ಗಾಂಜಾ ಅಪಘಾತ: ದಿಗಂತ್‌, ಪ್ರಜ್ವಲ್‌ಗೆ ನೊಟೀಸ್‌ ನೀಡಿಲ್ಲ!

Team Udayavani, Oct 2, 2017, 11:58 AM IST

6.jpg

ಬೆಂಗಳೂರು: ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಮಾಜಿ ಅಧ್ಯಕ್ಷ ದಿ.ಆದಿಕೇಶವಲು ಮೊಮ್ಮಗ ಚಲಾಯಿಸುತ್ತಿದ್ದ ಐಷಾರಾಮಿ ಬೆಂಝ್ ಕಾರಿನ ಅಪಘಾತ ಪ್ರಕರಣಕ್ಕೆ ಸಂಬಂಧಿಸಿ ಹಿರಿಯ ನಟ ದೇವ್‌ರಾಜ್‌ ಅವರ ಕಿರಿಯ ಪುತ್ರ ಪ್ರಣಮ್‌ ದೇವ್‌ರಾಜ್‌ ಸೇರಿದಂತೆ 6 ಮಂದಿಗೆ ನೊಟೀಸ್‌ ನೀಡಿರುವುದಾಗಿ ಡಿಸಿಪಿ ಶರಣಪ್ಪ ತಿಳಿಸಿದ್ದಾರೆ. 

ಘಟನೆ ನಡೆಯುವು ಮುನ್ನು ಆರೋಪಿ ವಿಷ್ಣು ಜೊತೆ ಡ್ರಿಂಕ್ಸ್‌ ಪಾರ್ಟಿ ಮಾಡಿರುವುದು ಕಂಡು ಬಂದ ಹಿನ್ನಲೆಯಲ್ಲಿ ಪ್ರಣಮ್‌, ಕೈಸರ್‌, ವಿಷ್ಣು ಸಹೋದರ ಆದಿ ಸೇರಿದಂತೆ 6 ಮಂದಿಗೆ ಭಾನುವಾರ ಸಂಜೆ ನೊಟೀಸ್‌ ನೀಟಡಿದ್ದು ವಿಚಾರಣೆಗೆ ಹಾಜರಾಗುವಂತೆ  ಸೂಚಿಸಲಾಗಿದೆ. 

ದಿಗಂತ್‌, ಪ್ರಜ್ವಲ್‌ಗೆ ನೊಟೀಸ್‌ ನೀಡಿಲ್ಲ 

ಪ್ರಕರಣಕ್ಕೆ ಸಂಬಂಧಿಸಿ ದಿಗಂತ್‌, ಪ್ರಜ್ವಲ್‌ ದೇವ್‌ರಾಜ್‌ ಅವರಿಗೂ ನೊಟೀಸ್‌ ನೀಡಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಆದರೆ ನೊಟೀಸ್‌ ನೀಡಲಾಗಿಲ್ಲ.  

ಬುಧವಾರ ತಡರಾತ್ರಿ 12.30ರ ಸುಮಾರಿಗೆ ಸ್ನೇಹಿತನ ಮನೆಯಲ್ಲಿ ಇಟ್ಟಿದ್ದ ಮೊಬೈಲ್‌ ತರಲು ಬೆಂಝ್ ಕಾರಿನಲ್ಲಿ ತನ್ನ ಸ್ನೇಹಿತರೊಂದಿಗೆ ಆರ್‌.ವಿ.ಕಾಲೇಜು ಜಂಕ್ಷನ್‌ ಕಡೆಯಿಂದ ಅತಿ ವೇಗವಾಗಿ ಹೋಗುತ್ತಿದ್ದ ಗೀತ ವಿಷ್ಣು, ಸೌಂತ್‌ ಎಂಡ್‌ ಸರ್ಕಲ್‌ನಲ್ಲಿ ಯಡಿಯೂರು ಸರ್ಕಲ್‌ ಕಡೆಯಿಂದ ಬರುತ್ತಿದ್ದ ಓಮ್ನಿ ಕಾರಿಗೆ ಡಿಕ್ಕಿ ಹೊಡೆದು  ಬಳಿಕ ಕಾರು ಬಿಬಿಎಂಪಿ ನಾಮಫ‌ಲಕಕ್ಕೆ ಗುದ್ದಿ, ಪೆಟ್ರೋಲ್‌ ಬಂಕ್‌ ಪಕ್ಕದ ಪಾದಚಾರಿ ಮಾರ್ಗದ ಮೇಲೆ ಹತ್ತಿ, ಪಲ್ಟಿಯಾಗಿತ್ತು. 

