ಆಹಾರ ಪೂರೈಕೆ; ಹಲವೆಡೆ ಏರಿಕೆ, ಕೆಲವೆಡೆ ಇಳಿಕೆ!
Team Udayavani, Oct 2, 2017, 1:03 PM IST
ಬೆಂಗಳೂರು: ಇಂದಿರಾ ಕ್ಯಾಂಟೀನ್‌ಗಳಲ್ಲಿ ಬೆಳಗಿನ ತಿಂಡಿ, ಮಧ್ಯಾಹ್ನದ ಊಟದ ಸಂಖ್ಯೆ ಹೆಚ್ಚಿಸಿ, ರಾತ್ರಿ ಊಟದ ಸಂಖ್ಯೆ ಕಡಿಮೆ ಮಾಡಲು ನಿರ್ಧರಿಸಿರುವ ಬಿಬಿಎಂಪಿ, ಆಹಾರ ವಿತರಣೆ ಪಟ್ಟಿ ಪರಿಷ್ಕರಿಸುತ್ತಿದೆ.
ಬೆಳಗ್ಗೆ ತಿಂಡಿ ಹಾಗೂ ಮಧ್ಯಾಹ್ನ ಊಟಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನ ಬರುತ್ತಿದ್ದಾರೆ. ಇದರಿಂದ ಆಹಾರ ಬೇಗ ಖಾಲಿಯಾಗುತ್ತಿದ್ದು, ಹಲವರು ಹಸಿದೇ ವಾಪಸಾಗುತ್ತಿದ್ದಾರೆ. ಕೆಲವೆಡೆ ರಾತ್ರಿ ಆಹಾರ ಹಾಗೆ ಉಳಿಯುತ್ತಿದೆ. ಈ ಅಸಮತೋಲನ ಸರಿದೂಗಿಸಲು ಪಾಲಿಕೆ ಅಧಿಕಾರಿಗಳು ಪರಿಷ್ಕರಣೆಗೆ ಮುಂದಾಗಿದ್ದಾರೆ.
ಅಧ್ಯಯನ ನಡೆಸಿ ಸೂಚನೆ: ಇಂದಿರಾ ಕ್ಯಾಂಟೀನ್ ಆರಂಭವಾಗಿ ಒಂದೂವರೆ ತಿಂಗಳು ಕಳೆದಿದೆ. ಪ್ರಸ್ತುತ ಒಂದು ಹೊತ್ತಿಗೆ 300 ಜನರಿಗೆ ಊಟ ವಿತರಿಸುತ್ತಿದ್ದರೂ ಆಹಾರದ ಕೊರತೆಯಾಗುತ್ತಿರುವ ಹಿನ್ನೆಲೆಯಲ್ಲಿ ಅಧ್ಯಯನ ನಡೆಸಿ ವರದಿ ತಯಾರಿಸಿರುವ ಅಧಿಕಾರಿಗಳು, 101 ವಾರ್ಡ್‌ಗಳಲ್ಲಿ ಬೆಳಗ್ಗೆ, ಮಧ್ಯಾಹ್ನ ಹಾಗೂ ರಾತ್ರಿ ಎಷ್ಟು ಜನರಿಗೆ ಆಹಾರ ವಿತರಿಸಬೇಕು ಎಂಬ ಪಟ್ಟಿ ಸಿದ್ಧಪಡಿಸಿ, ಅದರಂತೆ ಆಹಾರ ವಿತರಿಸಲು ಗುತ್ತಿಗೆದಾರರಿಗೆ ಸೂಚಿಸಿದ್ದಾರೆ.
