ಕಲ್ಯಾಣ್ ಓಂ ಶಕ್ತಿ ಮಹಿಳಾ ಸಂಸ್ಥೆ: ನವರಾತ್ರಿ ವಿಶೇಷ
Team Udayavani, Oct 4, 2017, 12:17 PM IST
ಕಲ್ಯಾಣ್: ಕಲ್ಯಾಣ್ ಮಹಿಳೆಯರಿಂದ ಸ್ಥಾಪಿತವಾದ ಓಂ ಶಕ್ತಿ ಮಹಿಳಾ ಸಂಸ್ಥೆಯ ವತಿಯಿಂದ ಸೆ. 24ರಂದು ಸಂಜೆ ಕಲ್ಯಾಣ್ ಪಶ್ಚಿಮದ ಹೊಟೇಲ್ ಸಾಗರ್ ಇಂಟನ್ಯಾಷನಲ್ ಇದರ ಟೆರೇಸ್ ಸಭಾಂಗಣದಲ್ಲಿ ನವರಾತ್ರಿಯ ಅಂಗವಾಗಿ ಮಾತಾ ಕೀ ಚೌಕ್, ಅರಸಿನ ಕುಂಕುಮ ಮತ್ತು ಗರ್ಭಾ ನೃತ್ಯ ಕಾರ್ಯಕ್ರಮವು ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ನಡೆಯಿತು.
ವಿವಿಧ ಪೂಜಾ ಕೈಂಕರ್ಯ ಗಳನ್ನು ಗೋಪಾಲಕೃಷ್ಣ ಶೆಟ್ಟಿ ಮತ್ತು ಶಕಿಲಾ ಜಿ. ಶೆಟ್ಟಿ ದಂಪತಿ ನೆರವೇರಿಸಿದರು. ಸುಮಾರು 500 ಕ್ಕಿಂತಲೂ ಅಧಿಕ ಮಹಿಳೆಯರು, ಮಕ್ಕಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ತೀರ್ಥಪ್ರಸಾದ ವಿತರಣೆಯು ಅನಂತರ ಅರಸಿನ ಕುಂಕುಮ, ಗರ್ಭಾ ನೃತ್ಯ ಕಾರ್ಯಕ್ರಮ ನಡೆಯಿತು. ಅರ್ಥವತ್ತಾಗಿ ಹಾಗೂ ಶಿಸ್ತು ಬದ್ಧವಾಗಿ ನಡೆದ ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಪ್ರಸಾದ ರೂಪದಲ್ಲಿ ಅನ್ನ ಸಂತರ್ಪಣೆಯ ವ್ಯವಸ್ಥೆಯನ್ನು ಮಾಡಲಾಗಿತ್ತು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷೆ ಚಿತ್ರಾ ಆರ್. ಶೆಟ್ಟಿ, ಆಸಾವರಿ ಎಸ್. ಹೆಗ್ಡೆ, ಶಾಲಿನಿ ಎಸ್. ಶೆಟ್ಟಿ, ಸುರೇಖಾ ಎಚ್. ಶೆಟ್ಟಿ, ಶಶಿ ಪ್ರವೀಣ್ ಶೆಟ್ಟಿ, ಯಶೋಧಾ ಆರ್. ಶೆಟ್ಟಿ, ಯಶೋದಾ ಎಸ್. ಶೆಟ್ಟಿ, ಜಯಶ್ರೀ ಶೆಟ್ಟಿ, ಸುಚಿತಾ ಜೆ. ಶೆಟ್ಟಿ, ಉಷಾ ಎ. ಶೆಟ್ಟಿ, ಜ್ಯೋತಿ ಎಸ್. ಶೆಟ್ಟಿ, ಜಯಂತಿ ಜಿ. ಹೆಗ್ಡೆ ಹಾಗೂ ಸಂಸ್ಥೆಯ ಇತರ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು ಪಾಲ್ಗೊಂಡು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desiswara: ನ್ಯೂಯಾರ್ಕ್ ಸರಕಾರದಿಂದ ಭರ್ಜರಿ ದೀಪಾವಳಿ ಆಚರಣೆ
Desiswara: ಜಾಗತಿಕ ಬೆಳಕಿನ ಹಬ್ಬ ದೀಪಾವಳಿ – ಬೆಳಕೆಂದರೆ ಬರಿಯ ಬೆಳಕಲ್ಲ…
Desiswara: ಕನ್ನಡ ಉಳಿವಿಗೆ ಜವಾಬ್ದಾರಿಯುತ ನಡೆ ನಮ್ಮದಾಗಲಿ
Kannada Alphanbets: “ಕ’ ಕಾರದಲ್ಲಿನ ವಿಶೇಷ: ಕನ್ನಡ ಅಕ್ಷರಮಾಲೆಯಲ್ಲಿನ “ಕ’ ಕಾರ ವೈಭವ
ನ.9: ವಿಶ್ವ ಕನ್ನಡ ಹಬ್ಬ: ಈ ಬಾರಿ ಸಿಂಗಾಪುರದಲ್ಲಿ ರಂಗೇರಲಿರುವ ಸಂಭ್ರಮ
MUST WATCH
ಹೊಸ ಸೇರ್ಪಡೆ
Bharat Brand: ಭಾರತ್ ಬ್ರ್ಯಾಂಡ್-2ಗೆ ಚಾಲನೆ: 30ಕ್ಕೆ ಗೋಧಿ ಹಿಟ್ಟು, ಕೆ.ಜಿ.ಅಕ್ಕಿಗೆ 34
US Polls; ಟ್ರಂಪ್‌ಗೆ ಗೆಲುವು: ಭವಿಷ್ಯ ನುಡಿದ ಪ್ರಸಿದ್ಧ ನೀರಾನೆ ಮೂಡೆಂಗ್
Award: ಪ್ರೊ.ತಾಳ್ತಜೆ ವಸಂತ ಕುಮಾರ್‌ಗೆ ಕನಕ ಗೌರವ ಪ್ರಶಸ್ತಿ
Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ
Attack On Car: ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ: ಕಸಾಪ, ಬ್ರಾಹ್ಮಣ ಮಹಾಸಭಾ ಖಂಡನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.