ಕಲೆ, ಭಲೇ “ಶಬರಿ’! ಕರ್ನಾಟಕದ ಅತಿವೇಗದ ಚಿತ್ರಗಾರ್ತಿಯ ಕತೆ


Team Udayavani, Oct 4, 2017, 7:00 AM IST

lead-shabari-(2).jpg

ಮಂಗಳೂರಿನ ಪ್ರತಿಭೆ ಶಬರಿ ಚಿತ್ರ ಬಿಡಿಸುವ ದೃಶ್ಯವನ್ನು ಛಾಯಾಚಿತ್ರಗ್ರಾಹಕ ಶ್ರವಣ್‌ ಕುಮಾರ್‌ “ಲೈವ್‌ ಮಾಡೆಲಿಂಗ್‌’ ರೀತಿಯಲ್ಲಿ ಫೋಟೋಶೂಟ್‌ ಮಾಡಿದ್ದರು. ಅದೀಗ ಸಾಮಾಜಿಕ ಜಾಲತಾಣಗಳಲ್ಲಿ ಹೊಸ ಅಲೆ ಸೃಷ್ಟಿಸಿದೆ…

ಆಕೆ ಕ್ಯಾನ್ವಾಸ್‌ ಎದುರು ನಿಂತರೆ, ರೇಖೆಗಳು ಮಾತಾಡುತ್ತವೆ. ಫ‌ಟಾಫ‌ಟ್‌ ಎನ್ನುವ ಹಾಗೆ ತಾಜಾ ಚಿತ್ರಗಳು ಅರಳುತ್ತವೆ. ವೀಕ್ಷಕರು ನಾಲ್ಕೈದು ಸಲ ಕಣ್ಣು ಮಿಟುಕಿಸುವುದರೊಳಗೆ ಅದ್ಭುತ ಕಲಾಕೃತಿಯನ್ನು ಎದ್ದುನಿಲ್ಲಿಸುವಷ್ಟು ಜಾಣೆ ಈ ಹುಡುಗಿ!

ಹೀಗೆ ಕುಂಚದಲ್ಲೇ ಜಾದೂ ಮಾಡಬಲ್ಲ ಚತುರೆ, ಕರ್ನಾಟಕದ “ಅತಿವೇಗದ ಚಿತ್ರಗಾರ್ತಿ’ ಅಂತಲೇ ಪ್ರಸಿದ್ಧಿ ಪಡೆದ ಶಬರಿ ಗಾಣಿಗ. ಈಕೆ ಮಂಗಳೂರಿನ ಪ್ರತಿಭೆ. ಶಬರಿ ಅವರ “ಆರ್ಟಿಸ್ಟ್‌ ಮಾಡೆಲಿಂಗ್‌’ ಫೋಟೋಶೂಟ್‌ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ದೇಶ- ವಿದೇಶದ ಜನಪ್ರಿಯ ಮಾಡೆಲ್‌ಗ‌ಳೂ ಈಕೆಯ ಚಿತ್ರವನ್ನು ಮೆಚ್ಚಿಕೊಂಡಿದ್ದಾರೆ.