ಆಹಾರದ ಗುಣಮಟ್ಟ ಹಾಗೂ ರುಚಿ ಬಗ್ಗೆ ಜನ ತೃಪ್ತರಾಗಿದ್ದಾರೆ. ಆದರೆ, ವಿತರಣೆ ಆರಂಭವಾದ ಅರ್ಧ ಗಂಟೆಯಲ್ಲೇ ಆಹಾರ ಖಾಲಿಯಾಗುವ ಬಗ್ಗೆ ದೂರುಗಳಿವೆ. ಕಾರಣ, ಕ್ಯಾಂಟೀನ್‌ಗಳಿಗೆ ಭೇಟಿ ನೀಡುವ ಜನಸಂಖ್ಯೆಗೆ ಅನುಗುಣವಾಗಿ ಊಟದ ಸಂಖ್ಯೆ ನಿಗದಿಪಡಿಸುವಂತೆ ಪಾಲಿಕೆ ಆಯುಕ್ತರು ತಿಳಿಸಿದ್ದಾರೆ.
ಯಾವ ವಾರ್ಡ್‌ನ ಕ್ಯಾಂಟೀನ್‌ನಲ್ಲಿ ಯಾವ ಹೊತ್ತಿಗೆ ಎಷ್ಟು ಆಹಾರ ವಿತರಿಸಬೇಕು ಎಂಬ ಹೊಸ ಪಟ್ಟಿ ಭಾನುವಾರದಿಂದಲೇ ಜಾರಿಗೆ ಬಂದಿದೆ. ಪಾಲಿಕೆಯಿಂದ 101 ಕ್ಯಾಂಟೀನ್‌ಗಳಿಗೆ ನೇಮಿಸಿರುವ ನೋಡಲ್ ಅಧಿಕಾರಿಗಳು ಒಂದೂವರೆ ತಿಂಗಳಿನಿಂದ ಆಯಾ ಕ್ಯಾಂಟೀನಗಳಲ್ಲಿ ವಿತರಣೆಯಾದ, ಉಳಿಕೆಯಾದ ಹಾಗೂ ಕೊರತೆಯಾದ ಊಟದ ಸಂಖ್ಯೆಗಳ ಮಾಹಿತಿ ಕಲೆಹಾಕಿದ್ದಾರೆ.
ಹಲವು ಕ್ಯಾಂಟೀನ್‌ಗಳಲ್ಲಿ ತಿಂಡಿ-ಊಟ ಬೇಗ ಖಾಲಿಯಾಗುತ್ತಿದ್ದು, ವಿತರಿಸುವ ಪ್ಲೇಟ್ ಆಹಾರದ ಸಂಖ್ಯೆ ಹೆಚ್ಚಿಸಬೇಕು ಎಂಬ ಮನವಿಗಳು ಬಂದಿವೆ. ಇದಕ್ಕೆ ಪೂರಕವಾಗಿ ನೋಡಲ್ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದು, ಅದಕ್ಕನುಗುಣವಾಗಿ ಆಹಾರ ಪೂರೈಸಲು ಗುತ್ತಿಗೆ ಸಂಸ್ಥೆಗಳಿಗೆ ಆದೇಶಿಸಲಾಗಿದೆ.
