ವಿದೇಶಗಳಲ್ಲಿ ತಾಜ್ ಸುದ್ದಿ
Team Udayavani, Oct 5, 2017, 7:00 AM IST
ನವದೆಹಲಿ: ಪ್ರೀತಿಯ ಸಂಕೇತ ಎಂದೇ ಬಣ್ಣಿಸಲಾಗುವ ತಾಜ್ ಮಹಲ್ ನಿರ್ಲಕ್ಷ್ಯ ಕ್ಕೊಳಗಾಗಿದ್ದು, ಪರಿಣಾಮ ತಾಜ್ಮಹಲ್ಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆಯಲ್ಲಿ ಸಾಕಷ್ಟು ಇಳಿಮುಖವೂ ಆಗಿದೆ ಎಂದು ವಿದೇಶಿ ಮಾಧ್ಯಮಗಳು ಹೇಳುತ್ತಿವೆ.
ಮುಸ್ಲಿಂ ಇತಿಹಾಸ ಇರುವ ಕಾರಣಕ್ಕಾಗಿ ತಾಜ್ ಮಹಲ್ ಅನ್ನು ನಿರ್ಲಕ್ಷಿಸಲಾಗುತ್ತಿದೆ. ತಾಜ್ಮಹಲ್ ಇರುವ ಉತ್ತರ ಪ್ರದೇಶ ಆಡಳಿತ ಈಗ ಹಿಂದುತ್ವ ಪ್ರತಿಪಾದಕರ ಕೈಯಲ್ಲಿದೆ. ಸರ್ಕಾರವು ವಿಶ್ವ ಪರಂಪರೆಯ ತಾಜ್ ನಿರ್ವಹಣೆ ಹಾಗೂ ಅಭಿವೃದ್ಧಿಗೆ ಹೆಚ್ಚಿನ ಒಲವು ತೋರುತ್ತಿಲ್ಲ. ಅನುದಾನವೂ ಸರಿಯಾಗಿ ಬಿಡುಗಡೆಯಾಗುತ್ತಿಲ್ಲ ಎಂದು ಅಲ್ಲಿನ ಮಾಧ್ಯಮಗಳು ಆರೋಪಿಸಿವೆ.
ರಾಜ್ಯಾಡಳಿತ ಅಪ್ಪಟ ಹಿಂದೂ ಪ್ರತಿಪಾದಕ ಯೋಗಿ ಆದಿತ್ಯನಾಥ್ ಕೈಯಲ್ಲಿದ್ದು, “ಇತ್ತೀ ಚೆಗಷ್ಟೆ ಅವರು ರ್ಯಾಲಿಯೊಂದರಲ್ಲಿ ಪಾಲ್ಗೊಂಡು ತಾಜ್ಮಹಲ್ ಬಗ್ಗೆ ಮಾತ ನಾಡುತ್ತ, ಅದು ಭಾರತೀಯ ಸಂಸ್ಕೃತಿಯನ್ನು ಪ್ರತಿಬಿಂಬಿಸುವುದಿಲ್ಲ’ ಎಂದು ಹೇಳಿದ್ದರು. ಈ ಬೆನ್ನಿಗೇ, ಕಳೆದ ವಾರ ರಾಜ್ಯ ಪ್ರವಾಸೋದ್ಯಮ ಮುದ್ರಿಸಿದ ಹೊಸ ಕರಪತ್ರದಿಂದಲೂ ಪ್ರೇಮಸೌಧದ ಹೆಸರನ್ನು ಕೈಬಿಡಲಾಗಿದೆ. ಇದು ನಿರ್ಲಕ್ಷಿಸುತ್ತಿರುವುದಕ್ಕೆ ದೊಡ್ಡ ಸಾಕ್ಷಿಯಾಗಿದೆ ಎಂದಿವೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ವಕ್ತಾರ ಅಭಿಷೇಕ್ ಮನು ಸಿಂ Ì, “ಪ್ರವಾಸೋದ್ಯಮದ ಅಧಿಕೃತ ಕರಪತ್ರದಲ್ಲಿ ತಾಜ್ಮಹಲ್ ಕೈಬಿಟ್ಟರೆ ಅದು ಹಾಸ್ಯಾಸ್ಪದ ಹಾಗೂ ದುರಂತದ ಸಂಗತಿ. ಹ್ಯಾಮ್ಲೆಟ್ ಇಲ್ಲದೆ, ಡೆನ್ಮಾರ್ಕ್ನ ರಾಜ ಎಂದು ಹೇಳಿದಂತೆ’ ಎಂದು ಟೀಕಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
PAN 2.0 ಗೆ ಸಂಪುಟ ಅನುಮೋದನೆ: ಏನಿದು ಪ್ಯಾನ್ 2.0? ಇದರ ವೈಶಿಷ್ಟ್ಯವೇನು?
Essar Group: ಎಸ್ಸಾರ್ ಗ್ರೂಪ್ ನ ಸಹ ಸಂಸ್ಥಾಪಕ ಶಶಿ ರುಯಿಯಾ ನಿಧನ
RBI ಗವರ್ನರ್ ಶಕ್ತಿಕಾಂತ್ ದಾಸ್ ಚೆನ್ನೈ ಆಸ್ಪತ್ರೆಗೆ ದಾಖಲು; ಶೀಘ್ರವೇ ಡಿಸ್ ಚಾರ್ಜ್
26/11 Te*rror Attack: ಕರಾಳ ನೆನಪಿಗೆ 16 ವರ್ಷ-ಆರು ಧೀರ ಹೀರೋಗಳು..ಹುತಾತ್ಮರಿಗೆ ಗೌರವ
Maharashtra: ಮುಖ್ಯಮಂತ್ರಿ ಸ್ಥಾನಕ್ಕೆ ಏಕನಾಥ್ ಶಿಂದೆ ರಾಜೀನಾಮೆ… ಮುಂದಿನ ಸಿಎಂ ಯಾರು?
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.