ಸೂಪರ್‌ ಹಿಟ್‌ ಆದ ಆರ್ಟಿಸ್ಟ್‌!
ಕೆಲ ವಾರಗಳ ಹಿಂದಷ್ಟೇ ಪ್ರಸಿದ್ಧ ಛಾಯಾಚಿತ್ರಗ್ರಾಹಕ ಶ್ರವಣ್‌ ಕುಮಾರ್‌ ಅವರು, ಶಬರಿ ಚಿತ್ರ ಬಿಡಿಸುವ ದೃಶ್ಯವನ್ನು ಲೈವ್‌ ಮಾಡೆಲಿಂಗ್‌ ರೀತಿಯಲ್ಲಿ ಫೋಟೋಶೂಟ್‌ ಮಾಡಿದ್ದರು. ಅತಿ ವಿಭಿನ್ನ ರೀತಿಯ ಫೋಟೋಗ್ರಫಿ ಇದಾಗಿದ್ದು, ಕಳೆದೆರಡು ದಿನಗಳ ಹಿಂದಷ್ಟೇ ಇದನ್ನು ಸಾಮಾಜಿಕ ತಾಣಗಳಲ್ಲಿ ಅಪ್‌ಲೋಡ್‌ ಮಾಡಲಾಗಿತ್ತು. ಸಾಮಾಜಿಕ ತಾಣಗಳಲ್ಲಿ ಫೋಟೋಗಳು ವೈರಲ್‌ ಆಗುತ್ತಿದ್ದು, ಎರಡೇ ದಿನದಲ್ಲಿ ಒಂದು ಲಕ್ಷಕ್ಕೂ ಅಧಿಕ ಲೈಕ್ಸ್‌ಗಳು ಬಂದಿವೆ. ವಿದೇಶಿಯರೂ ಮೆಚ್ಚಿ ಕಮೆಂಟ್‌ ಮಾಡಿದ್ದು, ವಿವಿಧ ದೇಶಗಳ ಜನಪ್ರಿಯ ರೂಪದರ್ಶಿಗಳೂ ಲೈಕ್‌- ಕಮೆಂಟ್ಸ್‌ ಮಾಡಿದ್ದಾರೆ. 

ಹಲವು ಖ್ಯಾತನಾಮರ ಚಿತ್ರಗಳನ್ನು ಕ್ಯಾನ್ವಾಸ್‌ನಲ್ಲಿ ಅರಳಿಸುವ ಕಲಾವಿದೆಯರ ಪೈಕಿ ಶಬರಿ ರಾಜ್ಯದಲ್ಲೇ ಮೇಲ್ಪಂಕ್ತಿಯಲ್ಲಿದ್ದಾರೆ. ಈಕೆ ಬಿಡಿಸಿದ ಸಾಯಿಬಾಬಾ ಪೇಂಟಿಂಗ್‌ 3 ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದಿತ್ತು. 

