ಜನನಾಂಗ ಮರು ಜೋಡಣೆ’
Team Udayavani, Oct 6, 2017, 6:20 AM IST
ಮಲಪ್ಪುರಂ: ತುಂಡಾಗಿರುವ ಮಾನವ ಜನನಾಂಗವನ್ನು ಮತ್ತೆ ಜೋಡಿಸಲು ಸಾಧ್ಯವೇ? ಕೇರಳದ ಕಲ್ಲಿಕೋಟೆಯ ಆಸ್ಪತ್ರೆಯಲ್ಲಿ ಇಂಥದ್ದೊಂದು ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನೆರವೇರಿದೆ. ಅದಕ್ಕೆ ಬರೋಬ್ಬರಿ ಎಂಟು ತಾಸುಗಳು ತಗುಲಿವೆ.
ಕಳೆದ ತಿಂಗಳು ಕುಟ್ಟಿಪುರಂನ ಲಾಡ್ಜ್ ಒಂದರಲ್ಲಿ ಇಶಾìದ್ ಎಂಬ 26ರ ಹರೆಯದ ಯುವಕ ಮತ್ತು ಮಹಿಳೆ ನಡುವೆ ತೀವ್ರ ವಾಗ್ವಾದ ನಡೆದಿತ್ತು. ಮಾತಿನ ವರಸೆ ಅತಿರೇಕಕ್ಕೆ ಹೋದಾಗ ಕೋಪಗೊಂಡ ಮಹಿಳೆ, ಇಶಾìದ್‌ನ ಮರ್ಮಾಂಗದ ಮುಕ್ಕಾಲು ಭಾಗವನ್ನು ತುಂಡರಿಸಿದ್ದರು. ಈ ಸಂಬಂಧ ಸೆ.21ರಂದು ಇಶಾìದ್ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸಂಸ್ಥೆಯ ಪ್ಲಾಸ್ಟಿಕ್ ಮತ್ತು ಮರುಜೋಡಣೆ ವಿಭಾಗದ ಹಿರಿಯ ವೈದ್ಯ ಡಾ.ಕೃಷ್ಣಕುಮಾರ್ ನೇತೃತ್ವದ ತಜ್ಞರ ತಂಡ ವಾರದ ಹಿಂದೆ ಶಸ್ತ್ರಚಿಕಿತ್ಸೆ ಕೈಗೊಂಡು, ಜನನಾಂಗವನ್ನು ಮರುಜೋಡಣೆ ಮಾಡಿದೆ.
“ಇಂಥ ಸರ್ಜರಿ ವೇಳೆ ತುಂಡಾದ ಜನನಾಂಗದ ಪ್ರತಿಯೊಂದು ಸಂಕೀರ್ಣ ಭಾಗಗಳ ಮರು ಜೋಡಣೆ ಅಗತ್ಯವಿರುತ್ತದೆ. ಈ ಪ್ರಕರಣದಲ್ಲಿ ತುಂಡಾದ ಅಂಗದ ಅಪಧಮನಿ, ರಕ್ತನಾಳಗಳು, ನರಗಳು, ಮೂತ್ರನಾಳ ಹಾಗೂ ಸ್ನಾಯುಗಳನ್ನು ನಾವು ಯಶಸ್ವಿಯಾಗಿ ಮರು ಜೋಡಣೇ ಮಾಡಿದ್ದೇವೆ,’ ಎಂದು ಡಾ.ಕೃಷ್ಣಕುಮಾರ್ ಹೇಳಿದ್ದಾರೆ.
ಅಂದಹಾಗೆ ಆರಂಭದಲ್ಲಿ ತಾನೇ ಜನನಾಂಗ ಕತ್ತರಿಸಿಕೊಂಡಿರುವುದಾಗಿ ಇಶಾìದ್ ಹೇಳಿದ್ದ. ಆದರೆ ಆತನ ಮರ್ಮಾಂಗಕ್ಕೆ ಮರ್ಮಾಘಾತ ಮಾಡಿರುವುದು ಆತನ ಸಿಕ್ರೆಟ್ ಪತ್ನಿ ಎಂದು ವಿಚಾರಣೆ ವೇಳೆ ತಿಳಿದುಬಬಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
PM Modi ಅವರು ಜೋ ಬೈಡೆನ್ ಅವರಂತೆ ನೆನಪಿನ ಶಕ್ತಿ ಕಳೆದುಕೊಳ್ಳುತ್ತಿದ್ದಾರೆ: ರಾಹುಲ್ ಗಾಂಧಿ
Resign: ಶಿರೋಮಣಿ ಅಕಾಲಿದಳದ ಅಧ್ಯಕ್ಷ ಸ್ಥಾನಕ್ಕೆ ಸುಖಬೀರ್ ಸಿಂಗ್ ಬಾದಲ್ ರಾಜೀನಾಮೆ
Maharashtra; ನಮ್ಮ ಮೈತ್ರಿ ಕೂಟ ಗೆದ್ದು ಮಹಾರಾಷ್ಟ್ರ ಉಳಿಸಲಿದೆ: ಡಿ.ಕೆ. ಶಿವಕುಮಾರ್
Nara Ramamurthy: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸಹೋದರ ನಾರಾ ರಾಮಮೂರ್ತಿ ನಾಯ್ಡು ನಿಧನ
Maharashtra Election: ಬೂತ್ ಗೆಲ್ಲುವತ್ತ ಗಮನ ಹರಿಸಿ: ಕಾರ್ಯಕರ್ತರಿಗೆ ಮೋದಿ ಕರೆ
MUST WATCH
ಹೊಸ ಸೇರ್ಪಡೆ
BGT: ಟೀಂ ಇಂಡಿಯಾಗೆ ಮತ್ತೆ ಆಘಾತ; ವಿರಾಟ್, ರಾಹುಲ್ ಬಳಿಕ ಮತ್ತೊಬ್ಬ ಬ್ಯಾಟರ್ ಗೆ ಗಾಯ
PM Modi ಅವರು ಜೋ ಬೈಡೆನ್ ಅವರಂತೆ ನೆನಪಿನ ಶಕ್ತಿ ಕಳೆದುಕೊಳ್ಳುತ್ತಿದ್ದಾರೆ: ರಾಹುಲ್ ಗಾಂಧಿ
Resign: ಶಿರೋಮಣಿ ಅಕಾಲಿದಳದ ಅಧ್ಯಕ್ಷ ಸ್ಥಾನಕ್ಕೆ ಸುಖಬೀರ್ ಸಿಂಗ್ ಬಾದಲ್ ರಾಜೀನಾಮೆ
Maharashtra; ನಮ್ಮ ಮೈತ್ರಿ ಕೂಟ ಗೆದ್ದು ಮಹಾರಾಷ್ಟ್ರ ಉಳಿಸಲಿದೆ: ಡಿ.ಕೆ. ಶಿವಕುಮಾರ್
Mangaluru: ಕುಮಾರಸ್ವಾಮಿ ಯಾವಾಗ, ಹೇಗೆ ಬೇಕಾದರೂ ಟರ್ನ್ ಆಗುತ್ತಾರೆ: ಜಮೀರ್ ಅಹಮದ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.