ಪದ್ಮಶ್ರೀ ಚಿಟ್ಟಾಣಿ ರಾಮಚಂದ್ರ ಹೆಗ್ಡೆ ವಿಧಿವಶ
Team Udayavani, Oct 3, 2017, 10:51 PM IST
ಮಣಿಪಾಲ: ಜನಪ್ರಿಯ ಯಕ್ಷಗಾನ ಕಲಾವಿದ ಚಿಟ್ಟಾಣಿ ರಾಮಚಂದ್ರ ಹೆಗ್ಡೆ ಅವರು ಮಂಗಳವಾರದಂದು ಇಲ್ಲಿನ ಕೆ.ಎಂ.ಸಿ. ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಅವರಿಗೆ 84 ವರ್ಷ ಪ್ರಾಯವಾಗಿತ್ತು. ಕಳೆದ ಭಾನುವಾರ ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದರು. ಉಸಿರಾಟದ ತೊಂದರೆಯಿಂದ ನಿಧನ.
ಉಡುಪಿಯಲ್ಲಿ ಕಳೆದ 9 ವರ್ಷದಿಂದ ಅವರ ಅಭಿಮಾನಿಗಳು ಚಿಟ್ಟಾಣಿ ಯಕ್ಷ ಸಪ್ತಾಹ ನಡೆಸಿಕೊಂಡು ಬರುತ್ತಿದ್ದು ಚಿಟ್ಟಾಣಿಯವರೂ ಪಾತ್ರ ಮಾಡುತ್ತಿದ್ದರು. ಅ. 22ರಿಂದ ಈ ವರ್ಷದ ಚಿಟ್ಟಾಣಿ ಯಕ್ಷ ಸಪ್ತಾಹ ನಿಗದಿಯಾಗಿತ್ತು. ದಶಮಾನೋತ್ಸವಕ್ಕೂ ಮುನ್ನ ಯಕ್ಷಧ್ರುವ ಕಳಚಿದೆ.
– ಯಕ್ಷಗಾನದ ಮೇರು ಪ್ರತಿಭೆ ಚಿಟ್ಟಾಣಿ ರಾಮಚಂದ್ರ ಹೆಗಡೆ
– ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಚಿಟ್ಟಾಣಿ
– ಯಕ್ಷಲೋಕದ ಖಳನಟ ಬಿರುದಾಂಕಿತ ಇನ್ನಿಲ್ಲ
– ಮೂರು ದಿನಗಳಿಂದ ಮಣಿಪಾಲ ಕೆಎಂಸಿಯಲ್ಲಿ ಚಿಕಿತ್ಸೆ
– ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ರಾಮಚಂದ್ರ ಚಿಟ್ಟಾಣಿ
– ಮೂಲತ ಉತ್ತರ ಕನ್ನಡ ಜಿಲ್ಲೆಯ ಚಿಟ್ಟಾಣಿಯವರು
– ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಚಿಟ್ಟಾಣಿ
– ಯಕ್ಷಗಾನಕ್ಕೆ ರಾಷ್ಟ್ರಮಟ್ಟದಲ್ಲಿ ಮಾನ್ಯತೆ ತಂದುಕೊಟ್ಟವರು
– ಡಾ. ರಾಜ್ ಕುಮಾರ್ ಅವರಿಂದ ಹೊಗಳಿಸಿಕೊಂಡಿದ್ದ ಚಿಟ್ಟಾಣಿ
– ಕೌರವ, ಕೀಚಕ ಪಾತ್ರದಲ್ಲಿ ಮಿಂಚುತ್ತಿದ್ದ ಕಲಾವಿದ
– ನವರಸಗಳನ್ನು ರಂಗದ ಮೇಲೆ ತರುತ್ತಿದ್ದ ಮೇರು ಕಲಾವಿದ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Maharashtra: ಫಲಿತಾಂಶಕ್ಕೂ ಮೊದಲೇ ರಾರಾಜಿಸುತ್ತಿದೆ ಅಜಿತ್ ಪವಾರ್ ಗೆಲುವಿನ ಬ್ಯಾನರ್
Aaram Aravinda Swamy Movie Review: ಪಕ್ಕದ್ಮನೆ ಹುಡುಗನ ಫನ್‌ರೈಡ್
Karnataka By Poll Results: ಮತಎಣಿಕೆ-ಚನ್ನಪಟ್ಟಣ, ಶಿಗ್ಗಾಂವಿ, ಸಂಡೂರು “ಕೈ” ಮುನ್ನಡೆ
By Election: ನಿಖಿಲ್ ವಿರುದ್ದ ಮುನ್ನಡೆ ಸಾಧಿಸಿದ ಯೋಗೇಶ್ವರ್; ಕುತೂಹಲದತ್ತ ಚನ್ನಪಟ್ಟಣ
Karkala: ಶಾಲಾ ವಾಹನಕ್ಕೆ ಢಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲೇ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.