ಮೂರೇ ನಿಮಿಷದಲ್ಲಿ ಚಿತ್ರ ರೆಡಿ!
ವಿಲಾಸ್‌ ನಾಯಕ್‌, ಚಿತ್ರಮಿತ್ರರಂಥ ಖ್ಯಾತನಾಮರ ನಡುವೆ ಶಬರಿ ಗಮನಾರ್ಹವಾಗಿ ಬೆಳೆಯುತ್ತಿದ್ದಾರೆ. ಮೂರೇ ನಿಮಷದಲ್ಲಿ ಸುಂದರ ಚಿತ್ರ ಅರಳಿಸುವ ಚಾಕಚಕ್ಯತೆ ಇವರದ್ದು. ಕೆಂಜಾರು ಶ್ರೀದೇವಿ ತಾಂತ್ರಿಕ ಕಾಲೇಜಿನಲ್ಲಿ ಅಂತಿಮ ಎಂಸಿಎ ವಿಭಾಗದಲ್ಲಿ ಓದುತ್ತಿರುವ 23 ವರ್ಷದ ಶಬರಿ, ಕೆಪಿಟಿ ನಿವಾಸಿ, ಎಂಜಿನಿಯರ್‌ ಯೋಗೀಶ್‌ಕುಮಾರ್‌ ಮತ್ತು ಗೃಹಿಣಿ ಶಶಿಕಲಾ ಅವರ ಪುತ್ರಿ. ಎಳವೆಯಲ್ಲೇ ಚಿತ್ರಕಲೆಯಲ್ಲಿ ಆಸಕ್ತಿ ಹೊಂದಿದ್ದ ಈಕೆ ವೀಣಾ ಭಂಡಾರಿ, ಶಮಿರ್‌ ಆಲಿ, ಚಂದ್ರಾಡ್ಕರ್‌ ಅವರಿಂದ ಚಿತ್ರಕಲೆಯಲ್ಲಿ ತರಬೇತಿ ಪಡೆದಿದ್ದಾರೆ. ಕೇವಲ ಚಿತ್ರಕಲೆಯಲ್ಲಿ ಮಾತ್ರವಲ್ಲದೇ ಹಾಡುಗಾರಿಕೆಯಲ್ಲಿಯೂ ಸೈ ಎನಿಸಿಕೊಂಡಿರುವ ಶಬರಿ, ಈಗಾಗಲೇ “ದೊಂಬರಾಟ’ ಮತ್ತು “ಜುಗಾರಿ’ ಎನ್ನುವ ತುಳು ಚಿತ್ರಗಳಿಗೆ ಹಿನ್ನೆಲೆ ಗಾಯನ ಮಾಡಿದ್ದಾರೆ. ಈಗಾಗಲೇ 2 ಕರಾವಳಿ, 1 ಕನ್ನಡ ಸಿನಿಮಾದಲ್ಲಿ ನಟಿಸಲೂ ಅವರಿಗೆ ಆಫ‌ರ್‌ಗಳು ಬಂದಿವೆ. ಈಗ ದುಬೈ ಕಲಾಪ್ರದರ್ಶನದಲ್ಲಿ ಭಾಗವಹಿಸಲು ಸಿಕ್ಕ ಆಹ್ವಾನದ ಖುಷಿಯಲ್ಲಿದ್ದಾರೆ ಶಬರಿ. . 
  - – – –
ಆರ್ಟಿಸ್ಟ್‌ ಮಾಡೆಲಿಂಗ್‌ ಫೋಟೋಗ್ರಫಿ
ಶಬರಿ ಅವರ ಆರ್ಟಿಸ್ಟ್‌ ಮಾಡೆಲ್‌ ಫೋಟೋಗ್ರಫಿ ಮಾಡಿದ್ದು ಫ್ರೀಲಾನ್ಸ್‌ ಫೋಟೋಗ್ರಾಫರ್‌ ಆಗಿರುವ ಶ್ರವಣ್‌ಕುಮಾರ್‌ ಅವರು. ಈಗಾಗಲೇ ಥೈಲಾಂಡ್‌, ಯುರೋಪ್‌, ದುಬೈ ಮುಂತಾದ ಕಡೆಗಳಲ್ಲಿ ವೆಡ್ಡಿಂಗ್‌ ಫೋಟೋಗ್ರಫಿ ಮಾಡಿ ಇವರು ಗಮನ ಸೆಳೆದಿದ್ದಾರೆ. ಹಾಂಕಾಂಗ್‌ನಲ್ಲಿಯೂ ಫೋಟೋಗ್ರಫಿ ನಿರ್ವಹಿಸಿದ್ದಾರೆ. ಕಲಾವಿದೆಯ ಸೃಜನಶೀಲತೆಯನ್ನು ಭಾವಾಭಿವ್ಯಕ್ತಿಯೊಂದಿಗೆ ತೋರಿಸಬೇಕೆಂಬ ಉದ್ದೇಶದಿಂದ “ಆರ್ಟಿಸ್ಟ್‌ ಮಾಡೆಲಿಂಗ್‌’ ಫೋಟೋಶೂಟ್‌ ಮಾಡಿರುವ ಇವರು, ಕಲಾವಿದೆ ಮತ್ತಾಕೆ ರಚಿಸಿದ ಚಿತ್ರವನ್ನು ವಿಭಿನ್ನ ರೀತಿಯಲ್ಲಿ ಸೆರೆ ಹಿಡಿದಿದ್ದಾರೆ.

ಚಿತ್ರಗಳನ್ನು ವಿವಿಧ ವೆಬ್‌ಸೈಟ್‌ಗಳೂ ತಮ್ಮ ಸೈಟ್‌ಗಳಲ್ಲಿ ಹಾಕಿಕೊಂಡಿದ್ದು, ಹಲವು ಮಂದಿ ಅದನ್ನು ಶೇರ್‌ ಮಾಡಿಕೊಂಡಿದ್ದಾರೆ. ಎಷ್ಟು ಶೇರ್‌ ಆಗಿದೆ ಎನ್ನುವ ಸಂಖ್ಯೆ ಸಿಗುವುದು ಕಷ್ಟ. ವಿದೇಶಗಳಿಂದ ಲಕ್ಷಕ್ಕೂ ಮಿಕ್ಕಿ ಪ್ರತಿಕ್ರಿಯೆ ಸಿಕ್ಕಿರುವುದು ಮತ್ತು ಅಲ್ಲಿನ ಮಾಡೆಲ್‌ಗ‌ಳು, ಖ್ಯಾತ ಕಲಾವಿದರು ಚಿತ್ರಕ್ಕೆ ಕಮೆಂಟ್‌ ಮಾಡಿರುವುದು ಖುಷಿ ತಂದಿದೆ.
– ಶಬರಿ ಗಾಣಿಗ

