ಮುಗಿದ ದಸರಾ: ಸಹಜ ಸ್ಥಿತಿಗೆ ಮರಳಿದ ಮೈಸೂರು
Team Udayavani, Oct 2, 2017, 1:25 PM IST
ಮೈಸೂರು: ಕಣ್ಣು ಹಾಯಿಸಿದಷ್ಟು ದೂರ ಜನರಿಂದ ತುಂಬಿದ್ದ ಮೈಸೂರು ನಗರ ಈಗ ಮೌನವಾಗಿದೆ. ನಾಡಹಬ್ಬ ದಸರಾ ಮಹೋತ್ಸವದ ಹಿನ್ನೆಲೆಯಲ್ಲಿ ಕಳೆದ ಹತ್ತು ದಿನಗಳ ಪ್ರವಾಸಿಗರಿಂದ ತುಂಬಿ ಗೌಜು-ಗದ್ದಲಗಳಿಂದ ಕೂಡಿದ್ದ ಮೈಸೂರು ನಗರ ಇದೀಗ ಸಹಜ ಸ್ಥಿತಿಗೆ ಮರಳಿದೆ.
ನಾಡಹಬ್ಬ ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆ ಜಂಬೂಸವಾರಿಯ 2 ತಂಡಗಳಲ್ಲಿ ನಾಗರಹೊಳೆ ಹಾಗೂ ಬಂಡೀಪುರ ರಾಷ್ಟ್ರೀಯ ಉದ್ಯಾನಗಳ ವಿವಿಧ ಆನೆ ಶಿಬಿರಗಳಿಂದ ಕರೆತರಲಾಗಿದ್ದ 15 ಆನೆಗಳು ಭಾನುವಾರ ಸಂಪೂರ್ಣ ವಿಶ್ರಾಂತಿಯಲ್ಲಿದ್ದವು.
407ನೇ ಜಂಬೂಸವಾರಿಯನ್ನು ಯಶಸ್ವಿಗೊಳಿಸಿದ ಸಂತೃಪ್ತಿ ದಸರಾ ಗಜಪಡೆ ಮಾವುತರು ಮತ್ತು ಕಾವಾಡಿಗಳಲ್ಲಿ ಮನೆ ಮಾಡಿತ್ತು. ಬೆಳಗ್ಗೆಯೇ ಆನೆಗಳನ್ನು ತೊಳೆದು ಪೌಷ್ಟಿಕ ಆಹಾರ ನೀಡಿ ವಿಶ್ರಾಂತಿ ನೀಡಿದರು. ನಂತರ ಒಂದು ಸುತ್ತು ನಗರದ ಮಾರುಕಟ್ಟೆ ಸುತ್ತಿದ ಮಾವುತರು-ಕಾವಾಡಿಗರ ಕುಟುಂಬದವರು ಅಗತ್ಯ ವಸ್ತುಗಳನ್ನು ಖರೀದಿಸಿದರು. ಜತೆಗೆ ಎಲ್ಲರೂ ಸ್ನಾನ ಮಾಡಿಕೊಂಡು, ಬಟ್ಟೆ ಒಗೆದುಕೊಂಡು ಮತ್ತೆ ತಮ್ಮ ಸ್ವಸ್ಥಾನಗಳಿಗೆ ಹೊರಡಲು ಸಿದ್ಧತೆ ನಡೆಸಿದರು.
ಸ್ವತ್ಛತಾ ಕಾರ್ಯ: ಜಂಬೂಸವಾರಿ ವೀಕ್ಷಣೆಗೆ ಬಂದಿದ್ದ ಲಕ್ಷಾಂತರ ಜನರು ಎಸೆದಿದ್ದ ನೀರಿನ ಬಾಟಲಿಗಳು, ಪ್ಲಾಸ್ಟಿಕ್ ಮತ್ತಿತರೆ ತ್ಯಾಜ್ಯಗಳಿಂದ ತುಂಬಿದ್ದ ಅರಮನೆ ಆವರಣ ಹಾಗೂ ನಗರದ ಪ್ರಮುಖ ರಸ್ತೆಗಳನ್ನು ಪಾಲಿಕೆ ಪೌರಕಾರ್ಮಿಕರು ಸ್ವತ್ಛಗೊಳಿಸಿದರೆ, ಅವರೊಂದಿಗೆ ಶ್ವಾಸಗುರು ವಚನಾನಂದ ಗುರೂಜಿ, ಸಮರ್ಪಣ ಫೌಂಡೇಶನ್ ಕಾರ್ಯಕರ್ತರು, ಎನ್‌ಎಸ್‌ಎಸ್, ಬದ್ರಿಪ್ರಸಾದ್ ಪಿಯು ಕಾಲೇಜು ವಿದ್ಯಾರ್ಥಿಗಳು ಕೈ ಜೋಡಿಸಿದರು.
