ಗಾಂಧೀಜಿ- ಶಾಸ್ತ್ರೀಜಿ ಕೊಡುಗೆ ಸ್ಮರಣೀಯ
Team Udayavani, Oct 3, 2017, 12:33 PM IST
ವಿಜಯಪುರ: ವಿದೇಶಿಯರ ಸೆರೆಯಲ್ಲಿದ್ದ ಭಾರತಕ್ಕೆ ಸ್ವಾತಂತ್ರ್ಯದ ಜೊತೆಗೆ ಭಾರತೀಯರಿಗೆ ಸ್ವಾಭಿಮಾನ, ಸ್ವಾವಲಂಬಿ ಜೀವನ ರೂಪಿಸಿಕೊಳ್ಳುವ ಚೈತನ್ಯ ನೀಡಿದವರು ರಾಷ್ಟ್ರಪಿತ ಮಹಾತ್ಮ ಗಾಂಧಿಧೀಜಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ| ಎಂ.ಬಿ.ಪಾಟೀಲ ಬಣ್ಣಿಸಿದರು.
ಸೋಮವಾರ ನಗರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಜಿಲ್ಲಾಡಳಿತ ಹಮ್ಮಿಕೊಂಡಿದ್ದ ಮಹಾತ್ಮ ಗಾಂಧಿಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರೀ ಜಯಂತಿ ಸಮಾರಂಭದಲ್ಲಿ ಉಭಯ ನಾಯಕರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಚರಕದಿಂದ ಖಾದಿ ನೂಲು ತೆಗೆಯಲು ಚಾಲನೆ ನೀಡಿ ಅವರು ಮಾತನಾಡಿದರು.
ಶೇ. 80ರಷ್ಟು ಹಳ್ಳಿಗಳನ್ನೇ ಹೊಂದಿರುವ ಕಾರಣಕ್ಕೆ ಗ್ರಾಮೀಣ ಸಶಕ್ತ ಭಾರತ ರೂಪಿಸುವುದು ಗಾಂಧಿಧೀಜಿ ಕನಸಾಗಿತ್ತು. ಹಳ್ಳಿಗರ ಜೀವನ ಸ್ವಾಭಿಮಾನದ ಜೊತೆಗೆ ಸಮಾಜದ ಕೊನೆ ವ್ಯಕ್ತಿ ಸ್ವಾವಲಂಬಿ ಜೀವನ ರೂಪಿಸಿಕೊಳ್ಳಬೇಕು ಎಂಬ ಆಶಯ ಹೊಂದಿದ್ದರು ಎಂದು ವಿವರಿಸಿದರು.
ವಿಶ್ವದಲ್ಲಿಯೇ ಶ್ರೇಷ್ಠ ಶಾಂತಿಧೂತ ಎನಿಸಿರುವ ಮಹಾತ್ಮ ಗಾಂಧೀಜಿ ಅವರ ಸ್ವಾತಂತ್ರ್ಯಾದ ಚಳವಳಿಯಲ್ಲಿ ದೇಶದ ಕೋಟಿ ಕೋಟಿ ಜನರು ಪಾಲ್ಗೊಂಡಿದ್ದರು. ಅವರ ಅಹಿಂಸೆ ಮತ್ತು ಶಾಂತಿ ಮಂತ್ರಗಳಿಂದಲೇ ಸ್ವಾತಂತ್ರ್ಯಗಳಿಸಿದ ವಿಶ್ವದ ಏಕೈಕ ರಾಷ್ಟ್ರೆ ಎಂಬ ಹೆಗ್ಗಳಿಕೆ ಭಾರತಕ್ಕಿದ್ದು ಅದಕ್ಕೆಲ್ಲ ಮಹಾತ್ಮಾಜಿ ಕಾರಣ.
ಇನ್ನು ಗಾಂಧಿಧೀಜಿ ಮಾರ್ಗದಲ್ಲೇ ಹೆಜ್ಜೆ ಇರಿಸಿ ಸ್ವಾತಂತ್ರ್ಯ ಹೋರಾಟಗಾರಾಗಿ ಮಾತ್ರವಲ್ಲ ಸ್ವಾತಂತ್ರ್ಯ ಭಾರತದ
ಪ್ರಾಮಾಣಿಕ ಪ್ರಧಾನಿ ಎಂಬ ಕೀರ್ತಿ ಗಳಿಸಿದವರು ಲಾಲ್ ಬಹಾದ್ದೂರ್ ಶಾಸ್ತ್ರೀಜಿ. ಸರಳ, ಪ್ರಾಮಾಣಿಕ ಮತ್ತು ಸಜ್ಜನಿಕೆ ಮೈಗೂಡಿಸಿಕೊಂಡಿದ್ದ ಶಾಸ್ತ್ರೀಜಿ ಅವರ ಜೀವನವೇ ಒಂದು ಆದರ್ಶ ಪಾಠ ಶಾಲೆ.
ದೇಶಕ್ಕೆ ಅನ್ನ ನೀಡುವ ರೈತ, ದೇಶ ಕಾಯುವ ಯೋಧರಿಗೆ ಮೊದಲ ಗೌರವ ಸಲ್ಲಿಸುವ ಮೂಲಕ ಕೃತಜ್ಞತೆ ಸಲ್ಲಿಕೆಯ ಆದರ್ಶ ಹೇಳಿಕೊಟ್ಟ ಶಾಸ್ತ್ರೀಜಿ ನಮಗೆಲ್ಲ ಆದರ್ಶವಾಗಲಿ ಎಂದು ಆಶಿಸಿದರು.
