ಕ್ಯಾಂಟೀನ್‌ ಊಟ ರುಚಿಗಲ್ಲ; ಹಸಿದವರಿಗೆ!


Team Udayavani, Oct 3, 2017, 11:59 AM IST

Indira-Canteen.jpg

ಬೆಂಗಳೂರು: ಇಂದಿರಾ ಕ್ಯಾಂಟೀನ್‌. ಹಸಿದ ಬಡವರಿಗೆ ಮೂರು ಹೊತ್ತಿನ ತುತ್ತು ನೀಡಲೆಂದೇ ಆರಂಭವಾಗಿರುವ ರಾಜ್ಯಸರ್ಕಾರದ ಕನಸಿನ ಯೋಜನೆ. ಸರ್ಕಾರದ ನಿರೀಕ್ಷೆಯಂತೆ ನಗರದಲ್ಲಿ ಎಲ್ಲ ಕ್ಯಾಂಟೀನ್‌ಗಳು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿವೆ. ಆದರೆ ಬಡವರ ಹಸಿವು ನೀಗಿಸುವ ಸರ್ಕಾರದ ಉದ್ದೇಶ ಮಾತ್ರ ಈಡೇರುತ್ತಿಲ್ಲ.

ಬಡವರ ಕೈಗೆ ಬಂದ ತುತ್ತು ಬಾಯಿಗೆ ಹೋಗದಂತೆ ಕಿತ್ತುಕೊಳ್ಳುತ್ತಿರುವುದು ಮಧ್ಯಮ ವರ್ಗದವರು, ಉಳ್ಳವರು ಮತ್ತು ಶ್ರೀಮಂತರು… ಬಡವರ ತುತ್ತು ಕಿತ್ತುಕೊಳ್ಳುವ ಉಳ್ಳವರ ಉಪಟಳಕ್ಕೆ ಕಡಿವಾಣ ಹಾಕಲು ಜಂಟಿ ಕಸರತ್ತು ನಡೆಸಿರುವ ರಾಜ್ಯ ಸರ್ಕಾರ ಮತ್ತು ಬಿಬಿಎಂಪಿ, ಬಡವರಿಗೆ ಆದ್ಯತೆ ನೀಡಿ ಎಂದು ಸೂಚಿಸುವ, ಆಕರ್ಷಕ ಅಡಿಬರಹ (ಟ್ಯಾಗ್‌ಲೈನ್‌) ಬಳಸಲು ಚಿಂತನೆ ನಡೆಸಿದೆ.

ಹೇಳಂಗಿಲ್ಲ, ಬಿಡಂಗಿಲ್ಲ
ಕಡುಬಡವರಿಗಾಗಿ ಇಂದಿರಾ ಕ್ಯಾಂಟೀನ್‌ನಲ್ಲಿ ಕೇವಲ 5 ರೂ.ಗೆ ತಿಂಡಿ, 10 ರೂ.ಗೆ ಊಟ ನೀಡಲಾಗುತ್ತಿದೆ. ಆದರೆ, ಅಲ್ಲಿಗೆ ಮಧ್ಯಮ ವರ್ಗ ಹಾಗೂ ಉಳ್ಳವರು ಕೂಡ ಬಂದು ಆಹಾರ ಸೇವಿಸುತ್ತಾರೆ. ಇದರಿಂದ ಅರ್ಹ ಫ‌ಲಾನುಭವಿಗಳು ಹಸಿದ ಹೊಟ್ಟೆಯಲ್ಲೇ ಮಲಗುವ ಸ್ಥಿತಿ ಇದೆ. “ನೀವು ಹಣವಂತರು. ನೀವು ಕ್ಯಾಂಟೀನ್‌ಗೆ ಬಂದು ತಿನ್ನಬೇಡಿ’ ಎಂದು ಜನರಿಗೆ ನೇರವಾಗಿ ಹೇಳುವಂತಿಲ್ಲ.