ಡಿಕ್ಕಿ ಪರಿಣಾಮ ಓಮ್ನಿ ಕಾರು ಸಂಪೂರ್ಣ ಜಖಂಗೊಂಡಿತ್ತು. ಅದರಲ್ಲಿದ್ದ ಕಲಾಸಿಪಾಳ್ಯ ನಿವಾಸಿಗಳಾದ ಕೈಜರ್‌, ಗಿಜರ್‌ ಹಾಗೂ ನಾಲ್ವರು ಮಕ್ಕಳಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದವು. 

ಘಟನಾ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಸಾರ್ವಜನಿಕರು ವಿಷ್ಣು  ಹಾಗೂ ಇತರ ಮೂವರು ಸ್ನೇಹಿತರಿಗೆ ಹಿಗ್ಗಾಮುಗ್ಗಾ ಥಳಿಸಿದ್ದರು. ಈ ವೇಳೆ, ವಿಷ್ಣು ಹೊರತು ಪಡಿಸಿ ಉಳಿದವರು ಸ್ಥಳದಿಂದ ಪರಾರಿಯಾಗಿದ್ದರು. 

 ಅಪಘಾತದಿಂದ ಉದ್ರಿಕ್ತಗೊಂಡಿದ್ದ ಸಾರ್ವಜನಿಕರು, ರಸ್ತೆಯುದ್ದಕ್ಕೂ ವಿಷ್ಣುಗೆ ಹೊಡೆದು ಕೊಂಡು, ಜಯನಗರ ಠಾಣೆಗೆ ಎಳೆದೊಯ್ದು, ಪೊಲೀಸರಿಗೊಪ್ಪಿಸಿದ್ದರು. ಈ ವೇಳೆ, ವಿಷ್ಣು ಕಂಠಪೂರ್ತಿ ಮದ್ಯ ಸೇವಿಸಿರುವುದು ಪತ್ತೆಯಾಗಿತ್ತು. 

ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರಿಗೆ ಸಾರ್ವಜನಿಕರು ವಿಷ್ಣು ಕಾರಿನಲ್ಲಿ ಗಾಂಜಾ ಇದೆ ಎಂಬ ಮಾಹಿತಿ ನೀಡಿದ್ದರು. ಅದರಂತೆ ಕಾರು ಪರಿಶೀಲಿಸಿದಾಗ ಸಿಬ್ಬಂದಿಗೆ 110 ಗ್ರಾಂ ಗಾಂಜಾ ಸಿಕ್ಕಿತ್ತು. 

 ತೀವ್ರ ಹಲ್ಲೆಗೊಳಗಾಗಿ ಮಲ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವಿಷ್ಣು ಪರಾರಿಯಾಗಿದ್ದು ಪೊಲೀಸರು ಶೋಧ ನಡೆಸುತ್ತಿದ್ದಾರೆ. 

ನಟ ಪ್ರಜ್ವಲ್‌ ದೇವರಾಜ್‌ ಮತ್ತು ದಿಗಂತ್‌ ಘಟನೆ ವೇಳೆ ವಿಷ್ಣು ಚಾಲನೆ ಮಾಡುತ್ತಿದ್ದ ಬೆಂಝ್ ಕಾರಿನಲ್ಲಿ ಇದ್ದರು ಎಂದು ಸ್ಥಳೀಯರು ಹೇಳಿದ್ದರು.