ಅಕ್ಕಮಹಾದೇವಿ ಮಹಿಳಾ ವಿವಿ ಪ್ರಾಧ್ಯಾಪಕ ಡಾ| ವಿಷ್ಣು ಸಿಂಧೆ ಹಾಗೂ ವಿ.ಬಿ. ದರಬಾರ್ ಪಪೂ ಕಾಲೇಜಿನ ಉಪನ್ಯಾಸಕ ಅಶೋಕ ಸಣ್ಣನಿಂಗಣ್ಣನವರ ಉಪನ್ಯಾಸ ನೀಡಿದರು. ಈ ವೇಳೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹೊರ ತಂದಿರುವ ಮಹಾತ್ಮ ಗಾಂಧೀಜಿ ಕುರಿತ ಜಾನಪದ ಹಾಗೂ ಮಾರ್ಚ್ ಅಫ್ ಕರ್ನಾಟಕ ವಿಶೇಷ ಸಂಚಿಕೆ ಲೋಕಾ ರ್ಪಣೆ ಮಾಡಲಾಯಿತು. ಪ್ರಬಂಧ ಸ್ಪರ್ಧೆ ಸೇರಿದಂತೆ ಸ್ಪರ್ಧೆಗಳಲ್ಲಿ ವಿಜೇತ ಶಾಲಾ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.
ನಗರ ಶಾಸಕ ಡಾ| ಎಂ.ಎಸ್. ಬಾಗವಾನ, ಮೇಯರ್ ಸಂಗೀತಾ ಪೋಳ, ಉಪ ಮೇಯರ್ ರಾಜೇಶ ದೇವಗಿರಿ, ವೂಡಾ ಅಧ್ಯಕ್ಷ ಆಝಾದ್ ಪಟೇಲ್, ಖಾದಿ ಮಂಡಳಿ ಅಧ್ಯಕ್ಷ ಬಾಪುಗೌಡ ಪಾಟೀಲ, ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ, ಜಿಪಂ ಸಿಇಒ ಎಂ.ಸುಂದರೇಶಬಾಬು, ಎಸ್ಪಿ ಕುಲದೀಪ್ ಜೈನ್, ಉಪ ವಿಭಾಗಾಕಾರಿ ಶಂಕರ ವಣಕ್ಯಾಳ, ಪಾಲಿಕೆ ಆಯುಕ್ತ ಹರ್ಷ ಶೆಟ್ಟಿ ಇದ್ದರು.
ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಮಹೇಶ ಪೋತದಾರ ಸ್ವಾಗತಿಸಿದರು. ಹುಮಾಯೂನ್ ಮಮದಾಪುರ ನಿರೂಪಿಸಿದರು. ಖಾದಿ ಮತ್ತು ಗ್ರಾಮೋದ್ಯೋಗ ಅಧಿಕಾರಿ ಸಾವಿತ್ರಮ್ಮ ದಳವಾಯಿ ವಂದಿಸಿದರು.
ಇದಕ್ಕೂ ಮುನ್ನ ನಗರದ ಮಹಾತ್ಮ ಗಾಂಧಿಧೀಜಿ ಪುತ್ಥಳಿಗೆ ಸಚಿವ ಡಾ| ಎಂ.ಬಿ. ಪಾಟೀಲ ಸೇರಿ ಇತರೆ ಗಣ್ಯರು ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು. ನಂತರ ಲಾಲ್ ಬಹಾದ್ದೂರ್ ಶಾಸ್ತ್ರೀ ಮಾರುಕಟ್ಟೆ ಆವರಣದಲ್ಲಿ ಮಹಾತ್ಮ ಗಾಂಧಿಧೀಜಿ, ಲಾಲ್ ಬಹಾದ್ದೂರ್ ಶಾಸ್ತ್ರೀ ಅವರ ಭಾವಚಿತ್ರಗಳಿಗೆ ಪುಷ್ಪಾರ್ಪಣೆ ಮಾಡಿ ಗೌರವ ಸಲ್ಲಿಸಿ, ಸರ್ವಧರ್ಮ ಪ್ರಾರ್ಥನೆಯಲ್ಲಿ ಭಾಗವಹಿಸಿದರು. ಜಿಲ್ಲಾಡಳಿತದ ಆವರಣದಲ್ಲಿ ಹಮ್ಮಿಕೊಂಡಿದ್ದ ಸ್ವತ್ಛತಾ ಅಭಿಯಾನದಲ್ಲಿ ಪಾಲ್ಗೊಂಡು ಸ್ವತ್ಛತಾ ಕಾರ್ಯ ನಡೆಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Muddebihal; ಬೊಲೇರೊ-ಬೈಕ್ ಮುಖಾಮುಖಿ ಡಿಕ್ಕಿ: ಸವಾರ ಮೃ*ತ್ಯು
Muddebihal: ಕಬ್ಬು ತುಂಬಿದ್ದ ಟ್ರ್ಯಾಕ್ಟರ್ – ಟ್ರ್ಯಾಲಿ ಉರುಳಿ ಬೈಕ್ ಸವಾರ ಮೃತ್ಯು
Muddebihal: ಆಟೋ ಪಲ್ಟಿ: ಕೂಲಿ ಕಾರ್ಮಿಕ ಮಹಿಳೆ ಮೃತ್ಯು
Muddebihal: ಟ್ರ್ಯಾಕ್ಟರ್-ಟ್ರೇಲರ್ ಗೆ ಬೈಕ್ ಡಿಕ್ಕಿ ಹೊಡೆದು ಯುವಕ ಸ್ಥಳದಲ್ಲೇ ಮೃತ್ಯು
Waqf Notice: ಒಂದಿಂಚು ಜಮೀನು ವಕ್ಫ್‌ಗೆ ಹೋಗಲು ಬಿಡಲ್ಲ: ಸಚಿವ ಎಂ.ಬಿ.ಪಾಟೀಲ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.