ಹಾಗಂತ ವರು ತಿನ್ನುವುದನ್ನು ನೋಡಿಕೊಂಡು ಸುಮ್ಮನೆ ಕೂರುವಂತೆಯೂ ಇಲ್ಲ. ಇಂಥ ಇಕ್ಕಟ್ಟಿಗೆ ಸಿಲುಕಿರುವ ಪಾಲಿಕೆ, ಅಡಿಬರಹದ ಮೂಲಕ ಸೂಚ್ಯವಾಗಿ ತನ್ನ ಆಶಯ ತಿಳಿಸಲು ಉದ್ದೇಶಿಸಿದೆ. ಈ ನಿಟ್ಟಿನಲ್ಲಿ “ಇಂದಿರಾ ಕ್ಯಾಂಟೀನ್‌ ಊಟ ನಾಲಿಗೆ ರುಚಿಗಲ್ಲ; ಹಸಿವಿನಿಂದ ಬಳಲುತ್ತಿರುವವರಿಗೆ…’ ಅಥವಾ “ಇಂದಿರಾ ಕ್ಯಾಂಟೀನ್‌- ಇದರ ಅವಶ್ಯಕತೆ ಇದ್ದರೆ, ನಿಮಗೆ ಸ್ವಾಗತ’ ಎನ್ನುವುದು ಸೇರಿದಂತೆ ಎರಡು-ಮೂರು ಅಡಿಬರಹಗಳು ಪಾಲಿಕೆ ಮುಂದಿವೆ.

ಆದರೆ, ಈ ಆಲೋಚನೆ ಇನ್ನೂ ಪ್ರಾಥಮಿಕ ಹಂತದಲ್ಲಿದೆ. ಸೂಕ್ತ ಅಡಿಬರಹವನ್ನು ಆಯ್ಕೆ ಮಾಡಿ, ಸಂಬಂಧಪಟ್ಟವರೊಂದಿಗೆ ಚರ್ಚಿಸಿ, ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಬಿಬಿಎಂಪಿ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 

ಅರ್ಧದಷ್ಟು ಉಳ್ಳವರೇ!
“ವಾರ್ಡ್‌ ಒಂದರ ವ್ಯಾಪ್ತಿಯ ಕಡುಬಡವರ ಸಂಖ್ಯೆ ಅಂದಾಜಿಸಿ ಅಲ್ಲಿ ಕ್ಯಾಂಟೀನ್‌ ಆರಂಭಿಸಲಾಗಿದೆ. ಅದರಂತೆ ಕನಿಷ್ಠ 300ರಿಂದ ಗರಿಷ್ಠ 500 ಜನರಿಗೆ ಕ್ಯಾಂಟೀನ್‌ನಲ್ಲಿ ಆಹಾರ ಪೂರೈಸಲಾಗುತ್ತಿದೆ. ಆದರೆ, ನಗರದಲ್ಲಿನ ಬಹುತೇಕ ಇಂದಿರಾ ಕ್ಯಾಂಟೀನ್‌ಗಳಿಗೆ ಬರುತ್ತಿರುವವರಲ್ಲಿ ಅರ್ಧದಷ್ಟು ಮಂದಿ ಹಣವಂತರು ಅಥವಾ ಮಧ್ಯಮ ವರ್ಗದವರಿದ್ದಾರೆ.

ಹೀಗೆ ಬರುವವರಲ್ಲಿ ಬಡವರ್ಯಾರು, ಹಣವಂತರ್ಯಾರು ಎಂದು ಪತ್ತೆಹಚ್ಚುವುದು ಕಷ್ಟ. ಹೀಗಾಗಿ ಅಡಿಬರಹದ ಪ್ರಯೋಗ ನಡೆಸಲಾಗುತ್ತಿದೆ,’ ಎಂದು ಪಾಲಿಕೆ ಆಯುಕ್ತ ಎನ್‌. ಮಂಜುನಾಥ ಪ್ರಸಾದ್‌ “ಉದಯವಾಣಿ’ಗೆ ತಿಳಿಸಿದ್ದಾರೆ.

ನಗರದಲ್ಲಿ ಪ್ರಸ್ತುತ 113 ಕ್ಯಾಂಟೀನ್‌ಗಳಿವೆ. ಇದರಲ್ಲಿ ನಿತ್ಯ ಕನಿಷ್ಠ 350ರಿಂದ ಗರಿಷ್ಠ 500 ಮಂದಿಗೆ ಊಟ ಪೂರೈಸುತ್ತಿದ್ದು, ಶೇ.20 ಕ್ಯಾಂಟೀನ್‌ಗಳಲ್ಲಿ ಊಟದ ಪ್ರಮಾಣ ಗರಿಷ್ಠ ಮಿತಿ ಮೀರಿದೆ. ಪೊಲೀಸ್‌ ಕಾನ್‌ಸ್ಟೆàಬಲ್‌, ಸೇಲ್ಸ್‌ಮನ್‌ ಸೇರಿ ಅನೇಕರಿಗೆ ಕ್ಯಾಂಟೀನ್‌ ಆಧಾರವಾಗಿದೆ.