-ಎನ್.ಮಂಜುನಾಥ ಪ್ರಸಾದ್, ಬಿಬಿಎಂಪಿ ಆಯುಕ್ತ
ಈ ಕ್ಯಾಂಟೀನ್‌ಗಳಿಗಿನ್ನು ಆಹಾರ ಪೂರೈಕೆ ಕಡಿಮೆ
ವಾರ್ಡ್ ತಿಂಡಿ ಮಧ್ಯಾಹ್ನ ಊಟ
-ಕೆ.ಜಿ.ಹಳ್ಳಿ 250 250
-ಈಜೀಪುರ 300 300
-ಕರಿಸಂದ್ರ 300 300
-ಮಾರುತಿಸೇವಾನಗರ 300 400
-ಹೊಯ್ಸಳನಗರ 300 300
ಇಲ್ಲಿ ರಾತ್ರಿ ಊಟದ ಸಂಖ್ಯೆ ಇಳಿಕೆ
-ಆರ್.ಆರ್.ನಗರ 100
-ಉಳ್ಳಾಲ 150
-ಚಂದ್ರ ಲೇಔಟ್ 200
-ಕೊಟ್ಟಿಗೆಪಾಳ್ಯ 200
-ಬಸವನಗುಡಿ 200
ಆಹಾರ ಪೂರೈಕೆ ಏರಿಕೆಯಾದ ಕ್ಯಾಂಟೀನ್‌ಗಳು
ವಾರ್ಡ್ ತಿಂಡಿ ಮಧ್ಯಾಹ್ನ ಊಟ ರಾತ್ರಿ ಊಟ
-ಮಹಾಲಕ್ಷ್ಮೀಪುರ 600 600 400
-ಜಯನಗರ 600 600 300
-ಸುಭಾಷ್‌ನಗರ 600 600 400
-ಕೊಡಿಗೆಹಳ್ಳಿ 500 500 400
-ಕೆಂಪೇಗೌಡನಗರ 500 500 400
-(ಸಂಖ್ಯೆ ಪ್ಲೇಟ್‌ಗಳಲ್ಲಿ)
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಇ-ಖಾತಾ ಗೊಂದಲದಿಂದ ಲಂಚಕ್ಕೆ ದಾರಿ: ಆರ್. ಅಶೋಕ್
Bengaluru: ಮಾವನ ಮಗನ ಕಿರುಕುಳಕ್ಕೆ ಬೇಸತ್ತು ವಿದ್ಯಾರ್ಥಿನಿ ಆತ್ಮಹತ್ಯೆ
Road mishap: ಗೂಡ್ಸ್ ವಾಹನಕ್ಕೆ ದ್ವಿಚಕ್ರ ವಾಹನ ಡಿಕ್ಕಿ; ಸಿಎಆರ್ ಕಾನ್‌ಸ್ಟೇಬಲ್ ಸಾವು
Bengaluru: ಸ್ನೇಹಿತನ ಅಪ್ರಾಪ್ತ ಪುತ್ರಿ ಮೇಲೆ ರೇಪ್ ಮಾಡಿ ಗರ್ಭಿಣಿ ಮಾಡಿದ್ದ ಅಪರಾಧಿ
Bengaluru: ಅಕ್ಕನ ಬುದ್ಧಿಮಾಂದ್ಯ ಮಗಳ ಮೇಲೆಯೇ ಸತತ ಲೈಂಗಿಕ ದೌರ್ಜನ್ಯ ಎಸಗಿದ ಕಾಮುಕ
MUST WATCH
ಹೊಸ ಸೇರ್ಪಡೆ
Ranji Trophy: ಇನ್ನಿಂಗ್ಸ್ ನ ಎಲ್ಲಾ 10 ವಿಕೆಟ್ ಕಿತ್ತು ಅನ್ಶುಲ್ ಕಾಂಬೋಜ್ ದಾಖಲೆ
Udupi: ಮೀನುಗಾರರಿಗೆ ಎನ್‌ಎಫ್ಡಿಪಿ ಪೋರ್ಟಲ್‌ನಲ್ಲಿ ಶುಲ್ಕರಹಿತ ನೋಂದಣಿ
ಏಕನಿವೇಶನ ನಕ್ಷೆ ಅನುಮೋದನೆ ಅಧಿಕಾರ ಗ್ರಾಮ ಪಂಚಾಯತ್‌ಗೆ ನೀಡಲು ಸಿಎಂಗೆ ಸಂಸದ ಕೋಟ ಪತ್ರ
ಅಕ್ಕಿ ಗಿರಣಿ ಮುಂದೆ ಭತ್ತ ತುಂಬಿದ ವಾಹನಗಳ ಸಾಲು… ಮುಂಗಾರು ಮುಗಿದರೂ ನಿಲ್ಲದ ಕೃಷಿಕರ ಗೋಳು
Bengaluru: ಇ-ಖಾತಾ ಗೊಂದಲದಿಂದ ಲಂಚಕ್ಕೆ ದಾರಿ: ಆರ್. ಅಶೋಕ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.