ಕುರ್ಲಾ ಪೂರ್ವದ ಬಂಟರ ಭವನಕ್ಕೆ ಪಲಿಮಾರು ಶ್ರೀಭೇಟಿ
Team Udayavani, Oct 5, 2017, 12:21 PM IST
ಮುಂಬಯಿ: ಬಂಟ ಸಮಾಜ ಹೇಗಿದೆ ಎಂಬುದನ್ನು ಕಾಣಬೇಕಾದರೆ ಮುಂಬಯಿ ಕುರ್ಲಾದಲ್ಲಿರುವ ಬಂಟರ ಭವನಕ್ಕೆ ಬಂದಾಗ ಗೋಚರಕ್ಕೆ ಬರುತ್ತದೆ. ಬಂಟರು ಸಾಹಸಿಗಳು, ಶ್ರಮ ಜೀವಿಗಳ ಜತೆಗೆ ಹೃದಯವಂತರೂ ಆಗಿದ್ದಾರೆ ಎಂಬುದನ್ನು ಇಡೀ ವಿಶ್ವಕ್ಕೆ ತೋರಿಸಿಕೊಟ್ಟಿದ್ದಾರೆ ಎಂದು ಉಡುಪಿ ಶ್ರೀ ಪಲಿಮಾರು ಮಠಾಧೀಶ ಶ್ರೀ ವಿದ್ಯಾಧೀಶತೀರ್ಥ ಸ್ವಾಮೀಜಿ ಅವರು ನುಡಿದರು.
ಅ.3ರಂದು ಸಂಜೆ ಕುರ್ಲಾ ಪೂರ್ವದ ಬಂಟರ ಭವನದ ಆವರಣದಲ್ಲಿರುವ ಶ್ರೀ ಮಹಾವಿಷ್ಣು ದೇವಸ್ಥಾನಕ್ಕೆ ಭೇಟಿಯಿತ್ತು, ದೇವರ ದರ್ಶನ ಹಾಗೂ ಪೂಜೆಯಲ್ಲಿ ಭಾಗಿಯಾಗಿ ಅನಂತರ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಶ್ರೀಗಳು, ತುಳುನಾಡಿನಿಂದ ಹೊರನಾಡ ಮುಂಬಯಿಗೆ ಬರಿಗೈ ಯಲ್ಲಿ ಬಂದ ಎಲ್ಲರೂ ಇಂದು ತಮ್ಮ ಪರಿಶ್ರಮದಿಂದ ಬೊಗಸೆ ತುಂಬಾ ಗಳಿಸಿ ಸಂತೃಪ್ತ ಜೀವನ ನಡೆಸುತ್ತಿದ್ದಾರೆ. ನಾವು ನಂಬಿರುವ ದೇವರ ಬಗ್ಗೆ ಅಚಲ ಶ್ರದ್ಧೆ ಭಕ್ತಿಯಿರುವುದರಿಂದ ದೇವರು ನಮ್ಮನ್ನು ಕಾಪಾಡಿದ್ದಾನೆ. ಜೀವನದಲ್ಲಿ ಪ್ರಾಮಾಣಿಕ ಪರಿಶ್ರಮದ ಪ್ರಯತ್ನ ಮತ್ತು ದೇವರ ಬಗ್ಗೆ ಸದಾ ನಂಬಿಕೆ ಈ ಎರಡು ಸಮನ್ವಯಗಳಿದ್ದರೆ, ಯಶಸ್ಸು ನಮ್ಮದಾಗುವುದರಲ್ಲಿ ಸಂಶಯವಿಲ್ಲ. ಉಡುಪಿ ಶ್ರೀಕೃಷ್ಣ ಮಠದಲ್ಲಿ ಶ್ರೀಕೃಷ್ಣ ದೇವರಿಗೆ ಬಂಗಾರದ ಗೋಪುರವನ್ನು ನಿರ್ಮಿಸುವ ಯೋಜನೆ ಹಾಕಿಕೊಳ್ಳ ಲಾಗಿದ್ದು, ಎಂದೆಂದಿಗೂ ಶಾಶ್ವತವಾಗಲಿರುವ ಬಂಗಾರದ ಗೋಪುರ ಕಾರ್ಯಕ್ಕೆ ಭಕ್ತಾಭಿಮಾನಿಗಳು ಎಲ್ಲ ರೀತಿಯಿಂದ ಸಹಕರಿಸಬೇಕು. ಅನ್ನಬ್ರಹ್ಮ ಕ್ಷೇತ್ರ ಎಂದೇ ಪ್ರಸಿದ್ಧವಾಗಿರುವ ಶ್ರೀ ಕೃಷ್ಣನ ಸನ್ನಿಧಾನದಲ್ಲಿ ಸುಮಾರು 750 ವರ್ಷಗಳ ಹಿಂದಿನಿಂದಲೂ ಅನ್ನದಾನ ನಡೆಯುತ್ತಿರುವುದು ಇದೊಂದು ದೊಡ್ಡ ಪವಾಡವೆಂದೆ ಹೇಳಬಹುದು. ಶ್ರೀಕ್ಷೇತ್ರದ ಮುಂದಿನ ಯೋಜನೆಗಳಿಗೆ ಎಲ್ಲರ ಸಹಕಾರ, ಪ್ರೋತ್ಸಾಹ ಸದಾಯಿರಲಿ ಎಂದು ನುಡಿದರು.