– ಧನ್ಯಾ ಬಾಳೆಕಜೆ

ಟಾಪ್ ನ್ಯೂಸ್

Bantwala1

Bantwala: ಅಧಿಕಾರಿಗಳ ನಡೆ ವಸತಿ ನಿಲಯಗಳ ಕಡೆ; ವಿನೂತನ ಕಾರ್ಯಕ್ರಮ

arrested

Illegal immigrants; ಬಂಧಿತ ಪಾಕ್‌ ಅಕ್ರಮ ವಲಸಿಗರು ಉಗ್ರರಲ್ಲ!: ಯಾರಿವರು?

1-kanna

Karnataka; ವಲಸಿಗರು ಈ ನಾಡಿಗೊಂದು ಸಮಸ್ಯೆ ಆಗದಿರಲಿ…

1-vtu

Extraodinary; 3.5 ವರ್ಷಕ್ಕೇ ಎಂಜಿನಿಯರಿಂಗ್‌ ಪದವಿ ಕೊಡಲಿದೆ ವಿಟಿಯು!

ಮನುಷ್ಯ ನೀನು ದಂಡ, ಸತ್ತು ಹೋಗು!: ಎಐಚಾಟ್‌ಬಾಟ್‌ ಹೇಳಿಕೆಮನುಷ್ಯ ನೀನು ದಂಡ, ಸತ್ತು ಹೋಗು!: ಎಐಚಾಟ್‌ಬಾಟ್‌ ಹೇಳಿಕೆ

ಮನುಷ್ಯ ನೀನು ದಂಡ, ಸತ್ತು ಹೋಗು!: ಎಐ ಚಾಟ್‌ಬಾಟ್‌ ಹೇಳಿಕೆ

NIkhil KUMMI

Channapatna by-election; ನಿಖಿಲ್ ಗೆ ನಿರೀಕ್ಷೆಗೂ ಮೀರಿ ಗೆಲುವು: ಭವಿಷ್ಯ

1-madaraa

CM ಆಗುವ ಅರ್ಹತೆ ಇದ್ದರೂ ಬೇಡದ ಖಾತೆ: ಗುಡುಗಿದ ಮಾದಾರ ಶ್ರೀ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

Bantwala1

Bantwala: ಅಧಿಕಾರಿಗಳ ನಡೆ ವಸತಿ ನಿಲಯಗಳ ಕಡೆ; ವಿನೂತನ ಕಾರ್ಯಕ್ರಮ

arrested

Illegal immigrants; ಬಂಧಿತ ಪಾಕ್‌ ಅಕ್ರಮ ವಲಸಿಗರು ಉಗ್ರರಲ್ಲ!: ಯಾರಿವರು?

1-kanna

Karnataka; ವಲಸಿಗರು ಈ ನಾಡಿಗೊಂದು ಸಮಸ್ಯೆ ಆಗದಿರಲಿ…

1-vtu

Extraodinary; 3.5 ವರ್ಷಕ್ಕೇ ಎಂಜಿನಿಯರಿಂಗ್‌ ಪದವಿ ಕೊಡಲಿದೆ ವಿಟಿಯು!

ಮನುಷ್ಯ ನೀನು ದಂಡ, ಸತ್ತು ಹೋಗು!: ಎಐಚಾಟ್‌ಬಾಟ್‌ ಹೇಳಿಕೆಮನುಷ್ಯ ನೀನು ದಂಡ, ಸತ್ತು ಹೋಗು!: ಎಐಚಾಟ್‌ಬಾಟ್‌ ಹೇಳಿಕೆ

ಮನುಷ್ಯ ನೀನು ದಂಡ, ಸತ್ತು ಹೋಗು!: ಎಐ ಚಾಟ್‌ಬಾಟ್‌ ಹೇಳಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.