ಇವರೆಲ್ಲಾ ಉಳ್ಳವರು ಎಂದಲ್ಲ; 12-15 ಸಾವಿರ ಸಂಬಳ ಪಡೆಯುವ ಈ ವರ್ಗದವರು, ದುಬಾರಿ ಬೆಲೆಯ ಹೋಟೆಲ್‌ ತಿನಿಸು ತಿಂದು ತಿಂಗಳ ಹಸಿವು ನೀಗಿಸಿಕೊಳ್ಳುವುದು ಅಸಾಧ್ಯ. ಹಾಗಾಗಿ, ಇವರಿಗೆ ಬರಬೇಡಿ ಎಂದು ಹೇಳಲಾಗದು. ಆದರೆ, ಬಡವರಿಗೆ ಆದ್ಯತೆ ಕೊಡಿ ಎಂದು ಹೇಳಬಹುದು. ಈ ನಿಟ್ಟಿನಲ್ಲಿ ಟ್ಯಾಗ್‌ಲೈನ್‌ ನೆರವಾಗಲಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.

ಮಾರ್ಷಲ್‌ ಕಣ್ಗಾವಲು!
ಇಂದಿರಾ ಕ್ಯಾಂಟೀನ್‌ನಲ್ಲಿ ಗುಣಮಟ್ಟ ಕಾಯ್ದುಕೊಳ್ಳಲು ಭಾನುವಾರದಿಂದ ಪ್ರತಿ ವಿಧಾನಸಭೆ ಕ್ಷೇತ್ರಕ್ಕೆ ಒಬ್ಬರಂತೆ ಮಾರ್ಷಲ್‌ಗ‌ಳನ್ನು ನಿಯೋಜಿಸಲಾಗಿದೆ. ಮೊದಲ ಹಂತದಲ್ಲಿ 12 ಕ್ಷೇತ್ರಗಳಿಗೆ ನೇಮಕಗೊಂಡಿರುವ ಮಾರ್ಷಲ್‌ಗ‌ಳು, ಕ್ಯಾಂಟೀನ್‌ ಸ್ವತ್ಛತೆ, ಸಮವಸ್ತ್ರ, ಆಹಾರ ವಿತರಣೆ ಪ್ರಮಾಣ ಸೇರಿ ಹಲವು ಅಂಶಗಳ ಮೇಲೆ ನಿಗಾ ಇಡಲಿದ್ದಾರೆ. ಹೆಚ್ಚುವರಿ ಆಯುಕ್ತರ ನೇತೃತ್ವದಲ್ಲಿ ಇಂದಿರಾ ಕ್ಯಾಂಟೀನ್‌ ಸೆಲ್‌ ರಚಿಸಿದ್ದು, ಮಾರ್ಷಲ್‌ಗ‌ಳೂ ಸೆಲ್‌ನಲ್ಲಿರುತ್ತಾರೆ.

ಇವರೆಲ್ಲರೂ ನಿವೃತ್ತ ಯೋಧರಾಗಿದ್ದು, ಜೆಸಿಒ (ಜೂನಿಯರ್‌ ಕಮೀಷನ್‌ ಆಫೀಸರ್‌) ಮಟ್ಟದ ಅಧಿಕಾರಿಗಳಾಗಿದ್ದಾರೆ. ಡೈರೆಕ್ಟರೇಟ್‌ ಆಫ್ ಕರ್ನಾಟಕ ಸೈನಿಕ್‌ ವೆಲ್‌ಫೇರ್‌ ಆಂಡ್‌ ಸೆಟಲ್‌ಮೆಂಟ್‌ ಮೂಲಕ ಇವರನ್ನು ನೇಮಿಸಿದ್ದು, ಸಮವಸ್ತ್ರ, ವಾಹನ ಮತ್ತಿತರ ಭತ್ಯೆ ಸೇರಿ ಮಾಸಿಕ 49 ಸಾವಿರ ರೂ. ವೇತನ ನಿಗದಿಪಡಿಸಲಾಗಿದೆ.

