ರಾವಣ ದಹನಕ್ಕೆ ರಾಮ ನಕಾರ


Team Udayavani, Oct 3, 2017, 6:40 AM IST

ramlila-program.jpg

ಜೈಪುರ: ದೇವರ ಮೇಲಿನ ಹೂವು ತಪ್ಪಬಹುದು. ಆದರೆ ಉತ್ತರ ಭಾರತದಲ್ಲಿ ದಸರಾ ವೇಳೆ ರಾಮಲೀಲಾ ಪ್ರದರ್ಶನ ಮಾತ್ರ ತಪ್ಪುವುದಿಲ್ಲ. ಶ್ರೀರಾಮಚಂದ್ರ, ರಾವಣನನ್ನು ಸಂಹರಿಸಿದ ಕತೆ ಕಟ್ಟಿಕೊಡುವುದೇ ರಾಮಲೀಲಾ. ಆದರೆ ಈ ರಾಮಲೀಲಾ ವೇದಿಕೆ ರಾಜಕೀಯ ಜಿದ್ದಿನ ಕಣವಾಗಿ ಮಾರ್ಪಟ್ಟರೆ ಹೇಗಿರುತ್ತೆ?

ಹೌದು. ರಾಜಸ್ಥಾನದ ಸಿರೋಹಿ ಪಟ್ಟಣ ಪಂಚಾಯಿತಿ ರಾಮಲೀಲಾ ಆಯೋಜಿಸಿತ್ತು. ಅಲ್ಲಿ ಕೆಲ ರಾಜಕೀಯ ಮುಖಂಡರೂ ಪಾತ್ರಧಾರಿಗಳಾಗಿದ್ದರು. ಆದರೆ ಸಲೀಸಾಗಿ ನಡೆಯುತ್ತಿದ್ದ ನಾಟಕಕ್ಕೆ ಕೊನೇ ಹಂತದಲ್ಲಿ ಇದ್ದಕ್ಕಿದ್ದಂತೆ ರಾಜಕೀಯ ಟ್ವಿಸ್ಟ್‌ ಸಿಕ್ಕು ಬಿಡೋದೇ! ಶ್ರೀರಾಮಚಂದ್ರ ವೇಷಧಾರಿ ಮಹಾನುಭಾವ, “ನಾನು ರಾವಣನನ್ನು ಕೊಲ್ಲೋದಿಲ್ಲ,’ ಎಂದದ್ದೇ ಆ ಟ್ವಿಸ್ಟ್‌! ರಾಜಸ್ಥಾನದಲ್ಲಿ ಶತಮಾನಗಳಿಂದ ನಡೆದುಕೊಂಡು ಬಂದಿರುವ ಐತಿಹಾಸಿಕ ರಾಮಲೀಲಾ ಪ್ರದರ್ಶನಗಳಲ್ಲಿ ಇಂಥ ಟ್ವಿಸ್ಟ್‌ ಎಂದೂ ಸಿಕ್ಕಿರಲಿಕ್ಕಿಲ್ಲ.

ಆಗಿದ್ದೇನೆಂದರೆ, ಮನೋಜ್‌ ಕುಮಾರ್‌ ಮಾಲಿ ಎಂಬಾತ ರಾಮನ ಪಾತ್ರದಲ್ಲಿದ್ದ. ನಾಟಕದ ಕೊನೆಗೆ ಆತ ದುಷ್ಟ ರಾವಣನ ಗೊಂಬೆಗೆ ಬಾಣ ಹೊಡೆದು ಸುಡಬೇಕಿತ್ತು. ಆದರೆ ಬಾಣ ಬಿಡಲು ನಿರಾಕರಿಸಿದ ಆತ, ವೇದಿಕೆ ಮೇಲಿದ್ದ ಸಿರೋಹಿ ಪಟ್ಟಣದ ಬಿಜೆಪಿ ಮಂಡಲ ಅಧ್ಯಕ್ಷ ಸುರೇಶ್‌ ಸಾಗರ್‌ವನ್ಶಿಯತ್ತ ನೋಡುತ್ತಾ, “ಅಸಲಿ ರಾವಣ ಇಲ್ಲೇ ವೇದಿಕೆ ಮೇಲೆ ಕುಳಿತಿದ್ದಾನೆ. ರಾಮಲೀಲಾ ಆಯೋಜನೆಯಲ್ಲೂ ಈತ ರಾಜಕೀಯ ಮಾಡುತ್ತಾನೆ. 20 ಗರ್ಬಾ ಸಮಿತಿಗಳ ಪೈಕಿ 19ಕ್ಕೆ ತಲಾ 11 ಸಾವಿರ ಅನುದಾನ ಸಿಕ್ಕೆರೆ, ಸುರೇಶನ ತಂಡಕ್ಕೆ 31 ಸಾವಿರ ಸಿಗುತ್ತಿದೆ. ಇಂಥ ಅನ್ಯಾಯ ಸಹಿಸಲು ಸಾಧ್ಯವಿಲ್ಲ,’ ಎಂದು ತನ್ನ ಕಪಿ ಸೇನೆ ಜತೆ ವೇದಿಕೆ ಇಳಿದು ಹೋಗೇಬಿಟ್ಟ. ಆಯೋಜಕರು ಕಡೆಗೆ ಅಲ್ಲೇ ಇದ್ದ ಬಾಲಕನಿಗೆ ರಾಮನ ವೇಷ ಹಾಕಿ, ರಾವಣನನ್ನು ಸುಡಿಸಿ ಶಾಸ್ತ್ರ ಮುಗಿಸಿದರು.