ಪ್ರಜ್ವಲ್‌ ಮತ್ತು ದಿಗಂತ್‌ ನಾವು ಕಾರಿನಲ್ಲಿರಲಿಲ್ಲ ನಾವು ಶೂಟಿಂಗ್‌ ನಲ್ಲಿದ್ದವು ಎಂದು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದರು. 

ಕಾರಿನಲ್ಲಿ  ಲಕ್ಷಾಂತರ ರೂ.ಮೌಲ್ಯದ ಗಾಂಜಾ ಪತ್ತೆಯಾಗಿ. ಈ ಸಂಬಂಧ ಆದಿಕೇಶವಲು ಮೊಮ್ಮಗ ಗೀತವಿಷ್ಣು ಹಾಗೂ ಇತರರ ವಿರುದ್ಧ ಎನ್‌ಡಿಪಿಎಸ್‌ ಕಾಯ್ದೆ ಅಡಿಯಲ್ಲಿ ಜಯನಗರ ಠಾಣೆ
ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.  ಐಪಿಸಿ 279 (ಅತಿ ವೇಗವಾಗಿ ವಾಹನ ಚಾಲನೆ) 337 ನಿರ್ಲಕ್ಷ್ಯದ ಆರೋಪದ ಮೇಲೆ ವಿಷ್ಣು ವಿರುದ್ಧ ಜಯ ನಗರ ಸಂಚಾರ ಠಾಣೆ ಯಲ್ಲಿ  ಪ್ರಕರಣ ದಾಖಲಾಗಿದೆ.

ಟಾಪ್ ನ್ಯೂಸ್

3-sedam

Sedam: ಪತಿಯಿಂದಲೇ ಪತ್ನಿಯ ಬರ್ಬರ ಹತ್ಯೆ; ಆರೋಪಿ ಬಂಧನ

FIR: ವಾಟ್ಸಾಪ್ ನಿರ್ದೇಶಕರ ವಿರುದ್ದ ಎಫ್‌ಐಆರ್ ಹಾಕಿದ ಗುರುಗ್ರಾಮ್‌ ಪೊಲೀಸರು

FIR: ವಾಟ್ಸಾಪ್ ನಿರ್ದೇಶಕರ ವಿರುದ್ದ ಎಫ್‌ಐಆರ್ ಹಾಕಿದ ಗುರುಗ್ರಾಮ್‌ ಪೊಲೀಸರು

2-mng-kbc

Mangaluru: ಕೌನ್‌ ಬನೇಗಾ ಕರೋಡ್‌ಪತಿಯಲ್ಲಿ 6.40 ಲ.ರೂ. ಗೆದ್ದ ಅಪೂರ್ವಾ ಶೆಟ್ಟಿ

IPL Retentions: ಐಪಿಎಲ್‌ ನಿಯಮಗಳಲ್ಲಿ ಭಾರಿ ಬದಲಾವಣೆ; ವಿದೇಶಿ ಆಟಗಾರರಿಗೆ ಮೂಗುದಾರ

IPL Retentions: ಐಪಿಎಲ್‌ ನಿಯಮಗಳಲ್ಲಿ ಭಾರಿ ಬದಲಾವಣೆ; ವಿದೇಶಿ ಆಟಗಾರರಿಗೆ ಮೂಗುದಾರ

CM-Mysore1

MUDA Scam: ಸಿಎಂ ಸಿದ್ದರಾಮಯ್ಯ ವಿರುದ್ಧದ ಪ್ರಕರಣ ತನಿಖೆಗೆ ಲೋಕಾಯುಕ್ತದಿಂದ 4 ತಂಡ ರಚನೆ

Kota-poojary

Rescue: ಉತ್ತರ ಭಾರತದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಉಡುಪಿಯ ತಂಡಕ್ಕೆ ಸಂಸದ ಕೋಟ ಸಹಾಯ

