸ್ವತಂತ್ರ ಫುಟ್‌ಬಾಲ… ಅಸೋಸಿಯೇಷನ್ನನ್ನು ಕಾಗದಪತ್ರಗಳ ಮೂಲಕ ಅನುಮೋದಿ ಸುವುದಕ್ಕೂ ತಿಂಗಳುಗಳ ಕಾಲ ಬೇಕಾಗುತ್ತಿತ್ತು. ಹೀಗೆ ಟ್ರಾನ್ಸಾ$Ìಲ್‌ ಫುಟ್‌ಬಾಲ… ಅಸೋಸಿಯೇಷನ್‌ ಪೂರ್ಣಪ್ರಮಾಣದಲ್ಲಿ ಎದ್ದು ನಿಂತ ಬೆನ್ನಲ್ಲೇ ದಕ್ಷಿಣ ಆಫ್ರಿಕಾದ ಬೇರೆ ಬೇರೆ ಭಾಗಗಳಲ್ಲಿ ಹೊಸ ಫುಟ್‌ಬಾಲ್‌ ಅಸೋಸಿಯೇಷನ್‌ಗಳು ಹುಟ್ಟತೊಡಗಿದವು. ಹೀಗೆ ದಕ್ಷಿಣ ಆಫ್ರಿಕಾದಲ್ಲಿ ಶುರುವಾದ ಗಾಂಧೀಜಿಯವರ ನೂರಾರು ಕನಸುಗಳಲ್ಲಿ ಫುಟ್‌ಬಾಲ್‌ ಮೂಲಕ ನಮ್ಮ ಜನರನ್ನು ಒಗ್ಗೂಡಿಸುವ ಮತ್ತು ವರ್ಣಭೇದ ನೀತಿಯನ್ನು ಮೀರಿ ನಮ್ಮ ಜನರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಕನಸೂ ಚಿಗುರೊಡೆದು ಬಲಿಷ್ಠವಾಗತೊಡಗಿತು. ಇದೆಲ್ಲದರ ಫಲವಾಗಿ ದಕ್ಷಿಣ ಆಫ್ರಿಕಾದ ಕ್ರೀಡಾ ಜಗತ್ತಿನಲ್ಲಿ ಇಂದು ನಾವು ಎಲ್ಲ ಬಣ್ಣದವರನ್ನೂ ನೋಡುತ್ತೇವೆ. ಈ ಸಾಧನೆಯ ಹಿಂದಿನ ಶ್ರಮದ ಮುಕ್ಕಾಲು ಪಾಲು ಗಾಂಧೀಜಿಯವರಿಗೆ ಸಲ್ಲುತ್ತದೆ.

ಇಷ್ಟಾಗಿ ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಮರಳಿದ ನಂತರದ ಅವಧಿಯಲ್ಲಿ ಶರೀರಶ್ರಮದ ಕ್ರೀಡೆಗಳತ್ತ ಗಾಂಧೀಜಿಯವರ ನಿಲುವು ಬದಲಾದದ್ದು ಬಹುಶಃ ಸತ್ಯಾನ್ವೇಷಣೆಯ ನಿರಂತರ ನಡೆಗಳಲ್ಲಿ ಅನುಭವಿಸಲೇಬೇಕಾದ ಬದಲಾವಣೆ ಎಂದು ಭಾವಿಸಬೇಕಾಗುತ್ತದೇನೊ. ಹೀಗೆ ಕೆಲವೇ ವರ್ಷಗಳ ಕಾಲ ಗಾಂಧೀಜಿ ದಕ್ಷಿಣ ಆಫ್ರಿಕಾದಲ್ಲಿದ್ದರೂ ಪ್ರತಿಮೆಗಳ, ರಸ್ತೆಗಳ ಸ್ಮಾರಕಗಳ ಹೊರತಾಗಿ ಈ ದೇಶದ ವಿಭಿನ್ನ ಬಣ್ಣಗಳ ಸಮನ್ವಯದ ನಡೆಗೆ, ಸಾಮರಸ್ಯದ ಸಾûಾತ್ಕಾರಕ್ಕೆ ಕಾರಣರಾದ ಮಹಾತ್ಮರ ಸಾಲಿನಲ್ಲಿ ಅಗ್ರಗಣ್ಯರಾಗಿ ನಿಲ್ಲುತ್ತಾರೆ. 