ಅರಮನೆಯೊಳಗೆ 30 ಸಾವಿರ ಜನ: ಶನಿವಾರ ನಡೆದ ಜಂಬೂಸವಾರಿ ಮೆರವಣಿಗೆಯನ್ನು ಗೋಲ್ಡ್‌ಕಾರ್ಡ್ ಖರೀದಿಸಿದ್ದ 190 ಮಂದಿ, ಆನ್‌ಲೈನ್‌ನಲ್ಲಿ ಟಿಕೆಟ್ ಬುಕಿಂಗ್ ಮಾಡಿದ್ದ 68 ಮಂದಿ ಸೇರಿದಂತೆ ಅರಮನೆ ಆವರಣದಲ್ಲಿ 30 ಸಾವಿರ ಮಂದಿ ಜಂಬೂಸವಾರಿ ವೀಕ್ಷಿಸಿದ್ದಾರೆ. ಸೆ.21ರಿಂದ 29ರವರೆಗೆ ನಡೆದ ರೈತ ದಸರಾ ಕಾರ್ಯಕ್ರಮದಲ್ಲಿ 10662 ಮಂದಿ, ಗಾಲಿಗಳ ಮೇಲೆ ಅರಮನೆ ಪ್ರವಾಸಕ್ಕೆ ಸೆ.21 ರಿಂದ 29ರವರೆಗೆ 149 ಮಂದಿ ಭಾಗವಹಿಸಿದ್ದಾರೆ. ಒಟ್ಟಾರೆ ದಸರಾ ಕಾರ್ಯಕ್ರಮಗಳಲ್ಲಿ ಟಿಕೆಟ್ ಬುಕ್ ಮಾಡಿದ 105238 ಜನ ಭಾಗವಹಿಸಿದ್ದಾರೆ ಎಂದು ಜಿಲ್ಲಾಡಳಿತ ತಿಳಿಸಿದೆ.
ಮಡಿಕೇರಿಯತ್ತ ಪ್ರಯಾಣ: ಮೈಸೂರು ದಸರಾ ಮುಗಿದ ಬೆನ್ನಲ್ಲೇ ಸಾಕಷ್ಟು ಯುವಜನರು ಮಂಜಿನ ನಗರಿ ಮಡಿಕೇರಿಯಲ್ಲಿ ರಾತ್ರಿ ನಡೆಯುವ ದಶಮಂಟಪಗಳ ವೀಕ್ಷಣೆಗೆ ತೆರಳುತ್ತಿದ್ದರಿಂದ ಶನಿವಾರ ತಡರಾತ್ರಿವರೆಗೂ ಮೈಸೂರಿನಿಂದ ಹೊರಡುವ ಬಸ್‌ಗಳು ತುಂಬಿ ತುಳುಕುತ್ತಿದ್ದವು. ಇನ್ನು ದೂರದ ಊರುಗಳಿಂದ ಬಂದು ಲಾಡ್ಜ್ಗಳಲ್ಲಿ ತಂಗಿದ್ದ ಸಾಕಷ್ಟು ಪ್ರವಾಸಿಗರು ಶನಿವಾರ ಸಂಜೆಯೇ ತಮ್ಮ ಊರುಗಳತ್ತ ತೆರಳಿದರು. ಉಳಿದವರು ಭಾನುವಾರ ತಮ್ಮ ಊರುಗಳತ್ತ ತೆರಳಿದರು. ಹೀಗಾಗಿ ಕಳೆದ 15 ದಿನಗಳಿಂದ ತುಂಬಿ ತುಳುಕುತ್ತಿದ್ದ ಮೈಸೂರಿನ ಲಾಡ್ಜ್ಗಳು ಈಗ ಖಾಲಿ ಹೊಡೆಯುತ್ತಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Ranchi: ಪ್ರೇಯಸಿಯನ್ನು ಕೊಂದು 40ರಿಂದ 50 ತುಂಡು ಮಾಡಿದ ಕಟುಕ!
Hunsur: ಟ್ರ್ಯಾಕ್ಟರ್ ಡಿಕ್ಕಿ ಹೊಡೆದು ರಸ್ತೆ ಬದಿ ನಿಂತಿದ್ದ ವ್ಯಕ್ತಿ ಸಾವು
ICC ಚಾಂಪಿಯನ್ಸ್ ಟ್ರೋಫಿ ಪಾಕಿಸ್ತಾನದಿಂದ ಸಂಪೂರ್ಣ ಸ್ಥಳಾಂತರ?: ಐಸಿಸಿ ಸಭೆಯಲ್ಲಿ ನಿರ್ಧಾರ
Maharashtra: ಬಿಜೆಪಿಗೆ ಮಹಾ ಸಿಎಂ ಅವಕಾಶ: ಇಬ್ಬರು ಮಿತ್ರರಿಗೂ ಡಿಸಿಎಂ ಪಟ್ಟ
ಪ್ರವಾಸಕ್ಕೆ ತೆರಳುತ್ತಿದ್ದ ಶಾಲಾ ವಿದ್ಯಾರ್ಥಿಗಳ ಬಸ್ ಪಲ್ಟಿ,ನಾಲ್ವರು ವಿದ್ಯಾರ್ಥಿಗಳಿಗೆ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.