SSLLC

leak: ಎಸೆಸೆಲ್ಸಿಪರೀಕ್ಷೆ ದಿನ ಬೆಳಗ್ಗೆ 6ಕ್ಕೆ ಶಿಕ್ಷಕರಿಗೆ ಸಿಗಲಿದೆ ಪ್ರಶ್ನೆಪತ್ರಿಕೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

CM-Mysore1

MUDA Scam: ಸಿಎಂ ಸಿದ್ದರಾಮಯ್ಯ ವಿರುದ್ಧದ ಪ್ರಕರಣ ತನಿಖೆಗೆ ಲೋಕಾಯುಕ್ತದಿಂದ 4 ತಂಡ ರಚನೆ

SSLLC

leak: ಎಸೆಸೆಲ್ಸಿಪರೀಕ್ಷೆ ದಿನ ಬೆಳಗ್ಗೆ 6ಕ್ಕೆ ಶಿಕ್ಷಕರಿಗೆ ಸಿಗಲಿದೆ ಪ್ರಶ್ನೆಪತ್ರಿಕೆ

bjp-congress

BJP vs Congress ; ಕೇಸ್‌ ಮೇಲೆ ಕೇಸ್‌

BJP 2

CM Siddaramaiah ಕಂಡಲ್ಲೆಲ್ಲ ಕಪ್ಪುಪಟ್ಟಿ ಪ್ರದರ್ಶನಕ್ಕೆ ಬಿಜೆಪಿ ಸಜ್ಜು

1-mali

Karnataka; ಮಳಿಗೆಯಲ್ಲಿ 10 ಸಿಬಂದಿ ಇದ್ದರೆ 24 ತಾಸೂ ವ್ಯವಹಾರಕ್ಕೆ ಅವಕಾಶ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

3-sedam

Sedam: ಪತಿಯಿಂದಲೇ ಪತ್ನಿಯ ಬರ್ಬರ ಹತ್ಯೆ; ಆರೋಪಿ ಬಂಧನ

FIR: ವಾಟ್ಸಾಪ್ ನಿರ್ದೇಶಕರ ವಿರುದ್ದ ಎಫ್‌ಐಆರ್ ಹಾಕಿದ ಗುರುಗ್ರಾಮ್‌ ಪೊಲೀಸರು

FIR: ವಾಟ್ಸಾಪ್ ನಿರ್ದೇಶಕರ ವಿರುದ್ದ ಎಫ್‌ಐಆರ್ ಹಾಕಿದ ಗುರುಗ್ರಾಮ್‌ ಪೊಲೀಸರು

2-mng-kbc

Mangaluru: ಕೌನ್‌ ಬನೇಗಾ ಕರೋಡ್‌ಪತಿಯಲ್ಲಿ 6.40 ಲ.ರೂ. ಗೆದ್ದ ಅಪೂರ್ವಾ ಶೆಟ್ಟಿ

IPL Retentions: ಐಪಿಎಲ್‌ ನಿಯಮಗಳಲ್ಲಿ ಭಾರಿ ಬದಲಾವಣೆ; ವಿದೇಶಿ ಆಟಗಾರರಿಗೆ ಮೂಗುದಾರ

IPL Retentions: ಐಪಿಎಲ್‌ ನಿಯಮಗಳಲ್ಲಿ ಭಾರಿ ಬದಲಾವಣೆ; ವಿದೇಶಿ ಆಟಗಾರರಿಗೆ ಮೂಗುದಾರ

CM-Mysore1

MUDA Scam: ಸಿಎಂ ಸಿದ್ದರಾಮಯ್ಯ ವಿರುದ್ಧದ ಪ್ರಕರಣ ತನಿಖೆಗೆ ಲೋಕಾಯುಕ್ತದಿಂದ 4 ತಂಡ ರಚನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.