ಬಂಟರ ಸಂಘ ಮುಂಬಯಿ ಅಧ್ಯಕ್ಷ ಪ್ರಭಾಕರ ಎಲ್. ಶೆಟ್ಟಿ ಅವರು ಮಾತನಾಡಿ, ಶ್ರೀ ವಿದ್ಯಾಧೀಶತೀರ್ಥ ಸ್ವಾಮೀಜಿ ಅವರ ಸಾಮಾಜಿಕ ಕಳಕಳಿ ಅನನ್ಯವಾಗಿದೆ. ಮುಂದಿನ ಜನವರಿ 18ರಂದು ಪರ್ಯಾಯ ಪೀಠವನ್ನು ಅಲಂಕರಿಸಲಿರುವ ಸ್ವಾಮೀಜಿ ಅವರ ಮಹತ್ಕಾರ್ಯಕ್ಕೆ ಎಲ್ಲರೂ ಸಹಕಾರ ನೀಡುವ ಅಗತ್ಯವಿದೆ ಎಂದರು.
ಶ್ರೀಕೃಷ್ಣ ಮಠದೊಂದಿಗಿನ ಅವಿನಾಭಾವ ಸಂಬಂಧ ಹೊಂದಿರುವ ಡಾ| ಸೀತಾ ರಾಮ ಆಳ್ವ ಅವರು ಪ್ರಾಸ್ತಾ ವಿಕವಾಗಿ ಮಾತನಾಡಿ, ದಕ್ಷಿಣ ಕನ್ನಡದಲ್ಲಿ ದೇವಸ್ಥಾನ- ದೈವಸ್ಥಾನಗಳ ಅಭಿವೃದ್ಧಿಗೆ ಹೊರನಾಡ ಬಂಟರ ಕೊಡುಗೆ ಬಹು ದೊಡ್ಡದಾಗಿದೆ. ಪಲಿಮಾರು ವಿದ್ಯಾಧೀಶ ತೀರ್ಥ ಸ್ವಾಮೀಜಿ ಅವರ ಚಿಂತನೆಯಂತೆ ಉಡುಪಿ ಶ್ರೀಕೃಷ್ಣ ಮಠವು ಸುಮಾರು 32 ಶಾಲೆಗಳ ವಿದ್ಯಾರ್ಥಿಗಳಿಗೆ ಅನ್ನದಾನ ಮಾಡುತ್ತಿರುವುದು, ಶ್ರೀ ಕೃಷ್ಣನಿಗೆ ವಜ್ರದ ಕವಚ ಧಾರಣೆಯಾಗಿರುವುದು ಸ್ವಾಮೀಜಿ ಅವರ ಮಹತ್ವದ ಯೋಜನೆಗಳಾಗಿವೆ. ಮುಂದೆ ಶ್ರೀಕೃಷ್ಣನ ಗೋಪುರಕ್ಕೆ ಬಂಗಾರದ ಕವಚ ಮಾಡುವ ಸಂಕಲ್ಪ ಹೊತ್ತಿರುವ ಸ್ವಾಮೀಜಿ ಬಯಕೆ ಈಡೇರಲೆಂದು ಹಾರೈಸಿ ಸಹಕಾರ ಕೋರಿದರು.
ವೇದಿಕೆಯಲ್ಲಿ ಬಂಟರ ಸಂಘಗಳ ಒಕ್ಕೂಟದ ಉಪಾಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಸಂಘದ ಉಪಾಧ್ಯಕ್ಷ ಪದ್ಮನಾಭ ಎಸ್. ಪಯ್ಯಡೆ, ಗೌರವ ಪ್ರಧಾನ ಕಾರ್ಯದರ್ಶಿ ಉಳೂ¤ರು ಮೋಹನ್‌ದಾಸ್ ಶೆಟ್ಟಿ, ಗೌರವ ಕೋಶಾಧಿಕಾರಿ ಸಿಎ ಐ. ಆರ್. ಶೆಟ್ಟಿ, ಜತೆ ಕಾರ್ಯದರ್ಶಿ ಕಿಶೋರ್ ಕುಮಾರ್ ಕುತ್ಯಾರ್, ಜತೆ ಕೋಶಾಧಿಕಾರಿ ಮಹೇಶ್ ಎಸ್. ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಲತಾ ಜೆ. ಶೆಟ್ಟಿ, ಜ್ಞಾನ ಮಂದಿರ ಸಮಿತಿಯ ಕಾರ್ಯಾಧ್ಯಕ್ಷ ಬೊಳ್ನಾಡು ಚಂದ್ರಹಾಸ ಎಂ. ರೈ ಅವರು ಉಪಸ್ಥಿತರಿದ್ದರು.
