ಸರ್ಕ್ಯೂಟ್ ಹೌಸ್ಗೆ ಸುಂದರ ಉದ್ಯಾನ!
Team Udayavani, Oct 4, 2017, 11:33 AM IST
ಮಹಾನಗರ: ನಗರದ ಸರಕಾರಿ ಅತಿಥಿಗೃಹ ಸರ್ಕ್ಯೂಟ್ ಹೌಸ್ ಮುಂಭಾಗದ ಒಂದು ಎಕ್ರೆ ಜಾಗದಲ್ಲಿ ನಿರ್ಮಾಣವಾಗುತ್ತಿರುವ ಆಕರ್ಷಕ ಗಾರ್ಡನ್ ಒಂದೂವರೆ ತಿಂಗಳಲ್ಲಿ ಉದ್ಘಾಟನೆಗೊಳ್ಳಲಿದೆ. ಗಾರ್ಡನ್ ಕಾಮಗಾರಿ
ಭರದಿಂದ ಸಾಗುತ್ತಿದ್ದು, ಇದರೊಂದಿಗೆ ಅತಿಥಿಗೃಹದ ಪ್ರವೇಶ ದ್ವಾರವೂ ಹೊಸ ರೂಪ ಪಡೆದುಕೊಳ್ಳುತ್ತಿದೆ.
ಕೇಂದ್ರ ಹಾಗೂ ರಾಜ್ಯದ ಜನಪ್ರತಿ ನಿಧಿಗಳು, ಅಧಿಕಾರಿಗಳು ಮಂಗಳೂರಿಗೆ ಬಂದಾಗ ಕದ್ರಿಯ ಸುಮಾರು 8 ಎಕ್ರೆ ಪ್ರದೇಶದಲ್ಲಿ ನಿರ್ಮಿಸಲಾದ ಸರಕಾರಿ ಅತಿಥಿಗೃಹದಲ್ಲಿ ತಂಗುತ್ತಾರೆ.ಈ ಸರ್ಕ್ಯೂಟ್ ಹೌಸ್ ಕಟ್ಟಡದ ಮುಂಭಾಗದ ಒಂದು ಎಕರೆ ಜಾಗ ಖಾಲಿ ಬಿದ್ದಿದ್ದು, ಅಲ್ಲಿ ಯುವಕರು ಆಡುವಾಡುತ್ತಿದ್ದರು. ಈ ಜಾಗವನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎನ್ನುವ ಕಾರಣದಿಂದ ಸರ್ಕ್ಯೂಟ್ ಹೌಸ್ ಅಭಿವೃದ್ಧಿ ನಿಧಿಯ 25 ಲಕ್ಷ ರೂ. ಯಿಂದ ಸುಂದರವಾದ ಉದ್ಯಾನ ನಿರ್ಮಾಣ ಮಾಡಲು ಅಧಿಕಾರಿಗಳು ಮುಂದಾಗಿದ್ದಾರೆ.
ಇಲ್ಲಿಗೆ ಆಗಮಿಸುವ ಅತಿಥಿಗಳಿಗೆ ವಾಕಿಂಗ್ ಮಾಡಲು ಪ್ರಯೋಜನವಾಗಲಿ ಎನ್ನುವ ನಿಟ್ಟಿನಲ್ಲಿ ಮಾಡುತ್ತಿರುವ ಉದ್ಯಾನದ ಕಾಮಗಾರಿ ಆರಂಭಗೊಂಡಿದ್ದು, ಲ್ಯಾನ್, ಬಫೆಲ್ಲೋ ಗ್ರಾಸ್, ಮೆಕ್ಸಿಕನ್ ಲಾನ್, ಖರ್ಜೂರ ಸಸಿಗಳನ್ನು ನೆಡಲು ಚಿಂತಿಸಲಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನಸಸಿಗಳನ್ನು ನೆಟ್ಟು ಉದ್ಯಾನವನ್ನು ಸುಂದರಗೊಳಿಸುವ ಯೋಜನೆಯಿದೆ. ಇಲ್ಲಿರುವ ಕೊಳವೆ ಬಾವಿಯಲ್ಲಿ ಬೇಸಗೆ ಸಮಯದಲ್ಲಿ ನೀರಿನ ಸಮಸ್ಯೆ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ಈ ಬಾರಿ ಹೊಸ ಬೋರ್ವೆಲ್ ಕೊರೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಳೆದ ಬಾರಿಯ ನಿಧಿಯಲ್ಲಿ ಉಳಿದ 10 ಲಕ್ಷ ರೂ. ವೆಚ್ಚದಲ್ಲಿ ಅತಿಥಿ ಗೃಹದ ಪ್ರವೇಶದ್ವಾರವನ್ನು ಬದಲಾಯಿಸಲಾಗಿದ್ದು, ಅದು ಅತಿಥಿ ಗೃಹದ ಹೆಸರಿನೊಂದಿಗೆ ಆಕರ್ಷವಾಗಿರಲಿದೆ. ಜತೆಗೆ ಸೆಕ್ಯೂರಿಟಿ ರೂಂ ಇರಲಿದೆ. ಕೆಲವು ತಿಂಗಳ ಹಿಂದೆಯಷ್ಟೇ ಪ್ರವೇಶ ದ್ವಾರದಿಂದ ಅತಿಥಿಗೃಹಕ್ಕೆ ತೆರಳುವ ದಾರಿ ಯುದ್ದಕ್ಕೂ ಎಲ್ಇಡಿ ಲೈಟ್ಗಳನ್ನು ಹಾಕಿಸಲಾಗಿತ್ತು.