(ಲೇಖಕರು ದಕ್ಷಿಣ ಆಫ್ರಿಕಾದ ಡರ್ಬನ್‌ನಲ್ಲಿ ಆಯುರ್ವೇದ ವೈದ್ಯ)
ಡಾ. ಕಣಾದ ರಾಘವ

ಟಾಪ್ ನ್ಯೂಸ್

CM-Office

By Election Result: ನಾನು ದಂತದ ಗೋಪುರದಲ್ಲಿ ಕೂತವನಲ್ಲ,ಜನರೊಂದಿಗೆ ಸದಾ ಒಡನಾಟವಿದೆ: ಸಿಎಂ

1-ree

Maharashtra; ಪತಿಗೆ ಸೋಲು: ಮತಯಂತ್ರಗಳ ಕುರಿತು ಆಪಾದಿಸಿದ ನಟಿ ಸ್ವರಾ ಭಾಸ್ಕರ್

mamata

West Bengal bypolls; ಟಿಎಂಸಿ ಕ್ಲೀನ್ ಸ್ವೀಪ್: ಪ್ರತಿಭಟನೆಗಳು ಬಿಜೆಪಿಗೆ ಸಹಕಾರಿಯಾಗಲಿಲ್ಲ

satish

ಮಹಾರಾಷ್ಟ್ರ ಸೋಲಿನ ಬೆನ್ನಲ್ಲೇ ಇವಿಎಂ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಸತೀಶ್‌ ಜಾರಕಿಹೊಳಿ

55th IFFI Goa: ಪ್ರಸಾರ ಭಾರತಿಯಿಂದಲೂ ಒಟಿಟಿ ವೇವ್ಸ್‌ – ಮನರಂಜನೆಗೆ ಹೊಸ ಆಯಾಮ

55th IFFI Goa: ಪ್ರಸಾರ ಭಾರತಿಯಿಂದಲೂ ಒಟಿಟಿ ವೇವ್ಸ್‌ – ಮನರಂಜನೆಗೆ ಹೊಸ ಆಯಾಮ

Maharashtra Polls: Who will be the next Chief Minister? Fadnavis gives a hint

Maharashtra Polls: ಯಾರಾಗಲಿದ್ದಾರೆ ಮಹಾ ಮುಖ್ಯಮಂತ್ರಿ? ಸುಳಿವು ನೀಡಿದ ಫಡ್ನವೀಸ್‌

ಕೊಪ್ಪಳ: ಫ್ಲೈಟ್‌ನಲ್ಲಿ ಲಿಂಗದಹಳ್ಳಿ ಸರ್ಕಾರಿ ಶಾಲಾ ಮಕ್ಕಳ ಪ್ರವಾಸ!

ಕೊಪ್ಪಳ: ಫ್ಲೈಟ್‌ನಲ್ಲಿ ಲಿಂಗದಹಳ್ಳಿ ಸರ್ಕಾರಿ ಶಾಲಾ ಮಕ್ಕಳ ಪ್ರವಾಸ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ

ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ

1-kannada

Kannada; ಅನಿವಾಸಿ ಕನ್ನಡಿಗರ ಮಕ್ಕಳಲ್ಲೂ ಕನ್ನಡ ಚಿಗುರಲಿ

1-kanchi

Kanchi swamiji; ದೇವಸ್ಥಾನಗಳ ಭೂಮಿ ದೇವಸ್ಥಾನಗಳಿಗೇ ಇರಲಿ

1-reee

ದಿ| ದಾಮೋದರ ಆರ್‌. ಸುವರ್ಣ: ಬಡಜನರ ಕಣ್ಣೀರಿಗೆ ಸ್ಪಂದಿಸಿದ ಹೃದಯ ಸಿರಿವಂತ

ಕನ್ನಡ ಅನ್ನ ನೀಡುವ ಭಾಷೆಯಾಗಿ ಬೆಳೆಯಬೇಕು

Education: ಕನ್ನಡ ಅನ್ನ ನೀಡುವ ಭಾಷೆಯಾಗಿ ಬೆಳೆಯಬೇಕು

MUST WATCH

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

ಹೊಸ ಸೇರ್ಪಡೆ

Katpadi: ಸ್ಕೂಟರ್‌ಗೆ ಟೆಂಪೋ ಢಿಕ್ಕಿ 

Katpadi: ಸ್ಕೂಟರ್‌ಗೆ ಟೆಂಪೋ ಢಿಕ್ಕಿ 

CM-Office

By Election Result: ನಾನು ದಂತದ ಗೋಪುರದಲ್ಲಿ ಕೂತವನಲ್ಲ,ಜನರೊಂದಿಗೆ ಸದಾ ಒಡನಾಟವಿದೆ: ಸಿಎಂ

Puttur: ಮಾದಕ ಪದಾರ್ಥ ಸೇವಿಸಿ ಅನುಚಿತ ವರ್ತನೆ… ಇಬ್ಬರ ಬಂಧನ

Puttur: ಮಾದಕ ಪದಾರ್ಥ ಸೇವಿಸಿ ಅನುಚಿತ ವರ್ತನೆ… ಇಬ್ಬರ ಬಂಧನ

Karkala: ಬೈಕ್‌ ಢಿಕ್ಕಿ; ಗಾಯ

Karkala: ಬೈಕ್‌ ಢಿಕ್ಕಿ; ಗಾಯ

Kundapura: ರಿಕ್ಷಾದಿಂದ ಬಿದ್ದು ಮಹಿಳೆಗೆ ಗಂಭೀರ ಗಾಯ

Kundapura: ರಿಕ್ಷಾದಿಂದ ಬಿದ್ದು ಮಹಿಳೆಗೆ ಗಂಭೀರ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.