ಮೂವರು ವಿಜ್ಞಾನಿಗಳಿಗೆ ರಸಾಯನ ನೊಬೆಲ್
Team Udayavani, Oct 5, 2017, 6:40 AM IST
ಸ್ಟಾಕ್ಹೋಂ: ಅತ್ಯಂತ ಸೂಕ್ಷ್ಮವಾದ ಹಾಗೂ ಹೆಪ್ಪುಗಟ್ಟಿದ ಅಣುಗಳ ಚಿತ್ರವನ್ನು ಸುಲಭವಾಗಿ ಸೆರೆಹಿಡಿಯಬಲ್ಲಂಥ ಕ್ರಯೋ-ಎಲೆಕ್ಟ್ರಾನ್ ಮೈಕ್ರೋಸ್ಕೋಪಿಯನ್ನು ಕಂಡುಹಿಡಿದ ಮೂವರು ವಿಜ್ಞಾನಿಗಳು ಪ್ರಸಕ್ತ ಸಾಲಿನ ರಸಾಯನ ನೊಬೆಲ್ಗೆ ಪಾತ್ರರಾಗಿದ್ದಾರೆ.
ಸ್ವಿಜರ್ಲೆಂಡ್ನ ಜಾಕ್ಲೆಸ್ ಡುಬೋಚೆಟ್, ಜರ್ಮನಿಯ ಜೋಷಿಮ್ ಫ್ರಾಂಕ್ ಮತ್ತು ಯು.ಕೆ.ಯ ರಿಚರ್ಡ್ ಹೆಂಡರ್ಸನ್ ಅವರೇ ಈ ಗೌರವಕ್ಕೆ ಪಾತ್ರರಾದವರು. ಈ ವಿಜ್ಞಾನಿಗಳ ತಂಡ ಮಾಡಿರುವ ಸಂಶೋಧನೆಯಿಂದಾಗಿ, ಈಗ ಜೈವಿಕ ಅಣುಗಳು ಚಲನೆಯ ಸ್ಥಿತಿಯಲ್ಲಿರುವಾಗಲೇ, ಅವುಗಳನ್ನು ಹೆಪ್ಪುಗಟ್ಟಿಸಿ, ಅವುಗಳ ಚಿತ್ರವನ್ನು ಸೆರೆಹಿಡಿಯಬಹುದಾಗಿದೆ. ಇದು ಶಾರೀರಿಕ ರಸಾಯನ ಮತ್ತು ಫಾರ್ಮಾಸುÂಟಿಕಲ್ನ ಅಭಿವೃದ್ಧಿಗೂ ನೆರವಾಗಲಿದೆ ಎಂದು ರಸಾಯನ ನೊಬೆಲ್ ಸಮಿತಿ ಹೇಳಿದೆ.
ಬ್ರೆಜಿಲ್ನಲ್ಲಿ ಝಿಕಾ ವೈರಸ್ ನವಜಾತ ಶಿಶುಗಳ ಮೆದುಳಿನ ಮೇಲೆ ಪರಿಣಾಮ ಬೀರುತ್ತಿದೆ ಎಂಬ ಅನುಮಾನ ವ್ಯಕ್ತವಾದಾಗ, ಆ ವೈರಸ್ ಅನ್ನು ಪರೀಕ್ಷಿಸಲು ವಿಜ್ಞಾನಿಗಳು ಇದೇ ಎಲೆಕ್ಟ್ರಾನ್ ಮೈಕ್ರೋಸ್ಕೋಪಿ ತಂತ್ರಜ್ಞಾನದ ಮೊರೆ ಹೋದರು. ಈ ತಂತ್ರಜ್ಞಾನವು ಜೈವಿಕ ರಸಾಯನಶಾಸ್ತ್ರವನ್ನು ಹೊಸ ಯುಗದತ್ತ ಕೊಂಡೊಯ್ಯಿತು ಎಂದೂ ಸಮಿತಿ ಅಭಿಪ್ರಾಯಪಟ್ಟಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Trump ಗೆಲ್ಲುತ್ತಿದ್ದಂತೆ ಅಮೆರಿಕ ತೊರೆಯಲು ಜನರಿಂದ ಭರದ ಸಿದ್ಧತೆ
Canada; ನಮ್ಮಲ್ಲಿರುವ ಎಲ್ಲ ಹಿಂದೂಗಳು ಮೋದಿ ಬೆಂಬಲಿಗರಲ್ಲ: ಟ್ರಾಡೋ
Netherlands: ಇಸ್ರೇಲ್ ಫುಟ್ಬಾಲ್ ಅಭಿಮಾನಿಗಳ ಮೇಲೆ ದಿಢೀರ್ ದಾಳಿ!
Social Media: ಈ ದೇಶದಲ್ಲಿ 16 ವರ್ಷದೊಳಗಿನವರು ಇನ್ಸ್ಟಾಗ್ರಾಮ್, ಫೇಸ್ಬುಕ್ ಬಳಸುವಂತಿಲ್ಲ!
Sydney; ಮಿಲಿಸೆಕೆಂಡಲ್ಲೇ ವಾಸನೆ ಪತ್ತೆ ಹಚ್ಚುವ ರೋಬೋಟ್ ಸೃಷ್ಟಿ!
MUST WATCH
ಹೊಸ ಸೇರ್ಪಡೆ
Mysuru:’ಕರ್ನಾಟದಲ್ಲಿ “ಗ್ಯಾರಂಟಿ’ ಹೆಸರಲ್ಲಿ ಲೂಟಿ, ಮಹಾರಾಷ್ಟ್ರದಲ್ಲಿ ನೀವು ಘೋಷಿಸಬೇಡಿ’
By Election: ಚನ್ನಪಟ್ಟಣದಲ್ಲಿ ಎಚ್.ಡಿ.ದೇವೇಗೌಡ Vs ಡಿ.ಕೆ.ಶಿವಕುಮಾರ್ ಮೇಕೆದಾಟು ಜಟಾಪಟಿ
Active Politics: ನಾನು ಎಂದೂ ಮಂಡ್ಯ ಕ್ಷೇತ್ರ ಬಿಡುವುದಿಲ್ಲ: ಮಾಜಿ ಸಂಸದೆ ಸುಮಲತಾ
Golden Jubliee: ಪತ್ರಿಕೆಯ ಓದು ಪ್ರತಿಯೊಬ್ಬರಿಗೂ ಆಹಾ! ಎನಿಸುವಂತಿರಲಿ
By Election: ಸಿದ್ದರಾಮಯ್ಯ ಸರಕಾರ ಕಿತ್ತೊಗೆಯುವವರೆಗೂ ಹೋರಾಟ ನಿಲ್ಲಲ್ಲ: ಎಚ್.ಡಿ.ದೇವೇಗೌಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.