ಮುಖಭಂಗ ತಪ್ಪಿಸಲು ಹೊಣೆ ಹೊತ್ತಿತೇ ಐಸಿಸ್?
Team Udayavani, Oct 4, 2017, 10:02 AM IST
ಲಾಸ್ ವೆಗಾಸ್: ಇರಾಕ್ ಮತ್ತು ಸಿರಿಯಾದಲ್ಲಿ ಅಮೆರಿಕ ಮತ್ತು ಅದರ ಮಿತ್ರ ರಾಷ್ಟ್ರಗಳ ದಾಳಿಯಿಂದ ಹೈರಾಣಾಗಿ ಹೋಗಿದೆ ಉಗ್ರ ಸಂಘಟನೆ ಐಸಿಸ್. ಹೀಗಾಗಿಯೇ ಇತ್ತೀಚಿನ ದಿನಗಳಲ್ಲಿ ಪ್ರಮುಖ ದಾಳಿಗಳನ್ನು ಕೈಗೊಂಡಿಲ್ಲ. ಆದರೂ ಅಮೆರಿಕದ ಲಾಸ್ ವೇಗಾಸ್‌ನಲ್ಲಿ ವ್ಯಕ್ತಿಯೊಬ್ಬ 60 ಮಂದಿಯನ್ನು ಆಪೋಷನ ಪಡೆದುಕೊಂಡದ್ದನ್ನು ತಾನೇ ಮಾಡಿಕೊಂಡದ್ದು ಎಂದು ಉಗ್ರ ಸಂಘಟನೆ ಹೇಳಿಕೊಂಡಿದೆ. ಆದರೆ ಲಾಸ್‌ವೇಗಾಸ್‌ನ ಸ್ಥಳೀಯ ಸರಕಾರದ ಪ್ರಕಾರ, ಪ್ರಾಥಮಿಕ ತನಿಖೆಯಲ್ಲಿ ಈ ದಾಳಿಯನ್ನು ಅಂತಾರಾಷ್ಟ್ರೀಯ ಉಗ್ರ ಸಂಘಟನೆಗಳು ನಡೆಸಿವೆ ಎಂದು ಹೇಳುವ ಯಾವುದೇ ಅಂಶಗಳು ದೊರೆತಿಲ್ಲ.
ಐಸಿಸ್ ಹೆಚ್ಚಿನ ಸಂದರ್ಭಗಳಲ್ಲಿ ದಾಳಿಗೆ ಯುವಕರನ್ನೇ ಬಳಸುತ್ತದೆ. ಆದರೆ, ಲಾಸ್ ವೇಗಾಸ್‌ನ ದಾಳಿಕೋರನ ವಯಸ್ಸು 60. ಇನ್ನು ಘಟನೆ ನಡೆದ ಕೆಲವು ಗಂಟೆಗಳ ಅನಂತರ ಐಸಿಸ್‌ನ ಸುದ್ದಿ ಸಂಸ್ಥೆ “ಆಮಕ್’ 3 ಬಾರಿ ಹೇಳಿಕೆ ಬಿಡುಗಡೆ ಮಾಡಿತ್ತು. ಮೂರನೇ ದಾಳಿಯಲ್ಲಿ ಅಮೆರಿಕದ ವ್ಯಕ್ತಿ ಎಂದು ಹೇಳಿಕೊಂಡಿತ್ತು. ಇತ್ತೀಚೆಗೆ ಫಿಲಿಪ್ಪೀನ್ಸ್‌ನ ಕ್ಯಾಸಿನೋ ಮೇಲೆ ನಡೆದಿದ್ದ ಬಲು ದೊಡ್ಡ ದಾಳಿಗೂ ಕಾರಣ ತಾನೇ ಎಂದು ಸಂಘಟನೆ ಹೇಳಿಕೊಂಡಿತ್ತು. ನಿಜ ಏನೆಂದರೆ ಬಹುಕೋಟಿ ಮೊತ್ತದ ಸಾಲ ಅದರ ಮೇಲಿತ್ತು. ಅದನ್ನು ತಪ್ಪಿಸಲು ಉಗ್ರರು ದಾಳಿ ನಡೆಸಿದ್ದಾರೆ ಎಂದು ಕ್ಯಾಸಿನೋ ಆಡಳಿತ ಮಂಡಳಿ ಹೇಳಿಕೊಂಡಿತ್ತು.
