ಜನರ ಜತೆ ಬೆರೆಯುವುದು ಮಾರುತಿ ಸುಜುಕಿ ಇರಾದೆ


Team Udayavani, Oct 4, 2017, 11:43 AM IST

MARUTI-SUZUKI.jpg

ಬೆಂಗಳೂರು: “ಕಾರುಗಳ ಉತ್ಪಾದನೆ ಮತ್ತು ಮಾರಾಟ ಮಾಡುವುದಷ್ಟೇ ನಮ್ಮ ಉದ್ದೇಶವಲ್ಲ. ಇದರೊಂದಿಗೆ ದೇಶದ ಪ್ರತಿಯೊಂದು ಭಾಗದ ಜನರೊಂದಿಗೆ ಬೆರೆತು ಅವರೊಡನೆ ಸಂಭ್ರಮಾಚರಿಸುವುದು ನಮ್ಮ ಇರಾದೆಯಾಗಿದೆ,’ ಎಂದು ಮಾರುತಿ ಸುಜುಕಿ ಇಂಡಿಯಾ ಸಂಸ್ಥೆಯ ಸಹ-ಉಪಾಧ್ಯಕ್ಷ (ದಕ್ಷಿಣ) ಆನಂದ ಪ್ರಕಾಶ್‌ ತಿಳಿಸಿದರು.

ಇತೀ¤ಚೆಗೆ ಬೆಂಗಳೂರಿನ ಬೆಂಗಾಲಿ ಅಸೋಸಿಯೇಷನ್‌ ಮ್ಯಾನ್ಫೊ ಸಮುದಾಯ ಭವನದಲ್ಲಿ ಆಯೋಜಿಸಿದ್ದ ವಿಶೇಷ ಮಹಾಷ್ಟಮಿ ದುರ್ಗಾ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, “ನಾವು ನವರಾತ್ರಿಯ ದುರ್ಗಾ ಪೂಜೆಯಲ್ಲಷ್ಟೇ ಜನರೊಡನೆ ಬೆರೆಯುವುದಿಲ್ಲ. ಇದರೊಂದಿಗೆ ಓಣಂ, ಗಣೇಶ ಚತುರ್ಥಿ, ಈದ್‌, ಕ್ರಿಸ್‌ಮಸ್‌ ಮುಂತಾದ ಹಬ್ಬದ ದಿನದಂದು ಆಯಾ ಸಮುದಾಯದ ಜನರೊಡನೆ ಬೆರೆತು ಸಂಭ್ರಮಾಚರಿಸುತ್ತೇವೆ. ದೇಶದ ಎಲ್ಲ ಭಾಗದ ಜನತೆಯೊಡನೆ ಸಂಪರ್ಕ ಹೊಂದಿರುತ್ತೇವೆ,’ ಎಂದರು.

ಬ್ರೆಜಾ, ಬಲೇನೋಗೆ ಬೇಡಿಕೆ: ನಂತರ ಮಾರುತಿ ಸುಜುಕಿ ಕಾರುಗಳ ಮಾರಾಟದ ಬಗ್ಗೆ ಮಾತನಾಡಿದ ಅವರು, ಓಣಂ ಹಬ್ಬದ ಸಂದರ್ಭದಲ್ಲಿ ಕೇರಳದಲ್ಲಿ ಅತಿ ಹೆಚ್ಚು ಕಾರುಗಳು ಮಾರಾಟವಾಗಿವೆ. ದಕ್ಷಿಣ ಭಾರತದಲ್ಲಿ ಬ್ರೆಜಾ ಮತ್ತು ಬಲೇನೊ ಅತಿ ಹೆಚ್ಚು ಬೇಡಿಕೆಯುಳ್ಳ ಕಾರುಗಳಾಗಿದ್ದು, ಗ್ರಾಹಕರು ಮೂರು ತಿಂಗಳಿಗೂ ಮುನ್ನ ಬುಕ್ಕಿಂಗ್‌ ಮಾಡಿ ಈ ಕಾರುಗಳನ್ನು ಕೊಳ್ಳುತ್ತಿದ್ದಾರೆ. ಹಾಗಂತ ಡಿಸೈರ್‌, ಸ್ವಿಫ್ಟ್‌, ಆಲ್ಟೋ 800ಗೆ ಬೇಡಿಕೆಯಿಲ್ಲ ಎಂದಲ್ಲ. ಅವುಗಳ ಮಾರಾಟವೂ ಗಣನೀಯವಾಗಿ ಹೆಚ್ಚಳವಾಗಿದೆ,’ ಎಂದು ಆನಂದ ಪ್ರಕಾಶ್‌ ಮಾಹಿತಿ ನೀಡಿದರು.

ತಂತ್ರಜ್ಞಾನ ಅಳವಡಿಕೆಯಲ್ಲಿ ಮುಂದೆ: ಮುಂದಿನ ದಿನಗಳಲ್ಲಿ ದೇಶದ ರಸ್ತೆಗಳಲ್ಲಿ ಎಲೆಕ್ಟ್ರಿಕ್‌ ಮತ್ತು ಹೈಬ್ರಿàಡ್‌ ಕಾರುಗಳು ಓಡಾಡುವುದರ ಬಗ್ಗೆ ಪ್ರಸ್ತಾಪಿಸಿದ ಆನಂದ ಪ್ರಕಾಶ್‌ ಅವರು, “ಯಾವುದೇ ಆಧುನಿಕ ಕಾರು ತಂತ್ರಜ್ಞಾನ ಬಂದರೂ ಅದನ್ನು ಭಾರತದಲ್ಲಿ ಮೊದಲು ಅಳವಡಿಸುವುದು ಮಾರುತಿ ಸುಜುಕಿ ಸಂಸ್ಥೆ. ಆದರೂ ಜನತೆ ಅಷ್ಟು ಬೇಗ ಹೊಸ ಕಾರನ್ನು ಸೀಕರಿಸುವುದಿಲ್ಲ. ಮಾರುತಿ ಸಂಸ್ಥೆ ನೀಡುವ ಗುಣಮಟ್ಟದ ಸೇವೆ, ನಮ್ಮ ಮತ್ತು ಗ್ರಾಹಕರ ನಡುವಿನ ಸಂಪರ್ಕ ಕೊಂಡಿಯನ್ನು ಭದ್ರವಾಗಿಸಿದೆ,’ ಎಂದು ಹೇಳಿದರು.