ಕಾರ್ಯಕ್ರಮಕ್ಕೆ ಮುನ್ನ ಸ್ವಾಮೀಜಿಯವರನ್ನು ಭವ್ಯ ಮೆರವಣಿಗೆ ಯಲ್ಲಿ ದೇವಸ್ಥಾನಕ್ಕೆ ಕರೆತರಲಾಯಿತು. ಅಧ್ಯಕ್ಷ ಪ್ರಭಾಕರ ಎಲ್. ಶೆಟ್ಟಿ ಶ್ರೀಗಳಿಗೆ ತುಳಸಿ ಹಾರ ಹಾಕಿ ಸ್ವಾಗತಿಸಿದರು. ಇದೇ ಸಂದರ್ಭದಲ್ಲಿ ಸ್ವಾಮೀಜಿ ಅವರನ್ನು ಶಾಲು ಹೊದೆಸಿ, ಬಂಟರ ಸಂಘದ ವತಿಯಿಂದ ಅವರ ಬಂಗಾರದ ಯೋಜನೆಗಾಗಿ ದೇಣಿಗೆಯನ್ನಿತ್ತು ಗೌರವಿಸಲಾಯಿತು.
ಸಂಘದ ಪೊವಾಯಿ ಶಿಕ್ಷಣ ಸಮಿತಿಯ ಕಾರ್ಯದರ್ಶಿ ನಿತ್ಯಾನಂದ ಹೆಗ್ಡೆ, ಸುನೀತಾ ಎನ್. ಹೆಗ್ಡೆ ದಂಪತಿ ಶ್ರೀ ಮಹಾವಿಷ್ಣು ದೇವಸ್ಥಾನದ ಹೆಸರಿನಲ್ಲಿ ಬಂಗಾರದ ಕೊಡುಗೆಯನ್ನು ಸ್ವಾಮೀಜಿ ಅವರಿಗೆ ಅರ್ಪಿಸಿದರು. ಸಂಘದ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು, ವಿವಿಧ ಉಪಸಮಿತಿಗಳು, ಪ್ರಾದೇಶಿಕ ಸಮಿತಿಗಳ ಪದಾಧಿಕಾರಿಗಳು, ಸದಸ್ಯರು, ಮಹಿಳಾ ವಿಭಾಗದವರು, ವಿವಿಧ ಸಂಘಟನೆಗಳ ಪ್ರತಿನಿಧಿಗಳು, ಭಕ್ತರು ಪಾಲ್ಗೊಂಡಿದ್ದರು.
ಚಿತ್ರ-ವರದಿ : ಪ್ರೇಮನಾಥ್ ಶೆಟ್ಟಿ ಮುಂಡ್ಕೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desi Swara: ಲಕ್ಸಂಬರ್ಗ್ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ
ಇಂಗ್ಲೆಂಡ್‌ನ ರಾದರಮ್ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’
Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್
MUST WATCH
ಹೊಸ ಸೇರ್ಪಡೆ
Desi Swara: ಲಕ್ಸಂಬರ್ಗ್ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ
Poll code violations ; ಖರ್ಗೆ, ನಡ್ಡಾ ಪ್ರತಿಕ್ರಿಯೆ ಕೇಳಿದ ಚುನಾವಣ ಆಯೋಗ
Udupi: ಗಾಂಜಾ ಮಾರಾಟ ಮಾಡುತ್ತಿದ್ದ ಮೂವರ ಬಂಧನ; 8 ಲಕ್ಷ ಮೌಲ್ಯದ ಗಾಂಜಾ ವಶಕ್ಕೆ
Gundlupet: ಜಿಂಕೆ ಮಾಂಸ ಸಾಗಾಣೆ: ಐವರ ಬಂಧಿಸಿದ ಅರಣ್ಯಾಧಿಕಾರಿಗಳು
Rahul Gandhi ಭರವಸೆಗಳನ್ನು ನೀಡುತ್ತಾರೆ ಮತ್ತು ವಿದೇಶಕ್ಕೆ ಹಾರುತ್ತಾರೆ: ಶಾ ವಾಗ್ದಾಳಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.