ಎಂಟಲ್ಲ 42 ಆಯುಧಗಳು: ಸೋಮವಾರ ಘಟನೆ ನಡೆದ ಬಳಿಕ ಹೊಟೇಲ್‌ಗೆ ದಾಳಿ ನಡೆಸಿದ್ದ ಪೊಲೀಸರು ಎಂಟು ಪಿಸ್ತೂಲ್‌ಗಳನ್ನು ವಶಪಡಿಸಿಕೊಂಡಿದ್ದರು. ಮಂಗಳವಾರ ತನಿಖಾಧಿಕಾರಿಗಳೇ ನೀಡಿದ ಮಾಹಿತಿ ಪ್ರಕಾರ ದಾಳಿಕೋರ ಪೆಡಾಕ್ ಹತ್ತು ಬ್ಯಾಗ್‌ಗಳಲ್ಲಿ 42 ಆಯುಧಗಳನ್ನು ಹೊಂದಿದ್ದ. ಕೊಠಡಿಯಿಂದ ಪಿಸ್ತೂಲ್, ಅಟೋಮ್ಯಾಟಿಕ್ ರೈಫಲ್ ಸೇರಿ ದಂತೆ 23 ಆಯುಧಗಳನ್ನು ವಶಪಡಿಸಿ ಕೊಳ್ಳ ಲಾಗಿತ್ತು. ಇನ್ನು ನವಾಡಾದಲ್ಲಿ ಆತನ ಮನೆ ಮೇಲೆ ದಾಳಿ ನಡೆಸಿದಾಗ 800 ಸುತ್ತುಗಳಷ್ಟು ಗುಂಡು, ಉಳಿದ ಶಸ್ತ್ರಾಸ್ತ್ರಗಳು ಸಿಕ್ಕಿವೆ.
ಸ್ಟೀಫನ್ ಪೆಡಾಕ್ ತಂದೆ ದರೋಡೆಕೋರ
ಸಂಗೀತ ಕಾರ್ಯಕ್ರಮದಲ್ಲಿ 60 ಮಂದಿ ಯನ್ನು ಹತ್ಯೆ ಮಾಡಿದ ಸ್ಟೀಫನ್ ಪೆಡಾಕ್ ತಂದೆ ಬೆಂಜಮಿನ್ ಹಾಸ್ಕಿನ್ಸ್ ಪೆಡಾಕ್ ಬ್ಯಾಂಕ್ ದರೋಡೆಕೋರನೆಂಬ ಮಾಹಿತಿ ಹೊರ ಬಿದ್ದಿದೆ. 1959 ಮತ್ತು 1960ರಲ್ಲಿ ಆತ ಫೀನಿಕ್ಸ್‌ನಲ್ಲಿರುವ ಬ್ಯಾಂಕ್‌ಗಳ ಶಾಖೆ ಗಳಿಗೆ ನುಗ್ಗಿ 25 ಸಾವಿರ ಅಮೆರಿಕನ್ ಡಾಲರ್ ದೋಚಿದ್ದ. ಇದಕ್ಕಾಗಿ ಆತನಿಗೆ 20 ವರ್ಷ ಶಿಕ್ಷೆಯೂ ಆಯಿತು. 1968ರಲ್ಲಿ ಜೈ ಲಿಂದ ಪರಾರಿಯಾಗಿದ್ದ. 1969ರಲ್ಲಿ ಎಫ್ಬಿಐ ಆತನನ್ನು ಮೋಸ್ಟ್ ವಾಂಟೆಡ್ ಲಿಸ್ಟ್‌ಗೆ ಸೇರಿಸಿತ್ತು. ಇನ್ನು ದಾಳಿಕೋರ ಪೆಡಾಕ್ 1980ರಿಂದ 3 ವರ್ಷ ಶಸ್ತ್ರಾಸ್ತ್ರ ತಯಾರಿಕಾ ಕಂಪೆನಿಯಲ್ಲಿ ಲೆಕ್ಕಾಧಿಕಾರಿ ಯಾಗಿದ್ದ. ಆತ ಹೇರಳವಾಗಿ ದುಡ್ಡು ಸಂಪಾ ದನೆ ಮಾಡಿದ್ದ. ಈತನಿಗೆ ಜೂಜು ಎಂದರೆ ಪಂಚಪ್ರಾಣ. ಅದಕ್ಕಾ ಗಿಯೇ ಅಮೆ ರಿಕದ ಜೂಜಿನ ರಾಜ ಧಾನಿಗೆ ಸಮೀಪವೇ ಮನೆ ಮಾಡಿಕೊಂಡಿದ್ದ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Russia 200 ಕ್ಷಿಪಣಿ, ಡ್ರೋನ್‌ಗಳಿಂದ ದಾಳಿ: ಕತ್ತಲೆಯಲ್ಲಿ ಉಕ್ರೇನ್‌ನ 10 ಲಕ್ಷ ಮನೆ!
America:ಭಾರತೀಯ ಮೂಲದ ವೈದ್ಯರಿಗೆ 17 ಕೋಟಿ ರೂ. ದಂಡ
Bangladesh; ಚಿನ್ಮಯಿ ಕೃಷ್ಣದಾಸ್‌ಗೂ ನಮಗೂ ಸಂಬಂಧವಿಲ್ಲ: ಇಸ್ಕಾನ್ ಸ್ಪಷ್ಟನೆ
Bangladesh:ಇಸ್ಕಾನ್ ನಿಷೇಧಿಸಲು ನಿರಾಕರಿಸಿದ ಬಾಂಗ್ಲಾದೇಶ ಹೈಕೋರ್ಟ್,ಸರ್ಕಾರಕ್ಕೆ ಮುಖಭಂಗ
Bengaluru ಭಯೋ*ತ್ಪಾದಕ ಚಟುವಟಿಕೆ ಆರೋಪಿ, ಉ*ಗ್ರ ಖಾನ್ ರುವಾಂಡದಿಂದ ಭಾರತಕ್ಕೆ ಗಡಿಪಾರು!
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.