ಗುಜರಾತ್; ಮೀಸೆ ಬಿಟ್ಟಿದ್ದಕ್ಕೆ ದಲಿತ ಯುವಕನಿಗೆ ಚೂರಿ ಇರಿತ!
Team Udayavani, Oct 4, 2017, 1:36 PM IST
ಅಹಮದಾಬಾದ್: ಶಾಲೆಯಲ್ಲಿ ಪರೀಕ್ಷೆ ಮುಗಿಸಿ ಮನೆಗೆ ವಾಪಸ್ ಆಗುತ್ತಿದ್ದ 17 ವರ್ಷದ ದಲಿತ ಯುವಕನ ಮೇಲೆ ಅಪರಿಚಿತ ವ್ಯಕ್ತಿಗಳು ಚೂರಿಯಿಂದ ಇರಿದ ಘಟನೆ ಗುಜರಾತ್ ನ ಗಾಂಧಿನಗರದಲ್ಲಿ ಮಂಗಳವಾರ ಸಂಜೆ ನಡೆದಿದ್ದು, ಕಳೆದ ಒಂದು ವಾರದಲ್ಲಿ ಮೂವರು ದಲಿತ ಯುವಕರ ಮೇಲೆ ದಾಳಿ ನಡೆಸಲಾಗಿದೆ. ದಾಳಿಗೆ ಕಾರಣ ಅವರು ಮೀಸೆ ಬಿಟ್ಟಿರುವುದು!
ದೇವಾಲಯದಲ್ಲಿ ಗಾರ್ಭಾ ನೃತ್ಯವನ್ನು ವೀಕ್ಷಿಸಿದ್ದ ದಲಿತ ಯುವಕ ಆನಂದ್ ಎಂಬಾತನನ್ನು ಮೇಲ್ಜಾತಿ ಯುವಕರು ಬೋರ್ಸಾಡ್ ಗ್ರಾಮದಲ್ಲಿ ಹತ್ಯೆಗೈದಿದ್ದರು. ಈ ಘಟನೆ ನಡೆದ 2ದಿನದ ಬಳಿಕ ಮೂರನೇ ದಾಳಿ ನಡೆದಿದೆ. ಈ ಹಿನ್ನೆಲೆಯಲ್ಲಿ ದಲಿತರ ಮೇಲೆ ನಡೆಯುತ್ತಿರುವ ದಾಳಿ, ಹತ್ಯೆಯನ್ನು ಖಂಡಿಸಿ ಸನಂದ್ ಗ್ರಾಮದ ಸುಮಾರು 300 ದಲಿತ ಯುವಕರು ಕಿರೀಟ ಹಾಗೂ ದಪ್ಪ ಮೀಸೆಯ ಲೋಗೋವನ್ನು ಹಾಕಿ ಮಿಸ್ಟರ್ ದಲಿತ್ ಎಂಬ ಅಡಿ ಬರಹ ಹಾಕಿ ವಾಟ್ಸ್ ಅಪ್ ಗ್ರೂಪ್ ನಲ್ಲಿ ಡಿಸ್ ಪ್ಲೇ ಪಿಕ್ಚರ್ ಆಗಿ ಬಳಸಿಕೊಂಡಿದ್ದರು.
ಇಂಡಿಯನ್ ಎಕ್ಸ್ ಪ್ರೆಸ್ ವರದಿ ಪ್ರಕಾರ ಸೆಪ್ಟೆಂಬರ್ 25ರಂದು ಮೀಸೆಯನ್ನು ಬೆಳೆಸಿದ ಪಿಯುಶ್ ಪಾರ್ಮಾರ್ (24) ಎಂಬ ಯುವಕನ ಮೇಲೆ ದಾಳಿ ನಡೆಸಲಾಗಿತ್ತು, ಸೆಪ್ಟೆಂಬರ್ 29ರಂದು ಕುನಾಲ್ ಮಹೇರಿಯಾ ಎಂಬ ಯುವಕನ ಮೇಲೂ ದಾಳಿ ನಡೆಸಿದ್ದರು. ಎರಡೂ ಪ್ರಕರಣಗಳಲ್ಲಿ ಎಫ್ಐಆರ್ ದಾಖಲಾಗಿದೆ ಎಂದು ವರದಿ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Divorce: 29 ವರ್ಷಗಳ ದಾಂಪತ್ಯಕ್ಕೆ ಅಂತ್ಯ ಹಾಡಿದ ಎ.ಆರ್.ರೆಹಮಾನ್
ಮಣಿಪುರವನ್ನು ರಕ್ಷಿಸಿ: ರಾಷ್ಟ್ರಪತಿಗೆ ಖರ್ಗೆ ಪತ್ರ
Chennai: ಕೃಷ್ಣಗೆ ಎಂ.ಎಸ್.ಸುಬ್ಬುಲಕ್ಷ್ಮಿಪ್ರಶಸ್ತಿ ನೀಡಿಕೆಗೆ ಮದ್ರಾಸ್ ಹೈಕೋರ್ಟ್ ತಡೆ
Savarkar defamation case:: ಡಿ.2ರಂದು ಖುದ್ದು ಹಾಜರಾಗಲು ರಾಹುಲ್ಗೆ ಆದೇಶ
Flight: ಭಾರತ, ಚೀನಾ ನಡುವೆ ನೇರ ವಿಮಾನಯಾನ ಸೌಲಭ್ಯ ಪುನಾರಂಭ?
MUST WATCH
ಹೊಸ ಸೇರ್ಪಡೆ
Puttur: ಕಾಸರಗೋಡು ಮೂಲದ ಅಪ್ರಾಪ್ತೆಗೆ ಲೈಂಗಿಕ ಕಿರುಕುಳ; ಪೋಕ್ಸೊ ಕೇಸು
Bengaluru: ಇವಿ ಬೈಕ್ ಶೋ ರೂಮ್ನಲ್ಲಿ ಬೆಂಕಿ: ಯುವತಿ ದಾರುಣ ಸಾ*ವು
Siddapura: ಕಂಟೇನರ್ ಲಾರಿ ಒಳರಸ್ತೆಗೆ ಬರದಿದ್ದಕ್ಕೆ ಚಾಲಕನಿಗೆ ಹಲ್ಲೆ
Naxal leader Vikram Gowda Encounter: ಕುದುರೆಮುಖ: ಶೋಧ ಕಾರ್ಯ ಚುರುಕು
Naxal: ಎನ್ಕೌಂಟರ್ಗೆ ಜಾಲತಾಣದಲ್ಲಿ ಮಾಜಿ ನಕ್ಸಲ್ ಪತ್ನಿ ಆಕ್ರೋಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.