ಟಾಪ್ ನ್ಯೂಸ್

UV-Navaroopa

Manipal: ಗ್ರಾಮೀಣ ಓದುಗರ ಸ್ಪಂದನೆಯೇ ಯಶಸ್ಸು: ಎಂಡಿ, ಸಿಇಒ ವಿನೋದ್‌ ಕುಮಾರ್‌

uppunda1

Uppunda: ಶ್ರೀದುರ್ಗಾಪರಮೇಶ್ವರಿ ಅಮ್ಮನವರ ಸಂಭ್ರಮದ ಮನ್ಮಹಾರಥೋತ್ಸವ

Govinda-pai-Book

Udupi: ಗೋವಿಂದ ಪೈಗಳ ಸಂಶೋಧನ ಬರಹಗಳು ಸಮಗ್ರತೆಯ ಹೂರಣ: ಡಾ.ವಿವೇಕ್‌ ರೈ

DK SHI NEW

MLAs 50 ಕೋಟಿ ರೂ.; ಸಾಕ್ಷಿ ಕೊಡುವ ಹೊಣೆ ಯತ್ನಾಳ್‌ದು: ಡಿಕೆಶಿ

Patla-yakshadruva

Mangaluru: ಎಲ್ಲ ವರ್ಗದ ಜನರ ಸಹಕಾರದಿಂದ ಸಾಮಾಜಿಕ ಸಾಧನೆ: ಕನ್ಯಾನ ಸದಾಶಿವ ಶೆಟ್ಟಿ

Vijayendra (2)

Congress 40 ಪರ್ಸೆಂಟ್‌ ಕಮಿಷನ್‌ ಆರೋಪ ಸುಳ್ಳೆಂದು ಸಾಬೀತು: ಬಿಜೆಪಿ

police

Belgavi; ವೇಶ್ಯಾವಾಟಿಕೆ ಆರೋಪ: ತಾಯಿ, ಮಗಳನ್ನು ರಸ್ತೆಗೆ ಎಳೆದು ಹಲ್ಲೆ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

DK SHI NEW

MLAs 50 ಕೋಟಿ ರೂ.; ಸಾಕ್ಷಿ ಕೊಡುವ ಹೊಣೆ ಯತ್ನಾಳ್‌ದು: ಡಿಕೆಶಿ

vidhana-soudha

CM office ನವೀಕರಣ: ಮತ್ತೊಂದು ವಿವಾದ

Vijayendra (2)

Congress 40 ಪರ್ಸೆಂಟ್‌ ಕಮಿಷನ್‌ ಆರೋಪ ಸುಳ್ಳೆಂದು ಸಾಬೀತು: ಬಿಜೆಪಿ

police

Belgavi; ವೇಶ್ಯಾವಾಟಿಕೆ ಆರೋಪ: ತಾಯಿ, ಮಗಳನ್ನು ರಸ್ತೆಗೆ ಎಳೆದು ಹಲ್ಲೆ!

snehamayi krishna

Snehamayi Krishna ವಿರುದ್ಧ ಕಾಂಗ್ರೆಸ್‌ನಿಂದ ಪೊಲೀಸರಿಗೆ ಮತ್ತೊಂದು ದೂರು

MUST WATCH

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

ಹೊಸ ಸೇರ್ಪಡೆ

UV-Navaroopa

Manipal: ಗ್ರಾಮೀಣ ಓದುಗರ ಸ್ಪಂದನೆಯೇ ಯಶಸ್ಸು: ಎಂಡಿ, ಸಿಇಒ ವಿನೋದ್‌ ಕುಮಾರ್‌

puttige-4

Udupi; ಗೀತಾರ್ಥ ಚಿಂತನೆ 96 : ವ್ಯಾಮೋಹ ಜಾಲ vs ಜಾಗೃತಾತ್ಮ

uppunda1

Uppunda: ಶ್ರೀದುರ್ಗಾಪರಮೇಶ್ವರಿ ಅಮ್ಮನವರ ಸಂಭ್ರಮದ ಮನ್ಮಹಾರಥೋತ್ಸವ

Govinda-pai-Book

Udupi: ಗೋವಿಂದ ಪೈಗಳ ಸಂಶೋಧನ ಬರಹಗಳು ಸಮಗ್ರತೆಯ ಹೂರಣ: ಡಾ.ವಿವೇಕ್‌ ರೈ

DK SHI NEW

MLAs 50 ಕೋಟಿ ರೂ.; ಸಾಕ್ಷಿ ಕೊಡುವ ಹೊಣೆ ಯತ್ನಾಳ್‌ದು: ಡಿಕೆಶಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.