15 ಲಕ್ಷ ರೂ. ಪ್ರಸ್ತಾವನೆ
ಹೊರಭಾಗದ ಕಾಮಗಾರಿಗಳು ಮುಗಿದ ಕೂಡಲೇ ಅತಿಥಿಗೃಹದ ಕಾರಿ ಡಾರ್ ಹಾಗೂ ಪ್ರವೇಶ ದ್ವಾರದ
ಲಾಬಿಗೆ ಗ್ರಾನೈಟ್ ಅಳವಡಿಸಲು 15 ಲಕ್ಷ ರೂ. ಪ್ರಸ್ತಾವನೆ ಸಲ್ಲಿಸಲಾಗಿದೆ. ಕೋಣೆಗಳಿಗೆ ಗ್ರಾನೈಟ್ ಅಳವಡಿ
ಸುವ ಕಾರ್ಯ ಈ ಹಿಂದೆಯೇ ಆಗಿದೆ.
ಆವರಣ ಇನ್ನಷ್ಟು ಸುಂದರ
ಅತಿಥಿಗೃಹದ ಮುಂಭಾಗದ ಜಾಗದಲ್ಲಿ ಸುಂದರ ಉದ್ಯಾನ ನಿರ್ಮಾಣ ಮಾಡುವುದು ಹಲವು ಸಮಯದ ಹಿಂದಿನ ಯೋಜನೆಯಾಗಿತ್ತು. ಅತಿಥಿಗಳು ಬಿಡುವಾದಾಗ ವಾಕಿಂಗ್ ಮಾಡಲು ಇದರಿಂದಪ್ರಯೋಜನವಾಗುತ್ತದೆ ಎನ್ನುವ ನಿಟ್ಟಿನಲ್ಲಿ ಪಾಥ್ ವೇ ಮಾಡಲಾಗಿದೆ. ಒಂದೂವರೆ ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ.
ಕಾಂತರಾಜು,
ಲೋಕೋಪಯೋಗಿ ಇಲಾಖೆ
ಅಧೀಕ್ಷಕ ಅಭಿಯಂತರ
ಪ್ರಜ್ಞಾ ಶೆಟ್ಟಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
BBK11: ನಡುರಾತ್ರಿ ದೇವರ ಮುಂದೆ ಒಂಟಿಯಾಗಿ ಕೂತು ಪ್ರಾರ್ಥಿಸಿದ ಚೈತ್ರಾ.!
Ex-US President: ಅಮೆರಿಕದ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ ಆಸ್ಪತ್ರೆಗೆ ದಾಖಲು
Drone Prathap: ಕೃಷಿ ಹೊಂಡದಲ್ಲಿ ಸ್ಫೋಟ ಪ್ರಕರಣ; ಡ್ರೋನ್ ಪ್ರತಾಪ್ ಜಾಮೀನು ಮಂಜೂರು
Revival: ಭಾರತಕ್ಕೆ ಬಾಂಗ್ಲಾದೇಶ ಸೆಡ್ಡು: ಪಾಕಿಸ್ಥಾನ ಜತೆ ವಹಿವಾಟಿಗೆ ಸಜ್ಜು!
Derogatory Term: ಸಿ.ಟಿ.ರವಿ ಪ್ರಕರಣ ಮುಗಿದ ಅಧ್ಯಾಯ, ತನಿಖೆ ಬೇಕಿಲ್ಲ: ಸಭಾಪತಿ ಸ್ಪಷ್ಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.