ಬೆಂಗಾಲಿ ಅಸೋಸಿಯೇಷನ್‌ ಅಧ್ಯಕ್ಷ ದಿಲಿಪ್‌ ಮೈತ್ರ ಮಾತನಾಡಿ, ಪ್ರತಿ ವರ್ಷ ದುರ್ಗಾ ಪೂಜೆ ಆಚರಿಸುವುದು ಕೇವಲ ಬೆಂಗಾಲಿ ಜನತೆಗಾಗಿ ಮಾತ್ರವಲ್ಲ. ಕನ್ನಡಿಗರೂ ಸೇರಿದಂತೆ ಎಲ್ಲ ಭಾಷೆ, ಸಮುದಾಯದ ಜನರು ಕಾರ್ಯಕ್ರಮದಲ್ಲಿ ಭಾಗವಹಿಸಿ ಸಂಭ್ರಮಪಡುತ್ತಾರೆ ಎಂದು ತಿಳಿಸಿದರು.

ಟಾಪ್ ನ್ಯೂಸ್

bjp jds

BJP, JDS ಮೈತ್ರಿ ಕಾಂಗ್ರೆಸ್‌ ಲೋಕಸಭಾ ಸೋಲಿಗೆ ಕಾರಣ!

1-kamakhya

Assam; ಅತೀ ಪುರಾತನ ಶಕ್ತಿ ಕೇಂದ್ರ ಮಾ ಕಾಮಾಖ್ಯಾ ದೇವಾಲಯ

AANE 2

Elephant; ರಾಜ್ಯದಲ್ಲಿ 9 ತಿಂಗಳಲ್ಲಿ 59 ಆನೆ ಸಾ*ವು

Zakir Naik

Zakir Naik ವಿವಾದ; ಎಲ್ಲರೂ ಅಲ್ಲಾಹನನ್ನಷ್ಟೇ ಪ್ರಾರ್ಥಿಸಿದರೆ ಶಾಂತಿ…

HDK (4)

Fear..!; ಲಕ್ಷ ಸಿದ್ದು ಬಂದರೂ ಹೆದರೆನು: ಕುಮಾರಸ್ವಾಮಿ ತಿರುಗೇಟು

1-ahmad

Maharashtra; ಅಹ್ಮದ್‌ನಗರ ಇನ್ನು ಮುಂದೆ ‘ಅಹಿಲ್ಯಾನಗರ’

Donald-Trumph

Iran ಅಣ್ವಸ್ತ್ರ ಕೇಂದ್ರದ ಮೇಲೆ ದಾಳಿ ಮಾಡಿ: ಇಸ್ರೇಲ್‌ಗೆ ಟ್ರಂಪ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

20-ksrtc-dasara

Bengaluru: ಕೆಎಸ್‌ಆರ್‌ಟಿಸಿಯಿಂದ ದಸರಾಗೆ 2000 ಹೆಚ್ಚುವರಿ ಬಸ್‌ ಸಂಚಾರ

19-bbmp

Bengaluru: ಆನ್‌ಲೈನ್‌ನಲ್ಲೇ ಆಸ್ತಿ ಇ-ಖಾತಾ ಪಡೆಯಿರಿ

18-wonderla

Bengaluru: ವಂಡರ್‌ಲಾದಲ್ಲಿ 2 ಟಿಕೆಟ್‌ ಖರೀದಿಸಿದರೆ 1 ಟಿಕೆಟ್‌ ಫ್ರೀ

16-bng

Bengaluru: ದಸರಾ ಬೊಂಬೆಗಳ ಹಬ್ಬದಲ್ಲೂ ಅಯೋಧ್ಯಾ ಶ್ರೀ ರಾಮಮಂದಿರ

14-bng

Bengaluru: 5ನೇ ಮಹಡಿಯಿಂದ ಜಿಗಿದು ಮಹಿಳಾ ಟೆಕಿ ಆತ್ಮಹತ್ಯೆ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

bjp jds

BJP, JDS ಮೈತ್ರಿ ಕಾಂಗ್ರೆಸ್‌ ಲೋಕಸಭಾ ಸೋಲಿಗೆ ಕಾರಣ!

1-kamakhya

Assam; ಅತೀ ಪುರಾತನ ಶಕ್ತಿ ಕೇಂದ್ರ ಮಾ ಕಾಮಾಖ್ಯಾ ದೇವಾಲಯ

AANE 2

Elephant; ರಾಜ್ಯದಲ್ಲಿ 9 ತಿಂಗಳಲ್ಲಿ 59 ಆನೆ ಸಾ*ವು

Zakir Naik

Zakir Naik ವಿವಾದ; ಎಲ್ಲರೂ ಅಲ್ಲಾಹನನ್ನಷ್ಟೇ ಪ್ರಾರ್ಥಿಸಿದರೆ ಶಾಂತಿ…

HDK (4)

Fear..!; ಲಕ್ಷ ಸಿದ್ದು ಬಂದರೂ ಹೆದರೆನು: ಕುಮಾರಸ್ವಾಮಿ ತಿರುಗೇಟು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.