* ವಿಜಯಕುಮಾರ್‌ ಚಂದರಗಿ

ಟಾಪ್ ನ್ಯೂಸ್

1-jjjjj

ODI; ಟೀಮ್ ಇಂಡಿಯಾದ ಹೊಸ ಜೆರ್ಸಿ ಬಿಡುಗಡೆ ಮಾಡಿದ ಜಯ್ ಶಾ,ಹರ್ಮನ್ ಪ್ರೀತ್

1-allu

”Pushpa 2′′ ಭಾಷೆಯ ತಡೆಯನ್ನು ಮುರಿಯುತ್ತಿದೆ, ತೆಲುಗು ಜನರಿಗೆ ಹೆಮ್ಮೆ: ಅಲ್ಲು ಅರ್ಜುನ್

arrested

Indiranagar; ಅಸ್ಸಾಂ ಯುವತಿ ಹ*ತ್ಯೆ ಕೇಸ್: ಆರೋಪಿ ಬಂಧಿಸಿದ ಪೊಲೀಸರು

Kalaburagi: ಅನುಭವ ಮಂಟಪ ಸ್ಥಳ ಮರಳಿ ಪಡೆಯಲು ದೆಹಲಿ ಚಲೋ

Kalaburagi: ಅನುಭವ ಮಂಟಪ ಸ್ಥಳ ಮರಳಿ ಪಡೆಯಲು ದೆಹಲಿ ಚಲೋ

Dharwad: 15 ದಿನಗಳಲ್ಲಿ ಸಚಿವ ಸಂಪುಟ ವಿಸ್ತರಣೆ, ನಾನೂ ಕೂಡ ಆಕಾಂಕ್ಷಿ: ವಿನಯ್ ಕುಲಕರ್ಣಿ

Dharwad: 15 ದಿನಗಳಲ್ಲಿ ಸಚಿವ ಸಂಪುಟ ವಿಸ್ತರಣೆ, ನಾನೂ ಕೂಡ ಆಕಾಂಕ್ಷಿ: ವಿನಯ್ ಕುಲಕರ್ಣಿ

Karnataka Govt.,: ರಾಜ್ಯ ಪ್ರವಾಸೋದ್ಯಮ ನೀತಿಗೆ ಸಂಸದ ಕಾಗೇರಿ ಖಂಡನೆ

Karnataka Govt.,: ರಾಜ್ಯ ಪ್ರವಾಸೋದ್ಯಮ ನೀತಿಗೆ ಸಂಸದ ಕಾಗೇರಿ ಖಂಡನೆ

R Ashok (2)

ಚಂದ್ರಶೇಖರ ಶ್ರೀ ವಿರುದ್ಧ ಕೇಸ್‌; ಒಕ್ಕಲಿಗರು ತಿರುಗಿ ಬೀಳುತ್ತಾರೆ: ಆರ್.ಅಶೋಕ್ ಎಚ್ಚರಿಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

18-bng

Bengaluru: ಕಂಕಣ ಕಾಲ-2 ಅರಮನೆ ಮೈದಾನದಲ್ಲೂ ಬಜೆಟ್‌ ವಿವಾಹ ಸಾಧ್ಯ!

17-

Bengaluru: ದೆಹಲಿಯ ನೇಲ್‌ ಆರ್ಟಿಸ್ಟ್ ನೇಣಿಗೆ

16-cm

Bengaluru: ತ್ಯಾಜ್ಯ ವರ್ಗಾವಣೆ ಘಟಕಕ್ಕೆ ಸಿದ್ದರಾಮಯ್ಯ ಚಾಲನೆ

15-ccb

Bengaluru: ಜೀವಾ ಆತ್ಮಹತ್ಯೆ: ಡಿವೈಎಸ್ಪಿಗೆ ಸಿಸಿಬಿ ನೋಟಿಸ್‌ ಸಾಧ್ಯತೆ

14-fruad

Bengaluru: ಸಾಲ ಕೊಡಿಸುವುದಾಗಿ 37 ಲಕ್ಷ ವಂಚನೆ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

Untitled-1

Missing case: ಎರಡು ಪ್ರತ್ಯೇಕ ನಾಪತ್ತೆ ಪ್ರಕರಣ; ದೂರು ದಾಖಲು

1-jjjjj

ODI; ಟೀಮ್ ಇಂಡಿಯಾದ ಹೊಸ ಜೆರ್ಸಿ ಬಿಡುಗಡೆ ಮಾಡಿದ ಜಯ್ ಶಾ,ಹರ್ಮನ್ ಪ್ರೀತ್

de

Guttigar: ಮಾವಿನಕಟ್ಟೆ; ಮರದಿಂದ ಬಿದ್ದು ವ್ಯಕ್ತಿ ಸಾವು

9

Kaup: ಬೀಚ್‌ನಲ್ಲಿನ್ನು ಪ್ಯಾರಾ ಮೋಟರಿಂಗ್‌

8(1

Udupi: ಸ್ಥಾಪಕರು ಜೀವನ ಪಾಠ ಮಾಡಿದ್ದ ಎಂಜಿಎಂ ಕಾಲೇಜಿಗೆ ಅಮೃತೋತ್ಸವ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.